ಕರ್ನಾಟಕ ಹಾಕಿ ತಂಡಕ್ಕೆ ಹಾಸನದ ಏಳು ಆಟಗಾರ್ತಿಯರು ಆಯ್ಕೆ

ಮಹಿಳೆಯರ 12ನೇ ಹಾಕಿ ಇಂಡಿಯಾ ಸಬ್ ಜೂನಿಯರ್ಸ್ ನ್ಯಾಷನಲ್‌ ಟೂರ್ನಿಗೆ ಹಾಸನ ಜಿಲ್ಲೆಯ ಏಳು ಆಟಗಾರ್ತಿಯರು ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಕರ್ನಾಟಕ ಹಾಕಿ ತಂಡಕ್ಕೆ ಹಾಸನದ ಏಳು ಆಟಗಾರ್ತಿಯರು ಆಯ್ಕೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Vinay Bhat

Updated on:May 06, 2022 | 10:44 AM

ಇದೇ ಮೇ 11ರಿಂದ 22 ರ ವರೆಗೆ ಮಣಿಪುರದ ಇಂಫಾಲ್‍ನಲ್ಲಿ ನಡೆಯುವ ಮಹಿಳೆಯರ 12ನೇ ಹಾಕಿ (Hockey) ಇಂಡಿಯಾ ಸಬ್ ಜೂನಿಯರ್ಸ್ ನ್ಯಾಷನಲ್‌ ಟೂರ್ನಿಗೆ ಹಾಸನ(Hassan) ಜಿಲ್ಲೆಯ ಏಳು ಆಟಗಾರ್ತಿಯರು ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಕರ್ನಾಟಕದ ಆಯ್ಕೆಯಾದ ತಂಡದಲ್ಲಿ ಹಾಸನ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ತರಬೇತಿ ಪಡೆಯುತ್ತಿರುವ ಆಟಗಾರರಾದ ಹರ್ಷಿತಾ, ಮೇಘಾವತಿ, ಯಮುನಾ, ಸುಪ್ರಿತಾ, ಸೌಮ್ಯಾ ಮತ್ತು ಚತುರ್ಥಿ ಆಯ್ಕೆಯಾಗಿದ್ದಾರೆ. ಇವರೆಲ್ಲ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಾಗಿದ್ದು, ರಾಯಲ್ ಅಪೊಲೋ ಇಂಟರ್ ನ್ಯಾಷನಲ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಾ ಹಾಕಿ ತರಬೇತಿ ಪಡೆಯುತ್ತಿರುವ ದ್ರವ್ಯ ಎಂ. ಗೌಡ ಪಾರಮ್ಯಮೆರೆಯಲು ಸಿದ್ಧರಾಗಿದ್ದಾರೆ.

ಈ ಬಗ್ಗೆ ಮಾತನಾಡಿದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸಿ.ಕೆ.ಹರೀಶ್‌, ಇದ‌ಕ್ಕೆ ತರಬೇತುದಾರ ರವೀಶ್ ಅವರ ಪರಿಶ್ರಮ ಕಾರಣ ಎಂದು ತಿಳಿಸಿದ್ದು, ಇಂಡಿಯಾ ಸಬ್ ಜೂನಿಯರ್ಸ್ ನ್ಯಾಷನಲ್‌ ಟೂರ್ನಿಯಲ್ಲಿ ಕರ್ನಾಟಕ ಗೆದ್ದು ಬರಲಿ ಎಂದು ಹಾರೈಸಿದ್ದಾರೆ.

ಹುಬ್ಬಳ್ಳಿಯ ಮನೋಜ ಆಯ್ಕೆ:

ಇದನ್ನೂ ಓದಿ
Image
GT vs MI, IPL 2022: ಗುಜರಾತ್​ಗೆ ಶಾಕ್ ನೀಡುತ್ತಾ ಮುಂಬೈ?: ಅರ್ಜುನ್ ತೆಂಡೂಲ್ಕರ್ ಪದಾರ್ಪಣೆ ಸಾಧ್ಯತೆ
Image
Kane Williamson: ಡೆಲ್ಲಿ ವಿರುದ್ಧದ ಪಂದ್ಯದ ಬಳಿಕ ಕೇನ್ ವಿಲಿಯಮ್ಸನ್ ಸೋಲಿಗೆ ನೀಡಿದ ಕಾರಣವೇನು ಗೊತ್ತೇ?
Image
David Warner: ಅಜೇಯ 92 ರನ್: ಡೇವಿಡ್ ವಾರ್ನರ್ ಸ್ಫೋಟಕ ಬ್ಯಾಟಿಂಗ್​ಗೆ ಗೇಲ್ ದಾಖಲೆ ಉಡೀಸ್
Image
IPL 2022: RCB ಪಾಲಿಗೆ ಹೊರೆಯಾದ್ರಾ ವಿರಾಟ್ ಕೊಹ್ಲಿ? ಕಳವಳ ವ್ಯಕ್ತಪಡಿಸಿದ ಮಾಜಿ ಕ್ರಿಕೆಟಿಗ

ಹುಬ್ಬಳ್ಳಿಯ ಬೆಂಗೇರಿ ನಿವಾಸಿ ಮನೋಜ ಅಶೋಕ ವಾಲ್ಮೀಕಿ ಗೋವಾದಲ್ಲಿ ನಡೆದಿರುವ 12ನೇ ಹಾಕಿ ಇಂಡಿಯಾ ಸಬ್ ಜ್ಯೂನಿಯರ್ ಪುರುಷರ ವಿಭಾಗದ ರಾಷ್ಟ್ರೀಯ ಚಾಂಪಿಯನ್‍ಶಿಪ್ -2022 ಹಾಕಿ ಪಂದ್ಯಾವಳಿಯ ಕರ್ನಾಟಕ ತಂಡದ ಪ್ರಮುಖ ಆಟಗಾರನಾಗಿ ಆಯ್ಕೆಯಾಗಿದ್ದಾರೆ. ಕೊಡಗು ಜಿಲ್ಲೆಯ ಕುಡಿಗೆ ಕ್ರೀಡಾ ಶಾಲೆಯ ವಿದ್ಯಾರ್ಥಿಯಾಗಿರುವ ಮನೋಜ ವಾಲ್ಮೀಕಿ ಹಾಕಿ ಆಟದಲ್ಲಿ ತಾನು ಸಾಧಿಸಿರುವ ಚಾಕಚಕ್ಯತೆ ಹಾಗೂ ಪಾರಮ್ಯದಿಂದ ರಾಷ್ಟ್ರೀಯ ಮಟ್ಟದ ಇಂತಹ ಹಾಕಿ ಚಾಂಪಿಯನ್‍ಶಿಪ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಕಾರಣವಾಗಿದೆ.

ಹೆಚ್ಚಿನ ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:44 am, Fri, 6 May 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್