ವಿಶ್ವ ಟೆಸ್ಟ್ ಚಾಂಪಿಯನ್ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ತನ್ನ ಹಿಡಿತವನ್ನು ಬಿಗಿಗೊಳಿಸಿದೆ. ಪಂದ್ಯದ ನಾಲ್ಕನೇ ದಿನದಲ್ಲಿ ಕಿವೀಸ್ ತಂಡದ ಸಂಕಷ್ಟಕ್ಕೆ ಸಿಲುಕಿತ್ತು. ಇದೇ ವೇಳೆ ಬಾಂಗ್ಲಾದೇಶವು ಅತ್ಯಂತ ಕೆಟ್ಟ DRS ಮನವಿ ಮಾಡಿ ನಗೆಪಾಟಲಿಗೀಡಾಗಿದ್ದಾರೆ. ನ್ಯೂಜಿಲೆಂಡ್ ಬ್ಯಾಟರ್ ರಾಸ್ ಟೇಲರ್ ವಿರುದ್ಧ ಬಾಂಗ್ಲಾದೇಶ ಆಟಗಾರರು ಎಲ್ಬಿಡಬ್ಲ್ಯೂಗೆ ಮನವಿ ಮಾಡಿದ್ದಾರೆ. ಈ ಅಪೀಲ್ ಅನ್ನು ಅಂಪೈರ್ ನಿರಾಕರಿಸಿದಾಗ, ಬಾಂಗ್ಲಾ ನಾಯಕ DRS ತೆಗೆದುಕೊಂಡರು. ಆದರೆ ಈ ನಿರ್ಧಾರವು ತುಂಬಾ ಕೆಟ್ಟದಾಗಿತ್ತು ಎಂಬುದಕ್ಕೆ ಬ್ಯಾಟರ್ ರಾಸ್ ಟೇಲರ್ ಅವರ ರಿಯಾಕ್ಷನೇ ಸಾಕ್ಷಿಯಾಗಿತ್ತು.
ಏಕೆಂದರೆ ತಸ್ಕಿನ್ ಅಹ್ಮದ್ ಎಸೆದ ಚೆಂಡು ನೇರವಾಗಿ ಬ್ಯಾಟ್ಗೆ ತಾಗಿತ್ತು. ಇತ್ತ ಬ್ಯಾಟ್-ಪ್ಯಾಡ್ ಹಾಗೂ ಚೆಂಡು ನಡುವೆ ಸಾಕಷ್ಟು ಅಂತರ ಕೂಡ ಇತ್ತು. ಇದಾಗ್ಯೂ ಬಾಂಗ್ಲಾದೇಶದ ನಾಯಕ ಮೊಮಿನುಲ್ ಹಕ್ DRS ಮೊರೆ ಹೋಗಿದ್ದು ಅಚ್ಚರಿಗೆ ಕಾರಣವಾಗಿತ್ತು. ಇದೀಗ ಈ ವಿಮರ್ಶೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಅಷ್ಟೇ ಅಲ್ಲದೆ ಇದು ಕ್ರಿಕೆಟ್ನ ಅತ್ಯಂತ ಕೆಟ್ಟ ಡಿಆರ್ಎಸ್ ಮನವಿ ಎಂದು ವಿಶ್ಲೇಷಿಸಲಾಗುತ್ತಿದೆ.
Surely this didn’t happen. ? pic.twitter.com/L01Rt4fr1B
— Paul Stewart (@ImStewy) January 4, 2022
ಇನ್ನು ಈ ಪಂದ್ಯದಲ್ಲಿ ಬಾಂಗ್ಲಾದೇಶ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 458 ರನ್ ಗಳಿಸಿ 130 ರನ್ ಮುನ್ನಡೆ ಸಾಧಿಸಿದೆ. ಇನ್ನು ಮೊದಲ ಇನಿಂಗ್ಸ್ನಲ್ಲಿ 328 ರನ್ಗಳಿಸಿದ್ದ ನ್ಯೂಜಿಲೆಂಡ್ ನಾಲ್ಕನೇ ದಿನದ ಅಂತ್ಯಕ್ಕೆ ಎರಡನೇ ಇನಿಂಗ್ಸ್ನಲ್ಲಿ 5 ವಿಕೆಟ್ ನಷ್ಟಕ್ಕೆ 147 ರನ್ಗಳಿಸಿದೆ. ಈ ಮೂಲಕ ಕೇವಲ 17 ರನ್ ಗಳ ಮುನ್ನಡೆ ಹೊಂದಿದೆ. ಇನ್ನೂ ಒಂದು ದಿನದಾಟ ಬಾಕಿಯಿದ್ದು, ಅದರೊಳಗೆ ನ್ಯೂಜಿಲೆಂಡ್ ತಂಡವನ್ನು ಆಲೌಟ್ ಮಾಡಿದ್ರೆ ಬಾಂಗ್ಲಾದೇಶ ತಂಡಕ್ಕೆ ಗೆಲ್ಲುವ ಅವಕಾಶ ಸಿಗಲಿದೆ.
ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿಯ ಗಾಯ, ರಾಹುಲ್ ದ್ರಾವಿಡ್ ಹೇಳಿಕೆ ಮತ್ತು 100ನೇ ಟೆಸ್ಟ್..!
ಇದನ್ನೂ ಓದಿ: Ravindra Jadeja: ಸ್ಟಾರ್ ಆಲ್ರೌಂಡರ್ ಜಡೇಜಾರನ್ನು ಆಯ್ಕೆ ಮಾಡದಿರಲು ಇದುವೇ ಕಾರಣ..!
ಇದನ್ನೂ ಓದಿ: Rohit Sharma: ಫಿಟ್ನೆಸ್ ಅಥವಾ ಇನ್ನೇನಾದರೂ? ರೋಹಿತ್ ಶರ್ಮಾ ಕೈ ಬಿಡಲು ಕಾರಣವೇನು?
ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!
(NZ vs BAN 1st test Bangladesh unusual DRS against Ross Taylor video viral)