
ತಮಿಳುನಾಡು ಮೂಲದ ಕ್ರಿಕೆಟಿಗ ಮುರುಗನ್ ಅಶ್ವಿನ್ ಅವರು ಎಲ್ಲಾ ಮಾದರಿಯ ದೇಶಿ ಕ್ರಿಕೆಟ್ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಿಂದ ನಿವೃತ್ತಿ ಘೋಷಿಸಿದ್ದಾರೆ. 35 ವರ್ಷದ ಅಶ್ವಿನ್, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಮ್ಮ 10 ವರ್ಷಗಳ ವೃತ್ತಿಪರ ಕ್ರಿಕೆಟ್ ಜೀವನಕ್ಕೆ ತೆರೆ ಎಳೆದಿದ್ದಾರೆ.
ಈ ನಿವೃತ್ತಿಯ ಘೋಷಣೆಯೊಂದಿಗೆ ಇದು ಕ್ರಿಕೆಟ್‌ನಿಂದ ಸಂಪೂರ್ಣ ವಿದಾಯವಲ್ಲ ಎಂದು ಸ್ಪಷ್ಟಪಡಿಸಿರುವ ಮುರುಗನ್ ಅಶ್ವಿನ್, ಮುಂಬರುವ ದಿನಗಳಲ್ಲಿ ವಿದೇಶಿ ಲೀಗ್‌ಗಳಲ್ಲಿ ಆಡುವ ಅವಕಾಶಗಳನ್ನು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ ವಿದೇಶಿ ಲೀಗ್ ಹಾಗೂ ನಿವೃತ್ತ ಆಟಗಾರರ ಲೀಗ್‌ಗಳಲ್ಲಿ ಕಣಕ್ಕಿಳಿಯುವ ಯೋಜನೆ ಹಾಕಿಕೊಂಡಿದ್ದಾರೆ.
ಮುರುಗನ್ ಅಶ್ವಿನ್ ಐಪಿಎಲ್ನಲ್ಲಿ ಮೂವರು ದಿಗ್ಗಜರ ನಾಯಕತ್ವದಲ್ಲಿ ಆಡಿದ ಕೆಲವೇ ಕೆಲವು ಆಟಗಾರರಲ್ಲಿ ಇಬ್ಬರು. ಇದೀಗ ಈ ಮೂವರಿಗೆ, ಅಂದರೆ ಮಹೇಂದ್ರ ಸಿಂಗ್ ಧೋನಿ, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಕೃತಜ್ಞತೆಗಳ ಮೂಲಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಮುರುಗನ್ ಅಶ್ವಿನ್ 2016 ರಿಂದ 2023 ರವರೆಗೆ ಅವರು ಒಟ್ಟು 6 ವಿಭಿನ್ನ ಫ್ರಾಂಚೈಸಿಗಳನ್ನು ಪ್ರತಿನಿಧಿಸಿದ್ದಾರೆ. ಆ ತಂಡಗಳಾವುವು ಎಂದರೆ…
2018 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಎಂಟ್ರಿ ಕೊಟ್ಟಿದ್ದ ಮುರುಗನ್ ಅಶ್ವಿನ್ ಆರ್ಸಿಬಿ ಪರ 2 ಪಂದ್ಯಗಳನ್ನಾಡಿದ್ದರು. ಈ ವೇಳೆ 3 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಒಟ್ಟು 44 ಪಂದ್ಯಗಳನ್ನಾಡಿರುವ ಮುರುಗನ್ ಅಶ್ವಿನ್ ಒಟ್ಟು 35 ಪಂದ್ಯಗಳನ್ನು ಪಡದಿದ್ದಾರೆ. ಈ ವೇಳೆ 21 ರನ್ಗಳಿಗೆ ಮೂರು ವಿಕೆಟ್ ಕಬಳಿಸಿರುವುದು ಅವರ ಶ್ರೇಷ್ಠ ಪ್ರದರ್ಶನ.
ಹಾಗೆಯೇ ದೇಶೀಯ ಅಂಗಳದಲ್ಲಿ ತಮಿಳುನಾಡು ಪರ ಕಣಕ್ಕಿಳಿಯುವ ಮೂಲಕ ಕೆರಿಯರ್ ಆರಂಭಿಸಿದ್ದ ಮುರುಗನ್, ಆ ಬಳಿಕ ಚಂಡೀಗಢ್ ಹಾಗೂ ಜಮ್ಮು ಕಾಶ್ಮೀರ ತಂಡಗಳನ್ನು ಪ್ರತಿನಿಧಿಸಿದ್ದರು. ಈ ವೇಳೆ ಒಟ್ಟು 117 ಟಿ20 ಪಂದ್ಯಗಳನ್ನಾಡಿರುವ ಅವರು 115 ವಿಕೆಟ್ ಪಡೆದಿದ್ದಾರೆ. ಹಾಗೆಯೇ ಲಿಸ್ಟ್-ಎ ಕ್ರಿಕೆಟ್ನಲ್ಲಿ 34 ಮ್ಯಾಚ್ಗಳನ್ನಾಡಿರುವ ಮುರುಗನ್ 35 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು.
ಇದನ್ನೂ ಓದಿ: 07:07: CSK ತಂಡಕ್ಕೆ ಹಾರ್ದಿಕ್ ಪಾಂಡ್ಯ?
ಇದೀಗ ತಮ್ಮ 35ನೇ ವಯಸ್ಸಿಗೆ ದೇಶೀಯ ಕ್ರಿಕೆಟ್ ಹಾಗೂ ಐಪಿಎಲ್ಗೆ ಗುಡ್ ಬೈ ಹೇಳಿರುವ ಮುರುಗನ್ ಅಶ್ವಿನ್ ಮುಂಬರುವ ದಿನಗಳಲ್ಲಿ ವಿದೇಶಿ ಲೀಗ್‌ಗಳಲ್ಲಿ ಕಣಕ್ಕಿಳಿಯುವ ಇರಾದೆಯಲ್ಲಿದ್ದಾರೆ.
Published On - 10:32 am, Tue, 26 May 26