MS Dhoni Temple: ಚೆನ್ನೈನಲ್ಲಿ ನಿರ್ಮಾಣವಾಗಲಿದೆ ಎಂಎಸ್ ಧೋನಿ ದೇವಸ್ಥಾನ: ಹೇಗಿರಲಿದೆ ನೋಡಿ

CSK, IPL 2024: ಕಳೆದ ಕೆಲವು ವರ್ಷಗಳಲ್ಲಿ ಭಾರತ ಮತ್ತು ಸಿಎಸ್‌ಕೆಗಾಗಿ ಅವರ ಪ್ರದರ್ಶನವನ್ನು ಪರಿಗಣಿಸಿ, ಎಂಎಸ್ ಧೋನಿ ಅವರ ದೇವಾಲಯವನ್ನು ಚೆನ್ನೈನಲ್ಲಿ ನಿರ್ಮಿಸಲಾಗುವುದು ಎಂದು ಅಂಬಟಿ ರಾಯುಡು ಹೇಳಿದ್ದಾರೆ. ಧೋನಿ ಚೆನ್ನೈನ ದೇವರು ಎಂದ ರಾಯುಡು, ಮುಂಬರುವ ವರ್ಷದಲ್ಲಿ ಚೆನ್ನೈನಲ್ಲಿ ಎಂಎಸ್ ಧೋನಿಯ ಮಂದಿರ ನಿರ್ಮಾಣವಾಗುವುದು ಖಚಿತ ಎಂದು ಹೇಳಿದ್ದಾರೆ.

MS Dhoni Temple: ಚೆನ್ನೈನಲ್ಲಿ ನಿರ್ಮಾಣವಾಗಲಿದೆ ಎಂಎಸ್ ಧೋನಿ ದೇವಸ್ಥಾನ: ಹೇಗಿರಲಿದೆ ನೋಡಿ
MS Dhoni Temple
Follow us
Vinay Bhat
|

Updated on: May 14, 2024 | 9:59 AM

ಭಾರತದಲ್ಲಿ ಕ್ರಿಕೆಟ್ ಅನ್ನು ಧರ್ಮವೆಂದು ಪರಿಗಣಿಸಲಾಗುತ್ತದೆ, ಕ್ರಿಕೆಟಿಗರನ್ನು ದೇವರಂತೆ ಪೂಜಿಸಲಾಗುತ್ತದೆ. ಕೆಲ ಆಟಗಾರರನ್ನು ಅವರ ಅಭಿಮಾನಿಗಳು ದೇವರು ಎಂದು ಕರೆಯುತ್ತಾರೆ. ಈ ಪಟ್ಟಿಗೆ ಸಚಿನ್ ತೆಂಡೂಲ್ಕರ್ ನಂತರ ಇದೀಗ ಮಹೇಂದ್ರ ಸಿಂಗ್ ಧೋನಿ (MS Dhoni) ಹೆಸರು ಸೇರ್ಪಡೆಯಾಗುತ್ತಿದೆ. ತಮ್ಮ ನಾಯಕತ್ವದಲ್ಲಿ ಭಾರತಕ್ಕೆ ಎರಡು ವಿಶ್ವಕಪ್‌ ಗೆಲ್ಲಿಸಿಕೊಟ್ಟ ಮಹೇಂದ್ರ ಸಿಂಗ್ ಧೋನಿ ಅವರ ಜನಪ್ರಿಯತೆ ಎಂದಿಗೂ ಮರೆಯಾಗುವುದಿಲ್ಲ. ಅದರಲ್ಲೂ ದಕ್ಷಿಣ ಭಾರತದಲ್ಲಿ ಅವರಿಗೆ ಅದ್ಭುತವಾದ ಅಭಿಮಾನಿಗಳಿದ್ದಾರೆ. ಐಪಿಎಲ್ ತಂಡ ಚೆನ್ನೈ ಸೂಪರ್ ಕಿಂಗ್ಸ್‌ಗೆ ಐದು ಬಾರಿ ಟ್ರೋಫಿ ಗೆದ್ದಿರುವ ಮಾಹಿ ನಾಯಕತ್ವದಲ್ಲಿ ಆಡಿರುವ ಅಂಬಟಿ ರಾಯುಡು, ಚೆನ್ನೈನಲ್ಲಿ ಎಂಎಸ್ ಧೋನಿಯ ದೇವಸ್ಥಾನ ನಿರ್ಮಿಸಲಾಗುವುದು ಎಂದು ಹೇಳಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ ಭಾರತ ಮತ್ತು ಸಿಎಸ್‌ಕೆಗಾಗಿ ಅವರ ಪ್ರದರ್ಶನವನ್ನು ಪರಿಗಣಿಸಿ, ಎಂಎಸ್ ಧೋನಿ ಅವರ ದೇವಾಲಯವನ್ನು ಚೆನ್ನೈನಲ್ಲಿ ನಿರ್ಮಿಸಲಾಗುವುದು ಎಂದು ಅಂಬಟಿ ರಾಯುಡು ಹೇಳಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ರಾಯುಡು, ಕಳೆದ ಕೆಲವು ವರ್ಷಗಳಲ್ಲಿ ರಜನಿಕಾಂತ್, ಖುಷ್ಬೂ ಸೇರಿದಂತೆ ದಕ್ಷಿಣದ ಜನಪ್ರಿಯ ತಾರೆಯರ ದೇವಾಲಯಗಳನ್ನು ಅಭಿಮಾನಿಗಳು ನಿರ್ಮಿಸಿದ್ದಾರೆ. ಧೋನಿ ಚೆನ್ನೈನ ದೇವರು ಎಂದ ರಾಯುಡು, ಮುಂಬರುವ ವರ್ಷದಲ್ಲಿ ಚೆನ್ನೈನಲ್ಲಿ ಎಂಎಸ್ ಧೋನಿಯ ಮಂದಿರ ನಿರ್ಮಾಣವಾಗುವುದು ಖಚಿತ ಎಂದು ಹೇಳಿದ್ದಾರೆ.

ಐಪಿಎಲ್ ಅನ್ನು ಅರ್ಧದಲ್ಲೇ ತೊರೆದ ಸ್ಟಾರ್ ಪ್ಲೇಯರ್ಸ್: ಮುಂದಿನ ಪಂದ್ಯಗಳಿಗೆ ಇವರು ಅಲಭ್ಯ

ಧೋನಿ ಅವರು ತಮ್ಮ ಆಟಗಾರರನ್ನು ನಂಬುವ ವ್ಯಕ್ತಿ, ಎಂದಿಗೂ ಕೈಬಿಡುವುದಿಲ್ಲ, ಅವರು ತಂಡ, ದೇಶ ಮತ್ತು ಸಿಎಸ್‌ಕೆಗಾಗಿ ಅನೇಕ ಸೇವೆ ಸಲ್ಲಿಸಿದ್ದಾರೆ. ಮಾಹಿ ಭಾರತಕ್ಕೆ ಎರಡು ವಿಶ್ವಕಪ್ ಮತ್ತು ಚೆನ್ನೈಗೆ ಐದು ಐಪಿಎಲ್ ಮತ್ತು ಎರಡು ಚಾಂಪಿಯನ್ಸ್ ಲೀಗ್ ಪ್ರಶಸ್ತಿಗಳನ್ನು ನೀಡಿದ್ದಾರೆ. ಹೀಗಾಗಿ ಧೋನಿ ಅವರ ದೇವಾಲಯವನ್ನು ಚೆನ್ನೈನಲ್ಲಿ ನಿರ್ಮಿಸುತ್ತೇವೆ ಎಂಬುದು ರಾಯುಡು ಮಾತು. ಇದು ಹೇಗಿರಲಿದೆ?, ಚೆನ್ನೈನಲ್ಲಿ ಎಲ್ಲಿ ನಿರ್ಮಾಣವಾಗುತ್ತೆ ಎಂಬ ಬಗ್ಗೆ ಇನ್ನಷ್ಟೆ ಅಂತಿಮವಾಗಬೇಕಿದೆ.

ಭಾನುವಾರ ರಾತ್ರಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಐದು ವಿಕೆಟ್‌ಗಳ ಜಯ ಸಾಧಿಸಿದ ನಂತರ ಚೆನ್ನೈನಲ್ಲಿ ಇದು ಧೋನಿಯ ಕೊನೆಯ ಪಂದ್ಯ ಆಗುವ ಸಾಧ್ಯತೆ ಇದೆ. ಸದ್ಯ ಸಿಎಸ್​ಕೆ +0.528 ನಿವ್ವಳ ರನ್ ರೇಟ್‌ನೊಂದಿಗೆ 14 ಅಂಕಗಳನ್ನು ಹೊಂದಿದೆ, 13 ಪಂದ್ಯಗಳಲ್ಲಿ ಏಳು ಗೆಲುವು ಕಂಡಿದೆ. ಅಂಕಪಟ್ಟಿಯಲ್ಲಿ ತಂಡ ಮೂರನೇ ಸ್ಥಾನದಲ್ಲಿದೆ. ಒಂದು ವೇಳೆ ಸಿಎಸ್‌ಕೆ ಪ್ಲೇಆಫ್‌ಗೆ ಅರ್ಹತೆ ಪಡೆಯಲು ವಿಫಲವಾದರೆ, ಧೋನಿ ಈ ಋತುವಿನಲ್ಲಿ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಿದಂತಾಗುತ್ತದೆ.

ಭಾರತದ ಮುಖ್ಯ ಕೋಚ್ ಬಗ್ಗೆ ದೊಡ್ಡ ಘೋಷಣೆ: ಹೊಸ ಕೋಚ್​ಗೆ ಬಿಸಿಸಿಐ ಕಠಿಣ ಷರತ್ತು

ಇದಕ್ಕೆ ಸಾಕ್ಷಿ ಎಂಬಂತೆ ರಾಜಸ್ಥಾನ ವಿರುದ್ಧದ ಪಂದ್ಯದ ನಂತರ ಚೆಪಾಕ್ ಕ್ರೀಡಾಂಗಣದಲ್ಲಿ ಭಾರೀ ಸಂಭ್ರಮಾಚರಣೆ ನಡೆಸಲಾಗಿದೆ. ಧೋನಿಗೆ ಪದಕ ನೀಡಿ ಗೌರವಿಸಲಾಯಿತು. ಇಡೀ ತಂಡದೊಂದಿಗೆ ಧೋನಿ ಮೈದಾನ ಸುತ್ತುವರಿದರು. ಸಿಎಸ್​ಕೆ ತನ್ನ ಕೊನೆಯ ಲೀಗ್ ಪಂದ್ಯವನ್ನು ಮೇ 18 ರಂದು ಬೆಂಗಳೂರಿನಲ್ಲಿ ಆರ್​ಸಿಬಿ ವಿರುದ್ಧ ಆಡಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ