ದುಬೈನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನ 28ನೇ ಪಂದ್ಯದಲ್ಲಿ ಭಾರತ-ನ್ಯೂಜಿಲೆಂಡ್ (India vs New Zealand) ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯವು ಇದೀಗ ಎಂಎಸ್ ಧೋನಿ (Ms Dhoni) ಹಾಗೂ ಸ್ಟೀಫನ್ ಫ್ಲೆಮಿಂಗ್ (Stephen Fleming) ನಡುವಣ ಕದನವಾಗಿ ಮಾರ್ಪಟ್ಟಿದೆ. ಏಕೆಂದರೆ ಉಭಯ ತಂಡಗಳಿಗೂ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ. ಅತ್ತ ಇದೇ ಮೈದಾನದಲ್ಲಿ ರಣತ್ರಂತ್ರ ರೂಪಿಸಿದ್ದ ಇಬ್ಬರೇ ಈಗ ಮುಖಾಮುಖಿಯಾಗುತ್ತಿದ್ದಾರೆ. ಹೌದು, ಎರಡು ವಾರಗಳ ಹಿಂದೆಯಷ್ಟೇ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ನಾಲ್ಕನೇ ಬಾರಿಗೆ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿತ್ತು.
ದುಬೈನಲ್ಲಿ ನಡೆದ ಫೈನಲ್ನಲ್ಲಿ ಗೆಲುವು ದಾಖಲಿಸಿದ ಬಳಿಕ ಸಿಎಸ್ಕೆ ನಾಯಕ ಧೋನಿ ಟೀಮ್ ಇಂಡಿಯಾ ಕ್ಯಾಂಪ್ ಸೇರಿದ್ದರು. ಇದೀಗ ಧೋನಿ ಭಾರತ ತಂಡದ ಮೆಂಟರ್ ಆಗಿ ಧೋನಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಟೀಮ್ ಇಂಡಿಯಾಗೆ ಧೋನಿಯ ಸೇರ್ಪಡೆ ಬೆನ್ನಲ್ಲೇ ಅತ್ತ ಸಿಎಸ್ಕೆ ತಂಡದ ಕೋಚ್ ಆಗಿದ್ದ ಸ್ಟೀಫನ್ ಫ್ಲೆಮಿಂಗ್ ನ್ಯೂಜಿಲೆಂಡ್ ತಂಡ ಸೇರಿಕೊಂಡಿದ್ದರು.
ನ್ಯೂಜಿಲೆಂಡ್ ತಂಡದ ಮಾಜಿ ನಾಯಕರಾಗಿರುವ ಸ್ಟೀಫನ್ ಫ್ಲೆಮಿಂಗ್ ಅವರನ್ನು ಟಿ20 ವಿಶ್ವಕಪ್ ವೇಳೆ ತಂಡದ ಮೆಂಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದರಂತೆ ಐಪಿಎಲ್ ಚಾಂಪಿಯನ್ CSK ತಂಡದ ಕೋಚ್ ಸ್ಟೀಫನ್ ಫ್ಲೆಮಿಂಗ್, ನ್ಯೂಜಿಲೆಂಡ್ ತಂಡವನ್ನು ಸೆಮಿಫೈನಲ್ಗೇರಿಸುವ ಜವಾಬ್ದಾರಿವಹಿಸಿಕೊಂಡಿದ್ದಾರೆ.
ಇತ್ತ ಧೋನಿ ಕೂಡ ಟೀಮ್ ಇಂಡಿಯಾ ಮೆಂಟರ್ ಆಗಿದ್ದಾರೆ. ವಾರಗಳ ಹಿಂದೆಯಷ್ಟೇ ಸಿಎಸ್ಕೆ ಪರ ತಂತ್ರ-ಪ್ರತಿತಂತ್ರ ಹೆಣೆದಿದ್ದ ಇಬ್ಬರೂ ಮಾಜಿ ಆಟಗಾರರು, ಇದೀಗ ಟಿ20 ವಿಶ್ವಕಪ್ ಮೂಲಕ ತಂತ್ರಕ್ಕೆ ಪ್ರತಿತಂತ್ರ ರೂಪಿಸಿ ತಮ್ಮ ತಂಡಗಳನ್ನು ಕಣಕ್ಕಿಳಿಸುತ್ತಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿ ಯಾರು ಮೇಲುಗೈ ಸಾಧಿಸಲಿದ್ದಾರೆ ಎಂಬ ಕುತೂಹಲ ಸೃಷ್ಟಿಯಾಗಿದೆ. ಅದರಂತೆ ಭಾರತ-ನ್ಯೂಜಿಲೆಂಡ್ ಮುಖಾಮುಖಿಯಲ್ಲಿ ಧೋನಿ ಗೆಲ್ಲಲಿದ್ದಾರಾ ಅಥವಾ ಸ್ಟೀಫನ್ ಫ್ಲೆಮಿಂಗ್ ಮೇಲುಗೈ ಸಾಧಿಸಲಿದ್ದಾರಾ ಕಾದು ನೋಡಬೇಕಿದೆ.
ಇದನ್ನೂ ಓದಿ: IPL 2022: ನಾಲ್ವರು ಆಟಗಾರರಿಗೆ 42 ಕೋಟಿ ರೂ. ನಿಗದಿ: ಐಪಿಎಲ್ ಹೊಸ ರಿಟೈನ್ ನಿಯಮ
ಇದನ್ನೂ ಓದಿ: T20 World Cup 2021: ಸೆಮಿಫೈನಲ್ ಲೆಕ್ಕಾಚಾರ: ನ್ಯೂಜಿಲೆಂಡ್ ವಿರುದ್ದ ಟೀಮ್ ಇಂಡಿಯಾ ಗೆಲ್ಲಲೇಬೇಕು, ಯಾಕೆ ಗೊತ್ತಾ?
ಇದನ್ನೂ ಓದಿ: ICC T20 Batter Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಟೀಮ್ ಇಂಡಿಯಾದ ಇಬ್ಬರ ಸ್ಥಾನ ಕುಸಿತ
(MS Dhoni and Fleming coming as rivals for today’s India vs New Zealand match.)