AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

MLC 2023: ಮಿಂಚಿದ ಸ್ಯಾಮ್ಸ್​: TSK ಗೆ ರೋಚಕ ಜಯ

San Francisco Unicorns vs Texas Super Kings: ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ವಿರುದ್ಧದ ಈ ಗೆಲುವಿನೊಂದಿಗೆ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡವು ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಪ್ಲೇಆಫ್ ಪ್ರವೇಶಿಸಿದೆ.

MLC 2023: ಮಿಂಚಿದ ಸ್ಯಾಮ್ಸ್​: TSK ಗೆ ರೋಚಕ ಜಯ
Daniel Sams
TV9 Web
| Updated By: ಝಾಹಿರ್ ಯೂಸುಫ್|

Updated on: Jul 25, 2023 | 6:15 PM

Share

MLC 2023: ಯುಎಸ್​ಎನಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್​ ಟೂರ್ನಿಯ 14ನೇ ಪಂದ್ಯದಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡವು ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಜಯಿಸಿದ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ತಂಡದ ನಾಯಕ ಆರೋನ್ ಫಿಂಚ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಇತ್ತ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡಕ್ಕೆ ಮ್ಯಾಥ್ಯೂ ವೇಡ್ (49) ಉತ್ತಮ ಆರಂಭ ಒದಗಿಸಿದ್ದರು. ಆದರೆ ಉಳಿದ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ.

ಮಾರ್ಕಸ್ ಸ್ಟೋಯಿನಿಸ್ (13), ಶಾದಾಬ್ ಖಾನ್ (20) ಹಾಗೂ ಆರೋನ್ ಫಿಂಚ್ (19) ಬೇಗನೆ ವಿಕೆಟ್ ಒಪ್ಪಿಸಿದ್ದರು. ಇನ್ನು 6ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಚೈತನ್ಯ ಬಿಷ್ಣೋಯ್ 21 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 3 ಫೋರ್​ಗಳೊಂದಿಗೆ 35 ರನ್ ಬಾರಿಸುವ ಮೂಲಕ ನಿಗದಿತ 20 ಓವರ್​ಗಳಲ್ಲಿ ತಂಡದ ಮೊತ್ತವನ್ನು 8 ವಿಕೆಟ್ ನಷ್ಟಕ್ಕೆ 171 ಕ್ಕೆ ತಂದು ನಿಲ್ಲಿಸಿದರು.

172 ರನ್​ ಸವಾಲಿನ ಗುರಿ ಪಡೆದ ಟೆಕ್ಸಾಸ್ ಸೂಪರ್ ಕಿಂಗ್ಸ್ ಪರ ಇನಿಂಗ್ಸ್ ಆರಂಭಿಸಿದ ನಾಯಕ ಫಾಫ್ ಡುಪ್ಲೆಸಿಸ್ ಶೂನ್ಯಕ್ಕೆ ಔಟಾದರು. ಇನ್ನು ಡೆವೊನ್ ಕಾನ್ವೆ 30 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಮಿಲಿಂದ್ ಕುಮಾರ್ (52) ಆಕರ್ಷಕ ಅರ್ಧಶತಕ ಬಾರಿಸಿ ತಂಡಕ್ಕೆ ಆಸರೆಯಾದರು. ಈ ಹಂತದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡಕ್ಕೆ ಡೇನಿಯಲ್ ಸ್ಯಾಮ್ಸ್ ಗೆಲುವಿನ ಆಸೆ ಚಿಗುರಿಸಿದರು.

7ನೇ ಕ್ರಮಾಂಕದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಸ್ಯಾಮ್ಸ್​ ಕೇವಲ 18 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್​ ಹಾಗೂ 2 ಫೋರ್​ಗಳೊಂದಿಗೆ 42 ರನ್ ಚಚ್ಚಿದರು. ಪರಿಣಾಮ ಕೊನೆಯ 2 ಓವರ್​ಗಳಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್​ ಕೇವಲ 9 ರನ್​ಗಳ ಗುರಿ ಪಡೆಯಿತು.

19.1 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 172 ರನ್​ಗಳ ಗುರಿ ಮುಟ್ಟುವ ಮೂಲಕ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡವು 3 ವಿಕೆಟ್​ಗಳ ರೋಚಕ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡವು ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಪ್ಲೇಆಫ್ ಪ್ರವೇಶಿಸಿದೆ.

ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ಪ್ಲೇಯಿಂಗ್ 11: ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್) , ಫಿನ್ ಅಲೆನ್ , ಮಾರ್ಕಸ್ ಸ್ಟೊಯಿನಿಸ್ , ಆರೋನ್ ಫಿಂಚ್ (ನಾಯಕ) , ಶಾದಾಬ್ ಖಾನ್ , ಕೋರಿ ಆಂಡರ್ಸನ್ , ತಜೀಂದರ್ ಧಿಲ್ಲೋನ್ , ಚೈತನ್ಯ ಬಿಷ್ಣೋಯ್ , ಲಿಯಾಮ್ ಪ್ಲಂಕೆಟ್ , ಹ್ಯಾರಿಸ್ ರೌಫ್ , ಕಾರ್ಮಿ ಲೆ ರೌಕ್ಸ್.

ಇದನ್ನೂ ಓದಿ: ODI World Cup 2023: ಏಕದಿನ ವಿಶ್ವಕಪ್​ಗೂ ಮುನ್ನ ಟೀಮ್ ಇಂಡಿಯಾಗೆ 3 ಗುಡ್​ ನ್ಯೂಸ್

ಟೆಕ್ಸಾಸ್ ಸೂಪರ್ ಕಿಂಗ್ಸ್​ ಪ್ಲೇಯಿಂಗ್ 11: ಡೆವೊನ್ ಕಾನ್ವೇ (ವಿಕೆಟ್ ಕೀಪರ್) , ಫಾಫ್ ಡು ಪ್ಲೆಸಿಸ್ (ನಾಯಕ) , ಕೋಡಿ ಚೆಟ್ಟಿ , ಡೇವಿಡ್ ಮಿಲ್ಲರ್ , ಮಿಲಿಂದ್ ಕುಮಾರ್ , ಮಿಚೆಲ್ ಸ್ಯಾಂಟ್ನರ್ , ಡೇನಿಯಲ್ ಸ್ಯಾಮ್ಸ್ , ಕ್ಯಾಲ್ವಿನ್ ಸಾವೇಜ್ , ಜೆರಾಲ್ಡ್ ಕೋಟ್ಜಿ , ಮೊಹಮ್ಮದ್ ಮೊಹ್ಸಿನ್ , ರಸ್ಟಿ ಥರಾನ್.