PAK vs NZ: 6,4,4,4,6..! ಒಂದೇ ಓವರ್‌ನಲ್ಲಿ 24 ರನ್ ಬಿಟ್ಟುಕೊಟ್ಟ ಪಾಕ್ ನಾಯಕ ಅಫ್ರಿದಿ; ವಿಡಿಯೋ ನೋಡಿ
PAK vs NZ: ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಯುವ ಬ್ಯಾಟರ್ ಫಿನ್ ಅಲೆನ್, ಪಾಕಿಸ್ತಾನ ಟಿ20 ತಂಡದ ನಾಯಕ ಶಾಹೀನ್ ಅಫ್ರಿದಿ ಬೌಲ್ ಮಾಡಿದ ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಬೌಂಡರಿ ಸಿಕ್ಸರ್ಗಳ ಸುರಿಮಳೆಗೈದಿದ್ದಾರೆ. ಅಫ್ರಿದಿ ಬೌಲ್ ಮಾಡಿದ ಈ ಓವರ್‌ನಲ್ಲಿ ಅಲೆನ್, ಮೂರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನೊಳಗೊಂಡಂತೆ ಒಟ್ಟು 24 ರನ್ ಕಲೆಹಾಕಿದರು.
ಆತಿಥೇಯ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ (New Zealand vs Pakistan) ನಡುವಿನ ಐದು ಪಂದ್ಯಗಳ ಟಿ20 ಸರಣಿ ಇಂದಿನಿಂದ ಆರಂಭವಾಗಿದೆ. ಆಕ್ಲೆಂಡ್‌ನಲ್ಲಿ ನಡೆಯುತ್ತಿರುವ ಸರಣಿಯ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕಿವೀಸ್ ಪಡೆ ನಿಗದಿತ 20 ಓವರ್‌ಗಳಲ್ಲಿ ಬರೋಬ್ಬರಿ 226 ರನ್ ಕಲೆಹಾಕಿದೆ. ತಂಡದ ಪರ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಡೆರೆಲ್ ಮಿಚೆಲ್ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಇನ್ನು ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಯುವ ಬ್ಯಾಟರ್ ಫಿನ್ ಅಲೆನ್ (Finn Allen), ಪಾಕಿಸ್ತಾನ ಟಿ20 ತಂಡದ ನಾಯಕ ಶಾಹೀನ್ ಅಫ್ರಿದಿ (Shaheen Afridi) ಬೌಲ್ ಮಾಡಿದ ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಬೌಂಡರಿ ಸಿಕ್ಸರ್ಗಳ ಸುರಿಮಳೆಗೈದಿದ್ದಾರೆ. ಅಫ್ರಿದಿ ಬೌಲ್ ಮಾಡಿದ ಈ ಓವರ್‌ನಲ್ಲಿ ಅಲೆನ್, ಮೂರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನೊಳಗೊಂಡಂತೆ ಒಟ್ಟು 24 ರನ್ ಕಲೆಹಾಕಿದರು.
15 ಎಸೆತಗಳಲ್ಲಿ 35 ರನ್ ಚಚ್ಚಿದ ಅಲೆನ್
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ಪರ ಫಿನ್ ಅಲೆನ್ ಮತ್ತು ಡೆವೊನ್ ಕಾನ್ವೇ ಇನ್ನಿಂಗ್ಸ್ ಆರಂಭಿಸಿದರು. ಆದರೆ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಏಕೆಂದರೆ ಆರಂಭಿಕ ಕಾನ್ವೇ, ಪಾಕ್ ನಾಯಕ ಅಫ್ರಿದಿ ಬೌಲ್ ಮಾಡಿದ ಇನ್ನಿಂಗ್ಸ್ನ ಮೊದಲ ಓವರ್ನ ಮೊದಲ ಎಸೆತದಲ್ಲೇ ಔಟಾಗಿ ಶೂನ್ಯಕ್ಕೆ ಪೆವಿಲಿಯನ್ ಸೇರಿಕೊಂಡರು. ಆದರೆ ಮತ್ತೊಬ್ಬ ಆರಂಭಿಕ ಅಲೆನ್ ಸ್ಫೋಟಕ ಇನ್ನಿಂಗ್ಸ್ ಆಡಿ ಎದುರಾಳಿ ತಂಡಕ್ಕೆ ನಡುಕ ಹುಟ್ಟಿಸಿದರು. ತಂಡದ ಪರ ಕೇವಲ 15 ಎಸೆತಗಳನ್ನು ಎದುರಿಸಿದ ಅಲೆನ್ 233.33 ಸ್ಟ್ರೈಕ್ ರೇಟ್‌ನಲ್ಲಿ 35 ರನ್ ಕಲೆಹಾಕಿದರು. ಈ ವೇಳೆ ಅವರ ಬ್ಯಾಟ್‌ನಿಂದ ಮೂರು ಬೌಂಡರಿಗಳು ಮತ್ತು ಮೂರು ಅತ್ಯುತ್ತಮ ಸಿಕ್ಸರ್‌ಗಳು ಸಿಡಿದವು.
View this post on Instagram
2 ಓವರ್‌ಗಳಲ್ಲಿ 25 ರನ್ ನೀಡಿದ ಅಫ್ರಿದಿ
ಪಾಕಿಸ್ತಾನದ ಇನಿಂಗ್ಸ್‌ನ ಮೊದಲ ಓವರ್ ಬೌಲ್ ಮಾಡಿದ ಶಾಹೀನ್ ಅಫ್ರಿದಿ ಕೇವಲ ಒಂದು ರನ್ ಬಿಟ್ಟುಕೊಟ್ಟು ಡೆವೊನ್ ಕಾನ್ವೇ ರೂಪದಲ್ಲಿ ಮೊದಲ ವಿಕೆಟ್ ಉರುಳಿಸಿದರು. ಆದರೆ, ಮೊದಲ ಓವರ್‌ನಲ್ಲಿ ಮಾಡಿದ ಸಾಧನೆಯನ್ನು ಎರಡನೇ ಓವರ್‌ನಲ್ಲಿ ಮಾಡಲು ಅಫ್ರಿದಿಗೆ ಸಾಧ್ಯವಾಗಲಿಲ್ಲ. ಅಫ್ರಿದಿ ಬೌಲ್ ಮಾಡಿದ ಎರಡನೇ ಓವರ್‌ನಲ್ಲಿ ಅಲೆನ್ ಮೊದಲ ಐದು ಎಸೆತಗಳನ್ನು ಬೌಂಡರಿಗಟ್ಟುವಲ್ಲಿ ಯಶಸ್ವಿಯಾದರು. ಓವರ್ನ ಮೊದಲ ಎಸೆತವನ್ನು ಸಿಕ್ಸರ್ಗಟ್ಟಿದ ಅಲೆನ್ ಮುಂದಿನ ಮೂರು ಎಸೆತಗಳನ್ನು ಬೌಂಡರಿಯಾಗಿ ಪರಿವರ್ತಿಸಿದರು. ಐದನೇ ಎಸೆತದಲ್ಲಿ ಮತ್ತೊಂದು ಸಿಕ್ಸರ್ ಬಾರಿಸುವಲ್ಲಿ ಅಲೆನ್ ಯಶಸ್ವಿಯಾದರು. ಉಳಿದಂತೆ ಕೊನೆಯ ಎಸೆತ ಯಾರ್ಕರ್ ಆಗಿದ್ದರಿಂದ ಆ ಎಸೆತದಲ್ಲಿ ಅಲೆನ್ ಯಾವುದೇ ರನ್ ಕದಿಯಲಿಲ್ಲ.
ಉಭಯ ತಂಡಗಳು
ಪಾಕಿಸ್ತಾನ ತಂಡ: ಮೊಹಮ್ಮದ್ ರಿಜ್ವಾನ್, ಸೈಮ್ ಅಯೂಬ್, ಬಾಬರ್ ಆಝಂ, ಫಖರ್ ಜಮಾನ್, ಇಫ್ತಿಕರ್ ಅಹ್ಮದ್, ಅಜಮ್ ಖಾನ್, ಅಮೀರ್ ಜಮಾಲ್, ಉಸಾಮಾ ಮಿರ್, ಶಾಹೀನ್ ಅಫ್ರಿದಿ (ನಾಯಕ), ಅಬ್ಬಾಸ್ ಅಫ್ರಿದಿ, ಹ್ಯಾರಿಸ್ ರೌಫ್.
ನ್ಯೂಜಿಲೆಂಡ್ ತಂಡ: ಫಿನ್ ಅಲೆನ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್ (ನಾಯಕ), ಡ್ಯಾರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಆಡಮ್ ಮಿಲ್ನೆ, ಮ್ಯಾಥ್ಯೂ ಹೆನ್ರಿ, ಟಿಮ್ ಸೌಥಿ, ಇಶ್ ಸೋಧಿ, ಬೆನ್ ಸಿಯರ್ಸ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:34 pm, Fri, 12 January 24