IPL 2022: ಇಬ್ಬರು ಆಟಗಾರರ ಮೇಲೆ ಐಪಿಎಲ್ ಫ್ರಾಂಚೈಸಿಗಳ ಕಣ್ಣು
ಈಗಾಗಲೇ ಐಪಿಎಲ್ಗೆ ಹೆಸರು ನೀಡಿರುವ ವೆಸ್ಟ್ ಇಂಡೀಸ್ನ 41 ಆಟಗಾರರ ಪಟ್ಟಿಯಲ್ಲಿ ಶೆಫರ್ಡ್ ಕೂಡ ಒಬ್ಬರು. ಅದರಲ್ಲೂ ಮೂಲಬೆಲೆ 75 ಲಕ್ಷದೊಂದಿಗೆ ರೊಮಾರಿಯೊ ಶೆಫರ್ಡ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಐಪಿಎಲ್ ಸೀಸನ್ 15 ಮೆಗಾ ಹರಾಜು ಮುಂದಿನ ತಿಂಗಳು ನಡೆಯಲಿದೆ. ಈ ಬಾರಿ ಮೆಗಾ ಹರಾಜಿನಲ್ಲಿ 10 ತಂಡಗಳು ಭಾಗವಹಿಸಲಿದ್ದು, ಈಗಾಗಲೇ ಆಟಗಾರರ ಖರೀದಿಗೆ ರೂಪುರೇಷೆಗಳನ್ನು ಸಿದ್ಧಪಡಿಸುತ್ತಿದೆ. ಅದರಲ್ಲೂ ಈ ಬಾರಿ ಬಹುತೇಕ ತಂಡಗಳ ಮೊದಲ ಟಾರ್ಗೆಟ್ ಬಿಗ್ ಬ್ಯಾಷ್ ಲೀಗ್‌ನಲ್ಲಿ ಮಿಂಚಿದ ಆಟಗಾರರು ಎಂಬುದು ತಿಳಿದು ಬಂದಿದೆ. ಈ ಬಾರಿಯ ಬಿಗ್ ಬ್ಯಾಷ್ ಲೀಗ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಬೆನ್ ಮೆಕ್‌ಡರ್ಮಾಟ್ ಅವರ ಖರೀದಿಗೆ ಬಹುತೇಕ ಫ್ರಾಂಚೈಸಿಗಳು ಆಸಕ್ತಿ ಹೊಂದಿದ್ದು, ಹೀಗಾಗಿ ಮೆಕ್ಡಮಾರ್ಟ್ಗಾಗಿ ಪೈಪೋಟಿ ಕಂಡು ಬರಲಿದೆ.
ಏಕೆಂದರೆ ಈ ಬಾರಿ 27 ವರ್ಷದ ಬೆನ್ ಮೆಕ್‌ಡರ್ಮಾಟ್ ಬಿಗ್ ಬ್ಯಾಷ್ ಲೀಗ್‌ನಲ್ಲಿ 577 ರನ್ ಬಾರಿಸಿ ಅತೀ ಹೆಚ್ಚು ರನ್ ಕಲೆಹಾಕಿದ ಆಟಗಾರ ಎನಿಸಿಕೊಂಡಿದ್ದಾರೆ. 153.86 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿರುವ ಬೆನ್ ಮೆಕ್‌ಡರ್ಮಾಟ್ ಇದೀಗ ಆಸ್ಟ್ರೇಲಿಯಾ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಇದೇ ಖುಷಿಯಲ್ಲಿ ಮೆಕ್ಡಮಾರ್ಟ್ ಕೂಡ ಚೊಚ್ಚಲ ಐಪಿಎಲ್ ಅವಕಾಶವನ್ನು ಎದುರು ನೋಡುತ್ತಿದ್ದಾರೆ.
ಹಾಗೆಯೇ ಐಪಿಎಲ್ ಫ್ರಾಂಚೈಸಿಗಳ ಮತ್ತೋರ್ವ ಹಾಟ್ ಫೇವರೇಟ್ ಆಟಗಾರ ಎಂದರೆ ವೆಸ್ಟ್ ಇಂಡೀಸ್ ಆಲ್‌ರೌಂಡರ್ ರೊಮಾರಿಯೊ ಶೆಫರ್ಡ್. ಟಿ20 ಕ್ರಿಕೆಟ್ನಲ್ಲಿ 20 ಇನ್ನಿಂಗ್ಸ್ ಆಡಿರುವ ಶೆಫರ್ಡ್ 21 ಬೌಂಡರಿ ಮತ್ತು 21 ಸಿಕ್ಸರ್‌ಗಳನ್ನು ಬಾರಿಸಿ ಮಿಂಚಿದ್ದಾರೆ. ಅಂದರೆ ಪ್ರತಿ ಪಂದ್ಯದಲ್ಲೂ ಸಿಕ್ಕ ಅವಕಾಶದಲ್ಲಿ ವಿಂಡೀಸ್ ದಾಂಡಿಗ ಸಿಕ್ಸರ್ ಮತ್ತು ಬೌಂಡರಿ ಬಾರಿಸುತ್ತಿರುವುದು ವಿಶೇಷ. ಅಷ್ಟೇ ಅಲ್ಲದೆ ವೇಗದ ಬೌಲಿಂಗ್ ಮೂಲಕ 36 ಇನ್ನಿಂಗ್ಸ್‌ಗಳಲ್ಲಿ 49 ವಿಕೆಟ್ ಪಡೆದಿದ್ದಾರೆ. ಹೀಗಾಗಿ ಆಲ್‌ರೌಂಡರ್ ಹುಡುಕಾಟದಲ್ಲಿರುವ ಐಪಿಎಲ್ ಫ್ರಾಂಚೈಸಿಗಳು ರೊಮಾರಿಯೊ ಶೆಫರ್ಡ್ ಅವರನ್ನು ಟಾರ್ಗೆಟ್ ಮಾಡಲಿದೆ.
ಈಗಾಗಲೇ ಐಪಿಎಲ್ಗೆ ಹೆಸರು ನೀಡಿರುವ ವೆಸ್ಟ್ ಇಂಡೀಸ್ನ 41 ಆಟಗಾರರ ಪಟ್ಟಿಯಲ್ಲಿ ಶೆಫರ್ಡ್ ಕೂಡ ಒಬ್ಬರು. ಅದರಲ್ಲೂ ಮೂಲಬೆಲೆ 75 ಲಕ್ಷದೊಂದಿಗೆ ರೊಮಾರಿಯೊ ಶೆಫರ್ಡ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಭರ್ಜರಿ ಫಾರ್ಮ್ನಲ್ಲಿರುವ ಆಲ್‌ರೌಂಡರ್ ಶೆಫರ್ಡ್ ಹಾಗೂ ಬೆನ್ ಮೆಕ್‌ಡರ್ಮಾಟ್ ಭರ್ಜರಿ ಮೊತ್ತಕ್ಕೆ ಬಿಕರಿಯಾಗುವ ಸಾಧ್ಯತೆಯಿದೆ.
ಈ ಬಾರಿಯ ಐಪಿಎಲ್ ಮೆಗಾ ಹರಾಜಿಗಾಗಿ ಒಟ್ಟು 1214 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಆಟಗಾರರ ಪಟ್ಟಿಯಿಂದ ಫ್ರಾಂಚೈಸಿಗಳಿಗೆ ಬೇಡದ ಆಟಗಾರರ ಕೈಬಿಡಲಾಗುತ್ತದೆ. ಆ ಬಳಿಕ ಫೈನಲ್ ಲೀಸ್ಟ್ನೊಂದಿಗೆ ಫೆಬ್ರವರಿ 12 ಮತ್ತು 13 ರಂದು ಮೆಗಾ ಹರಾಜು ನಡೆಯಲಿದೆ.
ಇದನ್ನೂ ಓದಿ: Ind vs SA: ಭರ್ಜರಿ ಶತಕ ಸಿಡಿಸಿ ಸಚಿನ್, ಸೆಹ್ವಾಗ್ ದಾಖಲೆ ಮುರಿದ ಕ್ವಿಂಟನ್ ಡಿಕಾಕ್
ಇದನ್ನೂ ಓದಿ: ICC Mens ODI Team: ಐಸಿಸಿ ಏಕದಿನ ತಂಡ ಪ್ರಕಟ: ಟೀಮ್ ಇಂಡಿಯಾದ ಆಟಗಾರರಿಗಿಲ್ಲ ಸ್ಥಾನ
ಇದನ್ನೂ ಓದಿ: IPL 2022: ಹೊಸ ಎರಡು ತಂಡಗಳು ಆಯ್ಕೆ ಮಾಡಿದ 6 ಆಟಗಾರರು ಇವರೇ..!