
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಲ್ಲಿ ಟೀಮ್ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್ ತಮ್ಮ ಮಾರಕ ಬೌಲಿಂಗ್ ಮೂಲಕ ಹೊಸ ಸಂಚಲನ ಸೃಷ್ಟಿಸುತ್ತಿದ್ದಾರೆ. ಈ ಬಾರಿ ಗುಜರಾತ್ ಟೈಟಾನ್ಸ್ ತಂಡದ ಪರ ಕಣಕ್ಕಿಳಿದಿರುವ ಸಿರಾಜ್, ಎದುರಾಳಿ ಬ್ಯಾಟರ್‌ಗಳಿಗೆ ರನ್ ಬಿಟ್ಟುಕೊಡಲು ಹಿಂದೇಟು ಹಾಕುವ ಮೂಲಕ ‘ಡಾಟ್ ಬಾಲ್’ಗಳ ರಾಜನಾಗಿ ಹೊರಹೊಮ್ಮಿದ್ದಾರೆ.
ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ಸಿರಾಜ್ ಇದುವರೆಗೆ ಒಟ್ಟು 109 ಡಾಟ್ ಬಾಲ್‌ಗಳನ್ನು ಎಸೆಯುವ ಮೂಲಕ ಅತಿ ಹೆಚ್ಚು ಡಾಟ್ ಬಾಲ್ ಎಸೆದ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು ಎಸೆದ ಒಟ್ಟು 222 ಎಸೆತಗಳಲ್ಲಿ ಅರ್ಧದಷ್ಟು ಎಸೆತಗಳಲ್ಲಿ ಎದುರಾಳಿ ಬ್ಯಾಟರ್‌ಗಳು ರನ್ ಗಳಿಸಲು ಸಾಧ್ಯವಾಗಿಲ್ಲ ಎಂಬುದು ಅವರ ನಿಖರತೆಗೆ ಸಾಕ್ಷಿ.
ಈ 11 ಡಾಟ್ ಬಾಲ್‌ಗಳೊಂದಿಗೆ ಮೊಹಮ್ಮದ್ ಸಿರಾಜ್ ಐಪಿಎಲ್ 2026 ರಲ್ಲಿ ಡಾಟ್ ಬಾಲ್ ಶತಕ ಪೂರೈಸಿದ್ದಾರೆ. ಅಲ್ಲದೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ರಾಜಸ್ಥಾನ್ ರಾಯಲ್ಸ್ ವೇಗಿ ಜೋಫ್ರಾ ಆರ್ಚರ್ ಹಾಗೂ ಗುಜರಾತ್ ಟೈಟಾನ್ಸ್ ವೇಗಿ ಕಗಿಸೊ ರಬಾಡ ಅವರನ್ನು ಹಿಂದಿಕ್ಕಿದ್ದಾರೆ.
ಇದನ್ನೂ ಓದಿ: RCB ತಂಡಕ್ಕೆ ಬಿಗ್ ಶಾಕ್: ಇಂಗ್ಲೆಂಡ್ಗೆ ತೆರಳಿದ ಫಿಲ್ ಸಾಲ್ಟ್!
ಈ ಬಾರಿಯ ಐಪಿಎಲ್‌ನಲ್ಲಿ ಮೊಹಮ್ಮದ್ ಸಿರಾಜ್ ಈವರೆಗೆ 10 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 37 ಓವರ್ಗಳನ್ನು ಎಸೆದಿರುವ ಅವರು ಒಟ್ಟು 11 ವಿಕೆಟ್ಗಳನ್ನು ಸಹ ಕಬಳಿಸಿದ್ದಾರೆ. ಇಲ್ಲಿ ವಿಕೆಟ್ ಕಬಳಿಕೆ ಕಡಿಮೆ ಎನಿಸಿದರೂ ಸಿರಾಜ್ 222 ಎಸೆತಗಳಲ್ಲಿ 109 ಡಾಟ್ ಬಾಲ್ ಮಾಡಿರುವುದು ವಿಶೇಷ.