Sandeep Lamichhane: ಅತ್ಯಾಚಾರದ ಆರೋಪ: ಸ್ಟಾರ್ ಕ್ರಿಕೆಟಿಗ ಬಂಧನ..!

| Updated By: ಝಾಹಿರ್ ಯೂಸುಫ್

Updated on: Oct 06, 2022 | 1:55 PM

Sandeep Lamichhane: ನೇಪಾಳ ಪರ 30 ಏಕದಿನ ಮತ್ತು 44 ಟಿ20 ಪಂದ್ಯಗಳನ್ನು ಆಡಿರುವ 22 ರ ಹರೆಯದ ಸಂದೀಪ್ ಲಾಮಿಚಾನೆ ಕ್ರಮವಾಗಿ 69 ಮತ್ತು 85 ವಿಕೆಟ್​ಗಳನ್ನು ಪಡೆದಿದ್ದಾರೆ.

Sandeep Lamichhane: ಅತ್ಯಾಚಾರದ ಆರೋಪ: ಸ್ಟಾರ್ ಕ್ರಿಕೆಟಿಗ ಬಂಧನ..!
Sandeep Lamichhane
Follow us on

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಆರೋಪದಡಿ ನೇಪಾಳ ಕ್ರಿಕೆಟ್ ತಂಡದ ಮಾಜಿ ನಾಯಕ ಸಂದೀಪ್ ಲಮಿಚಾನೆ (Sandeep Lamichhane) ಅವರನ್ನು ಬಂಧಿಸಲಾಗಿದೆ. ಒಂದು ತಿಂಗಳಿಂದ ವಿದೇಶದಲ್ಲಿ ಲಮಿಚಾನೆ ಕಠ್ಮಂಡುವಿನ ತ್ರಿಭುವನ್​ ಅಂತಾರಾಷ್ಟ್ರೀಯ ಏರ್​ಪೋರ್ಟ್​​ನಲ್ಲಿ ಬಂದಿಳಿಯುತ್ತಿದ್ದಂತೆ ನೇಪಾಳ ಪೊಲೀಸರು ವಶಕ್ಕೆ ಪಡೆದರು. ಸೆಪ್ಟೆಂಬರ್ 7 ರಂದು ನೇಪಾಳದ ಸ್ಟಾರ್ ಕ್ರಿಕೆಟಿಗನ ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿತ್ತು. ಈ ವೇಳೆ ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ಆಡುತ್ತಿದ್ದ ಲಮಿಚಾನೆ ಸ್ವದೇಶಕ್ಕೆ ಹಿಂತಿರುಗಿರಲಿಲ್ಲ. ಇದೀಗ ತವರಿಗೆ ಬರುತ್ತಿದ್ದಂತೆ ನೇಪಾಳ ತಂಡದ ಮಾಜಿ ನಾಯಕನನ್ನು ವಶಕ್ಕೆ ಪಡೆಯಲಾಗಿದೆ.

ಕಳೆದ ತಿಂಗಳು 17 ವರ್ಷ ವಯಸ್ಸಿನ ಸಂತ್ರಸ್ತೆ ಕ್ರಿಕೆಟಿಗನ ವಿರುದ್ಧ ಕಠ್ಮಂಡು ಪೊಲೀಸರಿಗೆ ಅತ್ಯಾಚಾರದ ದೂರು ನೀಡಿದ್ದರು. ಅಲ್ಲದೆ ಅಪ್ರಾಪ್ತೆಯನ್ನು ಆರೋಗ್ಯ ತಪಾಸಣೆ ನಡೆಸಿ ತನಿಖೆಯನ್ನು ನಡೆಸುವುದಾಗಿ ಕಠ್ಮಂಡು ವ್ಯಾಲಿ ಪೊಲೀಸ್ ಕಚೇರಿ ಮುಖ್ಯಸ್ಥ ರವೀಂದ್ರ ಪ್ರಸಾದ್ ಧನುಕ್ ತಿಳಿಸಿದ್ದರು.

ಅದರಂತೆ ವಿಚಾರಣೆಗೆ ಆಗಮಿಸುವಂತೆ ಸಂದೀಪ್ ಲಮಿಚಾನೆಗೆ ತಿಳಿಸಲಾಗಿತ್ತು. ಆದರೆ ಸಿಪಿಎಲ್​ ಮುಗಿದರೂ ಯುವ ಕ್ರಿಕೆಟಿಗ ಸ್ವದೇಶಕ್ಕೆ ಮರಳಿರಲಿಲ್ಲ. ಹೀಗಾಗಿ ಸಂದೀಪ್ ಲಮಿಚಾನೆ ವಿರುದ್ಧ ವಾರಂಟ್ ಜಾರಿಗೊಳಿಸಲಾಗಿತ್ತು. ಅದರಂತೆ ಇದೀಗ ಕಠ್ಮಂಡುವಿಗೆ ಆಗಮಿಸಿದ ಕ್ರಿಕೆಟಿಗನನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ
David Miller: ಕಿಲ್ಲರ್ ಮಿಲ್ಲರ್ ಆರ್ಭಟಕ್ಕೆ ಧೋನಿ ದಾಖಲೆ ಧೂಳೀಪಟ
Dinesh Karthik: ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಹೊಸ ವಿಶ್ವ ದಾಖಲೆ ಬರೆದ DK
Virat Kohli: ಸ್ಪೋಟಕ ಬ್ಯಾಟಿಂಗ್ ಮೂಲಕ ಹೊಸ ದಾಖಲೆ ಬರೆದ ಕಿಂಗ್ ಕೊಹ್ಲಿ
2007ರ ಟಿ20 ವಿಶ್ವಕಪ್ ಫೈನಲ್‌ ಪಂದ್ಯದ ಹೀರೋಗಳು ಈಗ ಏನ್ಮಾಡ್ತಿದ್ದಾರೆ ಗೊತ್ತಾ?

ಇನ್ನು ಅತ್ಯಾಚಾರದ ದೂರು ನೀಡಿದ ಹದಿಹರೆಯದ ಹುಡುಗಿ ತಾನು ಲಮಿಚಾನೆ ಅವರ ಅಭಿಮಾನಿ ಎಂದು ಹೇಳಿಕೊಂಡಿದ್ದಾಳೆ. ಅಲ್ಲದೆ ವಾಟ್ಸಾಪ್ ಮತ್ತು ಸ್ನ್ಯಾಪ್‌ಚಾಟ್ ಮೂಲಕ ಅವರೊಂದಿಗೆ ಸಂಪರ್ಕದಲ್ಲಿದ್ದೆ ಎಂದು ತಿಳಿಸಿದ್ದಾಳೆ. ನೇಪಾಳ ಕ್ರಿಕೆಟ್ ತಂಡದ ಕೀನ್ಯಾಗೆ ತೆರಳುವ ಮುನ್ನ ಸಂದೀಪ್ ಲಮಿಚಾನೆ ನನ್ನನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದರು.

ರಾತ್ರಿ 8 ಗಂಟೆಗೆ ಗೇಟ್‌ಗಳನ್ನು ಮುಚ್ಚಿದ್ದರಿಂದ ಹಾಸ್ಟೆಲ್​ಗೆ ಹಿಂತಿರುಗಲು ಸಾಧ್ಯವಾಗಿಲ್ಲ. ಹೀಗಾಗಿ ಅವರು ನನ್ನನ್ನು ಕಠ್ಮಂಡುವಿನ ಹೋಟೆಲ್​ನಲ್ಲಿ ಉಳಿಸಿಕೊಂಡಿದ್ದರು. ಅಲ್ಲದೆ ಈ ವೇಳೆ ತನ್ನ ಮೇಲೆ ಅತ್ಯಾಚಾರ ಎಸೆಗಿದ್ದಾರೆ ಎಂದು ದೂರಿನಲ್ಲಿ ಸಂತ್ರಸ್ತೆ ತಿಳಿಸಿದ್ದಾರೆ.

ನನಗೆ ನ್ಯಾಯ ಸಿಗುವುದು ಖಚಿತ. ನನ್ನ ಪ್ರೀತಿಯ ದೇಶದ ಹೆಸರು ಮತ್ತು ಖ್ಯಾತಿಗಾಗಿ ನಾನು ಶೀಘ್ರದಲ್ಲೇ ಕ್ರಿಕೆಟ್ ಕ್ಷೇತ್ರಕ್ಕೆ ಮರಳುತ್ತೇನೆ. ಹಾಗಾಗಿ ತ್ವರಿತ ವಿಚಾರಣೆಯನ್ನು ನಾನು ಬಯಸುತ್ತೇನೆ. ತನಿಖೆಯ ಎಲ್ಲಾ ಹಂತಗಳಲ್ಲಿ ನಾನು ಸಂಪೂರ್ಣವಾಗಿ ಸಹಕರಿಸುತ್ತೇನೆ ಮತ್ತು ನನ್ನ ನಿರಪರಾಧಿ ಎಂದು ಸಾಬೀತುಪಡಿಸಲು ಕಾನೂನು ಹೋರಾಟ ನಡೆಸುತ್ತೇನೆ ಎಂದು ಸಂದೀಪ್ ಲಮಿಚಾನೆ ತಿಳಿಸಿದ್ದಾರೆ.

ನೇಪಾಳ ಪರ 30 ಏಕದಿನ ಮತ್ತು 44 ಟಿ20 ಪಂದ್ಯಗಳನ್ನು ಆಡಿರುವ 22 ರ ಹರೆಯದ ಸಂದೀಪ್ ಲಾಮಿಚಾನೆ ಕ್ರಮವಾಗಿ 69 ಮತ್ತು 85 ವಿಕೆಟ್​ಗಳನ್ನು ಪಡೆದಿದ್ದಾರೆ. ಹಾಗೆಯೇ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಪರ 9 ಪಂದ್ಯಗಳಿಂದ 13 ವಿಕೆಟ್​ಗಳನ್ನು ಕಬಳಿಸಿ ಮಿಂಚಿದ್ದರು.