ಕೇವಲ 14 ರನ್​: ಪವರ್​ ಕಳೆದುಕೊಂಡು ಅತ್ಯಂತ ಕೆಟ್ಟ ದಾಖಲೆ ಬರೆದ ಪಾಕಿಸ್ತಾನ್

New Zealand vs Pakistan, 1st T20I: ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡದ ಹಂಗಾಮಿ ನಾಯಕ ಮೈಕೆಲ್ ಬ್ರೇಸ್​ವೆಲ್ ಪಾಕಿಸ್ತಾನ್ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡ 18.4 ಓವರ್​ಗಳಲ್ಲಿ ಕೇವಲ 91 ರನ್​ಗಳಿಸಿ ಆಲೌಟ್ ಆಗಿದೆ. ಅಲ್ಲದೆ ಈ ಪಂದ್ಯದ ಪವರ್​ಪ್ಲೇನಲ್ಲಿ ಅತೀ ಕಡಿಮೆ ಸ್ಕೋರ್​ಗಳಿಸಿ ಅನಗತ್ಯ ದಾಖಲೆಯನ್ನು ಸಹ ಬರೆದಿದೆ.

ಕೇವಲ 14 ರನ್​: ಪವರ್​ ಕಳೆದುಕೊಂಡು ಅತ್ಯಂತ ಕೆಟ್ಟ ದಾಖಲೆ ಬರೆದ ಪಾಕಿಸ್ತಾನ್
Pakistan

Updated on: Mar 16, 2025 | 8:30 AM

ಪವರ್​ಪ್ಲೇನಲ್ಲಿ ಪವರ್​ ಇಲ್ಲದ ಬ್ಯಾಟಿಂಗ್ ಪ್ರದರ್ಶಿಸಿ ಪಾಕಿಸ್ತಾನ್ ತಂಡವು ಅತ್ಯಂತ ಕೆಟ್ಟ ದಾಖಲೆಯನ್ನು ಬರೆದಿದೆ. ಅದು ಸಹ ಮೊದಲ 6 ಓವರ್​ಗಳಲ್ಲಿ ಕೇವಲ 14 ರನ್​ಗಳನ್ನು ಮಾತ್ರ ಕಲೆಹಾಕುವ ಮೂಲಕ. ಕ್ರೈಸ್ಟ್‌ಚರ್ಚ್​ನ ಹ್ಯಾಗ್ಲಿ ಓವಲ್ ಮೈದಾನದಲ್ಲಿ ನ್ಯೂಝಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ಬ್ಯಾಟರ್​ಗಳು ಪವರ್​ಪ್ಲೇನಲ್ಲಿ ರನ್​ಗಳಿಸಲು ಪರದಾಡಿದ್ದಾರೆ.

  • ಕೈಲ್ ಜೇಮಿಸನ್ ಎಸೆದ ಇನಿಂಗ್ಸ್​ನ ಮೊದಲ ಓವರ್​ನಲ್ಲಿ ಮೊಹಮ್ಮದ್ ಹ್ಯಾರಿಸ್ (0) ಔಟಾದರು. ಈ ಓವರ್​ನಲ್ಲಿ ಯಾವುದೇ ರನ್ ಮೂಡಿಬಂದಿರಲಿಲ್ಲ.
  • ಜೇಕಬ್ ಢಫಿ ಎಸೆದ ದ್ವಿತೀಯ ಓವರ್​ನಲ್ಲಿ 2ನೇ ಎಸೆತದಲ್ಲಿ ಹಸನ್ ನವಾಝ್ (0) ಕ್ಯಾಚ್ ನೀಡಿ ಹೊರನಡೆದರು. ಈ ಓವರ್​ನಲ್ಲಿ ಪಾಕ್ ಬ್ಯಾಟರ್​ಗಳು ಕಲೆಹಾಕಿದ್ದು ಕೇವಲ 1 ರನ್​ ಮಾತ್ರ.
  • ಕೈಲ್ ಜೇಮಿಸನ್ ಎಸೆದ 3ನೇ ಓವರ್​ನ 2ನೇ ಎಸೆತದಲ್ಲಿ ಇರ್ಫಾನ್ ಖಾನ್ (1) ಕ್ಯಾಚಿತ್ತರು. ಅಲ್ಲದೆ ಈ ಓವರ್​ನಲ್ಲಿ ಗಳಿಸಿದ್ದು 2 ರನ್​ ಮಾತ್ರ.
  • ಜೇಕಬ್ ಡಫಿ ಎಸೆದ 4ನೇ ಓವರ್​ನ 4ನೇ ಎಸೆತದಲ್ಲಿ ಸಲ್ಮಾನ್ ಅಲಿ ಅಘಾ ಫೋರ್ ಬಾರಿಸಿದರು. ಈ ಮೂಲಕ ನಾಲ್ಕನೇ ಓವರ್​ನಲ್ಲಿ 6 ರನ್​ಗಳಿಸುವಲ್ಲಿ ಯಶಸ್ವಿಯಾದರು.
  • ಕೈಲ್ ಜೇಮಿಸನ್ ಎಸೆದ 5ನೇ ಓವರ್​ನ 4ನೇ ಎಸೆತದಲ್ಲಿ ಶಾದಬ್ ಖಾನ್ (3) ಕ್ಯಾಚ್ ನೀಡಿ ನಿರ್ಗಮಿಸಿದರು. ಈ ಓವರ್​ನಲ್ಲಿ ಮೂಡಿಬಂದಿದ್ದು ಕೇವಲ 2 ರನ್​ ಮಾತ್ರ.
  • ಝಕಾರಿ ಫೌಲ್ಕ್ಸ್ ಎಸೆದ 6ನೇ ಓವರ್​ನಲ್ಲಿ ಪಾಕಿಸ್ತಾನ್ ಬ್ಯಾಟರ್​ಗಳು ಕಲೆಹಾಕಿದ್ದು ಕೇವಲ 3 ರನ್​ ಮಾತ್ರ.

ಈ ಮೂಲಕ ಪವರ್​ಪ್ಲೇನಲ್ಲಿ ಪಾಕಿಸ್ತಾನ್ ತಂಡ 4 ವಿಕೆಟ್ ಕಳೆದುಕೊಂಡು 14 ರನ್​ಗಳಿಸಿ ಅತ್ಯಂತ ಹೀನಾಯ ದಾಖಲೆಯೊಂದನ್ನು ತನ್ನದಾಗಿಸಿಕೊಂಡಿತು. ಅಂದರೆ ಟಿ20 ಕ್ರಿಕೆಟ್​ನಲ್ಲಿ ಪವರ್​ಪ್ಲೇನಲ್ಲಿ 2 ಬಾರಿ 15 ಕ್ಕಿಂತ ಕಡಿಮೆ ಮೊತ್ತ ಕಲೆಹಾಕಿದ ತಂಡವೆಂಬ ಕಳಪೆ ದಾಖಲೆಯೊಂದು ಪಾಕ್ ತಂಡದ ಪಾಲಾಗಿದೆ.

ಇದಕ್ಕೂ ಮುನ್ನ 2014ರ ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ್ ತಂಡ ಪವರ್​ಪ್ಲೇನಲ್ಲಿ ಕೇವಲ 13 ರನ್​ ಮಾತ್ರ ಕಲೆಹಾಕಿತ್ತು. ಇದು ಟೆಸ್ಟ್ ಆಡುವ ದೇಶವೊಂದು ಟಿ20 ಕ್ರಿಕೆಟ್​ನ ಮೊದಲ 6 ಓವರ್​ಗಳಲ್ಲಿ ಕಲೆಹಾಕಿದ ಅತ್ಯಂತ ಕಡಿಮೆ ಸ್ಕೋರ್.

ಇದನ್ನೂ ಓದಿ
IPL 2025: RCB ನೂತನ ಜೆರ್ಸಿ ಫೋಟೋ ಇಲ್ಲಿದೆ
15 ಭರ್ಜರಿ ಸಿಕ್ಸ್​: ವಿಶ್ವ ದಾಖಲೆಯ ಸೆಂಚುರಿ ಸಿಡಿಸಿದ ಎಬಿ ಡಿವಿಲಿಯರ್ಸ್
ಈ ಸಲನೂ RCB ಕಪ್ ಗೆಲ್ಲದಿರಲಿ, ಅದಕ್ಕಾಗಿ ನಾನು ಪ್ರಾರ್ಥಿಸುವೆ..!
ಗಂಭೀರ್ ಅವರ ಒಂದು ದೃಢ ನಿರ್ಧಾರ ಚಾಂಪಿಯನ್ಸ್ ಟ್ರೋಫಿಯ ಚಿತ್ರಣ ಬದಲಿಸಿತು

ಇದೀಗ 11 ವರ್ಷಗಳ ಬಳಿಕ ಮತ್ತೊಮ್ಮೆ ಪಾಕಿಸ್ತಾನ್ ತಂಡ ಪವರ್​ಪ್ಲೇನಲ್ಲಿ 14 ರನ್​ ಮಾತ್ರ ಕಲೆಹಾಕಿದೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಪವರ್​ಪ್ಲೇನಲ್ಲಿ ಎರಡು ಬಾರಿ 15 ಕ್ಕಿಂತ ಕಡಿಮೆ ಮೊತ್ತ ಕಲೆಹಾಕಿದ ಮೊದಲ ತಂಡವೆಂಬ ಅತ್ಯಂತ ಕೆಟ್ಟ ದಾಖಲೆಯನ್ನು ಪಾಕಿಸ್ತಾನ್ ತಂಡ ತನ್ನದಾಗಿಸಿಕೊಂಡಿದೆ.

ಇದನ್ನೂ ಓದಿ: ವಿಶ್ವ ದಾಖಲೆ… ಮುಂಬೈ ಇಂಡಿಯನ್ಸ್​ ಮುಡಿಗೆ 12ನೇ ಟ್ರೋಫಿ

91 ರನ್​ಗೆ ಆಲೌಟ್:

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡ 18.4 ಓವರ್​ಗಳಲ್ಲಿ 91 ರನ್​ಗಳಿಸಿ ಸರ್ವಪತನ ಕಂಡಿದೆ. ನ್ಯೂಝಿಲೆಂಡ್ ಪರ ಕೈಲ್ ಜೇಮಿಸನ್ 4 ಓವರ್​ಗಳಲ್ಲಿ 8 ರನ್ ನೀಡಿ 3 ವಿಕೆಟ್ ಪಡೆದರೆ, ಜೇಕಬ್ ಢಫಿ 3.4 ಓವರ್​ಗಳಲ್ಲಿ 14 ರನ್ ನೀಡಿ 4 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಇನ್ನು ಇಶ್ ಸೋಧಿ 2 ವಿಕೆಟ್ ಪಡೆದರೆ, ಝಕಾರಿ ಫೌಲ್ಕ್ಸ್ಒಂದು ವಿಕೆಟ್ ಕಬಳಿಸಿದರು.