Shaheen Shah Afridi: ಟೆಸ್ಟ್ ಪಂದ್ಯದ ನಡುವೆ ಆಫ್ರಿದಿಗೆ ಸಿಹಿ ಸುದ್ದಿ; ಮನೆಗೆ ಪುಟ್ಟ ಅತಿಥಿಯ ಆಗಮನ

|

Updated on: Aug 24, 2024 | 7:20 PM

Shaheen Shah Afridi: ಶಾಹೀನ್ ಅಫ್ರಿದಿ ಪ್ರಸ್ತುತ ಬಾಂಗ್ಲಾದೇಶ ವಿರುದ್ಧದ ಎರಡು ಟೆಸ್ಟ್‌ಗಳ ಸರಣಿಯಲ್ಲಿ ನಿರತರಾಗಿದ್ದಾರೆ. ಮೊದಲ ಟೆಸ್ಟ್ ಪಂದ್ಯದ ಅಂತ್ಯದ ನಂತರ, ಅವರು ಭಾನುವಾರ ರಾತ್ರಿ ರಾವಲ್ಪಿಂಡಿಯಿಂದ ಕರಾಚಿಗೆ ತೆರಳಲ್ಲಿದ್ದು, ಅಲ್ಲಿ ಅವರು ತಮ್ಮ ಪತ್ನಿ ಮತ್ತು ನವಜಾತ ಮಗನೊಂದಿಗೆ ಸ್ವಲ್ಪ ಸಮಯ ಕಳೆಯಲಿದ್ದಾರೆ.

Shaheen Shah Afridi: ಟೆಸ್ಟ್ ಪಂದ್ಯದ ನಡುವೆ ಆಫ್ರಿದಿಗೆ ಸಿಹಿ ಸುದ್ದಿ; ಮನೆಗೆ ಪುಟ್ಟ ಅತಿಥಿಯ ಆಗಮನ
ಶಾಹೀನ್ ಆಫ್ರಿದಿ
Follow us on

ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬ್ಯುಸಿಯಾಗಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ, ವೇಗಿ ಶಾಹೀನ್ ಶಾ ಆಫ್ರಿದಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಈ ಸ್ಟಾರ್ ವೇಗದ ಬೌಲರ್ ಮನೆಗೆ ಪುಟ್ಟ ಅತಿಥಿಯೊಬ್ಬರು ಆಗಮಿಸಿದ್ದಾರೆ. ಆಫ್ರಿದಿ ಅವರ ಪತ್ನಿ ಅನ್ಶಾ ಅಫ್ರಿದಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಪ್ರಸ್ತುತ ಆಫ್ರಿದಿ ರಾವಲ್ಪಿಂಡಿಯಲ್ಲಿ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದು, ಪಂದ್ಯ ಮುಗಿದ ನಂತರ ಭಾನುವಾರ ರಾತ್ರಿ ಕರಾಚಿಯಲ್ಲಿರುವ ತಮ್ಮ ಕುಟುಂಬವನ್ನು ಸೇರಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಮಗನಿಗೆ ಅಲಿ ಯಾರ್ ಎಂದು ನಾಮಕರಣ

ಶಾಹೀನ್ ಶಾಹೀನ್ ಮತ್ತು ಅವರ ಪತ್ನಿ ಅನ್ಶಾ ಅಫ್ರಿದಿ ತಮ್ಮ ಮೊದಲ ಮಗುವಿಗೆ ಅಲಿ ಯಾರ್ ಎಂದು ನಾಮಕರಣ ಮಾಡಿದ್ದಾರೆ. ಮೊದಲ ಮಗುವಿಗೆ ತಂದೆಯಾಗಿರುವ ಆಫ್ರಿದಿಗೆ ಕ್ರಿಕೆಟ್ ಲೋಕದಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಪೋಷಕರಾದ ಶಾಹೀನ್ ಮತ್ತು ಅನ್ಶಾ ಅವರನ್ನು ತಂಡದ ಸದಸ್ಯರು ಮತ್ತು ಅಭಿಮಾನಿಗಳು ಅಭಿನಂದಿಸಿದ್ದಾರೆ. ಅನ್ಶಾ ತಂದೆ ಹಾಗೂ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಆಫ್ರಿದಿ ಕೂಡ ಅಜ್ಜನಾದ ಖುಷಿಯಲ್ಲಿದ್ದಾರೆ.

ಇನ್ನು ಮೊದಲ ಮಗುವಿನ ಆಗಮನದ ಸಂತಸದಲ್ಲಿದ್ದ ಶಾಹೀನ್ ಆಫ್ರಿದಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ನ ಎರಡನೇ ದಿನದಂದು ಹಸನ್ ಮಹಮೂದ್ ಅವರ ವಿಕೆಟ್ ಅನ್ನು ತಮ್ಮ ಮಗನಿಗೆ ಅರ್ಪಿಸಿದರು. ಹಸನ್ ಅವರ ವಿಕೆಟ್ ಪಡೆದ ಕೂಡಲೇ ಆಫ್ರಿದಿ ಶಾಹೀನ್ ತನ್ನ ಕೈಗಳಿಂದ ಮಗುವನ್ನು ತೂಗುವ ಸನ್ನೆ ಮಾಡಿ ಸಂಭ್ರಮಿಸಿದರು.

2023 ರಲ್ಲಿ ಮದುವೆ

ಶಾಹೀನ್ ಅಫ್ರಿದಿ ಪ್ರಸ್ತುತ ಬಾಂಗ್ಲಾದೇಶ ವಿರುದ್ಧದ ಎರಡು ಟೆಸ್ಟ್‌ಗಳ ಸರಣಿಯಲ್ಲಿ ನಿರತರಾಗಿದ್ದಾರೆ. ಮೊದಲ ಟೆಸ್ಟ್ ಪಂದ್ಯದ ಅಂತ್ಯದ ನಂತರ, ಅವರು ಭಾನುವಾರ ರಾತ್ರಿ ರಾವಲ್ಪಿಂಡಿಯಿಂದ ಕರಾಚಿಗೆ ತೆರಳಲ್ಲಿದ್ದು, ಅಲ್ಲಿ ಅವರು ತಮ್ಮ ಪತ್ನಿ ಮತ್ತು ನವಜಾತ ಮಗನೊಂದಿಗೆ ಸ್ವಲ್ಪ ಸಮಯ ಕಳೆಯಲಿದ್ದಾರೆ. ಆಗಸ್ಟ್ 30 ರಿಂದ ಪ್ರಾರಂಭವಾಗುವ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಅವರು ತಮ್ಮ ತಂಡವನ್ನು ಸೇರಿಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿದೆ.

ಶಾಹೀನ್ ಮತ್ತು ಅನ್ಶಾ ಅವರ ವಿವಾಹವು ಫೆಬ್ರವರಿ 2023 ರಲ್ಲಿ ಕರಾಚಿಯಲ್ಲಿ ನಡೆಯಿತು. ಆ ಬಳಿಕ ನಿಕಾಹ್ ಸಮಾರಂಭವು ಕರಾಚಿಯ ಸ್ಥಳೀಯ ಮಸೀದಿಯಲ್ಲಿ ನಡೆದಿತ್ತು. ಇದರಲ್ಲಿ ಎರಡೂ ಕುಟುಂಬಗಳ ಹತ್ತಿರದ ಸಂಬಂಧಿಕರು ಭಾಗವಹಿಸಿದ್ದರು. ಇದರ ನಂತರ, ಸೆಪ್ಟೆಂಬರ್ 2023 ರಲ್ಲಿ ಕರಾಚಿಯ ಸ್ಥಳೀಯ ಸಭಾಂಗಣದಲ್ಲಿ ವಿವಾಹ ಸಮಾರಂಭವನ್ನು ಆಯೋಜಿಸಲಾಗಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:17 pm, Sat, 24 August 24