ಇಂಗ್ಲೆಂಡ್ನ ಖ್ಯಾತ ಫುಟ್ಬಾಲ್ ಆಟಗಾರ ಹ್ಯಾರಿ ಕೇನ್ ತನ್ನ ನೆಚ್ಚಿನ ಐಪಿಎಲ್ (IPL 2022) ತಂಡವನ್ನು ಹೆಸರಿಸಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಜೊತೆಗಿನ ಸಂವಾದದ ವೇಳೆ ಕ್ರಿಕೆಟ್ ನೋಡ್ತೀನಿ ಎಂದಿರುವ ಹ್ಯಾರಿ ಕೇನ್ (Harry Kane), ಐಪಿಎಲ್‌ನಲ್ಲಿ ಆರ್‌ಸಿಬಿ ನನ್ನ ನೆಚ್ಚಿನ ತಂಡ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಈ ಬಾರಿ ಆರ್‌ಸಿಬಿ ತಂಡವು ಭರ್ಜರಿ ಪ್ರದರ್ಶನ ನೀಡಿದ್ದು, ಹೀಗಾಗಿ ಹೊಸ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೇನೆ ಎಂದಿದ್ದಾರೆ. ಲೀಗ್ ಫುಟ್ಬಾಲ್ನಲ್ಲಿ ಟೊಟೆನ್‌ಹ್ಯಾಮ್ ಹಾಟ್ಸ್‌ಪುರ್ ಸ್ಟಾರ್ ಫಾರ್ವರ್ಡ್ ಆಟಗಾರನಾಗಿ ಆಡುತ್ತಿರುವ ಹ್ಯಾರಿ ಕೇನ್, ವಿರಾಟ್ ಕೊಹ್ಲಿಯನ್ನು ಹಲವು ಬಾರಿ ಭೇಟಿಯಾಗಿ ಸಂವಾದ ನಡೆಸಿರುವುದು ನನ್ನ ಅದೃಷ್ಟ ಎಂದಿರುವುದು ಮತ್ತೊಂದು ವಿಶೇಷ.
ಈ ಬಾರಿ ಆರ್‌ಸಿಬಿ ಉತ್ತಮ ಆಟಗಾರರನ್ನು ಖರೀದಿಸಿದೆ. ಕಳೆದ ವರ್ಷ ಆರ್‌ಸಿಬಿ ಅದೃಷ್ಟ ಹೊಂದಿರಲಿಲ್ಲ. ಆದರೆ ಈ ವರ್ಷ ಅವರು ಸರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೆ ಉತ್ತಮ ಆರಂಭವನ್ನು ಪಡೆದಿದ್ದಾರೆ. ಐಪಿಎಲ್‌ನಲ್ಲಿ ಕೆಲವು ಶ್ರೇಷ್ಠ ತಂಡಗಳಿವೆ. ನಾನೂ ಎಲ್ಲಾ ಪಂದ್ಯಗಳನ್ನು ನೋಡುವುದನ್ನು ಇಷ್ಟಪಡುತ್ತೇನೆ. ಆದರೆ RCB ನನ್ನ ಫೇವರೇಟ್ ಎಂದು ಹ್ಯಾರಿ ಕೇನ್ ಹೇಳಿದರು.
‘ನಾವು ಕ್ರಿಕೆಟ್ ಆಡುವುದನ್ನು ಆನಂದಿಸುತ್ತೇವೆ. ಈಗ ಐಪಿಎಲ್ ನಡೆಯುತ್ತಿರುವುದರಿಂದ ನಾವು ಅದನ್ನು ನೋಡುತ್ತೇವೆ. ವಿರಾಟ್ ಕೊಹ್ಲಿಯನ್ನು ನೋಡುವುದೇ ಖುಷಿ. ಅವರದ್ದು ತುಂಬಾ ಸರಳ ವ್ಯಕ್ತಿತ್ವ. ಇದಾಗ್ಯೂ ಅವರ ಬ್ಯಾಟಿಂಗ್‌ನಲ್ಲಿ ಉತ್ಸಾಹದ ಜೊತೆ ಕಿಚ್ಚು ಕಂಡು ಬರುತ್ತೆ. ಹೀಗಾಗಿ ವಿರಾಟ್ ಕೊಹ್ಲಿ ಆಟ ನೋಡಿದಾಗ ಖುಷಿಯಾಗುತ್ತೆ ಎಂದು ಹ್ಯಾರಿ ಕೇನ್ ಹೇಳಿದರು.
ಈ ಬಾರಿಯ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ಅವರ ಬ್ಯಾಟ್ ಸಂಪೂರ್ಣವಾಗಿ ಮೌನವಾಗಿದೆ. ಈ ಸೀಸನ್ನಲ್ಲಿ ಇದುವರೆಗೆ ಆಡಿದ 8 ಪಂದ್ಯಗಳಲ್ಲಿ ಕೊಹ್ಲಿ 119 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಈ ವೇಳೆ ಕೇವಲ ಎರಡು ಪಂದ್ಯಗಳಲ್ಲಿ 40 ಕ್ಕೂ ಹೆಚ್ಚು ರನ್‌ಗಳ ಇನ್ನಿಂಗ್ಸ್‌ಗಳನ್ನು ಆಡಲು ಮಾತ್ರ ಸಮರ್ಥರಾಗಿದ್ದರು. ಕಳೆದ ಎರಡು ಪಂದ್ಯಗಳಲ್ಲಿ ಮೊದಲ ಎಸೆತದಲ್ಲಿಯೇ ಔಟಾದರು. ಒಂದು ಪಂದ್ಯದಲ್ಲಿ ಕೊಹ್ಲಿ ಶೂನ್ಯಕ್ಕೆ ಔಟಾದರೂ RCB ಕೂಡ ಗೆದ್ದಿತ್ತು. ಆದರೆ ಎರಡನೇ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಸೋಲನುಭವಿಸಬೇಕಾಯಿತು. ಎರಡೂ ಸಂದರ್ಭಗಳಲ್ಲಿ, ಅವರು ವೇಗದ ಬೌಲರ್‌ಗಳಿಗೆ ಬಲಿಯಾಗಿರುವುದು ಅಚ್ಚರಿ. ಇದು ವಿರಾಟ್ ಕೊಹ್ಲಿ ಕಳಪೆ ಫಾರ್ಮ್‌ನಲ್ಲಿರುವುದನ್ನು ತೋರಿಸುತ್ತದೆ.
ಇದನ್ನೂ ಓದಿ: Virat Kohli: IPL ನಲ್ಲಿ ವಿರಾಟ್ ಕೊಹ್ಲಿ ಎಷ್ಟು ಬಾರಿ ಝೀರೊಗೆ ಔಟಾಗಿದ್ದಾರೆ ಗೊತ್ತಾ?
ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್