CWG 2022: ಕಾಮನ್‌ವೆಲ್ತ್ ಗೇಮ್ಸ್​ಗೆ ಭಾರತದ ಬಲಿಷ್ಠ ಹಾಕಿ ತಂಡ ಪ್ರಕಟ; ಮನ್‌ಪ್ರೀತ್ ಸಿಂಗ್​ಗೆ ನಾಯಕತ್ವ

CWG 2022: ಕಾಮನ್‌ವೆಲ್ತ್ ಗೇಮ್ಸ್​ಗೆ ಭಾರತದ ಬಲಿಷ್ಠ ಹಾಕಿ ತಂಡ ಪ್ರಕಟ; ಮನ್‌ಪ್ರೀತ್ ಸಿಂಗ್​ಗೆ ನಾಯಕತ್ವ
ಭಾರತ ಹಾಕಿ ತಂಡ

2022 Commonwealth Games: ಕಾಮನ್‌ವೆಲ್ತ್ ಗೇಮ್ಸ್‌ಗಾಗಿ ಭಾರತ ಸೋಮವಾರ 18 ಸದಸ್ಯರ ಬಲಿಷ್ಠ ಪುರುಷರ ಹಾಕಿ ತಂಡವನ್ನು ಪ್ರಕಟಿಸಿದ್ದು, ಮನ್‌ಪ್ರೀತ್ ಸಿಂಗ್ ನಾಯಕನಾಗಿ ಮರಳಿದರೆ, ಡ್ರ್ಯಾಗ್-ಫ್ಲಿಕ್ಕರ್ ಹರ್ಮನ್‌ಪ್ರೀತ್ ಸಿಂಗ್ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿದೆ.

TV9kannada Web Team

| Edited By: pruthvi Shankar

Jun 20, 2022 | 5:52 PM

ಕಾಮನ್‌ವೆಲ್ತ್ ಗೇಮ್ಸ್‌ (2022 Commonwealth Games)ಗಾಗಿ ಭಾರತ ಸೋಮವಾರ 18 ಸದಸ್ಯರ ಬಲಿಷ್ಠ ಪುರುಷರ ಹಾಕಿ ತಂಡವನ್ನು ಪ್ರಕಟಿಸಿದ್ದು, ಮನ್‌ಪ್ರೀತ್ ಸಿಂಗ್ (Manpreet Singh) ನಾಯಕನಾಗಿ ಮರಳಿದರೆ, ಡ್ರ್ಯಾಗ್-ಫ್ಲಿಕ್ಕರ್ ಹರ್ಮನ್‌ಪ್ರೀತ್ ಸಿಂಗ್ (Harmanpreet Singh) ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿದೆ. ಬರ್ಮಿಂಗ್ಹ್ಯಾಮ್ ಗೇಮ್ಸ್ ಮತ್ತು 2024 ರ ಪ್ಯಾರಿಸ್ ಒಲಂಪಿಕ್ ಕ್ವಾಲಿಫೈಯರ್ ಹ್ಯಾಂಗ್ಝೌ ಏಷ್ಯನ್ ಗೇಮ್ಸ್ ನಡುವಿನ ಕಡಿಮೆ ಸಮಯದಿಂದಾಗಿ ಕಾಮನ್ವೆಲ್ತ್ ಗೇಮ್ಸ್ (CWG 2022) ಗೆ ಎರಡನೇ ದರ್ಜೆಯ ತಂಡವನ್ನು ಕಳುಹಿಸಲು ಹಾಕಿ ಇಂಡಿಯಾ ಆರಂಭದಲ್ಲಿ ನಿರ್ಧರಿಸಿತ್ತು. ಚೀನಾದಲ್ಲಿ ಕೋವಿಡ್ -19 ಗೆ ಸಂಬಂಧಿಸಿದ ಪರಿಸ್ಥಿತಿಯಿಂದಾಗಿ ಏಷ್ಯನ್ ಕ್ರೀಡಾಕೂಟವನ್ನು ಮುಂದೂಡಲಾಯಿತು. ನಂತರ ಜುಲೈ 28 ರಿಂದ ಪ್ರಾರಂಭವಾಗುವ ಈ ಪ್ರತಿಷ್ಠಿತ ಸ್ಪರ್ಧೆಗೆ ಬಲಿಷ್ಠ ತಂಡವನ್ನು ಆಯ್ಕೆ ಮಾಡಲು ಹಾಕಿ ಇಂಡಿಯಾ ನಿರ್ಧರಿಸಿತು. ಭಾರತ ತಂಡ ಇಂಗ್ಲೆಂಡ್, ಕೆನಡಾ, ವೇಲ್ಸ್ ಮತ್ತು ಘಾನಾ ಜೊತೆಗೆ ಪೂಲ್ ಬಿಯಲ್ಲಿ ಸ್ಥಾನ ಪಡೆದಿದೆ. ಎರಡು ಬಾರಿ ಬೆಳ್ಳಿ ಪದಕ ವಿಜೇತ ಭಾರತ ತಂಡ ಜುಲೈ 31 ರಂದು ಘಾನಾ ವಿರುದ್ಧ ಅಭಿಯಾನವನ್ನು ಪ್ರಾರಂಭಿಸಲಿದೆ.

ಅತ್ಯಂತ ಬಲಿಷ್ಠ ತಂಡ ಆಯ್ಕೆ

ಕಳೆದ ವರ್ಷ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದಾಗ ಭಾರತ ತಂಡವನ್ನು ಮುನ್ನಡೆಸಿದ್ದ ಮನ್‌ಪ್ರೀತ್, ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್ ವಿರುದ್ಧದ ಎಫ್‌ಐಎಚ್ ಪ್ರೊ ಲೀಗ್ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದ ಅಮಿತ್ ರೋಹಿದಾಸ್ ಬದಲಿಗೆ ನಾಯಕತ್ವವಹಿಸಿದ್ದಾರೆ. ಉಪನಾಯಕರಾಗಿ ನೇಮಕಗೊಂಡ ಹರ್ಮನ್‌ಪ್ರೀತ್, ಎಫ್‌ಐಎಚ್ ಹಾಕಿ ಪ್ರೊ ಲೀಗ್‌ನಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರರಾಗಿದ್ದರು. ಮುಖ್ಯ ಕೋಚ್ ಗ್ರಹಾಂ ರೀಡ್ ಮಾತನಾಡಿ, ‘ನಾವು ಕಾಮನ್‌ವೆಲ್ತ್ ಗೇಮ್ಸ್‌ಗೆ ಪರೀಕ್ಷಿತ ತಂಡವನ್ನು ಆಯ್ಕೆ ಮಾಡಿದ್ದೇವೆ. ಈ ಆಟಗಾರರು ಎಫ್‌ಐಎಚ್ ಪ್ರೊ ಲೀಗ್‌ನಲ್ಲಿ ಹೆಚ್ಚಿನ ಒತ್ತಡದ ಪಂದ್ಯಗಳಲ್ಲಿ ಅಗ್ರ ತಂಡದ ವಿರುದ್ಧ ಆಡಿದ ಅನುಭವವನ್ನು ಹೊಂದಿದ್ದಾರೆ. ಇದು ನಾಲ್ಕು ವರ್ಷಗಳಲ್ಲಿ ನಡೆಯಲಿರುವ ಪ್ರತಿಷ್ಠಿತ ಸ್ಪರ್ಧೆಯ ಮುಂದೆ ಉತ್ತಮ ಅನುಭವವಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: Asia Cup Hockey: ಪ್ರಶಸ್ತಿ ಉಳಿಸಿಕೊಳ್ಳುವ ಕನಸು ಭಗ್ನ; ಸೆಮಿಫೈನಲ್‌ನಲ್ಲಿ ಸೋತ ಭಾರತ ಮಹಿಳಾ ಹಾಕಿ ತಂಡ

ಸೂರಜ್ ಕರ್ಕೇರ, ಸುಖಜಿತ್ ಸಿಂಗ್​ಗೆ ಸ್ಥಾನವಿಲ್ಲ

ಅನುಭವಿ ಗೋಲ್‌ಕೀಪರ್‌ ಪಿಆರ್‌ ಶ್ರೀಜೇಶ್‌ ಮತ್ತು ಗಾಯದಿಂದ ವಾಪಸಾಗಿರುವ ಕೃಷ್ಣ ಬಹದ್ದೂರ್‌ ಪಾಠಕ್‌ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ರಕ್ಷಣಾ ಜವಾಬ್ದಾರಿ ವರುಣ್ ಕುಮಾರ್, ಸುರೇಂದ್ರ ಕುಮಾರ್, ಹರ್ಮನ್‌ಪ್ರೀತ್ ಸಿಂಗ್, ಅಮಿತ್ ರೋಹಿದಾಸ್, ಜುಗ್ರಾಜ್ ಸಿಂಗ್ ಮತ್ತು ಜರ್ಮನ್‌ಪ್ರೀತ್ ಸಿಂಗ್ ಅವರ ಮೇಲಿದೆ. ಮನ್‌ಪ್ರೀತ್, ಹಾರ್ದಿಕ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ಶಂಶೇರ್ ಸಿಂಗ್, ಆಕಾಶದೀಪ್ ಸಿಂಗ್ ಮತ್ತು ನೀಲಕಾಂತ್ ಶರ್ಮಾ ಮಿಡ್‌ಫೀಲ್ಡ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಮನದೀಪ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಗುರ್ಜಂತ್ ಸಿಂಗ್ ಮತ್ತು ಅಭಿಷೇಕ್ ಅವರನ್ನು ಸ್ಟ್ರೈಕರ್‌ಗಳಾಗಿ ತಂಡದಲ್ಲಿ ಸೇರಿಸಲಾಗಿದೆ. ಎಫ್‌ಐಎಚ್ ಪ್ರೊ ಲೀಗ್‌ನಲ್ಲಿ ಭಾರತ ತಂಡದಲ್ಲಿದ್ದ ಗೋಲ್‌ಕೀಪರ್ ಸೂರಜ್ ಕರ್ಕೇರಾ ಮತ್ತು ಫಾರ್ವರ್ಡ್ ಆಟಗಾರರಾದ ಶಿಲಾನಂದ್ ಲಾಕ್ರಾ ಮತ್ತು ಸುಖಜಿತ್ ಸಿಂಗ್ ತಂಡದಲ್ಲಿ ಸ್ಥಾನ ಪಡೆದಿಲ್ಲ.

ಭಾರತ ಹಾಕಿ ತಂಡದ ತಂಡ

ಗೋಲ್‌ಕೀಪರ್‌ಗಳು: ಪಿಆರ್ ಶ್ರೀಜೇಶ್ ಮತ್ತು ಕೃಷ್ಣ ಬಹದ್ದೂರ್ ಪಾಠಕ್.

ಡಿಫೆಂಡರ್ಸ್: ವರುಣ್ ಕುಮಾರ್, ಸುರೇಂದ್ರ ಕುಮಾರ್, ಹರ್ಮನ್ಪ್ರೀತ್ ಸಿಂಗ್, ಅಮಿತ್ ರೋಹಿದಾಸ್, ಜುಗ್ರಾಜ್ ಸಿಂಗ್ ಮತ್ತು ಜರ್ಮನ್ಪ್ರೀತ್ ಸಿಂಗ್.

ಮಿಡ್‌ಫೀಲ್ಡರ್‌ಗಳು: ಮನ್‌ಪ್ರೀತ್ ಸಿಂಗ್ (ನಾಯಕ), ಹಾರ್ದಿಕ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ಶಂಶೇರ್ ಸಿಂಗ್, ಆಕಾಶದೀಪ್ ಸಿಂಗ್ ಮತ್ತು ನೀಲಕಾಂತ್ ಶರ್ಮಾ.

ಇದನ್ನೂ ಓದಿ

ಫಾರ್ವರ್ಡ್‌: ಮನ್‌ದೀಪ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಗುರ್ಜಂತ್ ಸಿಂಗ್ ಮತ್ತು ಅಭಿಷೇಕ್

Follow us on

Related Stories

Most Read Stories

Click on your DTH Provider to Add TV9 Kannada