BAN vs PAK: ಬಾಂಗ್ಲಾ ವಿರುದ್ಧ ಮೊದಲ ಟಿ20 ಗೆದ್ದ ಪಾಕಿಸ್ತಾನ; ಮಿಂಚಿದ ಹಸನ್ ಅಲಿ

TV9 Digital Desk

| Edited By: ಪೃಥ್ವಿಶಂಕರ

Updated on:Nov 19, 2021 | 5:39 PM

BAN vs PAK: ಢಾಕಾದ ಶೇರ್ ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಪಾಕಿಸ್ತಾನ ತಂಡ ಬಾಂಗ್ಲಾದೇಶವನ್ನು 4 ವಿಕೆಟ್‌ಗಳಿಂದ ಸೋಲಿಸಿತು.

BAN vs PAK: ಬಾಂಗ್ಲಾ ವಿರುದ್ಧ ಮೊದಲ ಟಿ20 ಗೆದ್ದ ಪಾಕಿಸ್ತಾನ; ಮಿಂಚಿದ ಹಸನ್ ಅಲಿ
ಬಾಂಗ್ಲಾ- ಪಾಕಿಸ್ತಾನ

ಢಾಕಾದ ಶೇರ್ ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಪಾಕಿಸ್ತಾನ ತಂಡ ಬಾಂಗ್ಲಾದೇಶವನ್ನು 4 ವಿಕೆಟ್‌ಗಳಿಂದ ಸೋಲಿಸಿತು. ಗೆಲುವಿಗೆ 128 ರನ್‌ಗಳ ಗುರಿ ಪಡೆದಿದ್ದ ಪಾಕಿಸ್ತಾನ 3 ಎಸೆತಗಳು ಬಾಕಿಯಿರುವಂತೆ, 6 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಫಖರ್ ಜಮಾನ್ ಮತ್ತು ಖುಶ್ದಿಲ್ ಶಾ ಪಾಕಿಸ್ತಾನದ ಗೆಲುವಿನಲ್ಲಿ ತಲಾ 34 ರನ್‌ಗಳ ಕೊಡುಗೆ ನೀಡಿದರು. ಆದರೆ ಕೊನೆಯ ಓವರ್‌ನಲ್ಲಿ ಶಾದಾಬ್ ಖಾನ್ ಮತ್ತು ಖುಶ್ದಿಲ್ ಶಾ ಅವರ ತ್ವರಿತ ಜೊತೆಯಾಟವು ಪಂದ್ಯವನ್ನು ಬಾಂಗ್ಲಾದೇಶದಿಂದ ದೂರವಿಟ್ಟಿತು.

ಕೊನೆಯ 3 ಓವರ್‌ಗಳಲ್ಲಿ ಪಾಕಿಸ್ತಾನಕ್ಕೆ 32 ರನ್‌ಗಳು ಬೇಕಾಗಿದ್ದವು ಮತ್ತು 4 ವಿಕೆಟ್‌ಗಳು ಅವರ ಕೈಯಲ್ಲಿದ್ದವು. ಕಠಿಣ ಪಿಚ್‌ನಲ್ಲಿ ಪಾಕಿಸ್ತಾನ ಗೆಲ್ಲುವುದು ಕಷ್ಟ ಎನಿಸಿತು ಆದರೆ ಆಗಲಿಲ್ಲ. ಶಾದಾಬ್ ಖಾನ್ ಮತ್ತು ಮೊಹಮ್ಮದ್ ನವಾಜ್ ಕೇವಲ 15 ಎಸೆತಗಳಲ್ಲಿ 36 ರನ್‌ಗಳ ಅಜೇಯ ಜೊತೆಯಾಟ ನಡೆಸಿ ತಂಡಕ್ಕೆ ಜಯ ತಂದುಕೊಟ್ಟರು. ಕೊನೆಯ 12 ಎಸೆತಗಳಲ್ಲಿ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಒಟ್ಟಾಗಿ 4 ಸಿಕ್ಸರ್‌ಗಳನ್ನು ಬಾರಿಸಿದಾಗ ಬಾಂಗ್ಲಾದೇಶದ ಆಟ ಮುಗಿಯಿತು ಎಂಬುದು ಸಾಭೀತಾಯಿತು. ಶಾದಾಬ್ ಖಾನ್ ಕೇವಲ 10 ಎಸೆತಗಳಲ್ಲಿ ಅಜೇಯ 21 ರನ್ ಗಳಿಸಿದರೆ, ಮೊಹಮ್ಮದ್ ನವಾಜ್ 8 ಎಸೆತಗಳಲ್ಲಿ ಅಜೇಯ 18 ರನ್ ಗಳಿಸಿದರು. ಇಬ್ಬರೂ ಬ್ಯಾಟ್ಸ್‌ಮನ್‌ಗಳು ತಲಾ 2 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಬಾಂಗ್ಲಾದೇಶದ ಭರವಸೆಯನ್ನು ಕೊನೆಗೊಳಿಸಿದರು. ಆದರೆ, 4 ಓವರ್​ಗಳಲ್ಲಿ ಕೇವಲ 22 ರನ್ ನೀಡಿ 3 ವಿಕೆಟ್ ಪಡೆದ ವೇಗಿ ಹಸನ್ ಅಲಿ ಗೆಲುವಿನ ಹೀರೋ ಆಗಿ ಆಯ್ಕೆಯಾದರು. ಮೊಹಮ್ಮದ್ ವಾಸಿಮ್ ಜೂನಿಯರ್ 2 ವಿಕೆಟ್ ಮತ್ತು ಶಾದಾಬ್ ಖಾನ್-ಮೊಹಮ್ಮದ್ ನವಾಜ್ 1-1 ವಿಕೆಟ್ ಪಡೆದರು.

ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಬಾಂಗ್ಲಾದೇಶ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ನಯೀಮ್ ಮತ್ತು ಸರೀಫ್ ಹಸನ್ ಅವರನ್ನು ಪಾಕಿಸ್ತಾನದ ವೇಗದ ಬೌಲರ್‌ಗಳು ಕೇವಲ 3 ಓವರ್‌ಗಳಲ್ಲಿ ಪೆವಿಲಿಯನ್‌ಗೆ ಕಳುಹಿಸಿದರು. ಇಬ್ಬರೂ ಆಟಗಾರರು 1-1 ಬೌಂಡರಿ ಗಳಿಸಿ ಔಟಾದರು. ಶಾಂಟೊ ಕೂಡ 14 ಎಸೆತಗಳಲ್ಲಿ 7 ರನ್ ಗಳಿಸಲಷ್ಟೇ ಶಕ್ತರಾದರು. ಅಫೀಫ್ ಹೊಸೈನ್ 34 ಎಸೆತಗಳಲ್ಲಿ 36 ರನ್‌ಗಳ ಪ್ರಮುಖ ಇನ್ನಿಂಗ್ಸ್ ಆಡಿದರು. ಮಹಮ್ಮದುಲ್ಲಾ ಕೂಡ ವಿಫಲರಾಗಿ 11 ಎಸೆತಗಳಲ್ಲಿ 6 ರನ್ ಗಳಿಸಲಷ್ಟೇ ಶಕ್ತರಾದರು. ವಿಕೆಟ್ ಕೀಪರ್ ನೂರುಲ್ ಹಸನ್ ಕೂಡ 22 ಎಸೆತಗಳಲ್ಲಿ 28 ರನ್ ಮತ್ತು ಮೆಹದಿ ಹಸನ್ 20 ಎಸೆತಗಳಲ್ಲಿ 30 ರನ್ ಗಳಿಸಿದರು. ಇದರ ಆಧಾರದ ಮೇಲೆ ಬಾಂಗ್ಲಾದೇಶ ತಂಡ 20 ಓವರ್‌ಗಳಲ್ಲಿ 127 ರನ್ ಗಳಿಸಿತು.

ಪವರ್‌ಪ್ಲೇಯಲ್ಲಿ ಪಾಕಿಸ್ತಾನ ಜರ್ಜರಿತವಾಯಿತು ಬಾಂಗ್ಲಾದೇಶದ 127 ರನ್‌ಗಳಿಗೆ ಉತ್ತರವಾಗಿ ಪಾಕಿಸ್ತಾನವು ಪವರ್‌ಪ್ಲೇನಲ್ಲಿಯೇ 4 ವಿಕೆಟ್‌ಗಳನ್ನು ಕಳೆದುಕೊಂಡಿತು. ಮೊಹಮ್ಮದ್ ರಿಜ್ವಾನ್ 11 ರನ್ ಗಳಿಸಿ ಔಟಾದರೆ, ನಾಯಕ ಬಾಬರ್ ಅಜಮ್ ಕೂಡ 7 ರನ್ ಗಳಿಸಿದರು. ಹೈದರ್ ಅಲಿ ಮತ್ತು ಶೋಯೆಬ್ ಮಲಿಕ್ ಖಾತೆಯನ್ನೂ ತೆರೆಯಲಿಲ್ಲ. ಫಖರ್ ಜಮಾನ್ ಖಂಡಿತವಾಗಿಯೂ ವಿಕೆಟ್‌ನಲ್ಲಿ ಉಳಿಯಲು ಪ್ರಯತ್ನಿಸಿದರು ಆದರೆ ಅವರು 34 ರನ್ ಗಳಿಸಿದ ನಂತರ ಔಟಾದರು. 4 ವಿಕೆಟ್‌ಗಳ ಪತನದ ನಂತರ, ಖುಶ್ದಿಲ್ ಶಾ ಪಾಕಿಸ್ತಾನದ ಇನ್ನಿಂಗ್ಸ್ ಅನ್ನು ವಹಿಸಿಕೊಂಡರು ಮತ್ತು 34 ರನ್ ಗಳಿಸಿದರು. ಆದರೆ, ಶೋರಿಫುಲ್ ಇಸ್ಲಾಂ 17ನೇ ಓವರ್ ನಲ್ಲಿ ಖುಶ್ದಿಲ್ ಅವರನ್ನು ಔಟ್ ಮಾಡುವ ಮೂಲಕ ಪಂದ್ಯವನ್ನು ರೋಚಕಗೊಳಿಸಿದರು. ಕೊನೆಯ 3 ಓವರ್‌ಗಳಲ್ಲಿ ಪಾಕಿಸ್ತಾನ ಸಂಕಷ್ಟಕ್ಕೆ ಸಿಲುಕಿತು ಆದರೆ ಶಾದಾಬ್ ಖಾನ್ ಮತ್ತು ಮೊಹಮ್ಮದ್ ನವಾಜ್ ಅವರ ಆಕ್ರಮಣಕಾರಿ ನಿಲುವು ಬಾಂಗ್ಲಾದೇಶದ ಆಟಗಾರರ ಉತ್ಸಾಹವನ್ನು ಕುಗ್ಗಿಸಿತು.

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada