ಕ್ರಿಕೆಟ್ ಲೋಕದಲ್ಲಿ ಈ ಹಿಂದೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಮಂಕಡ್ ಈಗ ಮತ್ತೆ ಸುದ್ದಿಯಲ್ಲಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮಂಕಡ್ ಅನ್ನು ಅಧಿಕೃತಗೊಳಿಸಿದ್ದು ನಿಯಮ 38ರ ಅಡಿಯಲ್ಲಿ ಇದನ್ನು ರನೌಟ್ ಎಂದು ಈ ವರ್ಷದ ಆರಂಭದಲ್ಲಿ ಘೋಷಿಸಿತ್ತು. ಇದಾದ ಬಳಿಕ ಮಂಖಡ್ (Mankad) ರನೌಟ್ ಕ್ರಿಕೆಟ್ ಲೋಕದಲ್ಲಿ ನಡೆದಿದ್ದು ತೀರಾ ಕಡಿಮೆ. ಆದರೀಗ ಆರನೇ ಆವೃತ್ತಿಯ ತಮಿಳುನಾಡು ಪ್ರೀಮಿಯರ್ ಲೀಗ್ನ (TNPL 2022) ಪಂದ್ಯವೊಂದರಲ್ಲಿ ನಡೆದ ಮಂಕಡ್ ರನೌಟ್ ಭಾರೀ ವೈರಲ್ ಆಗುತ್ತಿದೆ. ಚೆಪಾಕ್ ಸೂಪರ್ ಗಿಲ್ಲಿಸ್ ಹಾಗೂ ನೆಲೈ ರಾಯಲ್ ಕಿಂಗ್ಸ್ ನಡುವಣ ಟಿಎನ್ಪಿಎಲ್ನ ಮೊದಲ ಪಂದ್ಯದಲ್ಲೇ ಈ ಘಟನೆ ನಡೆದಿದೆ. ಚೆಪಾಕ್ ತಂಡದ ಬ್ಯಾಟರ್ ಎನ್. ಜಗದೀಶನ್ (N Jagadeesan) ಅವರನ್ನು ಬಾಬ ಅಪರಂಜಿತ್ ಮಂಕಡ್ ರನೌಟ್ ಮಾಡಿ ಪೆವಿಲಿಯನ್ಗೆ ಅಟ್ಟಿದರು. ಈ ಸಂದರ್ಭ ದೊಡ್ಡ ಡ್ರಾಮವೇ ನಡೆಯಿತು.
ನೆಲೈ ನೀಡಿದ್ದ 185 ರನ್ಗಳ ಸವಾಲಿನ ಟಾರ್ಗೆಟ್ ಬೆನ್ನಟ್ಟಲು ಬಂದ ಚೆಪಾಕ್ ಸ್ಫೋಟಕ ಆರಂಭವನ್ನ ಪಡೆದುಕೊಂಡಿತು. ಆದರೆ, 4ನೇ ಓವರ್ ಅಪರಂಜಿತ್ ಬೌಲಿಂಗ್ ಮಾಡಲು ಬಂದರು. ಈ ಸಂದರ್ಭ ನಾಲ್ಕನೇ ಎಸೆತ ಹಾಕಲು ಮುಂದಾದಾಗ ನಾನ್ ಸ್ಟ್ರೈಕರ್ನಲ್ಲಿದ್ದ ಜಗದೀಶನ್ ಬೌಲರ್ ಬೌಲಿಂಗ್ ಮಾಡುವ ಮುನ್ನ ಕ್ರೀಸ್ ಬಿಟ್ಟು ಮುಂದೆ ಬಂದರು. ಇದನ್ನ ಗಮನಿಸಿದ ಬೌಲರ್ ಚೆಂಡನ್ನು ವಿಕೆಟ್ಗೆ ತಾಗಿಸಿ ಮಂಕಡ್ ರನೌಟ್ ಮಾಡಿದರು. ಬೇರೆನೂ ದಾರಿಯಿಲ್ಲದೆ ಜಗದೀಶನ್ ಪೆವಿಲಿಯನ್ಗೆ ತೆರಳಬೇಕಾಯಿತು.
???? @Jagadeesan_200 @aparajithbaba senior players of tn??? pic.twitter.com/C9orMqRPL3
— Jayaselvaa ᅠ (@jayaselvaa1) June 23, 2022
Virat Kohli: ಶ್ರೇಯಸ್ ಅಯ್ಯರ್ ಔಟ್ ಮಾಡಲು ಎದುರಾಳಿ ತಂಡದ ಬೌಲರ್ಗೆ ಟಿಪ್ಸ್ ನೀಡಿದ ಕೊಹ್ಲಿ
ಈ ಘಟನೆಯಿಂದ ಸಿಟ್ಟಾದ ಜಗದೀಶನ್ ಮಧ್ಯಮ ಬೆರಳನ್ನು ತೋರಿಸುತ್ತಾ ಡಗೌಟ್ ಕಡೆ ಹೆಜ್ಜೆ ಹಾಕಿದರು. ತಮಿಳುನಾಡು ತಂಡದ ಹಿರಿಯ ಆಟಗಾರ ಜಗದೀಶನ್ ಐಪಿಎಲ್ನಲ್ಲಿ ಕಳೆದ ಮೂರು ವರ್ಷದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುತ್ತಿದ್ದಾರೆ. 26 ಪ್ರಥಮ ದರ್ಜೆ ಕ್ರಿಕೆಟ್, 36 ಲಿಸ್ಟ್ ಎ ಪಂದ್ಯ ಮತ್ತು 45 ಟಿ20 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ.
ಇನ್ನೂ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಕಿಂಗ್ಸ್ ತಂಡ 20 ಓವರ್ನಲ್ಲಿ 4 ವಿಕೆಟ್ ನಷ್ಟಕ್ಕೆ 184 ರನ್ ಚಚ್ಚಿತು. ತಂಡದ ಪರ ಸಂಜಯ್ ಯಾದವ್ ಕೇವಲ 47 ಎಸೆತಗಳಲ್ಲಿ 5 ಫೋರ್, 6 ಸಿಕ್ಸರ್ನೊಂದಿಗೆ ಅಜೇಯ 87 ರನ್ ಸಿಡಿಸಿದರೆ, ಸೂರ್ಯಪ್ರಕಾಶ್ 50 ಎಸೆತಗಳಲ್ಲಿ 62 ರನ್ ಗಳಿಸಿದರು. ಇವರಿಬ್ಬರು ಶತಕದ ಜೊತೆಯಾಟ ಆಡಿ ವಿಶೇಷ ದಾಖಲೆ ಬರೆದರು.
ಟಾರ್ಗೆಟ್ ಬೆನ್ನಟ್ಟಿದ ಚೆಪಾಕ್ ಕೂಡ ಅತ್ಯುತ್ತಮ ಬ್ಯಾಟಿಂಗ್ ನಡೆಸಿತು. ನಾಯಕ ಕೌಶಿಕ್ ಗಾಂಧಿ 43 ಎಸೆತಗಳಲ್ಲಿ 7 ಫೋರ್, 2 ಸಿಕ್ಸರ್ ಬಾರಿಸಿ 64 ರನ್ ಚಚ್ಚಿದರು. ಸೋನು ಯಾದವ 34 ರನ್ಗಳ ಕಾಣಿಕೆ ನೀಡಿದರೆ ಎಸ್. ಹರಿಶ್ ಕುಮಾರ್ ಅಜೇಯ 26 ರನ್ ಸಿಡಿಸಿ ಪಂದ್ಯವನ್ನು ಟೈ ಮಾಡುವಲ್ಲಿ ಯಶಸ್ವಿಯಾದರು. ಹೌದು, ಚೆಪಾಕ್ ತಂಡ ಕೂಡ 20 ಓವರ್ಗೆ 7 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿತು. ಹೀಗಾಗಿ ಸೂಪರ್ ಓವರ್ ನಡೆಸಲಾಯಿತು. ಸೂಪರ್ ಓವರ್ನಲ್ಲಿ ಮೊದಲು ಬ್ಯಾಟ್ ಮಾಡಿದ ಚೆಪಾಕ್ 9 ರನ್ ಗಳಿಸಿತು. ಈ ಟಾರ್ಗೆಟ್ ಅನ್ನು ನೆಲೈ ತಂಡ ಒಂದು ಎಸೆತ ಬಾಕಿ ಇರುವಂತೆ ಗೆದ್ದು ಬೀಗಿತು. ಸುಜಯ್ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.
KS Bharat: ಭಾರತದ ಮಾನ ಉಳಿಸಿದ ಭರತ್: ಕೊಹ್ಲಿ-ರೋಹಿತ್ ವೈಫಲ್ಯದ ನಡುವೆ ತೊಡೆತಟ್ಟಿನಿಂತ ಶ್ರೀಕರ್