MS Dhoni: ರಾಂಚಿಯಲ್ಲಿ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ಗೆ ಸರ್ಪ್ರೈಸ್ ವಿಸಿಟ್ ಕೊಟ್ಟ ಎಂಎಸ್ ಧೋನಿ
India vs New Zealand 1st T20I: ಭಾರತದ ಮಾಜಿ ನಾಯಕ, ದಿಗ್ಗಜ ಆಟಗಾರ ಮಹೇಂದ್ರ ಸಿಂಗ್ ಧೋನಿ (MS Dhoni) ದಿಢೀರ್ ಆಗಿ ರಾಂಚಿ ಕ್ರೀಡಾಂಗಣಕ್ಕೆ ಪ್ರವೇಶಿಸಿ ಟೀಮ್ ಇಂಡಿಯಾ ಆಟಗಾರರಿಗೆ ಶಾಕ್ ನೀಡಿದರು.

ಇಂದು ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವೆ ಮೊದಲ ಟಿ20 ಪಂದ್ಯ ಆಯೋಜಿಸಲಾಗಿದೆ. ರಾಂಚಿಯ ಜೆಎಸ್ಸಿಎ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಟೀಮ್ ಇಂಡಿಯಾ (Team India) ಆಟಗಾರರು ಬುಧವಾರ ಇಲ್ಲಿಗೆ ತಲುಪಿದ್ದು ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಈ ಸಂದರ್ಭ ಭಾರತೀಯ ಆಟಗಾರರಿಗೆ ಬಿಗ್ ಸರ್ಪ್ರೈಸ್ ಒಂದು ಎದುರಾಯಿತು. ಭಾರತದ ಮಾಜಿ ನಾಯಕ, ದಿಗ್ಗಜ ಆಟಗಾರ ಮಹೇಂದ್ರ ಸಿಂಗ್ ಧೋನಿ (MS Dhoni) ದಿಢೀರ್ ಆಗಿ ಕ್ರೀಡಾಂಗಣಕ್ಕೆ ಪ್ರವೇಶಿಸಿ ಆಟಗಾರರಿಗೆ ಶಾಕ್ ನೀಡಿದರು. ಬಳಿಕ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ಗೆ ತೆರಳಿ ಆಟಗಾರರ ಜೊತೆ ಮಾತುಕತೆ ನಡೆಸಿದರು.
ಧೋನಿ ತನ್ನ ತವರಿನ ರಾಂಚಿಯ ಕ್ರೀಡಾಂಗಣಕ್ಕೆ ತೆರಳಿ ಟೀಮ್ ಇಂಡಿಯಾ ಪ್ಲೇಯರ್ಸ್ ಬೇಟಿ ಆದ ವಿಡಿಯೋವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ”ರಾಂಚಿಯಲ್ಲಿ ಟ್ರೈನಿಂಗ್ ಸಂದರ್ಭ ಯಾರು ಬೇಟಿ ನೀಡಿದ್ದಾರೆ ನೋಡಿ,” ಎಂಬ ಕ್ಯಾಪ್ಷನ್ ಬರೆದು ಧೋನಿಗೆ ಟ್ಯಾಗ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಧೋನಿ ಅವರು ನಾಯಕ ಹಾರ್ದಿಕ್, ಇಶಾನ್ ಕಿಶನ್, ಶಿವಂ ಮಾವಿ, ವಾಷಿಂಗ್ಟನ್ ಸುಂದರ್ ಜೊತೆ ಹೆಚ್ಚು ಸಮಯ ಕಳೆದಿರುವುದು ಕಂಡುಬಂದಿದೆ.
Look who came visiting at training today in Ranchi – the great @msdhoni! ?#TeamIndia | #INDvNZ pic.twitter.com/antqqYisOh
— BCCI (@BCCI) January 26, 2023
ರಾಂಚಿಯ ಜೆಎಸ್ಸಿಎ ಅಂತರರಾಷ್ಟ್ರೀಯ ಕ್ರೀಡಾಂಗಣ ಧೋನಿಯ ತವರು ಮೈದಾನವಾಗಿದ್ದು ಆಗಾಗ್ಗ ಇಲ್ಲಿಗೆ ಬೇಟಿ ನೀಡುತ್ತಾ ಇರುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿರುವ ಧೋನಿ ಸದ್ಯ 16ನೇ ಆವೃತ್ತಿಗಾಗಿ ಅಭ್ಯಾಸ ಆರಂಭಿಸಿದ್ದಾರೆ. ಭಾರತ- ನ್ಯೂಜಿಲೆಂಡ್ ನಡುವೆ ಇಂದಿನ ಮೊದಲ ಟಿ20 ಬಳಿಕ ಎರಡನೇ ಟಿ20 ಪಂದ್ಯ ಜನವರಿ 29 ರಂದು ಲಕ್ನೋದಲ್ಲಿ ಆಯೋಜಿಸಲಾಗಿದೆ. ಅಂತಿಮ ಮೂರನೇ ಟಿ20 ಪಂದ್ಯ ಫೆಬ್ರವರಿ 1 ರಂದು ಅಹಮದಾಬಾದ್ನಲ್ಲಿ ನಡೆಯಲಿದೆ.
KL Rahul: ಕೆಎಲ್ ರಾಹುಲ್ಗೆ ದುಬಾರಿ ಬೈಕ್ ಗಿಫ್ಟ್ ನೀಡಿದ ಎಂಎಸ್ ಧೋನಿ
ಕಿಶನ್-ಗಿಲ್ ಓಪನರ್ಸ್:
ಮೊದಲ ಟಿ20 ಪಂದ್ಯಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿರುವ ನಾಯಕ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾ ಪರ ಓಪನರ್ಗಳಾಗಿ ಯಾರು ಆಡಲಿದ್ದಾರೆ ಎಂಬ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಇಶಾನ್ ಕಿಶನ್ ಜೊತೆ ಶುಭ್ಮನ್ ಗಿಲ್ ಓಪನರ್ ಆಗಿ ಬರಲಿದ್ದಾರೆ. ಪ್ರಥ್ವಿ ಶಾ ಅವಕಾಶಕ್ಕಾಗಿ ಕಾಯಬೇಕಾಗಿದೆ ಎಂದು ಪಾಂಡ್ಯ ಹೇಳಿದ್ದಾರೆ. ನನ್ನ ಪ್ರಕಾರ ಗಿಲ್ ಇಶಾನ್ ಜೊತೆ ಇನ್ನಿಂಗ್ಸ್ ಆರಂಭಿಸಿದರೆ ಉತ್ತಮ. ಗಿಲ್ ತಮಗೆ ಸಿಕ್ಕಿರುವ ಅವಕಾಶವನ್ನು ಅದ್ಭುತವಾಗಿ ಆಡಿಕೊಂಡು ಬರುತ್ತಿದ್ದಾರೆ. ಹೀಗಾಗಿ ಈ ಬಲಗೈ ಆಟಗಾರನ ಮೇಲೆ ನಿರೀಕ್ಷೆಗಳು ಹೆಚ್ಚಿದೆ ಎಂಬುದು ಹಾರ್ದಿಕ್ ಮಾತು.
ಉಳಿದಂತೆ ರುತುರಾಜ್ ಗಾಯಕ್ವಾಡ್ ಇಂಜುರಿಯಿಂದ ಹೊರಬಿದ್ದಿದ್ದು ಹೀಗಾಗಿ ಮೂರನೇ ಕ್ರಮಾಂಕ ಕೂಡ ಖಚಿತವಾಗಿದ್ದು ರಾಹುಲ್ ತ್ರಿಪಾಠಿ ಆಡಲಿದ್ದಾರೆ. ನಂತರದ ಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್ ಕಣಕ್ಕಿಳಿಯಲಿದ್ದಾರೆ. ಹಾರ್ದಿಕ್ ಪಾಂಡ್ಯ, ದೀಪಕ್ ಹೂಡ ಹಾಗೂ ವಾಷಿಂಗ್ಟನ್ ಸುಂದರ್ ಹೀಗೆ ಒಟ್ಟು ಮೂವರು ಆಲ್ರೌಂಡರ್ ಆಡುವ ಸಾಧ್ಯತೆ. ಅರ್ಶ್ದೀಪ್ ಸಿಂಗ್ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದು ಉಮ್ರಾನ್ ಮಲಿಕ್ ಹಾಗೂ ಶಿವಂ ಮಾವಿ ಸಾಥ್ ನೀಡಲಿದ್ದಾರೆ. ಸ್ಪಿನ್ನರ್ಗಳ ಪೈಕಿ ಯುಜ್ವೇಂದ್ರ ಚಹಲ್ ಅಥವಾ ಕುಲ್ದೀಪ್ ಯಾದವ್ ಪೈಕಿ ಯಾರಿಗೆ ಸ್ಥಾನ ನೋಡಬೇಕಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:31 am, Fri, 27 January 23




