
ಕ್ರೈಸ್ಟ್ಚರ್ಚ್ನ ಹ್ಯಾಗ್ಲಿ ಓವಲ್ ಮೈದಾನದಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆತಿಥೇಯ ನ್ಯೂಝಿಲೆಂಡ್ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡ ನಾಯಕ ಮೈಕೆಲ್ ಬ್ರೇಸ್‌ವೆಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು ಪವರ್ಪ್ಲೇನಲ್ಲೇ ರನ್ಗಳಿಸಲು ಪರದಾಡಿದರು. ಪರಿಣಾಮ ಮೊದಲ 6 ಓವರ್ಗಳಲ್ಲಿ ಮೂಡಿಬಂದ ಸ್ಕೋರ್ ಕೇವಲ 14 ರನ್ ಮಾತ್ರ. ಇತ್ತ 4 ವಿಕೆಟ್ ಕಬಳಿಸಿ ನ್ಯೂಝಿಲೆಂಡ್ ಬೌಲರ್ಗಳು ಆರಂಭದಲ್ಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದರು.
ಈ ಹಂತದಲ್ಲಿ ಕಣಕ್ಕಿಳಿದ ನಾಯಕ ಸಲ್ಮಾನ್ ಅಲಿ ಅಘಾ 18 ರನ್ಗಳಿಸಿದರೆ. ಖುಷ್ದಿಲ್ ಶಾ 30 ಎಸೆತಗಳಲ್ಲಿ 32 ರನ್ ಬಾರಿಸಿದರು. ಇನ್ನು 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜಹಂದಾದ್ ಖಾನ್ 17 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ಪಾಕಿಸ್ತಾನ್ ತಂಡವು 18.4 ಓವರ್ಗಳಲ್ಲಿ 91 ರನ್ಗಳಿಸಿ ಆಲೌಟ್ ಆಯಿತು.
ನ್ಯೂಝಿಲೆಂಡ್ ಪರ ಜೇಕಬ್ ಡಫಿ 3.4 ಓವರ್ಗಳಲ್ಲಿ 4 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಕೈಲ್ ಜೇಮಿಸನ್ 4 ಓವರ್ಗಳಲ್ಲಿ 8 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು.
120 ಎಸೆತಗಳಲ್ಲಿ 91 ರನ್ಗಳ ಗುರಿ ಪಡೆದ ನ್ಯೂಝಿಲೆಂಡ್ ತಂಡಕ್ಕೆ ಫಿನ್ ಅಲೆನ್ ಹಾಗೂ ಟಿಮ್ ಸೀಫರ್ಟ್ ಸ್ಪೋಟಕ ಆರಂಭ ಒದಗಿಸಿದ್ದರು. ಪರಿಣಾಮ ಮೊದಲ 6 ಓವರ್ಗಳಲೇ ತಂಡದ ಮೊತ್ತ 53 ಕ್ಕೆ ಬಂದು ನಿಂತಿತು.
ಈ ಹಂತದಲ್ಲಿ 29 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 44 ರನ್ ಬಾರಿಸಿದ್ದ ಸೀಫರ್ಟ್ ಔಟಾದರು. ಆ ಬಳಿಕ ಜೊತೆಗೂಡಿದ ಫಿನ್ ಅಲೆನ್ (29) ಹಾಗೂ ಟಿಮ್ ರಾಬಿನ್ಸನ್ (18) ಅಜೇಯರಾಗುಳಿದು 10.1 ಓವರ್ಗಳಲ್ಲಿ ತಂಡವನ್ನು ಗುರಿ ಮುಟ್ಟಿಸಿದರು. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯ ಮೊದಲ ಮ್ಯಾಚ್ನಲ್ಲಿ ನ್ಯೂಝಿಲೆಂಡ್ ತಂಡ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ನ್ಯೂಝಿಲೆಂಡ್ ಪ್ಲೇಯಿಂಗ್ 11: ಟಿಮ್ ಸೀಫರ್ಟ್ , ಫಿನ್ ಅಲೆನ್ , ಟಿಮ್ ರಾಬಿನ್ಸನ್ , ಮಾರ್ಕ್ ಚಾಪ್ಮನ್ , ಡೇರಿಲ್ ಮಿಚೆಲ್ , ಮಿಚೆಲ್ ಹೇ (ವಿಕೆಟ್ ಕೀಪರ್) , ಮೈಕೆಲ್ ಬ್ರೇಸ್‌ವೆಲ್ (ನಾಯಕ) , ಝಕಾರಿ ಫೌಲ್ಕ್ಸ್ , ಕೈಲ್ ಜೇಮಿಸನ್ , ಇಶ್ ಸೋಧಿ , ಜೇಕಬ್ ಡಫಿ.
ಇದನ್ನೂ ಓದಿ: Champions Trophy 2025: ಒಂದೇ ಒಂದು ಪಂದ್ಯವಾಡದ ಮೂವರು ಆಟಗಾರರು ಇವರೇ
ಪಾಕಿಸ್ತಾನ್ ಪ್ಲೇಯಿಂಗ್ 11: ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್) , ಹಸನ್ ನವಾಜ್ , ಸಲ್ಮಾನ್ ಅಲಿ ಅಘಾ (ನಾಯಕ) , ಇರ್ಫಾನ್ ಖಾನ್ , ಶಾದಾಬ್ ಖಾನ್ , ಅಬ್ದುಲ್ ಸಮದ್ , ಖುಷ್ದಿಲ್ ಶಾ , ಜಹಂದಾದ್ ಖಾನ್ , ಶಾಹೀನ್ ಅಫ್ರಿದಿ , ಮೊಹಮ್ಮದ್ ಅಲಿ , ಅಬ್ರಾರ್ ಅಹ್ಮದ್.