‘ತಪ್ಪು ನಮ್ಮದೆ ಭಾರತವನ್ನು ದೂರಬೇಡಿ’; ವೀಸಾ ವಿಳಂಬ ವಿವಾದಕ್ಕೆ ಸ್ಪಷ್ಟನೆ ನೀಡಿದ ಪಾಕ್ ಮಂಡಳಿ

ODI World Cup 2023: ವೀಸಾ ವಿವಾದದ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಪಿಸಿಬಿ, ಮಂಡಳಿಯು ಸೆಪ್ಟೆಂಬರ್ 19 ರಂದು ಭಾರತದ ವೀಸಾಕ್ಕಾಗಿ ಅರ್ಜಿ ಸಲ್ಲಿಸಿದೆ. ವೀಸಾಗೆ ಅರ್ಜಿ ಸಲ್ಲಿಸಿದ ಕೊನೆಯ ತಂಡ ನಾವು, ಇದರ ಹೊರತಾಗಿಯೂ ಬಿಸಿಸಿಐ ನಮಗೆ ಬೆಂಬಲ ನೀಡಿ, ಸೆಪ್ಟೆಂಬರ್ 25 ರೊಳಗೆ ವೀಸಾ ಸಿಗುವ ಭರವಸೆ ನೀಡಿತ್ತು. ಬಿಸಿಸಿಐ ಹೇಳಿಕೆಯಂತೆಯೇ ನಮಗೆ ಈಗ ವೀಸಾ ಸಿಕ್ಕಿದೆ.

‘ತಪ್ಪು ನಮ್ಮದೆ ಭಾರತವನ್ನು ದೂರಬೇಡಿ’; ವೀಸಾ ವಿಳಂಬ ವಿವಾದಕ್ಕೆ ಸ್ಪಷ್ಟನೆ ನೀಡಿದ ಪಾಕ್ ಮಂಡಳಿ
ಪಾಕಿಸ್ತಾನ ತಂಡ
Follow us
ಪೃಥ್ವಿಶಂಕರ
|

Updated on: Sep 27, 2023 | 8:59 AM

ಅಂತಿಮವಾಗಿ ಪಾಕಿಸ್ತಾನ ಕ್ರಿಕೆಟ್ ತಂಡದ (Pakistan Cricket Team) ವೀಸಾ ಸಮಸ್ಯೆ ಕೊನೆಗೂ ಬಗೆಹರಿದಿದೆ. ಅಕ್ಟೋಬರ್ 5 ರಿಂದ ಭಾರತದಲ್ಲಿ ಪ್ರಾರಂಭವಾಗಲಿರುವ ಏಕದಿನ ವಿಶ್ವಕಪ್​ಗಾಗಿ (ODI World Cup 2023) ಪಾಕಿಸ್ತಾನ ಕ್ರಿಕೆಟ್ ತಂಡ ಇನ್ನೇನು ಭಾರತಕ್ಕೆ ಬರಲಿದೆ. ನಿರ್ಗಮನಕ್ಕೂ ಮುನ್ನ ಪತ್ರಿಕಾಗೋಷ್ಠಿ ನಡೆಸಿದ ತಂಡದ ನಾಯಕ ಬಾಬರ್ ಆಝಂ (Babar Azam) ತಂಡದ ಸಿದ್ಧತೆಗಳ ಬಗ್ಗೆ ಮಾತನಾಡಿದರು. ಅಲ್ಲದೆ ವಿಶ್ವಕಪ್ ಗೆಲ್ಲುವ ಬಗ್ಗೆ ವಿಶ್ವಾಸ ಕೂಡ ವ್ಯಕ್ತಪಡಿಸಿದರು. ಆದರೆ ಈ ಮೊದಲು ಪಾಕಿಸ್ತಾನ ತಂಡದ ವೀಸಾ ಕುರಿತು ಹಲವು ವದಂತಿಗಳು ಕೇಳಿಬಂದಿದ್ದವು. ಭಾರತ ಸರ್ಕಾರ ಬೇಕಂತಲೇ ಪಾಕ್ ತಂಡಕ್ಕೆ ವೀಸಾ ನೀಡಲು ವಿಳಂಬ ಮಾಡುತ್ತಿದೆ ಎಂದು ಪಾಕ್ ಮಾಧ್ಯಮಗಳು ಆರೋಪ ಮಾಡಿದ್ದವು. ಆದರೆ ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಈ ವದಂತಿ ಬಗ್ಗೆ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಭಾರತ ಸರ್ಕಾರ ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ (Jay Shah and Indian Government) ಅವರಿಗೆ ಧನ್ಯವಾದಗಳನ್ನು ಅರ್ಪಿಸಿದೆ.

ವೀಸಾಗೆ ಅರ್ಜಿ ಸಲ್ಲಿಸಿದ ಕೊನೆಯ ತಂಡ ನಾವು

ವೀಸಾ ವಿವಾದದ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಪಿಸಿಬಿ, ಮಂಡಳಿಯು ಸೆಪ್ಟೆಂಬರ್ 19 ರಂದು ಭಾರತದ ವೀಸಾಕ್ಕಾಗಿ ಅರ್ಜಿ ಸಲ್ಲಿಸಿದೆ. ವೀಸಾಗೆ ಅರ್ಜಿ ಸಲ್ಲಿಸಿದ ಕೊನೆಯ ತಂಡ ನಾವು, ಇದರ ಹೊರತಾಗಿಯೂ ಬಿಸಿಸಿಐ ನಮಗೆ ಬೆಂಬಲ ನೀಡಿ, ಸೆಪ್ಟೆಂಬರ್ 25 ರೊಳಗೆ ವೀಸಾ ಸಿಗುವ ಭರವಸೆ ನೀಡಿತ್ತು. ಬಿಸಿಸಿಐ ಹೇಳಿಕೆಯಂತೆಯೇ ನಮಗೆ ಈಗ ವೀಸಾ ಸಿಕ್ಕಿದೆ.

World Cup 2023: ಪಾಕ್ ಮಂಡಳಿಯಿಂದಾಗಿ ವಿಶ್ವಕಪ್ ವೇಳಾಪಟ್ಟಿ ವಿಳಂಬ; ಗರಂ ಆದ ಬಿಸಿಸಿಐ

ಭಾರತ ಸರ್ಕಾರಕ್ಕೆ ಧನ್ಯವಾದ

ಭಾರತ ಸರ್ಕಾರ ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಗೆ ನಾವು ಧನ್ಯವಾದ ಹೇಳುತ್ತೇವೆ. ವೀಸಾ ವಿವಾದಕ್ಕೆ ಸಂಬಂಧಿಸಿದಂತೆ ಏನನ್ನೂ ಹೇಳಬೇಡಿ/ಬರೆಯಬೇಡಿ ಎಂದು ನಾವು ಎಲ್ಲರಿಗೂ ಮನವಿ ಮಾಡುತ್ತೇವೆ ಎಂದು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

Whatsapp Image 2023 09 26 At 3.12.41 Pm

ಬೇಕಂತಲೇ ವೀಸಾ ನೀಡಲು ವಿಳಂಬ

ವಾಸ್ತವವಾಗಿ ಪಾಕ್ ಮಾಧ್ಯಮಗಳು ವರದಿ ಭಿತ್ತರಿಸಿದ ಪ್ರಕಾರ, ಪಾಕಿಸ್ತಾನ ತಂಡ ಮತ್ತು ಸಹಾಯಕ ಸಿಬ್ಬಂದಿಗೆ ವೀಸಾ ಪಡೆಯಲು ಸಾಧ್ಯವಾಗುತ್ತಿಲ್ಲ. ಭಾರತ ಬೇಕಂತಲೇ ವೀಸಾ ನೀಡಲು ವಿಳಂಬ ಮಾಡುತ್ತಿದೆ ಎಂದು ತಮ್ಮ ವರದಿಯಲ್ಲಿ ಹೇಳಿದ್ದವು. ಇದೀಗ ಪಿಸಿಬಿಯೇ ತಡವಾಗಿ ಅರ್ಜಿ ಸಲ್ಲಿಸಿದ್ದು, ಯಾವುದೇ ರೀತಿಯ ವಿಳಂಬವಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಪಾಕಿಸ್ತಾನ ತಂಡವು ಸೆಪ್ಟೆಂಬರ್ 27 ರಂದು ಹೈದರಾಬಾದ್ ತಲುಪಲ್ಲಿದ್ದು, ಅಕ್ಟೋಬರ್ 10 ರವರೆಗೆ ಈ ನಗರದಲ್ಲಿಯೇ ಇರಬೇಕಾಗುತ್ತದೆ.

ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವೇಳಾಪಟ್ಟಿ:

  • 29 ಸೆಪ್ಟೆಂಬರ್ ಪಾಕಿಸ್ತಾನ vs ನ್ಯೂಜಿಲೆಂಡ್ (ಅಭ್ಯಾಸ ಪಂದ್ಯ)
  • 3 ಅಕ್ಟೋಬರ್ ಪಾಕಿಸ್ತಾನ vs ಆಸ್ಟ್ರೇಲಿಯಾ ( ಅಭ್ಯಾಸ ಪಂದ್ಯ)
  • 6 ಅಕ್ಟೋಬರ್ ಪಾಕಿಸ್ತಾನ vs ನೆದರ್ಲ್ಯಾಂಡ್ಸ್
  • 10 ಅಕ್ಟೋಬರ್ ಪಾಕಿಸ್ತಾನ vs ಶ್ರೀಲಂಕಾ
  • 14 ಅಕ್ಟೋಬರ್ ಪಾಕಿಸ್ತಾನ vs ಭಾರತ
  • 20 ಅಕ್ಟೋಬರ್ ಪಾಕಿಸ್ತಾನ vs ಆಸ್ಟ್ರೇಲಿಯಾ
  • 23 ಅಕ್ಟೋಬರ್ ಪಾಕಿಸ್ತಾನ vs ಅಫ್ಘಾನಿಸ್ತಾನ
  • 27 ಅಕ್ಟೋಬರ್ ಪಾಕಿಸ್ತಾನ vs ದಕ್ಷಿಣ ಆಫ್ರಿಕಾ
  • 31 ಅಕ್ಟೋಬರ್ ಪಾಕಿಸ್ತಾನ vs ಬಾಂಗ್ಲಾದೇಶ

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್