ಕ್ರಿಕೆಟ್ ಲೋಕಕ್ಕೆ ಮತ್ತೆ ಕಾಲಿಟ್ಟ ಕೊರೊನಾ; ಮೊದಲ ಟಿ20 ಪಂದ್ಯದಿಂದ ಹೊರಬಿದ್ದ ಸ್ಟಾರ್ ಪ್ಲೇಯರ್..!

|

Updated on: Jan 12, 2024 | 5:38 PM

COVID-19: ಮನುಕುಲದ ಮಾರಿ ಕೊರೊನಾ ಸೋಂಕು ಮತ್ತೊಮ್ಮೆ ಕ್ರಿಕೆಟ್ ಲೋಕಕ್ಕೆ ಕಾಲಿಟ್ಟಿದೆ. ಈ ಸೋಂಕಿಗೆ ತುತ್ತಾಗಿರುವ ಕಿವೀಸ್ ತಂಡದ ಸ್ಟಾರ್ ಆಲ್‌ರೌಂಡರ್ ಮಿಚೆಲ್ ಸ್ಯಾಂಟ್ನರ್ ಸರಣಿಯ ಮೊದಲ ಪಂದ್ಯದಿಂದ ಹೊರಬಿದ್ದಿದ್ದಾರೆ.

ಕ್ರಿಕೆಟ್ ಲೋಕಕ್ಕೆ ಮತ್ತೆ ಕಾಲಿಟ್ಟ ಕೊರೊನಾ; ಮೊದಲ ಟಿ20 ಪಂದ್ಯದಿಂದ ಹೊರಬಿದ್ದ ಸ್ಟಾರ್ ಪ್ಲೇಯರ್..!
ಮಿಚೆಲ್ ಸ್ಯಾಂಟ್ನರ್
Follow us on

ಈ ವರ್ಷ ಜೂನ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗಾಗಿ (T20 World Cup 2024) ಎಲ್ಲಾ ತಂಡಗಳು ಇಂದಿನಿಂದಲೇ ತಮ್ಮ ತಮ್ಮ ತಯಾರಿಯನ್ನು ಆರಂಭಿಸಿವೆ. ಅದರಂತೆ ಟೀಂ ಇಂಡಿಯಾ, ಟಿ20 ವಿಶ್ವಕಪ್​ಗೂ ಮುನ್ನ ತನ್ನ ಕೊನೆಯ ಟಿ20 ಸರಣಿಯನ್ನು ಅಫ್ಘಾನಿಸ್ತಾನ (India vs Afghanistan) ವಿರುದ್ಧ ಆಡುತ್ತಿದೆ. ಇತ್ತ ನೆರೆಯ ರಾಷ್ಟ್ರ ಪಾಕಿಸ್ತಾನ ಕೂಡ ಶುಕ್ರವಾರದಿಂದ ನ್ಯೂಜಿಲೆಂಡ್ (Pakistan vs New Zealand) ವಿರುದ್ಧ 5 ಪಂದ್ಯಗಳ ಟಿ20 ಸರಣಿಯನ್ನು ಆರಂಭಿಸಿದೆ. ಸರಣಿಯ ಮೊದಲ ಪಂದ್ಯ ಈಗಾಗಲೇ ಮುಗಿದಿದ್ದು, ಈ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ತಂಡ, ಪಾಕ್ ಪಡೆಯನ್ನು 46 ರನ್​ಗಳಿಂದ ಮಣಿಸಿ ಸರಣಿಯಲ್ಲಿ ಶುಭಾರಂಭ ಮಾಡಿದೆ. ಆದರೆ ಈ ಸರಣಿ ಆರಂಭಕ್ಕೂ ಮುನ್ನ ಹೊರಬಿದ್ದ ಸುದ್ದಿಯೊಂದು ಕ್ರಿಕೆಟ್ ಲೋಕದಲ್ಲಿ ತಲ್ಲಣ ಮೂಡಿಸಿದ್ದು, ಮನುಕುಲದ ಮಾರಿ ಕೊರೊನಾ ಸೋಂಕು (COVID-19) ಮತ್ತೊಮ್ಮೆ ಕ್ರಿಕೆಟ್ ಲೋಕಕ್ಕೆ ಕಾಲಿಟ್ಟಿದೆ. ಈ ಸೋಂಕಿಗೆ ತುತ್ತಾಗಿರುವ ಕಿವೀಸ್ ತಂಡದ ಸ್ಟಾರ್ ಆಲ್‌ರೌಂಡರ್ ಮಿಚೆಲ್ ಸ್ಯಾಂಟ್ನರ್ (Mitchell Santner) ಸರಣಿಯ ಮೊದಲ ಪಂದ್ಯದಿಂದ ಹೊರಬಿದ್ದಿದ್ದಾರೆ.

ಉಭಯ ತಂಡಗಳ ನಡುವೆ ನಡೆದ ಮೊದಲ ಟಿ20 ಪಂದ್ಯಕ್ಕೂ ಮುನ್ನ ಎಲ್ಲಾ ಆಟಗಾರರ ಕೋವಿಡ್ ಪರೀಕ್ಷೆ ನಡೆಸಿದ್ದು, ಅದರಲ್ಲಿ ಕಿವೀಸ್ ಆಲ್​ರೌಂಡರ್ ಸ್ಯಾಂಟ್ನರ್ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ ಎಂಬ ವರದಿ ಹೊರಬಿದ್ದಿತ್ತು. ಆ ಬಳಿಕ ಸೋಂಕಿತ ಸ್ಯಾಂಟ್ನರ್ ಅವರನ್ನು ಮೊದಲ ಟಿ20 ಪಂದ್ಯದಿಂದ ಹೊರಗಿಡಲಾಗಿದೆ. ಬಹಳ ಸಮಯದ ನಂತರ ಕ್ರಿಕೆಟಿಗನೊಬ್ಬ ಪಂದ್ಯಕ್ಕೆ ಮುನ್ನ ಕೊರೊನಾ ಪಾಸಿಟಿವ್ ಆಗಿರುವ ಘಟನೆ ನಡೆದಿದೆ. ಟಿ20 ವಿಶ್ವಕಪ್ ಹಾಗೂ ಐಪಿಎಲ್ ಸನಿಹವಾಗುತ್ತಿರುವ ಬೆನ್ನಲ್ಲೇ ಕ್ರಿಕೆಟ್ ಲೋಕಕ್ಕೆ ಕೊರೊನಾ ಕಾಲಿಟ್ಟಿರುವುದು ಕ್ರಿಕೆಟ್ ಪ್ರಿಯರಲ್ಲಿ ಆತಂಕ ಮೂಡಿಸಿದೆ.

PAK vs NZ: ಕಿವೀಸ್ ಪಡೆಗೆ ಸುಲಭ ತುತ್ತಾದ ಪಾಕಿಸ್ತಾನ; ಮೊದಲ ಟಿ20ಯಲ್ಲಿ 46 ರನ್​ಗಳ ಸೋಲು..!

ಮಾಹಿತಿ ನೀಡಿದ ಕಿವೀಸ್ ಮಂಡಳಿ

ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಿಂದ ಮಿಚೆಲ್ ಸ್ಯಾಂಟ್ನರ್ ಹೊರಗುಳಿದಿರುವ ಬಗ್ಗೆ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಮಾಹಿತಿ ನೀಡಿತ್ತು. ಪಾಕಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಸ್ಯಾಂಟ್ನರ್ ಆಡುತ್ತಿಲ್ಲ. ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಮುಂದಿನ ದಿನಗಳಲ್ಲಿ ವೈದ್ಯಕೀಯ ತಂಡ ಅವರ ಮೇಲೆ ನಿಗಾ ಇಡಲಿದೆ. ಸ್ಯಾಂಟ್ನರ್ ಇಲ್ಲಿಂದ ಹ್ಯಾಮಿಲ್ಟನ್‌ನಲ್ಲಿರುವ ತನ್ನ ಮನೆಗೆ ವಾಪಸ್ಸಾಗುತ್ತಿದ್ದಾರೆ ಎಂದು ಮಾಹಿತಿ ನೀಡಿತ್ತು.

ಮೊದಲ ಪಂದ್ಯದಲ್ಲಿ ಪಾಕ್ ತಂಡಕ್ಕೆ ಸೋಲು

ಇನ್ನು ಪಂದ್ಯದ ಬಗ್ಗೆ ಮಾತನಾಡುವುದಾದರೆ.. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ತಂಡ ಬರೋಬ್ಬರಿ 226 ರನ್ ಕಲೆಹಾಕಿತು. ತಂಡದ ಪರ ಸ್ಫೋಟಕ ಬ್ಯಾಟಿಂಗ್ ಮಾಡಿದ ನಾಯಕ ವಿಲಿಯಮ್ಸನ್ ಹಾಗೂ ಡೇರೆಲ್ ಮಿಚೆಲ್ ತಲಾ ಅರ್ಧಶತಕ ಸಿಡಿಸಿ ಮಿಂಚಿದರು. ಈ ಗುರಿ ಬೆನ್ನಟ್ಟಿದ ಅಫ್ರಿದಿ ಪಡೆ 18 ಓವರ್​ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 180 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ತಂಡದ ಪರ ಮಾಜಿ ನಾಯಕ ಬಾಬರ್ ಆಝಂ ಅರ್ಧಶತಕ ಸಿಡಿಸಿದನ್ನು ಬಿಟ್ಟರೆ, ಮಧ್ಯಮ ಕ್ರಮಾಂಕದ ಕಳಪೆ ಪ್ರದರ್ಶನದಿಂದಾಗಿ ತಂಡ 46 ರನ್​ಗಳ ಹೀನಾಯ ಸೋಲನುಭವಿಸಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ