India vs Pakistan: ಟ್ರ್ಯಾಕ್ಟರ್ ಮಾರಿ ಭಾರತ-ಪಾಕ್ ಪಂದ್ಯ ವೀಕ್ಷಣೆ: ಪಾಕ್ ಅಭಿಮಾನಿಯ ಅಳಲು

India vs Pakistan: ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ತಂಡದ ನಾಯಕ ಬಾಬರ್ ಆಝಂ ಬೌಲಿಂಗ್ ಆಯ್ದುಕೊಂಡಿದ್ದರು. ನಾಯಕನ ನಿರ್ಧಾರವನ್ನು ಸಮರ್ಧಿಸುವಂತೆ ದಾಳಿ ಸಂಘಟಿಸಿದ ಪಾಕ್ ಬೌಲರ್​ಗಳು ಟೀಮ್ ಇಂಡಿಯಾವನ್ನು 119 ರನ್​ಗಳಿಗೆ ಆಲೌಟ್ ಮಾಡಿದರು. ಇನ್ನು 120 ರನ್​ಗಳ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ತಂಡವನ್ನು 113 ರನ್​ಗಳಿಗೆ ನಿಯಂತ್ರಿಸುವಲ್ಲಿ ಭಾರತೀಯ ಬೌಲರ್​ಗಳು ಯಶಸ್ವಿಯಾದರು. ಈ ಮೂಲಕ ಟೀಮ್ ಇಂಡಿಯಾ 6 ರನ್​ಗಳ ರೋಚಕ ಜಯ ಸಾಧಿಸಿದೆ.

India vs Pakistan: ಟ್ರ್ಯಾಕ್ಟರ್ ಮಾರಿ ಭಾರತ-ಪಾಕ್ ಪಂದ್ಯ ವೀಕ್ಷಣೆ: ಪಾಕ್ ಅಭಿಮಾನಿಯ ಅಳಲು
Pakistan Fan
Follow us
|

Updated on: Jun 10, 2024 | 10:25 AM

T20 World Cup 2024: ನ್ಯೂಯಾರ್ಕ್​ನ ನಸ್ಸೌ ಕ್ರಿಕೆಟ್ ಮೈದಾನದಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ್ (India vs Pakistan) ನಡುವಣ ಹೈವೋಲ್ಟೇಜ್ ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ಅಭಿಮಾನಿಗಳು ಕಿಕ್ಕಿರಿದು ನೆರದಿದ್ದರು. ಒಂದೆಡೆ ಭಾರತೀಯ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿದರೆ, ಮತ್ತೊಂದೆಡೆ ಪಾಕ್ ಫ್ಯಾನ್ಸ್ ಸಂಭ್ರಮಿಸುತ್ತಿದ್ದರು. ಇದರ ನಡುವೆ ಪಂದ್ಯವು ರಣರೋಚಕದತ್ತ ಸಾಗುತ್ತಿದ್ದಂತೆ ಉಭಯ ತಂಡಗಳ ಅಭಿಮಾನಿಗಳ ರಿಯಾಕ್ಷನ್ ಬದಲಾಗುತ್ತಾ ಸಾಗಿತು. ಆದರೆ ಅಂತಿಮವಾಗಿ ಭಾರತೀಯ ಅಭಿಮಾನಿಗಳ ಮುಖದಲ್ಲಿ ಗೆಲುವಿನಗೆ ಬೀರುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಯಿತು.

ಸಾಂಪ್ರದಾಯಿಕ ಎದುರಾಳಿಗಳ ನಡುವಣ ಈ ಹೈವೋಲ್ಟೇಜ್ ಪಂದ್ಯ ವೀಕ್ಷಿಸಲು ಭಾರತ ಮತ್ತು ಪಾಕಿಸ್ತಾನದಿಂದ ಅಭಿಮಾನಿಗಳು ಅಮೆರಿಕಗೆ ತೆರಳಿದ್ದರು. ಹೀಗೆ ತೆರಳಿದ ಪಾಕ್ ಅಭಿಮಾನಿಗಳಿಗೆ ನಿರಾಸೆ ಕಾದಿತ್ತು. ಏಕೆಂದರೆ ಭಾರತ ತಂಡವು ಟಿ20 ವಿಶ್ವಕಪ್​ನಲ್ಲಿ 7ನೇ ಬಾರಿ ಪಾಕ್ ತಂಡಕ್ಕೆ ಸೋಲುಣಿಸಿದೆ.

ಈ ಸೋಲಿನ ಬೆನ್ನಲ್ಲೇ ಪಾಕ್ ಅಭಿಮಾನಿಯೊಬ್ಬರು ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ. ಏಕೆಂದರೆ ಈ ಪಂದ್ಯ ವೀಕ್ಷಿಸಲೆಂದೇ ಈ ಅಭಿಮಾನಿ ತಮ್ಮ ಟ್ರ್ಯಾಕ್ಟರ್ ಮಾರಿ ನ್ಯೂಯಾರ್ಕ್​ಗೆ ಬಂದಿದ್ದರು. ಅಲ್ಲದೆ 3000 ಡಾಲರ್ ಬೆಲೆಯ​ ಟಿಕೆಟ್ ಖರೀದಿಸಿದ್ದರು. ಅಂದರೆ ಪಾಕಿಸ್ತಾನ್ ರೂಪಾಯಿ ಮೌಲ್ಯ 8 ಲಕ್ಷ ರೂ. (ಭಾರತೀಯ ರೂಪಾಯಿ ಮೌಲ್ಯ 2.50 ಲಕ್ಷ ರೂ.).

ಇಷ್ಟೊಂದು ದುಬಾರಿ ಮೊತ್ತದ ಟಿಕೆಟ್ ಖರೀದಿಸಿ ಪಂದ್ಯ ವೀಕ್ಷಿಸಿದ ಅಭಿಮಾನಿಗೆ ಈ ಬಾರಿಯಾದರೂ ಪಾಕ್ ತಂಡ ಗೆಲ್ಲುವ ವಿಶ್ವಾಸವಿತ್ತು. ಅದರಲ್ಲೂ ಭಾರತ ತಂಡ ಕೇವಲ 119 ರನ್​ಗಳಿಗೆ ಆಲೌಟ್ ಆಗುತ್ತಿದ್ದಂತೆ ಪಾಕಿಸ್ತಾನ್​ ತಂಡದ ಗೆಲುವು ಖಚಿತ ಎಂದು ಭಾವಿಸಿದ್ದರು. ಆದರೆ ಟೀಮ್ ಇಂಡಿಯಾದ ಕರಾರುವಾಕ್ ದಾಳಿಗೆ ಪಾಕಿಸ್ತಾನ್ ತಂಡ ಮಂಡಿಯೂರಿದೆ.

ಇದನ್ನೂ ಓದಿ: India vs Pakistan: ಟೀಮ್ ಇಂಡಿಯಾ ಗೆಲುವಿಗೆ ಸಿರಾಜ್ ಕಾರಣ… ಹೇಗೆ ಗೊತ್ತಾ?

ಈ ಸೋಲಿನ ನೋವಿನಲ್ಲಿ ಮಾತನಾಡಿದ ಪಾಕ್ ಅಭಿಮಾನಿ, “ನಾನು 3000 ಯುಎಸ್​ ಡಾಲರ್ ಮೌಲ್ಯದ ಟಿಕೆಟ್ ಖರೀದಿಸಲು ನನ್ನ ಟ್ರ್ಯಾಕ್ಟರ್ ಅನ್ನು ಮಾರಿದ್ದೇನೆ. ಭಾರತ ತಂಡದ ಸ್ಕೋರ್ ನೋಡಿದಾಗ, ಈ ಪಂದ್ಯದಲ್ಲಿ ನಾವು ಸೋಲುತ್ತೇವೆ ಎಂದು ಭಾವಿಸಿರಲಿಲ್ಲ. ಇಡೀ ಪಂದ್ಯವು ನಮ್ಮ ಕೈಯಲ್ಲಿತ್ತು. ಆದರೆ ಬಾಬರ್ ಆಝಂ ಔಟ್ ಆದ ಬಳಿಕ ಜನರು ನಿರಾಶೆಗೊಂಡರು … ನಾನು ನಿಮ್ಮೆಲ್ಲರನ್ನು (ಭಾರತೀಯರನ್ನು) ಅಭಿನಂದಿಸುತ್ತೇನೆ ಎಂದು ಪಾಕ್ ಅಭಿಮಾನಿ ಭಾವೋದ್ವೇಗದಿಂದ ಹೇಳಿದರು.

ಇದೀಗ ಪಾಕಿಸ್ತಾನ್ ಅಭಿಮಾನಿಯ ನಿರಾಸೆ ಭರಿತ ನುಡಿಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋಗೆ ಕೆಲವರು ಖೇದ ವ್ಯಕ್ತಪಡಿಸಿದರೆ, ಇನ್ನು ಕೆಲವರು ಇನ್ಮುಂದೆಯಾದರೂ ಭಾರತದ ವಿರುದ್ಧದ ಪಂದ್ಯ ನೋಡಲು ಟ್ರ್ಯಾಕ್ಟರ್ ಮಾರಬೇಡಿ. ಪಂದ್ಯವು ಹೋಗುತ್ತದೆ, ಟ್ರ್ಯಾಕ್ಟರ್ ಹೋಗುತ್ತದೆ ಎಂದು ಕಿವಿಮಾತು ಹೇಳಿದ್ದಾರೆ.

ತಾಜಾ ಸುದ್ದಿ
ಇಟಲಿ ಶೃಂಗಸಭೆಯಲ್ಲಿ ಭಾರತದ ದೃಷ್ಟಿಕೋನ ಪ್ರಸ್ತುತಪಡಿಸಿದ ಮೋದಿ
ಇಟಲಿ ಶೃಂಗಸಭೆಯಲ್ಲಿ ಭಾರತದ ದೃಷ್ಟಿಕೋನ ಪ್ರಸ್ತುತಪಡಿಸಿದ ಮೋದಿ
‘ದರ್ಶನ್ ಶಾಂತವಾಗಿದ್ರೂ ಕಿರಿಕಿರಿ ಮಾಡ್ತಾರೆ’; ಪೂಜೆ ಸಲ್ಲಿಸಿ ಭಾವನ ಮಾತು
‘ದರ್ಶನ್ ಶಾಂತವಾಗಿದ್ರೂ ಕಿರಿಕಿರಿ ಮಾಡ್ತಾರೆ’; ಪೂಜೆ ಸಲ್ಲಿಸಿ ಭಾವನ ಮಾತು
ಮತ್ತೊಂದು ಸಾವಿಗೆ ಕಾರಣವಾದ ದರ್ಶನ್; ಕುಟುಂಬದವರ ಆಕ್ರೋಶ
ಮತ್ತೊಂದು ಸಾವಿಗೆ ಕಾರಣವಾದ ದರ್ಶನ್; ಕುಟುಂಬದವರ ಆಕ್ರೋಶ
Daily Horoscope: ಈ ರಾಶಿಯವರಿಗೆ ಪರಿಚಿತ ವ್ಯಕ್ತಿಯೊಡನೆಯೇ ಕಲಹವಾಗಲಿದೆ
Daily Horoscope: ಈ ರಾಶಿಯವರಿಗೆ ಪರಿಚಿತ ವ್ಯಕ್ತಿಯೊಡನೆಯೇ ಕಲಹವಾಗಲಿದೆ
ನಿಮ್ಮ ಗೋತ್ರ ತಿಳಿದುಕೊಳ್ಳುವುದು ಬಹಳ ಸುಲಭ, ವಿಡಿಯೋ ನೋಡಿ
ನಿಮ್ಮ ಗೋತ್ರ ತಿಳಿದುಕೊಳ್ಳುವುದು ಬಹಳ ಸುಲಭ, ವಿಡಿಯೋ ನೋಡಿ
‘ಎಷ್ಟೇ ದಿನವಾದ್ರೂ ಶವ ಎತ್ತಲ್ಲ’: ದರ್ಶನ್​ ಸಹಚರ ಅನು ತಂದೆ ನಿಧನ
‘ಎಷ್ಟೇ ದಿನವಾದ್ರೂ ಶವ ಎತ್ತಲ್ಲ’: ದರ್ಶನ್​ ಸಹಚರ ಅನು ತಂದೆ ನಿಧನ
ರೇಣುಕಾಸ್ವಾಮಿ ಕೊಲೆ ಕೇಸ್​: ನಟ ದರ್ಶನ್ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ರೇಣುಕಾಸ್ವಾಮಿ ಕೊಲೆ ಕೇಸ್​: ನಟ ದರ್ಶನ್ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ಬಕ್ರೀದ್‌ ಶಾಂತಿ ಸಭೆಯಲ್ಲಿ ಪೊಲೀಸ್ರ ಮುಂದೇ ರೆಡ್ಡಿ, ಅನ್ಸಾರಿ ಬಣ ಜಟಾಪಟಿ
ಬಕ್ರೀದ್‌ ಶಾಂತಿ ಸಭೆಯಲ್ಲಿ ಪೊಲೀಸ್ರ ಮುಂದೇ ರೆಡ್ಡಿ, ಅನ್ಸಾರಿ ಬಣ ಜಟಾಪಟಿ
ಗೋರಕ್ಷಣೆ ಮಾಡಲು ಹೋದ ಬಜರಂಗದಳ ಕಾರ್ಯಕರ್ತನ ಮೇಲೆ ಮುಸ್ಲಿಂ ಯುವಕರಿಂದ ಹಲ್ಲೆ
ಗೋರಕ್ಷಣೆ ಮಾಡಲು ಹೋದ ಬಜರಂಗದಳ ಕಾರ್ಯಕರ್ತನ ಮೇಲೆ ಮುಸ್ಲಿಂ ಯುವಕರಿಂದ ಹಲ್ಲೆ
ಹೃದಯಾಘಾತಕ್ಕೂ ಮುನ್ನ ಆರೋಪಿ ಅನು ತಂದೆ ಚಂದ್ರಣ್ಣ ಕೊನೆಯ ಮಾತು
ಹೃದಯಾಘಾತಕ್ಕೂ ಮುನ್ನ ಆರೋಪಿ ಅನು ತಂದೆ ಚಂದ್ರಣ್ಣ ಕೊನೆಯ ಮಾತು