PAK vs NZ: ಕಿವೀಸ್ ಪಡೆಗೆ ಸುಲಭ ತುತ್ತಾದ ಪಾಕಿಸ್ತಾನ; ಮೊದಲ ಟಿ20ಯಲ್ಲಿ 46 ರನ್‌ಗಳ ಸೋಲು..!
PAK vs NZ: ಪಾಕಿಸ್ತಾನ ಮತ್ತು ಆತಿಥೇಯ ನ್ಯೂಜಿಲೆಂಡ್ ನಡುವೆ ಇಂದಿನಿಂದ 5 ಪಂದ್ಯಗಳ ಸರಣಿ ಆರಂಭವಾಗಿದೆ. ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ತಂಡ ಪಾಕಿಸ್ತಾನ ತಂಡವನ್ನು 46 ರನ್‌ಗಳಿಂದ ಮಣಿಸಿದೆ. ಇದರೊಂದಿಗೆ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ.
ಪಾಕಿಸ್ತಾನ ಮತ್ತು ಆತಿಥೇಯ ನ್ಯೂಜಿಲೆಂಡ್ (New Zealand vs Pakistan) ನಡುವೆ ಇಂದಿನಿಂದ 5 ಪಂದ್ಯಗಳ ಟಿ20 ಸರಣಿ ಆರಂಭವಾಗಿದೆ. ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ತಂಡ ಪಾಕಿಸ್ತಾನ ತಂಡವನ್ನು 46 ರನ್‌ಗಳಿಂದ ಮಣಿಸಿದೆ. ಇದರೊಂದಿಗೆ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ನಾಯಕ ಶಾಹೀನ್ ಅಫ್ರಿದಿ (Shaheen Afridi) ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಕಿವೀಸ್ ಪಡೆ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 226 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ ಪೂರ್ಣ 20 ಓವರ್ಗಳನ್ನು ಆಡಲು ಸಾಧ್ಯವಾಗದೆ 18ನೇ ಓವರ್ಗೆ ತನ್ನೇಲ್ಲ ವಿಕೆಟ್ ಕಳೆದುಕೊಂಡು 180 ರನ್ ದಾಖಲಿಸಲಷ್ಟೇ ಶಕ್ತವಾಯಿತು.
ಕೇನ್, ಮಿಚೆಲ್ ಅರ್ಧಶತಕ
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಮೊದಲ ಎಸೆತದಲ್ಲೇ ತಂಡವು ಡೆವೊನ್ ಕಾನ್ವೆ ವಿಕೆಟ್ ಕಳೆದುಕೊಂಡಿತು. ಇದರ ನಂತರ, ನಾಯಕ ಕೇನ್ ವಿಲಿಯಮ್ಸನ್ ಮೊದಲು ಫಿನ್ ಅಲೆನ್ ಮತ್ತು ನಂತರ ಡ್ಯಾರಿಲ್ ಮಿಚೆಲ್ ಜೊತೆ ಅದ್ಭುತ ಜೊತೆಯಾಟ ನಡೆಸಿದರು. ಇದರೊಂದಿಗೆ ವಿಲಿಯಮ್ಸನ್ 57 ರನ್‌ಗಳ ಅರ್ಧಶತಕದ ಇನಿಂಗ್ಸ್ ಸಹ ಆಡಿದರು. ಕೇನ್ ಔಟಾದ ನಂತರ ತಂಡದ ಇನ್ನಿಂಗ್ಸ್ ಜವಬ್ದಾರಿವಹಿಸಿಕೊಂಡ ಮಿಚೆಲ್ 27 ಎಸೆತಗಳಲ್ಲಿ 61 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಇವರಿಬ್ಬರ ನೆರವಿನಿಂದ ತಂಡ 20 ಓವರ್‌ಗಳ ಅಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 226 ರನ್ ಗಳಿಸಿತು.
New Zealand prevailed in a high-scoring encounter to take a 1-0 lead in the #NZvPAK T20I series 👏
📝: https://t.co/42FWe9VVFi pic.twitter.com/bJzRb6QLfL
— ICC (@ICC) January 12, 2024
ಮಿಚೆಲ್ ಸಿಡಿಲಬ್ಬರದ ಬ್ಯಾಟಿಂಗ್
ಆರಂಭದಿಂದಲೂ ಹೊಡಿಬಡಿ ಆಟಕ್ಕೆ ಮುಂದಾದ ಡ್ಯಾರೆಲ್ ಮಿಚೆಲ್ ಪಾಕಿಸ್ತಾನದ ಬಹುತೇಕ ಎಲ್ಲ ಬೌಲರ್‌ಗಳನ್ನು ದಂಡಿಸಿದರು. ಇದರ ಫಲವಾಗಿ ಅವರು ಕೇವಲ 22 ಎಸೆತಗಳಲ್ಲಿ ಅರ್ಧಶತಕವನ್ನು ಪೂರ್ಣಗೊಳಿಸಿದರು. ಇದಾದ ನಂತರವೂ ತಮ್ಮ ಅಬ್ಬರವನ್ನು ಮುಂದುವರೆಸಿದ ಮಿಚೆಲ್ ಕೇವಲ 27 ಎಸೆತಗಳಲ್ಲಿ 61 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿ 17ನೇ ಓವರ್‌ನ ಮೊದಲ ಎಸೆತದಲ್ಲಿ ಶಾಹೀನ್ ಆಫ್ರಿದಿಗೆ ಔಟಾದರು. ಮಿಚೆಲ್ ಅವರ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಮತ್ತು 4 ಅದ್ಭುತ ಸಿಕ್ಸರ್‌ಗಳು ಸೇರಿದ್ದವು.
PAK vs NZ: 6,4,4,4,6..! ಒಂದೇ ಓವರ್ನಲ್ಲಿ 24 ರನ್ ಬಿಟ್ಟುಕೊಟ್ಟ ಪಾಕ್ ನಾಯಕ ಅಫ್ರಿದಿ; ವಿಡಿಯೋ ನೋಡಿ
ಬಾಬರ್ ಅರ್ಧಶತಕ ವ್ಯರ್ಥ
ಈ ಬೃಹತ್ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡಕ್ಕೆ ಸ್ಫೋಟಕ ಆರಂಭ ಸಿಕ್ಕಿತು. ಆರಂಭಿಕ ಸ್ಯಾಮ್ ಅಯೂಬ್ ಕೇವಲ 8 ಎಸೆತಗಳಲ್ಲಿ 27 ರನ್ ಕಲೆಹಾಕಿ ತಂಡಕ್ಕೆ ಬೇಕಾದ ಆರಂಭ ನೀಡಿದರು. ಆದರೆ ಅಯೂಬ್ ರನೌಟ್ಗೆ ಬಲಿಯಾಗಬೇಕಾಯಿತು. ಅಯೂಬ್ ನಂತರ, ರಿಜ್ವಾನ್ ಹಾಗೂ ಬಾಬರ್ ಜೊತೆಗೂಡಿ ತ್ವರಿತವಾಗಿ ರನ್ ಗಳಿಸಲು ಪ್ರಯತ್ನಿಸಿದರು. ಆದಾಗ್ಯೂ, ರಿಜ್ವಾನ್ ವಿಕೆಟ್ ನಂತರ, ತಂಡದ ಪೆವಿಲಿಯನ್ ಪರೇಡ್ ಆರಂಭವಾಯಿತು. ತಂಡದ ಪರ ಮಾಜಿ ನಾಯಕ ಬಾಬರ್ ಅರ್ಧಶತಕ ಸಿಡಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸುವ ಪ್ರಯತ್ನ ಮಾಡಿದರು. ಆದರೆ ಅವರ ವಿಕೆಟ್ ಪತನದ ನಂತರ ತಂಡದ ಪರ ಯಾರೂ ಇನ್ನಿಂಗ್ಸ್ ನಿಭಾಯಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಕಿವೀಸ್ ಪಡೆ 46 ರನ್‌ಗಳಿಂದ ಮೊದಲ ಟಿ20 ಪಂದ್ಯವನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:05 pm, Fri, 12 January 24