IND vs LEI: ಜೋ ರೂಟ್ ಮ್ಯಾಜಿಕ್ ಕಾಪಿ ಮಾಡುವಲ್ಲಿ ಕೊಹ್ಲಿ ವಿಫಲ; ವಿಡಿಯೋ ಸಖತ್ ವೈರಲ್

IND vs LEI: ಜೋ ರೂಟ್ ಮ್ಯಾಜಿಕ್ ಕಾಪಿ ಮಾಡುವಲ್ಲಿ ಕೊಹ್ಲಿ ವಿಫಲ; ವಿಡಿಯೋ ಸಖತ್ ವೈರಲ್
ಕೊಹ್ಲಿ

Virat Kohli: ಕೊಹ್ಲಿ ಬ್ಯಾಟಿಂಗ್​ ವೇಳೆ ತಾವು ಬ್ಯಾಟನ್ನು ಕೈಯಲ್ಲಿ ಹಿಡಿದುಕೊಳ್ಳದೆ ಹಾಗೆ ನಿಲ್ಲಿಸಲು ಯತ್ನಿಸಿದರು ಆದರೆ ಆ ಯತ್ನದಲ್ಲಿ ಸಂಪೂರ್ಣ ವಿಫಲರಾದರು.

TV9kannada Web Team

| Edited By: pruthvi Shankar

Jun 24, 2022 | 6:49 AM

ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಅನುಭವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (Virat Kohli) ಪ್ರಸ್ತುತ ಲೀಸೆಸ್ಟರ್‌ನಲ್ಲಿ ಅಭ್ಯಾಸ ಪಂದ್ಯವನ್ನು ಆಡುತ್ತಿದ್ದಾರೆ. ಅಭ್ಯಾಸ ಪಂದ್ಯದಲ್ಲಿ ಆರಂಭದಲ್ಲೇ ಎಡವಿದ ಟೀಂ ಇಂಡಿಯಾದ ಇನ್ನಿಂಗ್ಸ್‌ ಅನ್ನು ನಿಭಾಯಿಸುವಲ್ಲಿ ಕೊಹ್ಲಿ ಕೊಂಚ ಯಶಸ್ವಿಯಾಗಿದ್ದಾರೆ. ಆದರೆ ಈಗ ಕೊಹ್ಲಿ ಚರ್ಚೆಗೆ ಬಂದಿರುವುದು ಅವರ ಬ್ಯಾಟಿಂಗ್​ನಿಂದಲ್ಲ. ಬದಲಿಗೆ, ಬ್ಯಾಟಿಂಗ್ ಸಮಯದಲ್ಲಿ ಅವರು ಮಾಡಿದ ಕೆಲಸದಿಂದಾಗಿ ಕೊಹ್ಲಿ ಈಗ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಅಪಹಾಸ್ಯಕ್ಕೊಳಗಾಗಿದ್ದಾರೆ. ಪಂದ್ಯದ ವೇಳೆ ಇಂಗ್ಲೆಂಡ್ ಮಾಜಿ ಟೆಸ್ಟ್ ನಾಯಕ ಜೋ ರೂಟ್ (Joe Root) ಈ ಹಿಂದೆ ಮಾಡಿದ ಕೆಲಸವನ್ನು ಕಾಪಿ ಮಾಡಲು ಕೊಹ್ಲಿ ಪ್ರಯತ್ನಿಸಿದರು. ಆದರೆ ಆ ಪ್ರಯತ್ನದಲ್ಲಿ ಅವರು ಸಂಪೂರ್ಣವಾಗಿ ವಿಫಲರಾದರು. ಕೊಹ್ಲಿಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಈಗ ಸಖತ್ ವೈರಲ್​ ಆಗುತ್ತಿದೆ.

ವಿಡಿಯೋ ವೈರಲ್

ವಾಸ್ತವವಾಗಿ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದ ವೇಳೆ ಜೋ ರೂಟ್ ಅವರ ಬ್ಯಾಟಿಂಗ್ ವೇಳೆ ನಡೆದ ಘಟನೆಯೊಂದು ಸಾಕಷ್ಟು ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ರೂಟ್ ತಮ್ಮ ಬ್ಯಾಟ್ ಅನ್ನು ಹಿಡಿದುಕೊಳ್ಳದೆ ಹಾಗೆ ತಮ್ಮ ಪಕ್ಕದಲ್ಲಿ ಸ್ವಲ್ಪ ಹೊತ್ತು ನಿಲ್ಲಿಸಿ ಬ್ಯಾಲೆನ್ಸ್ ಮಾಡುತ್ತಿರುವುದು ಕಂಡುಬಂದಿತ್ತು. ಈ ವಿಡಿಯೋ ನೋಡಿದ್ದ ಅಭಿಮಾನಿಗಳು ಇದನ್ನು ಮ್ಯಾಜಿಕ್ ಎಂದು ಕರೆದಿದ್ದರು. ಆದರೆ ನಂತರ ಅದರ ನಿಜವಾದ ಕಾರಣವೂ ಬಹಿರಂಗವಾಯಿತು.

ಇದನ್ನೂ ಓದಿ: ENG vs IND: ನಾಯಕತ್ವ ಬಿಟ್ಟರೂ ಜವಬ್ದಾರಿ ಮರೆಯದ ಕೊಹ್ಲಿ; ಪಂದ್ಯಕ್ಕೂ ಮುನ್ನ ಆಟಗಾರರಿಗೆ ಗೆಲುವಿನ ಟಿಪ್ಸ್ ನೀಡಿದ ವಿರಾಟ್

ರೂಟ್ ಕಾಪಿ ಮಾಡಲು ಕೊಹ್ಲಿ ವಿಫಲ

ಅಭ್ಯಾಸ ಪಂದ್ಯದ ವೇಳೆ ಕೊಹ್ಲಿ ಕೂಡ ಈ ರೀತಿ ಮಾಡಲು ಪ್ರಯತ್ನಿಸಿದರು ಆದರೆ ಅವರು ಸಂಪೂರ್ಣವಾಗಿ ವಿಫಲರಾದರು. ಕೊಹ್ಲಿ ಬ್ಯಾಟಿಂಗ್​ ವೇಳೆ ತಾವು ಬ್ಯಾಟನ್ನು ಕೈಯಲ್ಲಿ ಹಿಡಿದುಕೊಳ್ಳದೆ ಹಾಗೆ ನಿಲ್ಲಿಸಲು ಯತ್ನಿಸಿದರು ಆದರೆ ಆ ಯತ್ನದಲ್ಲಿ ಸಂಪೂರ್ಣ ವಿಫಲರಾದರು. ಆದರೆ ಆ ವಿಡಿಯೋ ಈಗ ವೈರಲ್ ಆಗಿದೆ.

ಅದು ರೂಟ್ ಮ್ಯಾಜಿಕ್ ಆಗಿರಲಿಲ್ಲ

ಅಸಲಿಗೆ ಜೋ ರೂಟ್ ಅವರ ವಿಡಿಯೋದಲ್ಲಿ ಯಾವುದೇ ಮ್ಯಾಜಿಕ್ ಇರಲಿಲ್ಲ. ರೂಟ್ ಬಳಸುವ ಬ್ಯಾಟ್​ನ ತುದಿ ಚಪ್ಪಟೆ ಟೋ ಹೊಂದಿದೆ. ಇದಲ್ಲದೇ ರೂಟ್ ಅವರ ಬ್ಯಾಟ್​ನ ತುದಿ ಸ್ವಲ್ಪ ಅಗಲವಾಗಿದ್ದು, ಈ ಕಾರಣಕ್ಕೆ ಆ ಬ್ಯಾಟನ್ನು​ ನೆಲದ ಮೇಲೆ ರೂಟ್ ಸಹಾಯವಿಲ್ಲದೆ ಬ್ಯಾಲೆನ್ಸ್ ಮಾಡಲು ಸಾಧ್ಯವಾಗಿತ್ತು. ಆದರೆ ರೂಟ್ ಈ ಬ್ಯಾಟ್‌ನಿಂದ ಅದ್ಭುತ ಇನ್ನಿಂಗ್ಸ್‌ ಆಡಿದರು. ಜೋ ರೂಟ್ ಅವರು 12 ಬೌಂಡರಿಗಳೊಂದಿಗೆ ತಮ್ಮ ಶತಕದ ಇನ್ನಿಂಗ್ಸ್‌ನಲ್ಲಿ 10,000 ಟೆಸ್ಟ್ ರನ್‌ಗಳನ್ನು ಸಹ ಪೂರೈಸಿದರು.

ಇದನ್ನೂ ಓದಿ

ಅಭ್ಯಾಸ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಉತ್ತಮ ಲಯದಲ್ಲಿ ಕಾಣುತ್ತಿದ್ದಾರೆ. 60 ಎಸೆತಗಳಲ್ಲಿ 32 ರನ್ ಗಳಿಸಿದ್ದ ಕೊಹ್ಲಿ ಅಜೇಯರಾಗಿ ಉಳಿದಿದ್ದಾರೆ. ಆದರೆ ಮಳೆಯಿಂದಾಗಿ ಆಟವನ್ನು ಅರ್ದಕ್ಕೆ ಸ್ಥಗಿತಗೊಳಿಸಲಾಗಿದೆ. ಕೊಹ್ಲಿ ತಮ್ಮ ಇನ್ನಿಂಗ್ಸ್​ನಲ್ಲಿ ಈಗಾಗಲೇ ನಾಲ್ಕು ಬೌಂಡರಿ ಹಾಗೂ ಒಂದು ಸಿಕ್ಸರ್‌ ಬಾರಿಸಿದ್ದಾರೆ. ಈ ಮೂಲಕ ಕೊಹ್ಲಿ ತಂಡದ ಚದುರಿದ ಇನ್ನಿಂಗ್ಸ್ ಅನ್ನು ಕೊಮಚ ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯಕ್ಕೆ ಭಾರತ ಒಟ್ಟು 81 ರನ್​ಗಳಿಗೆ ಐದು ವಿಕೆಟ್ ಕಳೆದುಕೊಂಡಿದೆ. ಈ ಅಭ್ಯಾಸ ಪಂದ್ಯ ಮಳೆಯಿಂದಾಗಿ ಎರಡು ಬಾರಿ ಸ್ಥಗಿತಗೊಂಡಿತ್ತು.

Follow us on

Related Stories

Most Read Stories

Click on your DTH Provider to Add TV9 Kannada