Ranji Trophy Final 2022: ಎರಡನೇ ದಿನದಾಟ ಅಂತ್ಯ; ಸರ್ಫರಾಜ್ ಶತಕ, ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿದ ಮಧ್ಯಪ್ರದೇಶ
Ranji Trophy Final 2022: ಮುಂಬೈ ಇನಿಂಗ್ಸ್ ಮುಗಿದ ಬಳಿಕ ಬ್ಯಾಟಿಂಗ್ಗೆ ಬಂದ ಮಧ್ಯಪ್ರದೇಶ ಉತ್ತಮ ಆರಂಭ ನೀಡಿದೆ. ಹಿಮಾಂಶು ಮಂತ್ರಿ (31) ಮಾತ್ರ ಒಂದು ವಿಕೆಟ್ ಕಳೆದುಕೊಂಡಿದ್ದಾರೆ. ಆರಂಭಿಕರಾದ ಯಶ್ ದುಬೆ (44) ಮತ್ತು ಶುಭಂ ಶರ್ಮಾ (41) ರನ್ ಗಳಿಸಿದ್ದಾರೆ.
ಈ ವರ್ಷದ ರಣಜಿ ಋತುವಿನ ರಣಜಿ ಫೈನಲ್ (Ranji Final) ಮುಂಬೈ ಮತ್ತು ಮಧ್ಯಪ್ರದೇಶ (Mumbai and Madhya Pradesh) ನಡುವೆ ಬೆಂಗಳೂರಿನಲ್ಲಿ ಆರಂಭವಾಗಿದೆ. ಇಂದು ಪಂದ್ಯದ ಎರಡನೇ ದಿನವಾಗಿದ್ದು, 42ನೇ ಬಾರಿ ರಣಜಿ ಟ್ರೋಫಿ ಗೆಲ್ಲುವ ಉದ್ದೇಶದಿಂದ ಮುಂಬೈ ಅಖಾಡಕ್ಕಿಳಿದಿದೆ. ಇಂದು ಎರಡನೇ ದಿನದಾಟದಲ್ಲಿ ಮಧ್ಯಪ್ರದೇಶ ಮೇಲುಗೈ ಸಾಧಿಸಿತು. ಇಂದು ಮುಂಬೈ ಪರ ಸರ್ಫರಾಜ್ ಖಾನ್ (Sarfaraz Khan) ಮಾತ್ರ ಏಕಾಂಗಿಯಾಗಿ ಹೋರಾಡಿದರು. ಒಂದೆಡೆ ವಿಕೆಟ್ ಪತನವಾಗುತ್ತಿರುವಾಗ ಏಕಾಂಗಿ ಹೋರಾಟ ನಡೆಸಿದರು. ಇಂದು ಕಠಿಣ ಪರಿಸ್ಥಿತಿಯಲ್ಲಿ ಮುಂಬೈ ಪರ ಸರ್ಫರಾಜ್ ಶತಕ ಬಾರಿಸಿದರು. ಅವರು 243 ಎಸೆತಗಳಲ್ಲಿ 134 ರನ್ ಗಳಿಸಿದರು. ಜೊತೆಗೆ 13 ಬೌಂಡರಿ ಹಾಗೂ 2 ಸಿಕ್ಸರ್ ಕೂಡ ಬಾರಿಸಿದರು. ಸರ್ಫರಾಜ್ ಅವರ ಪ್ರದರ್ಶನದ ಬಲದಿಂದ ಮುಂಬೈ ಮೊದಲ ಇನಿಂಗ್ಸ್ನಲ್ಲಿ 374 ರನ್ ಗಳಿಸಿತ್ತು. ಸರ್ಫರಾಜ್ ಹೊರತುಪಡಿಸಿ ಮುಂಬೈನ ಯಶಸ್ವಿ ಜೈಸ್ವಾಲ್ 78 ರನ್ ಗಳಿಸಿದರು. ನಿನ್ನೆಯ ಮೊದಲ ದಿನದಾಟದ ಅಂತ್ಯಕ್ಕೆ ಮುಂಬೈ 5 ವಿಕೆಟ್ ನಷ್ಟಕ್ಕೆ 248 ರನ್ ಗಳಿಸಿತು. ನಿನ್ನೆಯ ಸ್ಕೋರ್‌ಗೆ ಇಂದು ಮುಂಬೈ 126 ರನ್ ಸೇರಿಸಿತು.
ಗೌರವ್ ಯಾದವ್ ಯಶಸ್ವಿ ಬೌಲರ್
ಎರಡನೇ ದಿನವಾದ ಇಂದು ಮುಂಬೈ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಇಂದು ಶಮ್ಸ್ ಮುಲಾನಿ ರೂಪದಲ್ಲಿ ಮುಂಬೈಗೆ ಮೊದಲ ಹೊಡೆತ ಬಿದ್ದಿತು. ನಿನ್ನೆಯ ಸ್ಕೋರ್‌ನಲ್ಲಿ ಮುಲಾನಿ ಕೇವಲ 12 ರನ್‌ಗಳಿಗೆ ಔಟಾದರು. ಅವರನ್ನು ಗೌರವ್ ಯಾದವ್ ಕ್ಯಾಚ್ ಪಡೆದರು. ನಿನ್ನೆ ಅಜೇಯ 40 ರನ್ ಗಳಿಸಿದ್ದ ಸರ್ಫರಾಜ್ ಖಾನ್ ಮತ್ತು ತನುಷ್ ಕೋಟ್ಯಾನ್ ನಂತರ ಮುನ್ನಡೆ ಸಾಧಿಸಿದರು. ಇನ್ನು 40 ರನ್ ಸೇರಿಸುವಷ್ಟರಲ್ಲಿ ಕೋಟ್ಯಾನ್ ರೂಪದಲ್ಲಿ ಮುಂಬೈ ಏಳನೇ ವಿಕೆಟ್ ಕಳೆದುಕೊಂಡಿತು. ಅವರೂ 15 ರನ್ ಗಳಿಸಿದ್ದಾಗ ಗೌರವ್ ಯಾದವ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಧವನ್ ಕುಲಕರ್ಣಿ 1 ರನ್ ಮತ್ತು ತ್ರಿಶರ್ ದೇಶಪಾಂಡೆ 6 ರನ್ ಗಳಿಸಿ ಔಟಾದರು. 134 ರನ್ ಗಳಿಸಿ ಆಡುತ್ತಿದ್ದ ಸರ್ಫರಾಜ್ ಖಾನ್ ಗೌರವ್ ಯಾದವ್ ಎಸೆತದಲ್ಲಿ ಶ್ರೀವಾಸ್ತವಗೆ ಕ್ಯಾಚಿತ್ತು ನಿರ್ಗಮಿಸಿದರು. ಮಧ್ಯಪ್ರದೇಶದ ಗೌರವ್ ಯಾದವ್ ಯಶಸ್ವಿ ಬೌಲರ್ ಎನಿಸಿಕೊಂಡರು. ಯಾದವ್ ಅತಿ ಹೆಚ್ಚು ನಾಲ್ಕು ವಿಕೆಟ್ ಪಡೆದರು. ಅನುಭವ್ ಅಗರ್ವಾಲ್ 3 ವಿಕೆಟ್, ಸರನ್ಶ್ ಜೈನ್ 2 ವಿಕೆಟ್ ಮತ್ತು ಕುಮಾರ್ ಕಾರ್ತಿಕೇಯನ್ 1 ವಿಕೆಟ್ ಪಡೆದರು.
ಇದನ್ನೂ ಓದಿ: Ranji Trophy: 47ನೇ ಬಾರಿ ರಣಜಿ ಫೈನಲ್‌ಗೆ ಲಗ್ಗೆ ಇಟ್ಟ ಮುಂಬೈ! ಮಧ್ಯಪ್ರದೇಶ ಫೈನಲ್ ಎದುರಾಳಿ
ಮುಂಬೈ ಬೌಲರ್‌ಗಳ ಹೋರಾಟ
ಮುಂಬೈ ಇನಿಂಗ್ಸ್ ಮುಗಿದ ಬಳಿಕ ಬ್ಯಾಟಿಂಗ್ಗೆ ಬಂದ ಮಧ್ಯಪ್ರದೇಶ ಉತ್ತಮ ಆರಂಭ ನೀಡಿದೆ. ಹಿಮಾಂಶು ಮಂತ್ರಿ (31) ಮಾತ್ರ ಒಂದು ವಿಕೆಟ್ ಕಳೆದುಕೊಂಡಿದ್ದಾರೆ. ಆರಂಭಿಕರಾದ ಯಶ್ ದುಬೆ (44) ಮತ್ತು ಶುಭಂ ಶರ್ಮಾ (41) ರನ್ ಗಳಿಸಿದ್ದಾರೆ. ಹಿಮಾಂಶು ಶರ್ಮಾ ದೇಶಪಾಂಡೆಗೆ ಕ್ಯಾಚ್ ನೀಡಿದರು. ಮುಂಬೈ ಬೌಲರ್‌ಗಳು ಇಂದು ಪರದಾಡಬೇಕಾಯಿತು. ನಾಳೆ ಮುಂಬೈನ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಬೇಕಿದ್ದು, ಆಗ ಮಾತ್ರ ಮುಂಬೈ ತಂಡದ 42ನೇ ರಣಜಿ ಟ್ರೋಫಿ ಗೆಲ್ಲುವ ಕನಸು ನನಸಾಗಲು ಸಾಧ್ಯ.
Published On - 7:42 pm, Thu, 23 June 22