ಫಾರ್ಮ್​ ಜೊತೆಗೆ ಫಿಟ್ನೆಸ್ ಕಾಪಾಡಿಕೊಂಡ್ರೆ ಮಾತ್ರ ತಂಡಕ್ಕೆ ಎಂಟ್ರಿ; ಪಂತ್​ಗೆ ಬಿಸಿಸಿಐ ಖಡಕ್ ವಾರ್ನಿಂಗ್

Rishabh Pant: ಪಂತ್​ಗೆ ಇಂಜುರಿಯಾಗಿರುವುದರಿಂದ ಅವರನ್ನು ತಂಡದಿಂದ ಹೊರಗಿಡಲಾಗಿದೆ ಎಂದು ಬಿಸಿಸಿಐ ಕಾರಣ ನೀಡುತ್ತಿದೆಯಾದರೂ, ಈ ಕ್ರಮದ ಹಿಂದೆ ಬೇರೆ ಕಥೆಯೇ ಇದೆ ಎಂಬುದು ಕ್ರಿಕೆಟರ್​ ಪಂಡಿತರ ಅಭಿಪ್ರಾಯವಾಗಿದೆ.

ಫಾರ್ಮ್​ ಜೊತೆಗೆ ಫಿಟ್ನೆಸ್ ಕಾಪಾಡಿಕೊಂಡ್ರೆ ಮಾತ್ರ ತಂಡಕ್ಕೆ ಎಂಟ್ರಿ; ಪಂತ್​ಗೆ ಬಿಸಿಸಿಐ ಖಡಕ್ ವಾರ್ನಿಂಗ್
ರಿಷಬ್ ಪಂತ್
Follow us
TV9 Web
| Updated By: ಪೃಥ್ವಿಶಂಕರ

Updated on:Dec 29, 2022 | 1:52 PM

ವೈಟ್ ಬಾಲ್ ಕ್ರಿಕೆಟ್​ನಲ್ಲಿ ಸತತ ವೈಫಲ್ಯಗಳಿಂದ ಬಳಲುತ್ತಿರುವ ರಿಷಬ್ ಪಂತ್​ಗೆ (Rishabh Pant) ಟೀಂ ಇಂಡಿಯಾದಿಂದ ತಾತ್ಕಾಲಿಕವಾಗಿ ಗೇಟ್​ಪಾಸ್​ ಸಿಕ್ಕಿರುವುದು ಈಗ ಹಳೆಯ ವಿಚಾರ. ಪಂತ್​ಗೆ ಇಂಜುರಿಯಾಗಿರುವುದರಿಂದ ಅವರನ್ನು ತಂಡದಿಂದ ಹೊರಗಿಡಲಾಗಿದೆ ಎಂದು ಬಿಸಿಸಿಐ (BCCI) ಕಾರಣ ನೀಡುತ್ತಿದೆಯಾದರೂ, ಈ ಕ್ರಮದ ಹಿಂದೆ ಬೇರೆ ಕಥೆಯೇ ಇದೆ ಎಂಬುದು ಕ್ರಿಕೆಟ್​ ಪಂಡಿತರ ಅಭಿಪ್ರಾಯವಾಗಿದೆ. ಸದ್ಯ ಶ್ರೀಲಂಕಾ ವಿರುದ್ಧದ (India vs Sri Lanka) ಏಕದಿನ ಮತ್ತು ಟಿ20 ಸರಣಿಗೆ ಆಯ್ಕೆಯಾಗದ ಪಂತ್, ಇಂಜುರಿಯಿಂದ ಚೇತರಿಸಿಕೊಳ್ಳುವ ಸಲುವಾಗಿ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (NCA) ತೆರಳಿದ್ದಾರೆ ಎಂಬುದು ಸುದ್ದಿ. ಅಲ್ಲಿ ಇಂಜುರಿಯಿಂದ ಗುಣಮುಖರಾಗುವುದರೊಂದಿಗೆ ಇನ್ನೇರಡು ವಿಚಾರಗಳ ಬಗ್ಗೆ ಗಮನಹರಿಸಿದರೆ ಮಾತ್ರ ರಿಷಬ್ ಪಂತ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗುತ್ತದೆ ಎಂಬ ಖಡಕ್ ಸಂದೇಶವನ್ನು ಬಿಸಿಸಿಐ ನೀಡಿದೆ ಎಂಬುದು ಲೆಟೆಸ್ಟ್ ಅಪ್​ಡೇಟ್.

ಇನ್ಸೈಡ್ ಸ್ಪೋರ್ಟ್ ಸುದ್ದಿ ಪ್ರಕಾರ, ರಿಷಬ್ ಪಂತ್ ಕೇವಲ ಫಾರ್ಮ್‌ಗೆ ಮರಳಿದರೆ ಮಾತ್ರ ಸಾಕಾಗುವುದಿಲ್ಲ. ಬದಲಿಗೆ ಅವರು ತಮ್ಮ ಫಿಟ್‌ನೆಸ್‌ ಮೇಲೆ ಕೆಲಸ ಮಾಡಬೇಕಾಗುತ್ತದೆ. ವರದಿಯ ಪ್ರಕಾರ, ಇನ್ಸೈಡ್ ಸ್ಪೋರ್ಟ್​ಗೆ ಬಿಸಿಸಿಐ ಮೂಲಗಳು ತಿಳಿಸಿರುವಂತೆ, ‘ಪಂತ್ ಒಬ್ಬ ಶ್ರೇಷ್ಠ ಆಟಗಾರ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಈ ವರ್ಷ ಅವರ ಏಕದಿನ ಮತ್ತು ಟಿ20 ಫಾರ್ಮ್ ಕಳಪೆಯಾಗಿದೆ. ಹೀಗಾಗಿ ಅವರು ಹೆಚ್ಚು ಫಿಟ್ ಮತ್ತು ಚುರುಕುಬುದ್ಧಿಯವರಾದರೆ ಹೆಚ್ಚು ಸೂಕ್ತ ಎಂಬುದು ಕೋಚಿಂಗ್ ಸಿಬ್ಬಂದಿಯ ಅಭಿಪ್ರಾಯವಾಗಿದೆ. ಅದಕ್ಕಾಗಿಯೇ ಅವರನ್ನು ಎನ್‌ಸಿಎಯಲ್ಲಿ ತರಬೇತಿಗೆ ಕಳುಹಿಸಲಾಗಿದೆ . ವಿರಾಟ್-ರೋಹಿತ್ ಸೇರಿದಂತೆ 6 ಆಟಗಾರರ ಟಿ20 ವೃತ್ತಿಜೀವನ ಅಂತ್ಯ! ಸೂಚನೆ ನೀಡಿದ ಬಿಸಿಸಿಐ

ಪಂತ್​ಗೆ​ ಮೊಣಕಾಲು ಮತ್ತು ಬೆನ್ನು ನೋವಿನ ಸಮಸ್ಯೆ

ರಿಷಬ್ ಪಂತ್, ಮೊಣಕಾಲು ಮತ್ತು ಬೆನ್ನು ನೋವಿನಿಂದ ಬಳಲುತ್ತಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಅಲ್ಲದೆ, ಪಂತ್ ತನ್ನನ್ನು ಫಾರ್ಮ್ ಜೊತೆಗೆ ಸಂಪೂರ್ಣವಾಗಿ ಫಿಟ್ ಆಗಿರಿಸಿಕೊಳ್ಳುವಂತೆ ಕೇಳಿಕೊಂಡಿದ್ದು, ಪಂತ್ ತಮ್ಮ ಫಾರ್ಮ್ ಮತ್ತು ಫಿಟ್ನೆಸ್ ಎರಡರಲ್ಲೂ ಸರಿಯಾಗುವವರೆಗೂ ಅವರಿಗೆ ಟೀಂ ಇಂಡಿಯಾದಲ್ಲಿ ಎಂಟ್ರಿ ಸಿಗುವುದಿಲ್ಲ ಎಂದು ಸ್ಪಷ್ಟ ಸಂದೇಶವನ್ನು ನೀಡಲಾಗಿದೆ ಎಂದು ವರದಿಯಾಗಿದೆ.

ಸದ್ಯ ಟಿ20ತಂಡದಲ್ಲಿ ಪಂತ್ ತಮ್ಮ ಸ್ಥಾನ ಕಳೆದುಕೊಂಡಿರುವುದರಿಂದ ಇದೀಗ ಅವರ ಸ್ಥಾನಕ್ಕೆ ಇಶಾನ್ ಕಿಶನ್ ಹಾಗೂ ಸಂಜು ಸ್ಯಾಮ್ಸನ್ ತಂಡದ ಮೊದಲ ಆಯ್ಕೆಯಾಗಿದ್ದಾರೆ. ಇತ್ತೀಚೆಗಷ್ಟೇ ಇಶಾನ್ ಕಿಶನ್ ಏಕದಿನ ಕ್ರಿಕೆಟ್​ನಲ್ಲಿ ದ್ವಿಶತಕ ಬಾರಿಸುವ ಮೂಲಕ ರೇಸ್‌ನಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅಲ್ಲದೆ ಅವರ ಫಿಟ್ನೆಸ್ ಕೂಡ ಅತ್ಯುತ್ತಮವಾಗಿರುವುದರಿಂದ ಅವರ ಆಯ್ಕೆಗೆ ಇದು ಕೂಡ ಪ್ಲಸ್ ಪಾಯಿಂಟ್ ಆಗಿದೆ.

ಕೆಎಲ್ ರಾಹುಲ್ ಕಾರ್ಡ್ ಕ್ಲಿಯರ್!

ಪಂತ್ ಜೊತೆಗೆ ತಂಡದ ಮಾಜಿ ಉಪನಾಯಕ ಕೆಎಲ್ ರಾಹುಲ್​ ಕೂಡ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದಾರೆ. ಸದ್ಯ ಟೀಂ ಇಂಡಿಯಾ ಒಬ್ಬ ಉತ್ತಮ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಹುಡುಕಾಡದಲ್ಲಿದೆ. ಹೀಗಾಗಿ ಕಳಪೆ ಫಾರ್ಮ್​ನಲ್ಲಿರುವ ರಾಹುಲ್ ಸ್ಥಾನಕ್ಕೆ, ಇಶಾನ್ ಕಿಶನ್​ ಜೊತೆಗೆ ಸಂಜು ಸ್ಯಾಮ್ಸನ್ ಕೂಡ ರೇಸ್‌ನಲ್ಲಿದ್ದಾರೆ. ಅಲ್ಲದೆ ರಾಹುಲ್ ಟಿ20 ಮಾದರಿಗೆ ಸರಿ ಹೊಂದುವ ಆಟಗಾರನಲ್ಲ ಎಂಬ ಅಭಿಪ್ರಾಯ ಬಿಸಿಸಿಐ ಪಾಳಯದಲ್ಲಿ ಮೂಡಿದೆ. ಹೀಗಾಗಿ ಸುದ್ದಿ ಪ್ರಕಾರ ಕೆಎಲ್ ರಾಹುಲ್ ಟಿ20 ತಂಡಕ್ಕೆ ಮರಳುವುದು ಕಷ್ಟ ಎಂದೇ ಹೇಳಲಾಗುತ್ತಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:52 pm, Thu, 29 December 22

ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಬಳಿಕ ಸಖತ್​ ಸ್ಟೆಪ್​​​ ಹಾಕಿದ ಟ್ರಂಪ್
ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಬಳಿಕ ಸಖತ್​ ಸ್ಟೆಪ್​​​ ಹಾಕಿದ ಟ್ರಂಪ್
ಬೆಳಗಾವಿ ಅಧಿವೇಶನ ನಿಸ್ಸಂದೇಹವಾಗಿ ಕಾಂಗ್ರೆಸ್ ಪಕ್ಷದ ಜಾತ್ರೆ: ಶಿವಕುಮಾರ್
ಬೆಳಗಾವಿ ಅಧಿವೇಶನ ನಿಸ್ಸಂದೇಹವಾಗಿ ಕಾಂಗ್ರೆಸ್ ಪಕ್ಷದ ಜಾತ್ರೆ: ಶಿವಕುಮಾರ್
ಕರ್ತವ್ಯನಿರತ ಪೊಲೀಸರ ಮೇಲೆ ಜೋರು ಮಾಡಲು ಮುಂದಾದ ಕಾಂಗ್ರೆಸ್ಸಿಗರು
ಕರ್ತವ್ಯನಿರತ ಪೊಲೀಸರ ಮೇಲೆ ಜೋರು ಮಾಡಲು ಮುಂದಾದ ಕಾಂಗ್ರೆಸ್ಸಿಗರು
ಕಾಂಗ್ರೆಸ್ ಅಧಿವೇಶನದಲ್ಲಿ ಭಾಗಿಯಾಗಲು ಸೋಮಶೇಖರ್ ಬಂದಿರುವರೇ?
ಕಾಂಗ್ರೆಸ್ ಅಧಿವೇಶನದಲ್ಲಿ ಭಾಗಿಯಾಗಲು ಸೋಮಶೇಖರ್ ಬಂದಿರುವರೇ?
Video: ಪ್ರಬಲ ಭೂಕಂಪಕ್ಕೆ ನಲುಗಿದ ತೈವಾನ್
Video: ಪ್ರಬಲ ಭೂಕಂಪಕ್ಕೆ ನಲುಗಿದ ತೈವಾನ್
‘2 ರೆಕ್ಕೆ ಕೊಡು, ದೊಡ್ಡ ಸ್ಟಾರ್ ಆಗಬೇಕು’; ಟ್ರೋಫಿ ನೋಡಿ ತ್ರಿವಿಕ್ರಂ ಮಾತು
‘2 ರೆಕ್ಕೆ ಕೊಡು, ದೊಡ್ಡ ಸ್ಟಾರ್ ಆಗಬೇಕು’; ಟ್ರೋಫಿ ನೋಡಿ ತ್ರಿವಿಕ್ರಂ ಮಾತು
ಕೊಪ್ಪಳ: ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ‌ ಬೋರ್​ವೆಲ್ ಕೊರೆಸಿದ ರೈತ
ಕೊಪ್ಪಳ: ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ‌ ಬೋರ್​ವೆಲ್ ಕೊರೆಸಿದ ರೈತ
ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು
ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು