ಎಂಎಸ್ ಧೋನಿ (MS Dhoni).. ಭಾರತದ ಲೆಜೆಂಡರಿ ನಾಯಕ ಮತ್ತು ವಿಕೆಟ್‌ಕೀಪರ್ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಟೀಂ ಇಂಡಿಯಾವನ್ನು (Team India) ವಿಶ್ವ ಕ್ರಿಕೆಟ್‌ನಲ್ಲಿ ಸಾಮ್ರಾಟನಂತೆ ಮೆರೆಸಿದ ಶ್ರೇಯಾ ಧೋನಿಗೆ ಸಲಬೇಕು. ತನ್ನ ನಾಯಕತ್ವದಲ್ಲಿ ಟೀಂ ಇಂಡಿಯಾಕ್ಕೆ ಎಲ್ಲಾ ಐಸಿಸಿ ಪ್ರಶಸ್ತಿಗಳನ್ನು ಗೆದ್ದುಕೊಟ್ಟ ಸಾಧನೆ ಮಾಡಿದ್ದ ಧೋನಿ ಅನೇಕ ಯುವ ಪೀಳಿಗೆಗೆ ಸ್ಫೂರ್ತಿ ಸೆಲೆಯಾಗಿದ್ದಾರೆ. ರಾಂಚಿಯ ಯಾವುದೋ ಮೂಲೆಯಿಂದ ಬಂದು, ತನ್ನ ಅದ್ಭುತ ತಂತ್ರಗಾರಿಕೆ ಮತ್ತು ಬ್ಯಾಟಿಂಗ್ ಮೂಲಕ ಕ್ರಿಕೆಟ್ ಜಗತ್ತನ್ನು ಆಳಿದ ಧೋನಿಗೆ ಸರಿಸಾಟಿ ಯಾರಿಲ್ಲ ಎಂಬುದು ಕ್ರಿಕೆಟ್ ಪಂಡಿತರ ಅಭಿಪ್ರಾಯ. ಅದರಲ್ಲೂ ವಿಕೆಟ್ ಕೀಪಿಂಗ್ನಲ್ಲಿ ಧೋನಿ ಚಾಣಾಕ್ಷತನಕ್ಕೆ ಇಡೀ ಕ್ರಿಕೆಟ್ ಲೋಕವೇ ತಲೆಬಾಗಿರುವುದು ಹಳೆಯ ವಿಚಾರ. ಚಿತ್ರ ವಿಚಿತ್ರ ಶೈಲಿಯಲ್ಲಿ ರನೌಟ್ಗಳನ್ನು ಮಾಡುತ್ತಾ, ಮೈಕ್ರೋ ಸೆಕೆಂಡ್ನಲ್ಲಿ ಸ್ಟಂಪಿಂಗ್ ಮಾಡಿ ಬ್ಯಾಟ್ಸ್ಮನ್ಗಳನ್ನು ಕೆಡ್ಡಾಕ್ಕೆ ಬೀಳಿಸುತ್ತಿದ್ದ ಧೋನಿ ಕೈಚೆಳಕಕ್ಕೆ ಮನಸೋಲದವರು ಯಾರಿದ್ದಾರೆ ಹೇಳಿ. ಇದೀಗ ಧೋನಿಯನ್ನು ಮಾದರಿಯಾಗಿ ತೆಗೆದುಕೊಂಡಿರುವ ನೇಪಾಳದ ವಿಕೆಟ್ ಕೀಪರ್, ಧೋನಿ ಶೈಲಿಯಲ್ಲಿಯೇ ರನೌಟ್ ಮಾಡಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.
ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ನೇಪಾಳದ ವಿಕೆಟ್ ಕೀಪರ್ ಅರ್ಜುನ್ ಸೌದ್, ಪಂದ್ಯವೊಂದರಲ್ಲಿ ಎಂಎಸ್ ಧೋನಿ ಮಾದರಿಯ ರನೌಟ್ ಮಾಡಿ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಬಿರಾಟ್‌ನಗರ ಮತ್ತು ಜನಕ್‌ಪುರ ರಾಯಲ್ಸ್ ನಡುವಿನ ಪಂದ್ಯದ ವೇಳೆ ಈ ಘಟನೆ ನಡೆದಿದೆ. ವಾಸ್ತವವಾಗಿ ವಿಕೆಟ್ ಕಡೆ ನೋಡದೆ, ಫೀಲ್ಡರ್ ಎಸೆದ ಚೆಂಡನ್ನು ನೇರವಾಗಿ ವಿಕೆಟ್ಗೆ ಹೊಡೆಯುವಲ್ಲಿ ಧೋನಿ ನಿಸ್ಸೀಮರಾಗಿದ್ದರು. ಹಲವು ಬಾರಿ ಧೋನಿ ಇಂತಹ ತಂತ್ರಗಾರಿಕೆಯನ್ನು ಉಪಯೋಗಿಸಿ ಎದುರಾಳಿ ಬ್ಯಾಟರ್ಗಳನ್ನು ಪೆವಿಲಿಯನ್ಗಟ್ಟುತ್ತಿದ್ದರು. ಈಗ ಇಂತಹದ್ದೇ ತಂತ್ರ ಬಳಸಿಕೊಂಡಿರುವ ನೇಪಾಳದ ಕ್ರಿಕೆಟರ್ ಈ ಯತ್ನದಲ್ಲಿ ಸಫಲ ಕೂಡ ಆಗಿದ್ದಾರೆ.
Making @msdhoni proud!? Crazy run-out in Nepal T20.
Catch all the action from the Nepal T20 league LIVE, only on #FanCode ? https://t.co/Bh24dt8b0I@CricketNep#NepalT20League #NepalCricket #RunOut #MSDhoni #ArjunSaud pic.twitter.com/U7uzK6Htb1
— FanCode (@FanCode) December 27, 2022
ಆಗಸ್ಟ್ 15, 2020 ರಂದು ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ ಧೋನಿ ಐಪಿಎಲ್ನಲ್ಲಿ ಚೆನ್ನೈ ತಂಡವನ್ನು ಮುನ್ನಡೆಸುತ್ತಿದ್ದಾರೆ. ತನ್ನ ನಾಯಕತ್ವದಲ್ಲಿ ತಂಡವನ್ನು 4 ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿರುವ ಮಹಿಗೆ ಇದು ಕೊನೆಯ ಐಪಿಎಲ್ ಅಂತಲೇ ಹೇಳಲಾಗುತ್ತಿದೆ. ಹೀಗಾಗಿ ತಂಡವನ್ನು ಹಲವು ವರ್ಷಗಳಿಂದ ಯಶಸ್ಸಿನ ಹಾದಿಯಲ್ಲಿ ನಡೆಸಿದ ಧೋನಿಗೆ ಫೈನಲ್ ಗೆಲುವಿನೊಂದಿಗೆ ವಿದಾಯ ಹೇಳಲು ಫ್ರಾಂಚೈಸಿ ಪ್ರಯತ್ನಿಸುತ್ತಿದೆ.
IPL Auction 2023: ಸ್ಟೋಕ್ಸ್ಗೆ ಚೆನ್ನೈ ನಾಯಕತ್ವ..! ಸಿಎಸ್ಕೆ ಸಿಇಓ ಹೇಳಿದ್ದೇನು? ಧೋನಿ ಫುಲ್ ಖುಷ್
ಧೋನಿ ಭಾರತ ಪರ 90 ಟೆಸ್ಟ್, 350 ODI ಮತ್ತು 98 T20 ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ ಅವರು 6 ಶತಕ ಮತ್ತು 33 ಅರ್ಧ ಶತಕಗಳ ಸಹಾಯದಿಂದ 4876 ರನ್ ಗಳಿಸಿದ್ದಾರೆ. 10 ಶತಕ ಮತ್ತು 73 ಅರ್ಧ ಶತಕಗಳ ನೆರವಿನೊಂದಿಗೆ ಏಕದಿನದಲ್ಲಿ ಒಟ್ಟು 10773 ರನ್ ಗಳಿಸಿದ್ದಾರೆ. ಆದರೆ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರು 2 ಅರ್ಧಶತಕಗಳ ಸಹಾಯದಿಂದ 1617 ರನ್ ಗಳಿಸಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:17 pm, Thu, 29 December 22