ಕ್ರಿಕೆಟ್ ಕ್ಷೇತ್ರದಲ್ಲಿ ನಿರಂತರ ವೈಫಲ್ಯ ಎದುರಿಸುತ್ತಿರುವ ಪಾಕಿಸ್ತಾನಕ್ಕೆ (Pakistan Cricket) ಒಂದು ಒಳ್ಳೆಯ ಸುದ್ದಿ ಸಿಕ್ಕಿದೆ. ವಾಸ್ತವವಾಗಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ (Mohsin Naqvi) ಅವರಿಗೆ ಮತ್ತೊಂದು ಹುದ್ದೆ ಸಿಕ್ಕಿದೆ. ಅವರು ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ (ACC) ಅಧ್ಯಕ್ಷರಾಗಿದ್ದಾರೆ. ಇದಕ್ಕೂ ಮೊದಲು, ಜಯ್ ಶಾ (Jay Shah) ಏಷ್ಯನ್ ಕ್ರಿಕೆಟ್ ಮುಖ್ಯಸ್ಥರಾಗಿದ್ದರು. 2021 ರಲ್ಲಿ ಈ ಹುದ್ದೆಗೇರಿದ್ದ ಜಯ್ ಶಾ ಅವರ ಅಧಿಕಾರಾವದಿ ಮುಕ್ತಯಗೊಂಡಿದ್ದು, ಇದೀಗ ಮೊಹ್ಸಿನ್ ನಖ್ವಿ ಅವರಿಗೆ ಈ ಹುದ್ದೆ ಸಿಕ್ಕಿದೆ. ದೊಡ್ಡ ವಿಷಯವೆಂದರೆ ಭಾರತದಲ್ಲಿ ಏಷ್ಯಾಕಪ್ ನಡೆಯಲಿರುವ ವರ್ಷದಲ್ಲಿ ಮೊಹ್ಸಿನ್ ನಖ್ವಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಅಧ್ಯಕ್ಷರಾಗಿದ್ದಾರೆ. 2025 ರ ಏಷ್ಯಾಕಪ್ ಈ ಬಾರಿ ಭಾರತದಲ್ಲಿ ನಡೆಯಲಿದ್ದು, ಈ ಪಂದ್ಯಾವಳಿಯನ್ನು ಟಿ20 ಸ್ವರೂಪದಲ್ಲಿ ನಡೆಸಲಾಗುವುದು, ಇದರಲ್ಲಿ 6 ತಂಡಗಳು ಭಾಗವಹಿಸುತ್ತವೆ. ಆ 6 ತಂಡಗಳಲ್ಲಿ ಪಾಕಿಸ್ತಾನವೂ ಸೇರಿದೆ.
ಏಷ್ಯಾಕಪ್ ಭಾರತದಲ್ಲಿ ನಡೆಯುತ್ತಿರುವ ಕಾರಣ ಪಾಕಿಸ್ತಾನ ತಂಡ ಇಲ್ಲಿಗೆ ಬರುವುದಿಲ್ಲ. ಇತ್ತೀಚೆಗೆ ಚಾಂಪಿಯನ್ಸ್ ಟ್ರೋಫಿಯನ್ನು ಪಾಕಿಸ್ತಾನ ಆಯೋಜಿಸಿತ್ತು. ಆ ಸಮಯದಲ್ಲಿ ಭಾರತ ತಂಡವು ಕೂಡ ಅಲ್ಲಿಗೆ ಹೋಗದೆ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಿತ್ತು. ಈಗ ಪಾಕಿಸ್ತಾನ ತಂಡ ಕೂಡ ಅದೇ ರೀತಿ ಮಾಡಲಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಅಧ್ಯಕ್ಷರು ಕೂಡ ಪಾಕಿಸ್ತಾನದವರಾಗಿರುವುದರಿಂದ ಅವರ ನೈತಿಕ ಸ್ಥೈರ್ಯ ಹೆಚ್ಚಾಗಲಿದೆ.
PCB Chairman Mohsin Naqvi has been appointed as the President of the Asian Cricket Council. His leadership comes at a time when Asian cricket continues to grow, bringing more opportunities, innovation, and collaboration across the region.
Read more: https://t.co/SN1WpRswOg#ACC pic.twitter.com/v6Ndo4ker3
— AsianCricketCouncil (@ACCMedia1) April 3, 2025
ಒಂದೆಡೆ ಮೊಹ್ಸಿನ್ ನಖ್ವಿ ಎಸಿಸಿ ಅಧ್ಯಕ್ಷರಾಗಿದ್ದರೆ, ಮತ್ತೊಂದೆಡೆ ಅವರ ಸ್ವಂತ ದೇಶದಲ್ಲಿ ಅವರ ಸ್ವಂತ ಮಾಜಿ ಕ್ರಿಕೆಟಿಗರು ಈಗ ಅವರ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಪಿಸಿಬಿ ಅಧ್ಯಕ್ಷ ಹುದ್ದೆಗೆ ನಖ್ವಿ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿರುವ ಕಮ್ರಾನ್ ಅಕ್ಮಲ್, ‘ಇದು ನಾಚಿಕೆಗೇಡಿನ ಸಂಗತಿ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರು ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೆ, ರಾಜೀನಾಮೆ ನೀಡಿ ಹೊರಡಬೇಕು ಎಂದು ಯೋಚಿಸಬೇಕು. ನಿಮ್ಮ ಖ್ಯಾತಿಯನ್ನು ಹಾಳು ಮಾಡಿಕೊಳ್ಳಬೇಡಿ. ನೀವು ಇದನ್ನು ಮಾಡಲು ಬಯಸದಿದ್ದರೆ, ಈಗಿರುವ ತಂಡದ ಸ್ಥಿತಿಯನ್ನು ಸುಧಾರಿಸಿ ಎಂದಿದ್ದಾರೆ.
‘ಫಲಿತಾಂಶವೇ ಹೇಳುತ್ತದೆ’; ಭಾರತ- ಪಾಕ್ ನಡುವೆ ಯಾವುದು ಬೆಸ್ಟ್ ತಂಡ? ಮೋದಿ ಉತ್ತರ ಏನು ಗೊತ್ತಾ?
ವಾಸ್ತವವಾಗಿ ಪಾಕಿಸ್ತಾನದ ಇತ್ತೀಚಿನ ನ್ಯೂಜಿಲೆಂಡ್ ವಿರುದ್ಧದ ಪ್ರವಾಸವು ನಿರಾಶಾದಾಯಕವಾಗಿತ್ತು. ಮೊದಲು ನಡೆದಿದ್ದ ಟಿ20 ಸರಣಿಯಲ್ಲಿ 4-1 ಅಂತರದ ಹೀನಾಯ ಸೋಲನ್ನು ಅನುಭವಿಸಿದ್ದ ಪಾಕ್ ತಂಡ ಅದರ ನಂತರ, ನಡೆಯುತ್ತಿರುವ ಏಕದಿನ ಸರಣಿಯಲ್ಲಿಯೂ ಸಹ 0-2 ಅಂತರದಿಂದ ಸರಣಿಯನ್ನು ಕಳೆದುಕೊಂಡಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:58 am, Fri, 4 April 25