AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏನಿಲ್ಲ.. ಏನಿಲ್ಲ..; ವಿಚ್ಛೇದನ ವದಂತಿಗೆ ಬ್ರೇಕ್ ಹಾಕಿದ ಹಾರ್ದಿಕ್ ಮಡದಿ ನತಾಶಾ ಸ್ಟಾಂಕೋವಿಕ್

Hardik Pandya- Natasa Stankovic: ಕೆಲವು ದಿನಗಳ ಹಿಂದೆ ನತಾಶಾ ಅವರ ಇನ್‌ಸ್ಟಾಗ್ರಾಮ್ ಪ್ರೊಫೈಲ್ ಅನ್ನು ನೋಡಿದಾಗ, ಮದುವೆ ಸೇರಿದಂತೆ ಹಾರ್ದಿಕ್ ಅವರೊಂದಿಗಿನ ಎಲ್ಲಾ ಫೋಟೋಗಳು ಮಾಯವಾಗಿದ್ದವು. ಆದೆರ ಈಗ ಅವರ ಫೀಡ್‌ನಲ್ಲಿ ಅವೆಲ್ಲವೂ ಮತ್ತೆ ಗೋಚರಿಸುತ್ತವೆ.

ಏನಿಲ್ಲ.. ಏನಿಲ್ಲ..; ವಿಚ್ಛೇದನ ವದಂತಿಗೆ ಬ್ರೇಕ್ ಹಾಕಿದ ಹಾರ್ದಿಕ್ ಮಡದಿ ನತಾಶಾ ಸ್ಟಾಂಕೋವಿಕ್
ಹಾರ್ದಿಕ್ ಪಾಂಡ್ಯ, ನತಾಶಾ ಸ್ಟಾಂಕೋವಿಕ್
ಪೃಥ್ವಿಶಂಕರ
|

Updated on:Jun 03, 2024 | 2:51 PM

Share

ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿದ್ದ ವಿಚ್ಛೇದನ ಊಹಾಪೋಹಗಳಿಗೆ ಇದೀಗ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ (Hardik Pandya) ಅವರ ಪತ್ನಿ ನತಾಶಾ ಸ್ಟಾಂಕೋವಿಕ್ (Natasa Stankovic) ಅಂತ್ಯಹಾಡುವ ಕೆಲಸ ಮಾಡಿದ್ದಾರೆ. ವಾಸ್ತವವಾಗಿ ನತಾಶಾ, ಹಾರ್ದಿಕ್ ಅವರೊಂದಿಗಿನ ಫೋಟೋಗಳನ್ನು (Wedding Pictures) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆರ್ಕೈವ್ ಮಾಡಿದ್ದರು. ಇದನ್ನು ಗಮನಿಸಿದ ನೆಟ್ಟಿಗರು ದಂಪತಿಗಳ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದೆ ಎಂದು ಸುದ್ದಿ ಹಬ್ಬಿಸಿದ್ದರು. ಆದರೀಗ ನತಾಶಾ ಅವರು ಹಾರ್ದಿಕ್ ಜೊತೆಗಿರುವ ಎಲ್ಲಾ ಫೋಟೋಗಳನ್ನು ಅನ್ ಆರ್ಕೈವ್ ಮಾಡುವ ಮುಖಾಂತರ ನಮ್ಮಿಬ್ಬರ ಸಂಬಂಧ ಇನ್ನು ಗಟ್ಟಿಯಾಗಿದೆ ಎಂದು ಹೇಳುವ ಕೆಲಸ ಮಾಡಿದ್ದಾರೆ.

ಕೆಲವು ದಿನಗಳ ಹಿಂದೆ ನತಾಶಾ ಅವರ ಇನ್‌ಸ್ಟಾಗ್ರಾಮ್ ಪ್ರೊಫೈಲ್ ಅನ್ನು ನೋಡಿದಾಗ, ಮದುವೆ ಸೇರಿದಂತೆ ಹಾರ್ದಿಕ್ ಅವರೊಂದಿಗಿನ ಎಲ್ಲಾ ಫೋಟೋಗಳು ಮಾಯವಾಗಿದ್ದವು. ಆದೆರ ಈಗ ಅವರ ಫೀಡ್‌ನಲ್ಲಿ ಅವೆಲ್ಲವೂ ಮತ್ತೆ ಗೋಚರಿಸುತ್ತವೆ. ಆ ಫೋಟೋಗಳನ್ನು ಡಿಲೀಟ್ ಮಾಡುವ ಬದಲು, ನತಾಶಾ ಅವುಗಳನ್ನು ಆರ್ಕೈವ್ ಮಾಡಿದ್ದರು. ಇದೀಗ ಆ ಫೋಟೋಗಳನ್ನು ರಿಸ್ಟೋರ್ ಮಾಡಿರುವಂತೆ ತೊರುತ್ತಿದೆ.

ಉದ್ದೇಶಪೂರ್ವಕವಾಗಿ ವದಂತಿ ಹರಡಲಾಗಿದೆಯೇ?

ನತಾಶಾ ಅವರ ನಡೆಯಿಂದ ಇದೀಗ ನೆಟ್ಟಿಗರಲ್ಲಿ ಗೊಂದಲ ಮೂಡಿದೆ. ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ನಡುವಿನ ಸಂಬಂಧ ಸುಧಾರಿಸಿದೆಯೇ? ಅಥವಾ ಇವರಿಬ್ಬರ ನಡುವಿನ ಸಂಬಂಧದಲ್ಲಿ ಬಿರಕು ಮೂಡಿರಲಿಲ್ಲವೇ? ಎಲ್ಲವೂ ಕೇವಲ ಪ್ರಚಾರದ ಸ್ಟಂಟ್ ಆಗಿತ್ತೇ? ಐಪಿಎಲ್‌ನಲ್ಲಿ ಹಾರ್ದಿಕ್ ಪಾಂಡ್ಯ ಅವರ ಕಳಪೆ ಫಾರ್ಮ್ ಮತ್ತು ಅದಕ್ಕೂ ಮೊದಲು ಕ್ರೀಡಾಂಗಣದಲ್ಲಿ ಅವರ ವಿರುದ್ಧ ಕೇಳಿಬರುತ್ತಿದ್ದ ಟೀಕೆಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಇದೆಲ್ಲವನ್ನೂ ಯೋಜಿಸಲಾಗಿದೆಯೇ? ಎಂಬ ಪ್ರಶ್ನೆ ಮೂಡುತ್ತಿದೆ.

T20 World Cup 2024: ಟ್ರೋಲ್, ಟೀಕೆಗಳ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ಹಾರ್ದಿಕ್ ಪಾಂಡ್ಯ

ವಿಚ್ಛೇದನ ವದಂತಿ ಹುಟ್ಟಿಕೊಳ್ಳಲು ಕಾರಣವೇನು?

ಮೇಲೆ ಹೇಳಿದಂತೆ ನತಾಶಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಿಂದ ಹಾರ್ದಿಕ್ ಜೊತೆಗಿದ್ದ ಫೋಟೋಗಳನ್ನು ಅನ್​ಸೀನ್ ಮಾಡಿದ್ದರು. ಇಷ್ಟೇ ಅಲ್ಲದೆ, ಸೋಶಿಯಲ್ ಮೀಡಿಯಾದಲ್ಲಿ ಸಕ್ರೀಯರಾಗಿರುವ ಇಬ್ಬರೂ ಪರಸ್ಪರ ಫೋಟೋಗಳನ್ನು ಪೋಸ್ಟ್ ಮಾಡುತ್ತಿರಲಿಲ್ಲ. ಹಾಗೆಯೇ ಇಡೀ ಐಪಿಎಲ್​ಲ್ಲಿ ನತಾಶಾ ಒಮ್ಮೆಯೂ ಕಾಣಿಸಿಕೊಂಡಿರಲಿಲ್ಲ. ಬಹುಮುಖ್ಯವಾಗಿ ಮಾರ್ಚ್ 4 ರಂದು ನತಾಶಾ ಅವರ ಹುಟ್ಟುಹಬ್ಬವಿತ್ತು. ಅಂದು ಹಾರ್ದಿಕ್ ಅವರಿಂದ ಯಾವುದೇ ಪೋಸ್ಟ್ ಕಂಡುಬರಲಿಲ್ಲ. ನತಾಶಾ ಅಗಸ್ತ್ಯ ಅವರೊಂದಿಗೆ ಇದ್ದ ಪೋಸ್ಟ್ ಅನ್ನು ಹೊರತುಪಡಿಸಿ, ತಮ್ಮ ಮತ್ತು ಹಾರ್ದಿಕ್ ಅವರ ಇತ್ತೀಚಿನ ಎಲ್ಲಾ ಪೋಸ್ಟ್‌ಗಳನ್ನು ತೆಗೆದುಹಾಕಿದ್ದರು. ಹೀಗಾಗಿ ಇವೆಲ್ಲ ಚಟುವಟಿಕೆಗಳು ಇವರಿಬ್ಬರ ನಡುವೆ ಏನೂ ಸರಿಯಿಲ್ಲ ಎಂಬ ಅನುಮಾನವನ್ನು ಹುಟ್ಟಿಹಾಕಿದ್ದವು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:49 pm, Mon, 3 June 24