MS Dhoni Quits CSK Captaincy: ಈ ಐಪಿಎಲ್ ನಂತರ ಧೋನಿ ನಿವೃತ್ತಿ? ಸಿಎಸ್​ಕೆ ಸಿಇಒ ಹೇಳಿದ್ದೇನು ಗೊತ್ತಾ?

| Updated By: ಪೃಥ್ವಿಶಂಕರ

Updated on: Mar 24, 2022 | 6:53 PM

MS Dhoni Quits CSK Captaincy: ಇದು ಧೋನಿಯ ಕೊನೆಯ ಸೀಸನ್ ಆಗಿರಬಹುದು ಎಂದು ಎಲ್ಲೆಡೆ ಮಾತಿದೆ. ಇನ್ನು ಧೋನಿ ಬ್ಯಾಟಿಂಗ್ ಕೂಡ ಹಿಂದಿನಂತೆ ಲಯದಲಿಲ್ಲ. ಈ ಆವೃತ್ತಿಯ ಪ್ರದರ್ಶನವು ಧೋನಿಯ ಭವಿಷ್ಯದ ಬಗ್ಗೆ ಬಹಳಷ್ಟು ಹೇಳುತ್ತದೆ.

MS Dhoni Quits CSK Captaincy: ಈ ಐಪಿಎಲ್ ನಂತರ ಧೋನಿ ನಿವೃತ್ತಿ? ಸಿಎಸ್​ಕೆ ಸಿಇಒ ಹೇಳಿದ್ದೇನು ಗೊತ್ತಾ?
ಧೋನಿ, ಜಡೇಜಾ
Follow us on

ಲೆಜೆಂಡರಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) 12 ಆವೃತ್ತಿಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡವನ್ನು ಮುನ್ನಡೆಸಿದ ನಂತರ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ನಾಲ್ಕು ಪ್ರಶಸ್ತಿಗಳನ್ನು ಗೆದ್ದು ಐದು ಬಾರಿ ಚೆನ್ನೈ ತಂಡವನ್ನು ರನ್ನರ್ ಅಪ್ ಮಾಡಿದ ಕೀರ್ತಿ ಧೋನಿಗೆ ಸಲ್ಲಬೇಕಿದೆ. ಈಗ ರವೀಂದ್ರ ಜಡೇಜಾ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್‌ನ ಹೊಸ ನಾಯಕರಾಗಿ ಆಯ್ಕೆ ಮಾಡಲಾಗಿದೆ. ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ಮತ್ತೊಬ್ಬ ಆಟಗಾರನಿಗೆ ಹಸ್ತಾಂತರಿಸಲು ನಿರ್ಧರಿಸಿದ್ದಾರೆ. ಜೊತೆಗೆ ತಂಡವನ್ನು ಮುನ್ನಡೆಸಲು ರವೀಂದ್ರ ಜಡೇಜಾ (Ravindra Jadeja) ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ಚೆನ್ನೈ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಜಡೇಜಾ 2012 ರಿಂದ ಚೆನ್ನೈ ಸೂಪರ್ ಕಿಂಗ್ಸ್‌ನ ಅವಿಭಾಜ್ಯ ಅಂಗವಾಗಿದ್ದಾರೆ ಮತ್ತು CSK ಅನ್ನು ಮುನ್ನಡೆಸುವ ಮೂರನೇ ಆಟಗಾರರಾಗಿದ್ದಾರೆ. ಧೋನಿ ಈ ಋತುವಿನಲ್ಲಿ ಮತ್ತು ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುವುದನ್ನು ಮುಂದುವರಿಸುತ್ತಾರೆ ಎಂದು ಫ್ರಾಂಚೈಸ್ ಹೇಳಿಕೆಯಲ್ಲಿ ತಿಳಿಸಿದೆ.

ಚೆನ್ನೈ ಸೂಪರ್ ಕಿಂಗ್ಸ್​ಗೂ ಕೂಡ ಧೋನಿ ನಾಯಕತ್ವವನ್ನು ತೊರೆಯುವ ಆಲೋಚನೆಯಲ್ಲಿದ್ದಾರೆ ಎಂಬುದನ್ನು ತಿಳಿದಿರಲಿಲ್ಲ ಎಂಬುದು ಶಾಕಿಂಗ್ ಸಂಗತಿಯಾಗಿದೆ. ಫ್ರಾಂಚೈಸಿಯ ಸಿಇಒ ಕಾಶಿ ವಿಶ್ವನಾಥನ್ ಮಾತನಾಡಿ, ಧೋನಿ ಇಂದೇ ಘೋಷಣೆ ಮಾಡುತ್ತಾರೆ ಎಂದು ನನಗೆ ತಿಳಿದಿರಲಿಲ್ಲ ಎಂದು ಹೇಳಿದರು. ಆದರೆ, ಧೋನಿ ನಿರ್ಧಾರದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ವಿಶ್ವನಾಥನ್, ನೋಡಿ ಧೋನಿ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದು ತಂಡದ ಹಿತದೃಷ್ಟಿಯಿಂದ. ಹಾಗಾಗಿ ನಾವು ಚಿಂತಿಸಲು ಏನೂ ಇಲ್ಲ. ಅವರ ನಿರ್ಧಾರವನ್ನು ನಾವು ಗೌರವಿಸುತ್ತೇವೆ. ಅವರು ಯಾವಾಗಲೂ ನಮಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಅವರು ಮುಂದೆಯೂ ನಮ್ಮ ತಂಡಕ್ಕೆ ಮಾರ್ಗದರ್ಶಕರಾಗಿರಲಿದ್ದಾರೆ ಎಂದಿದ್ದಾರೆ.

ಐಪಿಎಲ್ 2022 ರ ನಂತರ ಧೋನಿ ನಿವೃತ್ತಿ?
ವಿಶ್ವನಾಥನ್ ಅವರ ಬಳಿ ಧೋನಿ ನಿವೃತ್ತಿಯ ಬಗ್ಗೆ ಕೇಳಿದಾಗ, ಇದು ಅವರ ಕೊನೆಯ ಸೀಸನ್ ಎಂದು ನಾನು ಭಾವಿಸುವುದಿಲ್ಲ. ಧೋನಿ ಫಿಟ್ ಆಗಿರುವವರೆಗೆ, ಅವರು ತಂಡದಲ್ಲಿ ಆಡಬೇಕೆಂದು ನಾವು ಬಯಸುತ್ತೇವೆ. ಅವರು ಇದರ ಬಗ್ಗೆ ಏನು ಯೋಚಿಸುತ್ತಾರೆಂದು ನನಗೆ ತಿಳಿದಿಲ್ಲ ಎಂದಿದ್ದಾರೆ. ಇದು ಧೋನಿಯ ಕೊನೆಯ ಸೀಸನ್ ಆಗಿರಬಹುದು ಎಂದು ಎಲ್ಲೆಡೆ ಮಾತಿದೆ. ಇನ್ನು ಧೋನಿ ಬ್ಯಾಟಿಂಗ್ ಕೂಡ ಹಿಂದಿನಂತೆ ಲಯದಲಿಲ್ಲ. ಈ ಆವೃತ್ತಿಯ ಪ್ರದರ್ಶನವು ಧೋನಿಯ ಭವಿಷ್ಯದ ಬಗ್ಗೆ ಬಹಳಷ್ಟು ಹೇಳುತ್ತದೆ. ಅದೇನೇ ಇರಲಿ, ಧೋನಿ ಉತ್ತಮ ಆಟ ಪ್ರದರ್ಶಿಸಿದರೂ, ನಂತರ ನಿವೃತ್ತಿ ಘೋಷಿಸಬಹುದು, ಏಕೆಂದರೆ ಇದೆಲ್ಲ ಅವರಿಗೆ ಲೆಕ್ಕಕ್ಕಿಲ್ಲ.

ಜಡೇಜಾ ಉತ್ತಮ ನಾಯಕ: ವಿಶ್ವನಾಥನ್
ಜಡೇಜಾ ಅವರನ್ನು ನಾಯಕನಾಗಿ ನೇಮಿಸಿದ ವಿಶ್ವನಾಥನ್, ಆಲ್ ರೌಂಡರ್ ನಾಯಕತ್ವದಲ್ಲಿ ತಂಡವು ಉತ್ತಮ ಪ್ರದರ್ಶನ ನೀಡಲಿದೆ ಎಂದು ಭರವಸೆ ವ್ಯಕ್ತಪಡಿಸಿದರು. ಜಡ್ಡು ಚೆನ್ನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಅವರು ತಮ್ಮ ವೃತ್ತಿಜೀವನದ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಅವರು ಖಂಡಿತವಾಗಿಯೂ ಧೋನಿ ಮಾರ್ಗದರ್ಶನದಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ. ಜಡ್ಡು 10 ವರ್ಷಗಳಿಂದ ನಮ್ಮೊಂದಿಗೆ ಇರುವುದರಿಂದ ಅವರಿಗೆ ತಂಡದ ಸಂಸ್ಕೃತಿಯ ಬಗ್ಗೆ ಚೆನ್ನಾಗಿ ತಿಳಿದಿದೆ ಎಂದು ವಿಶ್ವನಾಥ್ ತಿಳಿಸಿದರು. ಈ ಮೂಲಕ ಜಡ್ಡು ಐಪಿಎಲ್ 15ರಿಂದ ಸಿಎಸ್​ಕೆ ನಾಯಕತ್ವ ವಹಿಸಿಕೊಂಡಿದ್ದಾರೆ.

ಇದನ್ನೂ ಓದಿ:MS Dhoni Quits CSK Captaincy: 6 ಬಾರಿ ಚಾಂಪಿಯನ್! ಏಕಾಏಕಿ ನಾಯಕತ್ವ ತೊರೆದ ಧೋನಿ ಮಾಡಿದ ದಾಖಲೆಗಳಿವು