Ishan Kishan: ಇಶಾನ್ ಇತಿಹಾಸ ನಿರ್ಮಿಸಿ ಒಂದು ವರ್ಷ: ಇಲ್ಲಿದೆ ವಿಶ್ವ ದಾಖಲೆ ಪಟ್ಟಿ

| Updated By: ಝಾಹಿರ್ ಯೂಸುಫ್

Updated on: Dec 10, 2023 | 3:05 PM

Ishan Kishan: ಬಾಂಗ್ಲಾದೇಶ್ ವಿರುದ್ಧದ ಈ ಪಂದ್ಯದಲ್ಲಿ 131 ಎಸೆತಗಳನ್ನು ಎದುರಿಸಿದ್ದ ಇಶಾನ್ ಕಿಶನ್ 10 ಭರ್ಜರಿ ಸಿಕ್ಸ್ ಹಾಗೂ 24 ಫೋರ್​ಗಳೊಂದಿಗೆ ದ್ವಿಶತಕ ಸಿಡಿಸಿ ಮಿಂಚಿದ್ದರು. ಈ ಡಬಲ್ ಸೆಂಚುರಿಯೊಂದಿಗೆ ಕಿಶನ್ ಹಲವು ವಿಶ್ವ ದಾಖಲೆಯನ್ನು ಕೂಡ ತಮ್ಮದಾಗಿಸಿಕೊಂಡಿದ್ದರು.

Ishan Kishan: ಇಶಾನ್ ಇತಿಹಾಸ ನಿರ್ಮಿಸಿ ಒಂದು ವರ್ಷ: ಇಲ್ಲಿದೆ ವಿಶ್ವ ದಾಖಲೆ ಪಟ್ಟಿ
Ishan Kishan
Follow us on

ಅದು ಡಿಸೆಂಬರ್ 10, 2022…ಬಾಂಗ್ಲಾದೇಶದ ಚಟ್ಟೋಗ್ರಾಮ್ ಸ್ಟೇಡಿಯಂನಲ್ಲಿ ಪಾಕೆಟ್ ಡೈನಾಮೊ ಖ್ಯಾತಿಯ ಇಶಾನ್ ಕಿಶನ್ (Ishan Kishan) ಸಿಡಿದಿದ್ದರು. ಈ ಸಿಡಿಲಬ್ಬರಕ್ಕೆ ಇಶಾನ್ ಬ್ಯಾಟ್​​ನಿಂದ ಮೂಡಿಬಂದ ಸ್ಕೋರ್ ಬರೋಬ್ಬರಿ 210 ರನ್​ಗಳು. ಬಾಂಗ್ಲಾದೇಶ್ ವಿರುದ್ಧದ ಈ ಪಂದ್ಯದಲ್ಲಿ 131 ಎಸೆತಗಳನ್ನು ಎದುರಿಸಿದ್ದ ಇಶಾನ್ ಕಿಶನ್ 10 ಭರ್ಜರಿ ಸಿಕ್ಸ್ ಹಾಗೂ 24 ಫೋರ್​ಗಳೊಂದಿಗೆ ದ್ವಿಶತಕ ಸಿಡಿಸಿ ಮಿಂಚಿದ್ದರು. ಈ ಡಬಲ್ ಸೆಂಚುರಿಯೊಂದಿಗೆ ಕಿಶನ್ ಹಲವು ವಿಶ್ವ ದಾಖಲೆಯನ್ನು ಕೂಡ ತಮ್ಮದಾಗಿಸಿಕೊಂಡಿದ್ದರು. ಅವುಗಳಲ್ಲಿ ಒಂದು ವಿಶೇಷ ವಿಶ್ವದಾಖಲೆ ಕೂಡ ಸೇರಿತ್ತು.

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೆ 11 ದ್ವಿಶತಕಗಳು ಮೂಡಿಬಂದಿವೆ. ಇವುಗಳಲ್ಲಿ ಮೊದಲ ಡಬಲ್ ಸೆಂಚುರಿ ಸಚಿನ್ ತೆಂಡೂಲ್ಕರ್ ಬ್ಯಾಟ್​ನಿಂದ ಮೂಡಿಬಂದರೆ, ಕೊನೆಯ ದ್ವಿಶತಕ ಸಿಡಿಸಿರುವುದು ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್​ವೆಲ್.

ಆದರೆ ಇಶಾನ್ ಕಿಶನ್ ಸಿಡಿಸಿದ ದ್ವಿಶತಕದ ವಿಶೇಷತೆ ಏನೆಂದರೆ…ಇದಕ್ಕೂ ಮುನ್ನ ಏಕದಿನ ಕ್ರಿಕೆಟ್​ನಲ್ಲಿ ದ್ವಿಶತಕ ಬಾರಿಸಿದ ಬ್ಯಾಟ್ಸ್​ಮನ್​ಗಳೆಲ್ಲರೂ, ಅದಕ್ಕೂ ಮೊದಲು ಶತಕ ಸಿಡಿಸಿ ಬ್ಯಾಟ್ ಮೇಲೆತ್ತಿದ್ದರು. ಆದರೆ ಇಶಾನ್ ಕಿಶನ್ ಮಾತ್ರ ಚೊಚ್ಚಲ ಶತಕದೊಂದಿಗೆ ದ್ವಿಶತಕ ಪೂರೈಸಿದ್ದರು.

ಅಂದರೆ ಚೊಚ್ಚಲ ಶತಕವನ್ನು ದ್ವಿಶತಕವನ್ನಾಗಿಸಿದ ವಿಶ್ವದ ಮೊದಲ ಬ್ಯಾಟ್ಸ್​ಮನ್ ಎಂಬ ಹೆಗ್ಗಳಿಕೆಗೆ ಇಶಾನ್ ಕಿಶನ್ ಪಾತ್ರರಾಗಿದ್ದಾರೆ. ಮೊದಲ ಶತಕ ಬಾರಿಸಿದ ಕೆಲವೇ ಕ್ಷಣದಲ್ಲೇ ಚೊಚ್ಚಲ ದ್ವಿಶತಕ ಸಿಡಿಸಿದ ಆಟಗಾರ ಎಂಬ ವಿಶ್ವ ದಾಖಲೆ ಇಶಾನ್ ಕಿಶನ್ ಪಾಲಾಗಿತ್ತು.

ಅಷ್ಟೇ ಅಲ್ಲದೆ 85 ಎಸೆತಗಳಲ್ಲಿ ಚೊಚ್ಚಲ ಶತಕ ಬಾರಿಸಿದ್ದ ಇಶಾನ್ ಕೇವಲ 126 ಎಸೆತಗಳಲ್ಲಿ 200 ರನ್​ಗಳ ಗಡಿದಾಟಿದ್ದರು. ಈ ಮೂಲಕ ಅತೀ ವೇಗವಾಗಿ ದ್ವಿಶತಕ ಬಾರಿಸಿದ ಬ್ಯಾಟ್ಸ್​ಮನ್ ಎಂಬ ವಿಶ್ವ ದಾಖಲೆಯನ್ನು ಕೂಡ ತಮ್ಮದಾಗಿಸಿಕೊಂಡಿದ್ದರು.

ಇದರ ಜೊತೆಗೆ ಚೊಚ್ಚಲ ದ್ವಿಶತಕ ಬಾರಿಸಿದ ವಿಶ್ವದ ಅತ್ಯಂತ ಕಿರಿಯ ಬ್ಯಾಟ್ಸ್​ಮನ್ ಎಂಬ ವಿಶ್ವ ದಾಖಲೆ ಕೂಡ ಕಿಶನ್ ಪಾಲಾಗಿತ್ತು. 24ನೇ ವಯಸ್ಸಿನಲ್ಲೇ ಚೊಚ್ಚಲ ಶತಕದೊಂದಿಗೆ ದ್ವಿಶತಕ ಪೂರೈಸಿ ಇಶಾನ್ ಕಿಶನ್ ದಾಖಲೆ ನಿರ್ಮಿಸಿದ್ದರು. ಆದರೆ ಇದಾದ ಬಳಿಕ 23 ವರ್ಷದ ಶುಭ್​ಮನ್ ಗಿಲ್ ಈ ದಾಖಲೆಯನ್ನು ಮುರಿದಿರುವುದು ವಿಶೇಷ.

ಒಟ್ಟಿನಲ್ಲಿ ಪಾಕೆಟ್ ಡೈನಾಮೊ ಖ್ಯಾತಿಯ ಇಶಾನ್ ಕಿಶನ್ ಬ್ಯಾಟ್​ನಿಂದ ಸಿಡಿದ ಸ್ಪೋಟಕ ದ್ವಿಶತಕದ ದಾಖಲೆಗೆ ಇಂದಿಗೆ ಒಂದು ವರ್ಷವಾಗಿದೆ. ಇದೇ ಖುಷಿಯಲ್ಲಿ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಇಶಾನ್ ಕಿಶನ್ ಅಬ್ಬರಿಸಲಿದ್ದಾರಾ ಕಾದು ನೋಡಬೇಕಿದೆ.

ಇದನ್ನೂ ಓದಿ: ಮೈದಾನಕ್ಕೆ ಡ್ರಿಂಕ್ಸ್ ತಂದು ತಾನೇ ಕುಡಿದ ಇಶಾನ್ ಕಿಶನ್..!

ಏಕದಿನ ಕ್ರಿಕೆಟ್​ನಲ್ಲಿ ದ್ವಿಶತಕ ಸಿಡಿಸಿದ ಬ್ಯಾಟ್ಸ್​ಮನ್​ಗಳ ಪಟ್ಟಿ:

  • ರೋಹಿತ್ ಶರ್ಮಾ 264, 209, 208
  • ಸಚಿನ್ ತೆಂಡೂಲ್ಕರ್ (200*)
  • ಮಾರ್ಟಿನ್ ಗಪ್ಟಿಲ್ (237*),
  • ವೀರೇಂದ್ರ ಸೆಹ್ವಾಗ್ (219),
  • ಕ್ರಿಸ್ ಗೇಲ್ (215) ,
  • ಫಖರ್ ಝಮಾನ್ (210*),
  • ಇಶಾನ್ ಕಿಶನ್ (210),
  • ಶುಭಮನ್ ಗಿಲ್ (208)
  • ಗ್ಲೆನ್ ಮ್ಯಾಕ್ಸ್‌ವೆಲ್ (201*)