AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅವಳು ಕೇವಲ ನನ್ನವಳು; ಯುಎಇಯಲ್ಲಿ ಶವವಾಗಿ ಪತ್ತೆಯಾದ ಕೇರಳದ ಮಹಿಳೆಯನ್ನು ಹೊಡೆದಿದ್ದಾಗಿ ಒಪ್ಪಿಕೊಂಡ ಪತಿ

ಯುಎಇ ಫ್ಲಾಟ್‌ನಲ್ಲಿ ಕೇರಳದ ಮಹಿಳೆ ಶವವಾಗಿ ಪತ್ತೆಯಾಗಿದ್ದಾರೆ. ಗಂಡನ ಕುಟುಂಬದವರು ವರದಕ್ಷಿಣೆ ಕಿರುಕುಳ ಮಾಡಿದ್ದಾರೆ ಎಂದು ಆಕೆ ಆರೋಪ ಮಾಡಿದ್ದರು. ಶಾರ್ಜಾದಲ್ಲಿ ಶವವಾಗಿ ಪತ್ತೆಯಾದ ಕೇರಳದ ಮಹಿಳೆ ಅತುಲ್ಯ ಶೇಖರ್ ಅವರ ಪತಿ ಸತೀಶ್ ಶಂಕರ್ ಆಕೆಯನ್ನು ಹೊಡೆದಿದ್ದಾಗಿ ಒಪ್ಪಿಕೊಂಡಿದ್ದಾರೆ. ತನ್ನ ಹಲ್ಲೆಯನ್ನು ಅವರು ಸಮರ್ಥಿಸಿಕೊಂಡಿದ್ದು, ನಾನು ಪ್ರೀತಿಯಿಂದ ಆಕೆಗೆ ಥಳಿಸಿದ್ದೇನೆ ಎಂದು ಹೇಳಿದ್ದಾರೆ.

ಅವಳು ಕೇವಲ ನನ್ನವಳು; ಯುಎಇಯಲ್ಲಿ ಶವವಾಗಿ ಪತ್ತೆಯಾದ ಕೇರಳದ ಮಹಿಳೆಯನ್ನು ಹೊಡೆದಿದ್ದಾಗಿ ಒಪ್ಪಿಕೊಂಡ ಪತಿ
Athulya Shekhar
ಸುಷ್ಮಾ ಚಕ್ರೆ
|

Updated on:Jul 21, 2025 | 10:13 PM

Share

ನವದೆಹಲಿ, ಜುಲೈ 21: ಯುಎಇಯಲ್ಲಿ ಕೇರಳದ ಮಹಿಳೆ ಶವವಾಗಿ ಪತ್ತೆಯಾಗಿದ್ದಾರೆ. ಕೇರಳದ (Kerala) ಕೊಲ್ಲಂ ಜಿಲ್ಲೆಯವರಾದ ಅತುಲ್ಯ (Atulya Shekhar) ಕಳೆದ ಒಂದು ವರ್ಷದಿಂದ ಯುಎಇಯಲ್ಲಿ ವಾಸಿಸುತ್ತಿದ್ದಾರೆ. ಅವರು ಹೊಸ ಉದ್ಯೋಗವನ್ನು ಪ್ರಾರಂಭಿಸಲು ನಿರ್ಧರಿಸಿದ್ದರು. ಆದರೆ, ಶನಿವಾರ ಬೆಳಿಗ್ಗೆ ಅವರು ಸಾವನ್ನಪ್ಪಿದ್ದಾರೆ. ಅತುಲ್ಯ ಅವರ ಪತಿ ಸತೀಶ್ ಶಂಕರ್ ಸಹ ಯುಎಇಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ತನ್ನ ಪತ್ನಿಯನ್ನು ಹೊಡೆದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ನಾನು ನನ್ನ ಪತ್ನಿಯನ್ನು ಹೊಡೆದಿರುವುದು ನಿಜ ಎಂದು ಸತೀಶ್ ಹೇಳಿದ್ದಾರೆ. “ನಾನು ಕುಡಿದಾಗ ಆಕೆಗೆ ಹೊಡೆದಿದ್ದೆ. ಆದರೆ, ನಾನು ಪ್ರತಿದಿನ ಹೊಡೆಯುತ್ತಿರಲಿಲ್ಲ. ಆಕೆ ಕೇವಲ ನನ್ನವಳು ಮಾತ್ರ. ಹಾಗಾಗಿ, ಪ್ರೀತಿಯಿಂದ ಅವಳಿಗೆ ಹೊಡೆಯುತ್ತಿದ್ದೆ ” ಎಂದು ಅವರು ಹೇಳಿದ್ದಾರೆ.

ಸತೀಶ್ ಅವರ ಪತ್ನಿ ತಮ್ಮನ್ನು ದೈಹಿಕವಾಗಿ ನಿಂದಿಸುತ್ತಿದ್ದರು ಎಂದು ಆರೋಪಿಸಿದ್ದರು. ಅತುಲ್ಯ ಅವರನ್ನು ಆಕೆಯ ಗಂಡನ ಕುಟುಂಬ ಸತೀಶ್ ಅವರನ್ನು ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಹಿಂಸಿಸುತ್ತಿದ್ದರು ಎಂದು ಆರೋಪಿಸಿದೆ. ಈ ಮಧ್ಯೆ, ದುಬೈನಲ್ಲಿ ಖಾಸಗಿ ಸಂಸ್ಥೆಯಲ್ಲಿ ಸೈಟ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಸತೀಶ್ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಅತುಲ್ಯ ಅವರ ಕುಟುಂಬವು ಆರೋಪಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ವರದಕ್ಷಿಣೆ ಕಿರುಕುಳ, ಶಾರ್ಜಾದಲ್ಲಿ ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾದ ಕೇರಳದ ಮಹಿಳೆ

ಕೇರಳದ ಕೊಲ್ಲಂನ 29 ವರ್ಷದ ಮಹಿಳೆ ಶನಿವಾರ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿರುವ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದು, ಆಕೆಯ ಪತಿ ವರದಕ್ಷಿಣೆಗಾಗಿ ಕಿರುಕುಳ ನೀಡಿದ್ದಾರೆ ಎಂದು ಆಕೆಯ ಕುಟುಂಬ ಆರೋಪಿಸಿದೆ.

ಅತುಲ್ಯ ಅವರ ತಾಯಿ ನೀಡಿದ ದೂರಿನ ಆಧಾರದ ಮೇಲೆ ಕೊಲ್ಲಂನಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆಯಡಿ ಕೊಲೆ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ಎಫ್‌ಐಆರ್​​ನಲ್ಲಿ ಅತುಲ್ಯ ಅವರೊಂದಿಗಿನ ವಿವಾಹದ ಸಮಯದಲ್ಲಿ ಸತೀಶ್ ಅವರಿಗೆ ಬೈಕ್ ಮತ್ತು ಚಿನ್ನವನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು ಎಂದು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ವರದಕ್ಷಿಣೆ ಅಪರಾಧವಾಗಿದ್ದರೆ, ಜೀವನಾಂಶ ಕೇಳುವುದು ಕಾನೂನುಬದ್ಧವಾಗಿದೆಯೇ?

2014ರಲ್ಲಿ ಕೊಲ್ಲಂ ನಿವಾಸಿ ಸತೀಶ್ ಅವರನ್ನು ವಿವಾಹವಾದ ಅತುಲ್ಯ ಶೇಖರ್ ಶಾರ್ಜಾದಲ್ಲಿರುವ ತನ್ನ ಫ್ಲಾಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಜುಲೈ 18 ಮತ್ತು ಜುಲೈ 19ರ ನಡುವೆ ಸತೀಶ್ ನನ್ನ ಮಗಳ ಉಸಿರುಗಟ್ಟಿಸಿ, ಹೊಟ್ಟೆಗೆ ಒದ್ದು, ತಟ್ಟೆಯಿಂದ ತಲೆಗೆ ಹೊಡೆದರಿಂದ ಆಕೆ ಸಾವನ್ನಪ್ಪಿದ್ದಾಳೆ ಎಂದು ಆಕೆಯ ತಾಯಿ ಆರೋಪಿಸಿದ್ದಾರೆ. ವಿವಾಹವಾದಾಗಿನಿಂದ ವರದಕ್ಷಿಣೆಗಾಗಿ ಆಕೆಗೆ ಕಿರುಕುಳ ನೀಡಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಸತೀಶ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 7:59 pm, Mon, 21 July 25

ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು