Viral Video: ಕ್ರಿಕೆಟ್ ಇತಿಹಾಸದ ಅತ್ಯಂತ ರೋಚಕ ಕೊನೆಯ ಓವರ್: ಹ್ಯಾಟ್ರಿಕ್ ವಿಕೆಟ್, ಸಿಕ್ಸ್..!

| Updated By: ಝಾಹಿರ್ ಯೂಸುಫ್

Updated on: Jan 25, 2022 | 4:08 PM

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ MOS ತಂಡವು 154 ರನ್ ಗಳಿಸಿತು. 155 ರನ್‌ಗಳ ಗುರಿ ಪಡೆದ UNSW ತಂಡವು 19ನೇ ಓವರ್‌ ಮುಕ್ತಾಯದ ವೇಳೆಗೆ 148 ರನ್ ಗಳಿಸಿದ್ದರು.

Viral Video: ಕ್ರಿಕೆಟ್ ಇತಿಹಾಸದ ಅತ್ಯಂತ ರೋಚಕ ಕೊನೆಯ ಓವರ್: ಹ್ಯಾಟ್ರಿಕ್ ವಿಕೆಟ್, ಸಿಕ್ಸ್..!
ಸಾಂದರ್ಭಿಕ ಚಿತ್ರ
Follow us on

ಕ್ರಿಕೆಟ್ ಅಂದ್ರೆನೇ ಹಾಗೆ, ಕೇವಲ ಒಂದು ಓವರ್​ನಲ್ಲಿ ಇಡೀ ಪಂದ್ಯದ ಚಿತ್ರಣ ಬದಲಾಗಬಹುದು, ಅಥವಾ ಒಂದು ಎಸೆತ ಸಾಕು, ಇಲ್ಲ ಒಂದೇ ಒಂದು ಕ್ಯಾಚ್​ನಿಂದ ಕೂಡ ಫಲಿತಾಂಶ ಬದಲಾಗಿ ಬಿಡುತ್ತೆ. ಇಂತಹ ಅನೇಕ ರೋಚಕ ಪಂದ್ಯಗಳನ್ನು ನೀವು ಕೂಡ ನೋಡಿರುತ್ತೀರಿ. ಆದರೆ ಕೊನೆಯ ಓವರ್​ನಲ್ಲಿ ಪ್ರೇಕ್ಷಕರನ್ನು ಥ್ರಿಲ್ಲಿಂಗ್​ಗೆ ದೂಡಿದ ಪಂದ್ಯವೊಂದಕ್ಕೆ ಆಸ್ಟ್ರೇಲಿಯಾ ಡಿಸ್ಟ್ಕ್ರಿಗ್ ಲೀಗ್ ಸಾಕ್ಷಿಯಾಗಿದೆ. ಅಂದರೆ ಇದು ಅಂತಾರಾಷ್ಟ್ರೀಯ ಅಥವಾ ಪ್ರಸಿದ್ಧ ಲೀಗ್ ಪಂದ್ಯ ಕೂಡ ಆಗಿರಲಿಲ್ಲ. ಆದರೆ ಈ ಪಂದ್ಯದ ಕೊನೆಯ ಓವರ್​ ರೋಚಕತೆಯಿಂದಾಗಿ ಇದೀಗ ಇಡೀ ಪಂದ್ಯ ಸುದ್ದಿಯಾಗಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ MOS ತಂಡವು 154 ರನ್ ಗಳಿಸಿತು. 155 ರನ್‌ಗಳ ಗುರಿ ಪಡೆದ UNSW ತಂಡವು 19ನೇ ಓವರ್‌ ಮುಕ್ತಾಯದ ವೇಳೆಗೆ 148 ರನ್ ಗಳಿಸಿದ್ದರು. ಇತ್ತ UNSW ಗೆಲುವು ಖಚಿತವಾಗಿತ್ತು. ಆದರೆ ಕೊನೆಯ ಓವರ್​ನಲ್ಲಿ ಕಂಡು ಬಂದ ಟ್ವಿಸ್ಟ್​ ಎಲ್ಲರನ್ನೂ ತುದಿಗಾಲಲ್ಲಿರಿಸಿತು.

ಗೆಲ್ಲಲು 6 ಎಸೆತಗಳಲ್ಲಿ 7 ರನ್​ ಬೇಕಿತ್ತು. ಕೊನೆಯ ನಾಲ್ಕು ವಿಕೆಟ್​ಗಳು ಮಾತ್ರ ಉಳಿದಿತ್ತು. ಮೊದಲ ಎಸೆತದಲ್ಲಿ ಯಾವುದೇ ರನ್ ಇಲ್ಲ.ಎರಡನೇ ಎಸೆತದಲ್ಲಿ ವಿಕೆಟ್. ನಂತರ ಮೂರನೇ ಎಸೆತದಲ್ಲಿಯೂ ವಿಕೆಟ್. ನಾಲ್ಕನೇ ಎಸೆತದಲ್ಲಿಯೂ ಮತ್ತೊಂದು ವಿಕೆಟ್‌. ಮೂರು ಎಸೆತಗಳಲ್ಲಿ ಮೂರು ವಿಕೆಟ್ ಉರುಳಿಸಿ ಹ್ಯಾಟ್ರಿಕ್ ಪಡೆದರು. UNSW ಪರವಿದ್ದ ಪಂದ್ಯವು ಸಂಪೂರ್ಣವಾಗಿ MOS ಪರ ವಾಲಿತ್ತು. 5ನೇ ಎಸೆತದಲ್ಲಿ ಕೇವಲ 1 ರನ್​. ಕೊನೆಯ ಎಸೆತದಲ್ಲಿ 6 ರನ್ ಬೇಕಿತ್ತು. ಕ್ರೀಸ್​ನಲ್ಲಿ ಹೊಸ ಆಟಗಾರ. ಅದರಲ್ಲೂ ಬೌಲರ್​.

ಈಗಾಗಲೇ ಹ್ಯಾಟ್ರಿಕ್ ವಿಕೆಟ್ ಉರುಳಿಸಿದ್ದರಿಂದ ಎಲ್ಲರೂ MOS ಗೆಲ್ಲಲಿದೆ ಎಂದು ಭಾವಿಸಿದ್ದರು. ಆದರೆ ಎಲ್ಲರ ನಿರೀಕ್ಷೆಗಳನ್ನು ತಲೆಕೆಳಗಾಗುವಂತೆ ಭರ್ಜರಿ ಸಿಕ್ಸರ್ ಸಿಡಿಸಿ UNSW ರೋಚಕ ಜಯ ಸಾಧಿಸಿತು. ಅತ್ತ ಹ್ಯಾಟ್ರಿಕ್ ವಿಕೆಟ್ ಪಡೆದು ಮೊದಲ ಐದು ಎಸೆತಗಳಲ್ಲಿ ಕೇವಲ 1 ರನ್​ ನೀಡಿದ ಬೌಲರ್ ಕೊನೆಯ ಎಸೆತದಲ್ಲಿ ಸಿಕ್ಸ್​ ಹೊಡೆಸಿಕೊಂಡು ಆಘಾತಕ್ಕೊಳಗಾದರು. ಇತ್ತ UNSW ತಂಡದ ಎಲ್ಲಾ ಆಟಗಾರರು ಮೈದಾನದಲ್ಲಿಯೇ ಜಮಾಯಿಸಿ ರೋಚಕ ಗೆಲುವನ್ನು ಸಂಭ್ರಮಿಸಿದರು. ಇದೀಗ ಈ ಕೊನೆಯ ಓವರ್​ನ ವಿಡಿಯೋ ವೈರಲ್ ಆಗಿದೆ. ಅಲ್ಲದೆ ಕ್ರಿಕೆಟ್ ಇತಿಹಾಸ ರೋಚಕ ಕೊನೆಯ ಓವರ್​ ಪಂದ್ಯಗಳಲ್ಲಿ ಇದು ಕೂಡ ಒಂದು ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: Ind vs SA: ಭರ್ಜರಿ ಶತಕ ಸಿಡಿಸಿ ಸಚಿನ್, ಸೆಹ್ವಾಗ್ ದಾಖಲೆ ಮುರಿದ ಕ್ವಿಂಟನ್ ಡಿಕಾಕ್

ಇದನ್ನೂ ಓದಿ: ICC Mens ODI Team: ಐಸಿಸಿ ಏಕದಿನ ತಂಡ ಪ್ರಕಟ: ಟೀಮ್ ಇಂಡಿಯಾದ ಆಟಗಾರರಿಗಿಲ್ಲ ಸ್ಥಾನ

ಇದನ್ನೂ ಓದಿ: IPL 2022: ಹೊಸ ಎರಡು ತಂಡಗಳು ಆಯ್ಕೆ ಮಾಡಿದ 6 ಆಟಗಾರರು ಇವರೇ..!

(Most exciting last over of cricket history, got to see more twists than the limit)