AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

21 ಎಸೆತಗಳಲ್ಲಿ 5 ವಿಕೆಟ್ ಕಬಳಿಸಿದ 21 ವರ್ಷದ ಯುವ ವೇಗಿ

Pearl of Africa T20I Series 2025: ಪರ್ಲ್​ ಆಫ್ ಆಫ್ರಿಕಾ ಟಿ20 ಸರಣಿ ಎಂಬುದು 4 ತಂಡಗಳ ಟಿ20 ಟೂರ್ನಿ. ಈ ಟೂರ್ನಿಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್, ಕೀನ್ಯಾ, ಉಗಾಂಡ ಹಾಗೂ ನೈಜೀರಿಯಾ ತಂಡಗಳು ಕಣಕ್ಕಿಳಿಯುತ್ತಿವೆ. ಈಗಾಗಲೇ 6 ಪಂದ್ಯಗಳು ಮುಗಿದಿದ್ದು, ಈ ನಾಲ್ಕು ತಂಡಗಳು ಇನ್ನೂ ಆರು ಪಂದ್ಯಗಳನ್ನಾಡಲಿದೆ.

21 ಎಸೆತಗಳಲ್ಲಿ 5 ವಿಕೆಟ್ ಕಬಳಿಸಿದ 21 ವರ್ಷದ ಯುವ ವೇಗಿ
Muhammad Zuhaib
ಝಾಹಿರ್ ಯೂಸುಫ್
|

Updated on: Jul 22, 2025 | 8:30 AM

Share

ಎಂಟೆಬ್ಬೆಯಲ್ಲಿ ನಡೆದ ಪರ್ಲ್​ ಆಫ್ ಆಫ್ರಿಕಾ ಟಿ20 ಸರಣಿಯ ಐದನೇ ಪಂದ್ಯದಲ್ಲಿ ಯುಎಇ ತಂಡ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ 21 ವರ್ಷದ ಯುವ ವೇಗಿ ಮುಹಮ್ಮದ್ ಝುಹೈಬ್. ಎಂಟೆಬ್ಬೆ ಕ್ರಿಕೆಟ್ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ನೈಜೀರಿಯಾ ತಂಡವು ಬ್ಯಾಟಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ನೈಜೀರಿಯಾ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಆಕಿಫ್ ರಾಜ ಯಶಸ್ವಿಯಾದರು. ಮೊದಲ ಓವರ್​ನ ಮೊದಲ ಎಸೆತದಲ್ಲಿ ಸುಲೈಮಾನ್ ರನ್ಸೆವೆ (0) ಯನ್ನು ಕ್ಲೀನ್ ಬೌಲ್ಡ್ ಮಾಡಿದ ಆಕಿಫ್ ಯುಎಇ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಅಖೆಲೆ ಇಸೆಸೆಲೆ (2) ಕೂಡ ಆಕಿಫ್​ಗೆ ವಿಕೆಟ್ ಒಪ್ಪಿಸಿದರು. ಇನ್ನು ಹೈದರ್ ಅಲಿ ಎಸೆತದಲ್ಲಿ ಸೊಲೊಮನ್ ಚಿಲೆಮಾನ್ಯ (9) ಔಟಾದರು.

ಪರಿಣಾಮ ಪವರ್​ಪ್ಲೇನಲ್ಲಿ ನೈಜೀರಿಯಾ ತಂಡವು ಕೇವಲ 34 ರನ್​ಗಳಿಸಿ 3 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ದಾಳಿಗಿಳಿದ ಮುಹಮ್ಮದ್ ಝುಹೈಬ್ ಕರಾರುವಾಕ್ ಬೌಲಿಂಗ್​ನೊಂದಿಗೆ ಮಿಂಚಿದರು.

ನಾಯಕ ಸಿಲ್ವಸ್ಟರ್​ ಒಕೆಪೆ (4) ವಿಕೆಟ್ ಕಬಳಿಸುವ ಮೂಲಕ ಶುಭಾರಂಭ ಮಾಡಿದ ಝುಹೈಬ್ ಆ ಬಳಿಕ ಐಸಾಕ್ (17), ಮೊಹಮೀದ್ ಟೈವೊ (0), ಐಸಾಕ್ ಒಕೆಪೆ (0), ಪ್ರೊಸ್ಪರ್ ಉಸೇನಿ (6) ವಿಕೆಟ್ ಉರುಳಿಸಿದರು. ಈ ಮೂಲಕ ಕೇವಲ 3.3 ಓವರ್​ಗಳಲ್ಲಿ 21 ರನ್ ನೀಡಿ 5 ವಿಕೆಟ್​ಗಳನ್ನು ಕಬಳಿಸಿದರು. ಇತ್ತ ಮುಹಮ್ಮದ್ ಝುಹೈಬ್ ಅವರ ಮಾರಕ ದಾಳಿಗೆ ತತ್ತರಿಸಿದ ನೈಜೀರಿಯಾ ತಂಡವು 13.3 ಓವರ್​ಗಳಲ್ಲಿ 58 ರನ್​ಗಳಿಸಿ ಆಲೌಟ್ ಆಯಿತು.

ಅದರಂತೆ 59 ರನ್​ಗಳ ಸುಲಭ ಗುರಿ ಪಡೆದ ಯುಎಇ ತಂಡವು 4.5 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ಮುಟ್ಟುವ ಮೂಲಕ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಪರ್ಲ್​ ಆಫ್ ಆಫ್ರಿಕಾ ಟಿ20 ಸರಣಿಯ ಅಂಕ ಪಟ್ಟಿಯಲ್ಲಿ ಯುಎಇ ತಂಡವು ದ್ವಿತೀಯ ಸ್ಥಾನಕ್ಕೇರಿದೆ.

ನೈಜೀರಿಯಾ ಪ್ಲೇಯಿಂಗ್ 11: ಸುಲೈಮಾನ್ ರುನ್ಸೆವೆ , ಸೊಲೊಮನ್ ಚಿಲೆಮಾನ್ಯ (ವಿಕೆಟ್ ಕೀಪರ್) , ಅಖೆರೆ ಇಸೆಸೆಲೆ , ಐಸಾಕ್ ದನ್ಲಾಡಿ , ಸಿಲ್ವೆಸ್ಟರ್ ಒಕೆಪೆ (ನಾಯಕ) , ವಿನ್ಸೆಂಟ್ ಅಡೆವೊಯ್ , ಮೊಹಮೀದ್ ಟೈವೊ , ಪ್ರೊಸ್ಪರ್ ಉಸೇನಿ , ಅಬ್ದುಲ್ರಹ್ಮಾನ್ ಜಿಮೋಹ್ , ಪೀಟರ್ ಅಹೋ , ಐಸಾಕ್ ಒಕೆಪೆ.

ಇದನ್ನೂ ಓದಿ: ಬರೋಬ್ಬರಿ 13 ಸಿಕ್ಸ್​: ತೂಫಾನ್ ಸೆಂಚುರಿ ಸಿಡಿಸಿದ ಜೋಶ್

ಯುಎಇ ಪ್ಲೇಯಿಂಗ್ 11: ಮುಹಮ್ಮದ್ ಝೊಹೈಬ್ , ಮುಹಮ್ಮದ್ ವಸೀಮ್ (ನಾಯಕ) , ಅಲಿಶನ್ ಶರಾಫು , ರಾಹುಲ್ ಚೋಪ್ರಾ (ವಿಕೆಟ್ ಕೀಪರ್) , ಆಸಿಫ್ ಖಾನ್ , ಎಥಾನ್ ಡಿಸೋಜಾ , ಸಘೀರ್ ಖಾನ್ , ಹೈದರ್ ಅಲಿ , ಅಕಿಫ್ ರಾಜ , ಮುಹಮ್ಮದ್ ಝುಹೈಬ್ , ಮುಹಮ್ಮದ್ ರೋಹಿದ್ ಖಾನ್.

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್