Ranji Trophy: 47ನೇ ಬಾರಿ ರಣಜಿ ಫೈನಲ್‌ಗೆ ಲಗ್ಗೆ ಇಟ್ಟ ಮುಂಬೈ! ಮಧ್ಯಪ್ರದೇಶ ಫೈನಲ್ ಎದುರಾಳಿ

| Updated By: ಪೃಥ್ವಿಶಂಕರ

Updated on: Jun 18, 2022 | 5:00 PM

Ranji Trophy 2022: ಮುಂಬೈ ಸೆಮಿಫೈನಲ್‌ನಲ್ಲಿ ಉತ್ತರ ಪ್ರದೇಶವನ್ನು ಎದುರಿಸಿತ್ತು. ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದ್ದು, ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಮುಂಬೈ ಫೈನಲ್‌ನಲ್ಲಿ ಸ್ಥಾನ ಪಡೆದಿದೆ.

Ranji Trophy: 47ನೇ ಬಾರಿ ರಣಜಿ ಫೈನಲ್‌ಗೆ ಲಗ್ಗೆ ಇಟ್ಟ ಮುಂಬೈ! ಮಧ್ಯಪ್ರದೇಶ ಫೈನಲ್ ಎದುರಾಳಿ
ಯಶಸ್ವಿ ಜೈಸ್ವಾಲ್
Follow us on

ಮುಂಬೈ ಕ್ರಿಕೆಟ್ ತಂಡ (Mumbai Cricket Team)ವನ್ನು ದೇಶೀಯ ಕ್ರಿಕೆಟ್‌ನಲ್ಲಿ ಬಲಿಷ್ಠ ತಂಡವೆಂದು ಪರಿಗಣಿಸಲಾಗಿದೆ. ಈ ತಂಡವು ಅತಿ ಹೆಚ್ಚು ರಣಜಿ ಟ್ರೋಫಿ (Ranji Trophy) ಪ್ರಶಸ್ತಿಗಳನ್ನು ಗೆದ್ದಿದೆ. ಸದ್ಯ ಈ ತಂಡ ಬಲಿಷ್ಠ ಎನಿಸದಿದ್ದರೂ ಎಲ್ಲವನ್ನು ಧಿಕ್ಕರಿಸಿ ಯುವ ತಾರೆಗಳಿಂದ ಕಂಗೊಳಿಸುತ್ತಿರುವ ಮುಂಬೈ ಕ್ರಿಕೆಟ್ ತಂಡ ರಣಜಿ ಟ್ರೋಫಿ-2022ರಲ್ಲಿ ಫೈನಲ್ ಪ್ರವೇಶಿಸಿದೆ. ಮುಂಬೈ ಸೆಮಿಫೈನಲ್‌ನಲ್ಲಿ ಉತ್ತರ ಪ್ರದೇಶವನ್ನು ಎದುರಿಸಿತ್ತು. ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದ್ದು, ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಮುಂಬೈ ಫೈನಲ್‌ನಲ್ಲಿ ಸ್ಥಾನ ಪಡೆದಿದ್ದು, ಅಲ್ಲಿ ಮಧ್ಯಪ್ರದೇಶವನ್ನು ಎದುರಿಸಲಿದೆ. ಮಧ್ಯಪ್ರದೇಶ 23 ವರ್ಷಗಳ ಬಳಿಕ ಫೈನಲ್‌ಗೆ ಲಗ್ಗೆ ಇಟ್ಟಿದೆ. ಯಶಸ್ವಿ ಜೈಸ್ವಾಲ್ ಮುಂಬೈನ ಈ ಗೆಲುವಿನ ಹೀರೋ ಎನಿಸಿಕೊಂಡಿದ್ದಾರೆ. ಈ ಯುವ ಎಡಗೈ ಬ್ಯಾಟ್ಸ್‌ಮನ್ ಈ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಗಳಿಸಿದರು.

ಮುಂಬೈ ಮೊದಲ ಇನಿಂಗ್ಸ್‌ನಲ್ಲಿ 393 ರನ್ ಗಳಿಸಿತ್ತು. ಈ ಸ್ಕೋರ್‌ಗೆ ಉತ್ತರವಾಗಿ ಉತ್ತರ ಪ್ರದೇಶ ತಂಡ 180 ರನ್‌ಗಳಿಗೆ ಆಲೌಟ್ ಆಯಿತು. ಮುಂಬೈ ಎರಡನೇ ಇನ್ನಿಂಗ್ಸ್‌ನಲ್ಲಿ 213 ರನ್‌ಗಳಿಗೆ ಆಲೌಟಾಯಿತು. ಎರಡನೇ ಇನ್ನಿಂಗ್ಸ್‌ನಲ್ಲಿ, ತಂಡದ ಬ್ಯಾಟ್ಸ್‌ಮನ್‌ಗಳು ಮತ್ತೊಮ್ಮೆ ಅದ್ಭುತ ಆಟ ಪ್ರದರ್ಶಿಸಿದರು. ಹೀಗಾಗಿ ಪಂದ್ಯದ ಕೊನೆಯ ದಿನ, ಎರಡನೇ ಇನ್ನಿಂಗ್ಸ್ ಅನ್ನು ನಾಲ್ಕು ವಿಕೆಟ್‌ಗಳ ನಷ್ಟದಲ್ಲಿ 533 ರನ್‌ಗಳಿಗೆ ಡಿಕ್ಲೇರ್ಡ್ ಆಗಿತ್ತು. ಇದರೊಂದಿಗೆ ಮುಂಬೈ 47ನೇ ಬಾರಿ ರಣಜಿ ಟ್ರೋಫಿಯಲ್ಲಿ ಫೈನಲ್ ಪ್ರವೇಶಿಸಿದೆ.

ಇದನ್ನೂ ಓದಿ:Ranji Trophy: ಮೊದಲು ಶತಕ.. ಈಗ 5 ವಿಕೆಟ್! ರಣಜಿ ಸೆಮಿಫೈನಲ್​ನಲ್ಲಿ ಅಬ್ಬರಿಸಿದ ಆರ್​ಸಿಬಿ ಆಟಗಾರ

ಇದನ್ನೂ ಓದಿ
Dinesh Karthik: 16 ವರ್ಷ, 36 ಪಂದ್ಯ.. 3ನೇ ಬಾರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ; ಇದು ದಿನೇಶ್ ಕಾರ್ತಿಕ್ ಟಿ20 ಕರಿಯರ್
WI vs BAN: ಬಿಟ್ಟಿದ್ದು ಬರೋಬ್ಬರಿ 24 ಕ್ಯಾಚ್! ಗಲ್ಲಿ ಕ್ರಿಕೆಟ್ ನೆನಪಿಸಿದ ಬಾಂಗ್ಲಾ ತಂಡ; ಗೆಲುವಿನ ಸನಿಹದಲ್ಲಿ ವಿಂಡೀಸ್
Ranji Trophy: 23 ವರ್ಷಗಳ ನಂತರ ಮೊದಲ ಬಾರಿಗೆ ರಣಜಿ ಟ್ರೋಫಿ ಫೈನಲ್‌ ಪ್ರವೇಶಿಸಿದ ಮಧ್ಯಪ್ರದೇಶ..!

ಯಶಸ್ಸಿನ ಡಬಲ್ ಸ್ಫೋಟ

ಐಪಿಎಲ್-2022ರ ಕೊನೆಯ ಪಂದ್ಯಗಳಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಪ್ರಬಲ ಬ್ಯಾಟಿಂಗ್ ಪ್ರದರ್ಶಿಸಿದ್ದ ಯಶಸ್ವಿ ಈ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಸಿಡಿಸಿದ್ದರು. ಅವರು ಮೊದಲ ಇನ್ನಿಂಗ್ಸ್‌ನಲ್ಲಿ 100 ರನ್ ಗಳಿಸಿದ್ದರು. ಎರಡನೇ ಇನ್ನಿಂಗ್ಸ್‌ನಲ್ಲಿ 181 ರನ್ ಗಳಿಸಿದ್ದರು. ಈ ಇನ್ನಿಂಗ್ಸ್‌ನಲ್ಲಿ ಯಶಸ್ವಿ 372 ಎಸೆತಗಳನ್ನು ಎದುರಿಸಿ 23 ಬೌಂಡರಿಗಳ ಜೊತೆಗೆ ಒಂದು ಸಿಕ್ಸರ್ ಬಾರಿಸಿದರು. ಅವರನ್ನು ಹೊರತುಪಡಿಸಿ ಅರ್ಮಾನ್ ಜಾಫರ್ 127 ರನ್‌ಗಳ ಇನ್ನಿಂಗ್ಸ್‌ ಆಡಿದರು. 259 ಎಸೆತಗಳನ್ನು ಎದುರಿಸಿದ ಜಾಫರ್ 15 ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳನ್ನು ಬಾರಿಸಿದರು. ಸರ್ಫರಾಜ್ ಖಾನ್ ಅಜೇಯ 59 ಮತ್ತು ಶಮ್ಸ್ ಮುಲಾನಿ 51 ರನ್ ಗಳಿಸಿದರು. ಯಶಸ್ವಿ ಹೊರತುಪಡಿಸಿ ಹಾರ್ದಿಕ್ ತೋಮರ್ ಮೊದಲ ಇನ್ನಿಂಗ್ಸ್‌ನಲ್ಲಿ 115 ರನ್ ಗಳಿಸಿದ್ದರು. ಮುಲಾನಿ 50 ರನ್ ಗಳಿಸಿದ್ದರು. ಸರ್ಫರಾಜ್ 40 ರನ್‌ಗಳ ಇನಿಂಗ್ಸ್‌ ಆಡಿದರು.

ಮುಂಬೈ ನಾಲ್ಕನೇ ದಿನದಾಟದ ಅಂತ್ಯಕ್ಕೆ ನಾಲ್ಕು ವಿಕೆಟ್ ನಷ್ಟಕ್ಕೆ 449 ರನ್ ಗಳಿಸಿತು. ಈ ಸ್ಕೋರ್‌ನೊಂದಿಗೆ ಮುಂಬೈ ಐದನೇ ದಿನ ತನ್ನ ಇನ್ನಿಂಗ್ಸ್ ಅನ್ನು ವಿಸ್ತರಿಸಿತು. 23 ರನ್‌ಗಳಿಂದ ಇನ್ನಿಂಗ್ಸ್ ಮುನ್ನಡೆಸುತ್ತಿದ್ದ ಸರ್ಫರಾಜ್ ಅರ್ಧಶತಕ ಪೂರೈಸಿದರು ಮತ್ತು ಮುಲಾನಿ 10 ರನ್​ಗಳಿಂದ ಆಟ ಮುಂದುವರೆಸಿ ಅರ್ಧಶತಕ ಗಳಿಸಿದರು. ಉತ್ತರ ಪ್ರದೇಶದ ಎರಡನೇ ಇನ್ನಿಂಗ್ಸ್‌ನಲ್ಲಿ ಪ್ರಿನ್ಸ್ ಯಾದವ್ ಎರಡು ವಿಕೆಟ್ ಪಡೆದರು. ಶಿವಂ ಮಾವಿ ಮತ್ತು ಸೌರಭ್ ಕುಮಾರ್ ತಲಾ ಒಂದು ವಿಕೆಟ್ ಪಡೆದರು.