ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕ ಪಂದ್ಯ: 8 ಕ್ಯಾಚ್ ಕೈಬಿಟ್ಟ ಪಾಕಿಸ್ತಾನ್
Womens T20 World Cup, 2024: ವುಮೆನ್ಸ್ ಟಿ20 ವಿಶ್ವಕಪ್ನ 19ನೇ ಪಂದ್ಯವು ಭಾರತದ ಪಾಲಿಗೆ ನಿರ್ಣಾಯಕವಾಗಿತ್ತು. ಈ ಮ್ಯಾಚ್ನಲ್ಲಿ ನ್ಯೂಝಿಲೆಂಡ್ ವಿರುದ್ಧ ಪಾಕಿಸ್ತಾನ್ ತಂಡ ಗೆದ್ದಿದ್ದರೆ ಟೀಮ್ ಇಂಡಿಯಾ ವಿಶ್ವಕಪ್ನ ಸೆಮಿಫೈನಲ್ಗೆ ಪ್ರವೇಶಿಸಿತ್ತು. ಆದರೆ ಭಾರತದ ಪಾಲಿನ ನಿರ್ಣಾಯಕ ಪಂದ್ಯದಲ್ಲಿ ಪಾಕಿಸ್ತಾನ್ ತಂಡ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ.
ಮಹಿಳಾ ಟಿ20 ವಿಶ್ವಕಪ್ನ 19ನೇ ಪಂದ್ಯದಲ್ಲಿ ಪಾಕಿಸ್ತಾನ್ ತಂಡವು ಬರೋಬ್ಬರಿ 8 ಕ್ಯಾಚ್ಗಳನ್ನು ಕೈಚೆಲ್ಲುವ ಮೂಲಕ ಅಚ್ಚರಿ ಮೂಡಿಸಿದೆ. ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕವಾಗಿದ್ದ ಈ ಮ್ಯಾಚ್ನಲ್ಲಿ ನ್ಯೂಝಿಲೆಂಡ್ ಬ್ಯಾಟರ್ಗಳು ಸುಲಭ ಕ್ಯಾಚ್ಗಳನ್ನು ನೀಡಿದರೂ ಪಾಕ್ ಆಟಗಾರ್ತಿಯರು ಅದನ್ನು ಹಿಡಿಯುವಲ್ಲಿ ವಿಫಲರಾಗಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ.
ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡವು ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಕಿವೀಸ್ ಪರ ಸುಝಿ ಬೇಟ್ಸ್ 28 ರನ್ ಬಾರಿಸಿ ಉತ್ತಮ ಆರಂಭ ಒದಗಿಸಿದ್ದರು.
ಆದರೆ ಈ ಪಂದ್ಯದ 5ನೇ ಓವರ್ನ 2ನೇ ಎಸೆತದಲ್ಲಿ ಸುಝಿ ನೀಡಿದ ಸುಲಭ ಕ್ಯಾಚ್ ಅನ್ನು ಪಾಕ್ ಫೀಲ್ಡರ್ ಕೈಚೆಲ್ಲಿದರು. ಇದಾದ ಬಳಿಕ 6ನೇ ಓವರ್ನ 2ನೇ ಎಸೆತದಲ್ಲಿ ನಶಾರ ಮತ್ತೊಂದು ಕ್ಯಾಚ್ ಕೈಬಿಟ್ಟರು.
ಇನ್ನು ಅಮೆಲಿಯಾ ಕೆರ್ 8ನೇ ಓವರ್ನ 4ನೇ ಎಸೆತದಲ್ಲಿ ನೀಡಿದ ಕ್ಯಾಚ್ ಹಿಡಿಯುವಲ್ಲಿ ಪಾಕ್ ಫೀಲ್ಡರ್ ವಿಫಲರಾದರು. ಆ ಬಳಿಕ ಸೋಫಿ ಡಿವೈನ್ ನೀಡಿದ ಕ್ಯಾಚ್ ಅನ್ನು ಸಹ ಕೈಚೆಲ್ಲಿದರು.
18ನೇ ಓವರ್ನಲ್ಲಿ ಹಾಲ್ಲಿಡೆ ನೀಡಿದ ಮತ್ತೊಂದು ಕ್ಯಾಚ್ ಕೂಡ ಪಾಕ್ ಆಟಗಾರ್ತಿಯ ಕೈಯಿಂದ ಜಾರಿತು. ಇದರ ಬೆನ್ನಲ್ಲೇ ಇಝಬೆಲ್ಲೆ ನೀಡಿದ ಕ್ಯಾಚ್ ಹಿಡಿಯುವಲ್ಲಿ ನಾಯಕಿ ಫಾತಿಮಾ ಸನಾ ವಿಫಲರಾದರು.
ಹೀಗೆ 8 ಕ್ಯಾಚ್ಗಳನ್ನು ಕೈ ಚೆಲ್ಲುವ ಮೂಲಕ ಪಾಕ್ ಆಟಗಾರ್ತಿಯರು ನ್ಯೂಝಿಲೆಂಡ್ ತಂಡಕ್ಕೆ ಜೀವದಾನದ ಮೇಲೆ ಜೀವದಾನ ನೀಡಿದ್ದರು. ಪರಿಣಾಮ ನ್ಯೂಝಿಲೆಂಡ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 110 ರನ್ ಕಲೆಹಾಕಿತು.
ಪಾಕ್ ಆಟಗಾರ್ತಿಯರ ಫೀಲ್ಡಿಂಗ್ ವಿಡಿಯೋ:
Truly, catches win matches! 😅
Which missed chance of Team Pakistan do you believe had the biggest impact on the game?
Let us know in the comments below 👇 pic.twitter.com/NfpuB5nooo
— Star Sports (@StarSportsIndia) October 14, 2024
111 ರನ್ಗಳ ಸುಲಭ ಗುರಿ ಬೆನ್ನತ್ತಿದ ಪಾಕಿಸ್ತಾನ್ ತಂಡವು 28 ರನ್ಗಳಿಸುವಷ್ಟರಲ್ಲಿ 5 ಪ್ರಮುಖ ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಫಾತಿಮಾ ಸನಾ 21 ರನ್ಗಳ ಕೊಡುಗೆ ನೀಡಿದರು. ಪರಿಣಾಮ 10 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಪಾಕಿಸ್ತಾನ್ 54 ರನ್ ಕಲೆಹಾಕಿತು.
ಆದರೆ ಈ ಮೊತ್ತಕ್ಕೆ 2 ರನ್ ಸೇರ್ಪಡೆಯಾಗುವಷ್ಟರಲ್ಲಿ ಪಾಕ್ ತಂಡ ಆಲೌಟ್ ಆಗಿದ್ದು ವಿಶೇಷ. ಅಂದರೆ 10 ಓವರ್ಗಳಲ್ಲಿ 54 ರನ್ಗಳಿಸಿದ್ದ ಪಾಕಿಸ್ತಾನ್ 11.4 ಓವರ್ಗಳಲ್ಲಿ 56 ರನ್ಗಳಿಸಿ ಆಲೌಟ್ ಆಯಿತು. ಈ ಮೂಲಕ ನ್ಯೂಝಿಲೆಂಡ್ ತಂಡವು 54 ರನ್ಗಳ ಜಯ ಸಾಧಿಸಿ ಸೆಮಿಫೈನಲ್ಗೆ ಪ್ರವೇಶಿಸಿತು.
ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕ ಪಂದ್ಯ:
ಈ ಪಂದ್ಯದಲ್ಲಿ ಪಾಕಿಸ್ತಾನ್ ತಂಡ ಗೆಲುವು ಸಾಧಿಸಿದ್ದರೆ ಭಾರತ ತಂಡವು ಸೆಮಿಫೈನಲ್ಗೆ ಪ್ರವೇಶಿಸುತ್ತಿತ್ತು. ಆದರೆ ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕವಾಗಿದ್ದ ಈ ಮ್ಯಾಚ್ನಲ್ಲಿ ನ್ಯೂಝಿಲೆಂಡ್ ಅತ್ಯಂತ ಕಳಪೆ ಪ್ರದರ್ಶನ ನೀಡಿ ಅಚ್ಚರಿ ಮೂಡಿಸಿದೆ. ಅಲ್ಲದೆ ಪಾಕ್ ತಂಡದ ಈ ಸೋಲಿನೊಂದಿಗೆ ಭಾರತ ತಂಡ ಟಿ20 ವಿಶ್ವಕಪ್ ಅಭಿಯಾನ ಕೂಡ ಅಂತ್ಯವಾಗಿದೆ.