CWG 2022: ಕಾಮನ್​ವೆಲ್ತ್ ಕ್ರೀಡಾಕೂಟಕ್ಕೆ ಭಾರತ ಮಹಿಳಾ ಹಾಕಿ ತಂಡ ಪ್ರಕಟ; ರಾಣಿ ರಾಂಪಾಲ್​ ಅಲಭ್ಯ

commonwealth games 2022: ಮುಂಬರುವ ಕಾಮನ್‌ವೆಲ್ತ್ ಗೇಮ್ಸ್‌ಗಾಗಿ ಭಾರತ ಗುರುವಾರ 18 ಸದಸ್ಯರ ಭಾರತೀಯ ಮಹಿಳಾ ಹಾಕಿ ತಂಡವನ್ನು ಆಯ್ಕೆ ಮಾಡಿದೆ. ಇದರಲ್ಲಿ ಸ್ಟಾರ್ ಸ್ಟ್ರೈಕರ್ ರಾಣಿ ರಾಂಪಾಲ್ ಅವರು ಗಾಯದ ನಂತರ ಪೂರ್ಣ ಫಿಟ್‌ ಆಗಿರದ ಕಾರಣ ಅವರನ್ನು ಮತ್ತೆ ತಂಡದಿಂದ ಹೊರಗಿಡಲಾಗಿದೆ.

CWG 2022: ಕಾಮನ್​ವೆಲ್ತ್ ಕ್ರೀಡಾಕೂಟಕ್ಕೆ ಭಾರತ ಮಹಿಳಾ ಹಾಕಿ ತಂಡ ಪ್ರಕಟ; ರಾಣಿ ರಾಂಪಾಲ್​ ಅಲಭ್ಯ
ಭಾರತ ಮಹಿಳಾ ಹಾಕಿ ತಂಡ
Follow us
TV9 Web
| Updated By: ಪೃಥ್ವಿಶಂಕರ

Updated on:Jun 23, 2022 | 6:28 PM

ಮುಂಬರುವ ಕಾಮನ್‌ವೆಲ್ತ್ ಗೇಮ್ಸ್‌ (Commonwealth Games)ಗಾಗಿ ಭಾರತ ಗುರುವಾರ 18 ಸದಸ್ಯರ ಭಾರತೀಯ ಮಹಿಳಾ ಹಾಕಿ ತಂಡ (Indian women’s hockey team)ವನ್ನು ಆಯ್ಕೆ ಮಾಡಿದೆ. ಇದರಲ್ಲಿ ಸ್ಟಾರ್ ಸ್ಟ್ರೈಕರ್ ರಾಣಿ ರಾಂಪಾಲ್ (Rani Rampal) ಅವರು ಗಾಯದ ನಂತರ ಪೂರ್ಣ ಫಿಟ್‌ ಆಗಿರದ ಕಾರಣ ಅವರನ್ನು ಮತ್ತೆ ತಂಡದಿಂದ ಹೊರಗಿಡಲಾಗಿದೆ. ಕಾಮನ್ವೆಲ್ತ್ ಗೇಮ್ಸ್ ತಂಡವು ಮುಂದಿನ ತಿಂಗಳು ವಿಶ್ವಕಪ್‌ನಲ್ಲಿ ಭಾಗವಹಿಸುವ ತಂಡವಾಗಿದೆ. ಜುಲೈ 28 ರಿಂದ ಆಗಸ್ಟ್ 8 ರವರೆಗೆ ನಡೆಯಲಿರುವ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಅನುಭವಿ ಡಿಫೆಂಡರ್ ದೀಪ್ ಗ್ರೇಸ್ ಎಕ್ಕಾ ಉಪನಾಯಕಿಯಾಗಿ ಅಧಿಕಾರ ವಹಿಸಿಕೊಂಡರೆ, ಗೋಲ್‌ಕೀಪರ್ ಸವಿತಾ ಪೂನಿಯಾ ತಂಡದ ನಾಯಕಿಯಾಗಲಿದ್ದಾರೆ.

ವಿಶ್ವಕಪ್ ತಂಡಕ್ಕೆ ಹೋಲಿಸಿದರೆ ಕೇವಲ 3 ಬದಲಾವಣೆ

ಕಾಮನ್‌ವೆಲ್ತ್ ಗೇಮ್ಸ್ ತಂಡಕ್ಕೆ ಆಯ್ಕೆಯಾಗಿರುವ ತಂಡವನ್ನು ನೋಡಿದರೆ, ವಿಶ್ವಕಪ್ ತಂಡದಲ್ಲಿ ಆಡುವ ತಂಡದಿಂದ ಕೇವಲ ಮೂರು ಬದಲಾವಣೆಗಳನ್ನು ಮಾಡಲಾಗಿದೆ. ಬೀಚು ದೇವಿ ಖರಿಬಾಮ್ ಬದಲಿಗೆ ರಜನಿ ಎಟಿಮಾರ್ಪು ಅವರನ್ನು ಎರಡನೇ ಗೋಲ್‌ಕೀಪರ್ ಆಗಿ ಆಡಲಾಗಿದ್ದು, ವಿಶ್ವಕಪ್ ತಂಡದ ಸದಸ್ಯೆ ಸೋನಿಕಾ (ಮಿಡ್‌ಫೀಲ್ಡರ್) ಕಾಮನ್‌ವೆಲ್ತ್ ಗೇಮ್ಸ್ ತಂಡದಲ್ಲಿ ಸೇರ್ಪಡೆಗೊಂಡಿಲ್ಲ. ಫಾರ್ವರ್ಡ್ ಸಂಗೀತಾ ಕುಮಾರಿ ಅವರು ವಿಶ್ವಕಪ್‌ಗೆ ಅಫಿಶಿಯೇಟಿಂಗ್ ಆಟಗಾರ್ತಿಯರಲ್ಲಿ ಒಬ್ಬರಾಗಿ ಆಯ್ಕೆಯಾಗಿದ್ದಾರೆ. ಆದರೆ ಕಾಮನ್‌ವೆಲ್ತ್ ಗೇಮ್ಸ್ ತಂಡದಲ್ಲಿ ಪೂರ್ಣ ಸದಸ್ಯೆಯಾಗಿ ಸೇರ್ಪಡೆಗೊಂಡಿದ್ದಾರೆ.

ಇದನ್ನೂ ಓದಿ
Image
IND W vs SL W: ಏಕಪಕ್ಷೀಯವಾಗಿ ಶ್ರೀಲಂಕಾವನ್ನು ಮಣಿಸಿದ ಟೀಂ ಇಂಡಿಯಾ; ಗೆಲುವಿನೊಂದಿಗೆ ಸರಣಿ ಆರಂಭ
Image
India vs Leicestershire: ಅಭ್ಯಾಸ ಪಂದ್ಯದಲ್ಲೂ ಅದೇ ಕಥೆ; ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿದ ರೋಹಿತ್ ಪಡೆ
Image
Neymar: 1,2,3,4,5,6..! ಫುಟ್ಬಾಲ್ ದೈತ್ಯ ನೇಮರ್ ಮಾಜಿ ಹಾಗೂ ಹಾಲಿ ಪ್ರೇಯಸಿಯರ ಪಟ್ಟಿ ಇದು

ಭಾರತವು ಇಂಗ್ಲೆಂಡ್, ಕೆನಡಾ, ವೇಲ್ಸ್ ಮತ್ತು ಘಾನಾ ಜೊತೆಗೆ ಪೂಲ್ ಎ ನಲ್ಲಿ ಸ್ಥಾನ ಪಡೆದಿದೆ. ಭಾರತ ಜುಲೈ 28 ರಂದು ಘಾನಾ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತೀಯ ಮಹಿಳಾ ತಂಡವನ್ನು ಐತಿಹಾಸಿಕ ನಾಲ್ಕನೇ ಸ್ಥಾನಕ್ಕೆ ಮುನ್ನಡೆಸಿದ ರಾಣಿ, ಮಂಡಿರಜ್ಜು ಗಾಯದಿಂದ ಚೇತರಿಸಿಕೊಂಡ ನಂತರ ಬೆಲ್ಜಿಯಂ ಮತ್ತು ನೆದರ್ಲ್ಯಾಂಡ್ಸ್ ವಿರುದ್ಧದ ಇತ್ತೀಚಿನ ಎಫ್‌ಐಹೆಚ್ ಪ್ರೊ ಲೀಗ್ ಪಂದ್ಯಗಳಿಗೆ ಆಯ್ಕೆಯಾಗಿದ್ದರು.

ಇದನ್ನೂ ಓದಿ: CWG 2022: ಕಾಮನ್‌ವೆಲ್ತ್ ಗೇಮ್ಸ್​ಗೆ ಭಾರತದ ಬಲಿಷ್ಠ ಹಾಕಿ ತಂಡ ಪ್ರಕಟ; ಮನ್‌ಪ್ರೀತ್ ಸಿಂಗ್​ಗೆ ನಾಯಕತ್ವ

ರಾಣಿ ರಾಂಪಾಲ್ ಪ್ರೊ ಲೀಗ್‌ನಲ್ಲೂ ಆಡಿರಲಿಲ್ಲ

ರಾಣಿ ಪ್ರೊ ಲೀಗ್‌ನ ಯುರೋಪಿಯನ್ ಲೆಗ್‌ನ ಮೊದಲ ನಾಲ್ಕು ಪಂದ್ಯಗಳಲ್ಲಿ ಆಡಲಿಲ್ಲ, ಇದು ಅವರ ಫಿಟ್‌ನೆಸ್ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿತು. ಅಂತಿಮವಾಗಿ ವಿಶ್ವಕಪ್ ತಂಡದಲ್ಲಿ ಸ್ಥಾನ ಕಳೆದುಕೊಂಡರು. ಗೋಲ್ಡ್ ಕೋಸ್ಟ್ 2014 ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋತ ನಂತರ ಭಾರತ ನಾಲ್ಕನೇ ಸ್ಥಾನ ಗಳಿಸಿತು. ಆದಾಗ್ಯೂ, ತಮ್ಮ ಚೊಚ್ಚಲ FIH ಪ್ರೊ ಲೀಗ್‌ನಲ್ಲಿ ನಾಕ್ಷತ್ರಿಕ ಪ್ರದರ್ಶನದ ನಂತರ, ಭಾರತ ಮಹಿಳಾ ಹಾಕಿ ತಂಡವು ಈಗ ಬರ್ಮಿಂಗ್‌ಹ್ಯಾಮ್‌ನಲ್ಲಿ ಪೋಡಿಯಂ ಸ್ಥಾನವನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿದೆ. ತಂಡವು FIH ಪ್ರೊ ಲೀಗ್‌ನಲ್ಲಿ ಅರ್ಜೆಂಟೀನಾ ಮತ್ತು ನೆದರ್‌ಲ್ಯಾಂಡ್‌ನ ನಂತರ ಮೂರನೇ ಸ್ಥಾನ ಗಳಿಸಿತು.

ತಂಡಕ್ಕೆ ಪದಕ ಗೆಲ್ಲುವ ಅವಕಾಶ

ತಂಡದ ಆಯ್ಕೆ ಕುರಿತು ಮಾತನಾಡಿದ ಮುಖ್ಯ ಕೋಚ್ ಯಾಂಕೆ ಸ್ಕೋಪ್‌ಮನ್, “ನಾವು ಕಾಮನ್‌ವೆಲ್ತ್ ಗೇಮ್ಸ್‌ಗೆ ಅನುಭವಿ ತಂಡವನ್ನು ಆಯ್ಕೆ ಮಾಡಿದ್ದೇವೆ. ಈ ಬಾರಿ ಪದಕ ಗೆಲ್ಲುವ ಉತ್ತಮ ಅವಕಾಶವಿದೆ ಎಂದು ಆಟಗಾರರು ಭಾವಿಸಿದ್ದಾರೆ ಎಂದು ಹೇಳಿದರು. “ಎಫ್‌ಐಎಚ್ ಪ್ರೊ ಲೀಗ್ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ, ತಂಡವು ಆತ್ಮವಿಶ್ವಾಸದಿಂದ ತುಂಬಿದೆ. ಆದ್ದರಿಂದ ಅವರಿಂದ ನಿರೀಕ್ಷೆಗಳು ಹೆಚ್ಚಿವೆ ಎಂದು ಅವರು ಅರ್ಥಮಾಡಿಕೊಂಡಿದ್ದಾರೆ ಎಂದು ಕೋಚ್ ಹೇಳಿದರು.

ನಾವು ಕಾಮನ್‌ವೆಲ್ತ್ ಗೇಮ್ಸ್‌ಗೆ ಕೆಲವು ದಿನಗಳ ಮೊದಲು ನಮ್ಮ ವಿಶ್ವಕಪ್ ಅಭಿಯಾನವನ್ನು ಪೂರ್ಣಗೊಳಿಸುತ್ತೇವೆ. ಆದ್ದರಿಂದ ಎರಡು ಪಂದ್ಯಾವಳಿಗಳ ನಡುವೆ ಚೇತರಿಕೆಯ ಸಮಯ ಕೇವಲ 10 ದಿನಗಳು ಇರುವುದರಿಂದ ದೈಹಿಕವಾಗಿ ಸಮರ್ಥ ತಂಡವನ್ನು ಆಯ್ಕೆ ಮಾಡುವುದು ನಮಗೆ ಮುಖ್ಯವಾಗಿದೆ ಎಂದು ಶಾಪ್‌ಮನ್ ಹೇಳಿದರು.

ಕಾಮನ್ವೆಲ್ತ್ ಕ್ರೀಡಾಕೂಟಕ್ಕಾಗಿ ಭಾರತೀಯ ಮಹಿಳಾ ಹಾಕಿ ತಂಡ:

ಗೋಲ್‌ಕೀಪರ್‌ಗಳು: ಸವಿತಾ (ನಾಯಕಿ), ರಜನಿ ಎಟಿಮಾರ್ಪು

ಡಿಫೆಂಡರ್ಸ್: ದೀಪ್ ಗ್ರೇಸ್ ಎಕ್ಕಾ (ಉಪ ನಾಯಕಿ), ಗುರ್ಜಿತ್ ಕೌರ್, ನಿಕ್ಕಿ ಪ್ರಧಾನ್, ಉದಿತಾ

ಮಿಡ್‌ಫೀಲ್ಡರ್‌ಗಳು: ನಿಶಾ, ಸುಶೀಲಾ ಚಾನು, ಪುಖ್ರಂಬಮ್, ಮೋನಿಕಾ, ನೇಹಾ, ಜ್ಯೋತಿ, ನವಜೋತ್ ಕೌರ್, ಸಲಿಮಾ ಟೆಟೆ

ಫಾರ್ವರ್ಡ್‌: ವಂದನಾ ಕಟಾರಿಯಾ, ಲಾಲ್ರೆಮ್ಸಿಯಾಮಿ, ನವನೀತ್ ಕೌರ್,ಶರ್ಮಿಳಾ ದೇವಿ, ಸಂಗೀತಾ ಕುಮಾರಿ.

Published On - 6:01 pm, Thu, 23 June 22