AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರನೌಟ್ ವೇಳೆ ಧೋನಿ ಅಸ್ತ್ರ ಬಳಸಿದ ನೇಪಾಳದ ವಿಕೆಟ್ ಕೀಪರ್; ವಿಡಿಯೋ ಸಖತ್ ವೈರಲ್

ನೇಪಾಳದ ವಿಕೆಟ್ ಕೀಪರ್ ಅರ್ಜುನ್ ಸೌದ್, ಪಂದ್ಯವೊಂದರಲ್ಲಿ ಎಂಎಸ್ ಧೋನಿ ಮಾದರಿಯ ರನೌಟ್ ಮಾಡಿ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ.

ರನೌಟ್ ವೇಳೆ ಧೋನಿ ಅಸ್ತ್ರ ಬಳಸಿದ ನೇಪಾಳದ ವಿಕೆಟ್ ಕೀಪರ್; ವಿಡಿಯೋ ಸಖತ್ ವೈರಲ್
ಧೋನಿ ಶೈಲಿಯಲ್ಲಿ ರನೌಟ್ ಮಾಡಿದ ನೇಪಾಳದ ವಿಕೆಟ್ ಕೀಪರ್
TV9 Web
| Edited By: |

Updated on:Dec 29, 2022 | 12:17 PM

Share

ಎಂಎಸ್ ಧೋನಿ (MS Dhoni).. ಭಾರತದ ಲೆಜೆಂಡರಿ ನಾಯಕ ಮತ್ತು ವಿಕೆಟ್‌ಕೀಪರ್ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಟೀಂ ಇಂಡಿಯಾವನ್ನು (Team India) ವಿಶ್ವ ಕ್ರಿಕೆಟ್​ನಲ್ಲಿ ಸಾಮ್ರಾಟನಂತೆ ಮೆರೆಸಿದ ಶ್ರೇಯಾ ಧೋನಿಗೆ ಸಲಬೇಕು. ತನ್ನ ನಾಯಕತ್ವದಲ್ಲಿ ಟೀಂ ಇಂಡಿಯಾಕ್ಕೆ ಎಲ್ಲಾ ಐಸಿಸಿ ಪ್ರಶಸ್ತಿಗಳನ್ನು ಗೆದ್ದುಕೊಟ್ಟ ಸಾಧನೆ ಮಾಡಿದ್ದ ಧೋನಿ ಅನೇಕ ಯುವ ಪೀಳಿಗೆಗೆ ಸ್ಫೂರ್ತಿ ಸೆಲೆಯಾಗಿದ್ದಾರೆ. ರಾಂಚಿಯ ಯಾವುದೋ ಮೂಲೆಯಿಂದ ಬಂದು, ತನ್ನ ಅದ್ಭುತ ತಂತ್ರಗಾರಿಕೆ ಮತ್ತು ಬ್ಯಾಟಿಂಗ್ ಮೂಲಕ ಕ್ರಿಕೆಟ್ ಜಗತ್ತನ್ನು ಆಳಿದ ಧೋನಿಗೆ ಸರಿಸಾಟಿ ಯಾರಿಲ್ಲ ಎಂಬುದು ಕ್ರಿಕೆಟ್ ಪಂಡಿತರ ಅಭಿಪ್ರಾಯ. ಅದರಲ್ಲೂ ವಿಕೆಟ್ ಕೀಪಿಂಗ್​ನಲ್ಲಿ ಧೋನಿ ಚಾಣಾಕ್ಷತನಕ್ಕೆ ಇಡೀ ಕ್ರಿಕೆಟ್ ಲೋಕವೇ ತಲೆಬಾಗಿರುವುದು ಹಳೆಯ ವಿಚಾರ. ಚಿತ್ರ ವಿಚಿತ್ರ ಶೈಲಿಯಲ್ಲಿ ರನೌಟ್​ಗಳನ್ನು ಮಾಡುತ್ತಾ, ಮೈಕ್ರೋ ಸೆಕೆಂಡ್​ನಲ್ಲಿ ಸ್ಟಂಪಿಂಗ್ ಮಾಡಿ ಬ್ಯಾಟ್ಸ್​ಮನ್​ಗಳನ್ನು ಕೆಡ್ಡಾಕ್ಕೆ ಬೀಳಿಸುತ್ತಿದ್ದ ಧೋನಿ ಕೈಚೆಳಕಕ್ಕೆ ಮನಸೋಲದವರು ಯಾರಿದ್ದಾರೆ ಹೇಳಿ. ಇದೀಗ ಧೋನಿಯನ್ನು ಮಾದರಿಯಾಗಿ ತೆಗೆದುಕೊಂಡಿರುವ ನೇಪಾಳದ ವಿಕೆಟ್ ಕೀಪರ್, ಧೋನಿ ಶೈಲಿಯಲ್ಲಿಯೇ ರನೌಟ್ ಮಾಡಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.

ಧೋನಿ ಶೈಲಿಯ ರನೌಟ್

ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ನೇಪಾಳದ ವಿಕೆಟ್ ಕೀಪರ್ ಅರ್ಜುನ್ ಸೌದ್, ಪಂದ್ಯವೊಂದರಲ್ಲಿ ಎಂಎಸ್ ಧೋನಿ ಮಾದರಿಯ ರನೌಟ್ ಮಾಡಿ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಬಿರಾಟ್‌ನಗರ ಮತ್ತು ಜನಕ್‌ಪುರ ರಾಯಲ್ಸ್ ನಡುವಿನ ಪಂದ್ಯದ ವೇಳೆ ಈ ಘಟನೆ ನಡೆದಿದೆ. ವಾಸ್ತವವಾಗಿ ವಿಕೆಟ್ ಕಡೆ ನೋಡದೆ, ಫೀಲ್ಡರ್ ಎಸೆದ ಚೆಂಡನ್ನು ನೇರವಾಗಿ ವಿಕೆಟ್​ಗೆ ಹೊಡೆಯುವಲ್ಲಿ ಧೋನಿ ನಿಸ್ಸೀಮರಾಗಿದ್ದರು. ಹಲವು ಬಾರಿ ಧೋನಿ ಇಂತಹ ತಂತ್ರಗಾರಿಕೆಯನ್ನು ಉಪಯೋಗಿಸಿ ಎದುರಾಳಿ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟುತ್ತಿದ್ದರು. ಈಗ ಇಂತಹದ್ದೇ ತಂತ್ರ ಬಳಸಿಕೊಂಡಿರುವ ನೇಪಾಳದ ಕ್ರಿಕೆಟರ್​ ಈ ಯತ್ನದಲ್ಲಿ ಸಫಲ ಕೂಡ ಆಗಿದ್ದಾರೆ.

ಧೋನಿಯ ಕೊನೆಯ ಐಪಿಎಲ್?

ಆಗಸ್ಟ್ 15, 2020 ರಂದು ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್​ ಬದುಕಿಗೆ ವಿದಾಯ ಹೇಳಿದ ಧೋನಿ ಐಪಿಎಲ್​ನಲ್ಲಿ ಚೆನ್ನೈ ತಂಡವನ್ನು ಮುನ್ನಡೆಸುತ್ತಿದ್ದಾರೆ. ತನ್ನ ನಾಯಕತ್ವದಲ್ಲಿ ತಂಡವನ್ನು 4 ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿರುವ ಮಹಿಗೆ ಇದು ಕೊನೆಯ ಐಪಿಎಲ್ ಅಂತಲೇ ಹೇಳಲಾಗುತ್ತಿದೆ. ಹೀಗಾಗಿ ತಂಡವನ್ನು ಹಲವು ವರ್ಷಗಳಿಂದ ಯಶಸ್ಸಿನ ಹಾದಿಯಲ್ಲಿ ನಡೆಸಿದ ಧೋನಿಗೆ ಫೈನಲ್​ ಗೆಲುವಿನೊಂದಿಗೆ ವಿದಾಯ ಹೇಳಲು ಫ್ರಾಂಚೈಸಿ ಪ್ರಯತ್ನಿಸುತ್ತಿದೆ.

IPL Auction 2023: ಸ್ಟೋಕ್ಸ್​ಗೆ ಚೆನ್ನೈ ನಾಯಕತ್ವ..! ಸಿಎಸ್​ಕೆ ಸಿಇಓ ಹೇಳಿದ್ದೇನು? ಧೋನಿ ಫುಲ್ ಖುಷ್

ಧೋನಿ ಕ್ರಿಕೆಟ್ ಬದುಕು

ಧೋನಿ ಭಾರತ ಪರ 90 ಟೆಸ್ಟ್, 350 ODI ಮತ್ತು 98 T20 ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ ಅವರು 6 ಶತಕ ಮತ್ತು 33 ಅರ್ಧ ಶತಕಗಳ ಸಹಾಯದಿಂದ 4876 ರನ್ ಗಳಿಸಿದ್ದಾರೆ. 10 ಶತಕ ಮತ್ತು 73 ಅರ್ಧ ಶತಕಗಳ ನೆರವಿನೊಂದಿಗೆ ಏಕದಿನದಲ್ಲಿ ಒಟ್ಟು 10773 ರನ್ ಗಳಿಸಿದ್ದಾರೆ. ಆದರೆ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರು 2 ಅರ್ಧಶತಕಗಳ ಸಹಾಯದಿಂದ 1617 ರನ್ ಗಳಿಸಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:17 pm, Thu, 29 December 22

Follow Us
TV9 Web
TV9 Web

TV9 Kannada

Read More
ನಾನಾ ಪಾಟೇಕರ್ ಜೊತೆ ಕರಿ ಸುಬ್ಬು ಒಡನಾಟ ಶುರು ಆಗಿದ್ದು ಹೇಗೆ? ವಿವರಿಸಿದ ನಟ
ನಾನಾ ಪಾಟೇಕರ್ ಜೊತೆ ಕರಿ ಸುಬ್ಬು ಒಡನಾಟ ಶುರು ಆಗಿದ್ದು ಹೇಗೆ? ವಿವರಿಸಿದ ನಟ
ಮುಂಬೈನ ಮುಲುಂಡ್ ಕಾರ್ಮಿಕರ ಕ್ಯಾಂಪ್‌ನಲ್ಲಿ ಭೀಕರ ಬೆಂಕಿ ದುರಂತ
ಮುಂಬೈನ ಮುಲುಂಡ್ ಕಾರ್ಮಿಕರ ಕ್ಯಾಂಪ್‌ನಲ್ಲಿ ಭೀಕರ ಬೆಂಕಿ ದುರಂತ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ