T20 Cricket: 22 ಸಿಕ್ಸ್, 17 ಫೋರ್: ಟಿ20 ಕ್ರಿಕೆಟ್ನಲ್ಲಿ ದ್ವಿಶತಕ ಸಿಡಿಸಿದ ವಿಂಡೀಸ್ ದಾಂಡಿಗ
Rahkeem Cornwall: ಟಿ20 ಕ್ರಿಕೆಟ್ನಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆಯುತ್ತಿರುವ ರಹಕೀಮ್ ಕಾರ್ನ್‌ವಾಲ್ ಈ ಬಾರಿಯ ಟಿ20 ವಿಶ್ವಕಪ್ಗಾಗಿ ವೆಸ್ಟ್ ಇಂಡೀಸ್ ತಂಡದಲ್ಲಿ ಸ್ಥಾನ ಪಡೆದಿಲ್ಲ.

ಟಿ20 ಕ್ರಿಕೆಟ್ನಲ್ಲಿ ದ್ವಿಶತಕ ಸಿಡಿಸುವ ಮೂಲಕ ವೆಸ್ಟ್ ಇಂಡೀಸ್ನ ದೈತ್ಯ ಬ್ಯಾಟ್ಸ್ಮನ್ ರಹಕೀಮ್ ಕಾರ್ನ್‌ವಾಲ್ (Rahkeem Cornwall) ಇಡೀ ವಿಶ್ವದ ಗಮನ ಸೆಳೆದಿದ್ದಾರೆ. ಅಮೆರಿಕದಲ್ಲಿ ನಡೆಯುತ್ತಿರುವ ಅಟ್ಲಾಂಟಾ ಓಪನ್ ಟೂರ್ನಿಯಲ್ಲಿ ಅಟ್ಲಾಂಟಾ ಫೈರ್ ಹಾಗೂ ಸ್ಕ್ವೇರ್ ಡ್ರೈವ್ ಪ್ಯಾಂಥರ್ಸ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಟ್ಲಾಂಟಾ ಫೈರ್ ಪರ ಆರಂಭಿಕನಾಗಿ ಕಣಕ್ಕಿಳಿದ ರಹಕೀಮ್ ಕಾರ್ನ್‌ವಾಲ್ ಸ್ಪೋಟಕ ಇನಿಂಗ್ಸ್ ಆಡಿದರು.
ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಕಾರ್ನ್‌ವಾಲ್ ಪ್ಯಾಂಥರ್ಸ್ ಬೌಲರ್ಗಳ ಬೆಂಡೆತ್ತಿದರು. ಪರಿಣಾಮ ವಿಂಡೀಸ್ ದಾಂಡಿಗನ ಬ್ಯಾಟ್ನಿಂದ ಬರೋಬ್ಬರಿ 22 ಸಿಕ್ಸ್ ಹಾಗೂ 17 ಫೋರ್ಗಳು ಮೂಡಿಬಂತು. ಈ ಮೂಲಕ ಕೇವಲ 77 ಎಸೆತಗಳಲ್ಲಿ ಅಜೇಯ 205 ರನ್ ಚಚ್ಚಿದ್ದರು. ರಹಕೀಮ್ ಕಾರ್ನ್‌ವಾಲ್ ಅವರ ಈ ದ್ವಿಶತಕದ ನೆರವಿನಿಂದ ಅಟ್ಲಾಂಟಾ ಫೈರ್ ತಂಡವು ನಿಗದಿತ 20 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 326 ರನ್ ಕಲೆಹಾಕಿತು.
327 ರನ್ಗಳ ಗುರಿಯನ್ನು ಬೆನ್ನತ್ತಿದ ಸ್ಕ್ವೇರ್ ಡ್ರೈವ್ ಪ್ಯಾಂಥರ್ಸ್ ತಂಡವು 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 154 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಅಟ್ಲಾಂಟಾ ಫೈರ್ ತಂಡವು 172 ರನ್ಗಳ ಬೃಹತ್ ಅಂತರದಿಂದ ಜಯ ಸಾಧಿಸಿತು.
View this post on Instagram
ಟಿ20 ಕ್ರಿಕೆಟ್ನಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆಯುತ್ತಿರುವ ರಹಕೀಮ್ ಕಾರ್ನ್‌ವಾಲ್ ಈ ಬಾರಿಯ ಟಿ20 ವಿಶ್ವಕಪ್ಗಾಗಿ ವೆಸ್ಟ್ ಇಂಡೀಸ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ದೈತ್ಯ ದೇಹವನ್ನು ಹೊಂದಿರುವ ರಹಕೀಮ್ ಫೀಲ್ಡಿಂಗ್ನಲ್ಲಿ ಹಿಂದೆ ಉಳಿದಿದ್ದಾರೆ. ಇದಾಗ್ಯೂ ಕೆರಿಬಿಯನ್ ಪ್ರೀಮಿಯರ್ ಲೀಗ್ ಮೂಲಕ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಕಾರ್ನ್‌ವಾಲ್ ಇಡೀ ವಿಶ್ವದ ಗಮನ ಸೆಳೆಯುತ್ತಿದ್ದಾರೆ.
Published On - 12:32 pm, Thu, 6 October 22