ಪಾಕ್ ಪಡೆಯಲ್ಲಿ ಅಲ್ಲೋಲ ಕಲ್ಲೋಲ: 7 ಬದಲಾವಣೆಯೊಂದಿಗೆ ಹೊಸ ತಂಡಗಳು ಪ್ರಕಟ
Pakistan vs South Africa: ಪಾಕಿಸ್ತಾನ್ ಮತ್ತು ಸೌತ್ ಆಫ್ರಿಕಾ ನಡುವಣ 8 ಪಂದ್ಯಗಳ ಸರಣಿಯು ಡಿಸೆಂಬರ್ 10 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ ಮೊದಲಿಗೆ ಮೂರು ಟಿ20 ಪಂದ್ಯಗಳನ್ನಾಡಲಾಗುತ್ತದೆ. ಇದಾದ ಬಳಿಕ 3 ಏಕದಿನ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ.
ಸೌತ್ ಆಫ್ರಿಕಾ ವಿರುದ್ದದ ಸರಣಿಗಾಗಿ ಪಾಕಿಸ್ತಾನ್ ತಂಡಗಳನ್ನು ಪ್ರಕಟಿಸಿದೆ. ಏಕದಿನ, ಟೆಸ್ಟ್ ಮತ್ತು ಟಿ20 ಸರಣಿಗಳಿಗಾಗಿ ಪ್ರಕಟಿಸಲಾದ ಈ ತಂಡಗಳಲ್ಲಿ 7 ಬದಲಾವಣೆ ಮಾಡಿರುವುದು ವಿಶೇಷ. ಈ ಬದಲಾವಣೆಯಿಂದಾಗಿ ಬಾಬರ್ ಆಝಂ ಟೆಸ್ಟ್ ತಂಡಕ್ಕೆ ಕಂಬ್ಯಾಕ್ ಮಾಡಿದರೆ, ಅತ್ತ ಶಾಹೀನ್ ಅಫ್ರಿದಿ ಟೆಸ್ಟ್ ತಂಡದಿಂದ ಹೊರಬಿದ್ದಿದ್ದಾರೆ.
ಇನ್ನು ಈ ತಂಡಗಳಾಗಿ ನಾಯಕರಾಗಿ ಮೊಹಮ್ಮದ್ ರಿಝ್ವಾನ್ ಹಾಗೂ ಶಾನ್ ಮಸೂದ್ ಆಯ್ಕೆಯಾಗಿದ್ದಾರೆ. ಇಲ್ಲಿ ಸೀಮಿತ ಓವರ್ಗಳ ತಂಡಗಳನ್ನು ರಿಝ್ವಾನ್ ಮುನ್ನಡೆಸಿದರೆ, ಟೆಸ್ಟ್ ತಂಡದ ನಾಯಕರಾಗಿ ಶಾನ್ ಮಸೂದ್ ಕಾಣಿಸಿಕೊಳ್ಳಿದ್ದಾರೆ.
ಪಿಸಿಬಿ ತೆಗೆದುಕೊಂಡ 7 ನಿರ್ಧಾರಗಳು:
- ಪ್ರಮುಖ ವೇಗಿ ಶಾಹೀನ್ ಅಫ್ರಿದಿ ಅವರನ್ನು ಟೆಸ್ಟ್ ತಂಡದಿಂದ ಕೈ ಬಿಡಲಾಗಿದೆ.
- ಸಲ್ಮಾನ್ ಅಲಿ ಅಘಾ ಅವರನ್ನು ಪಾಕ್ ತಂಡದ ಉಪನಾಯಕನ ಸ್ಥಾನದಿಂದ ಕೆಳಗಿಳಿಸಲಾಗಿದೆ.
- ಪ್ರಮುಖ ವೇಗಿ ನಸೀಮ್ ಶಾ ಅವರನ್ನು ಟಿ20 ತಂಡದ ಆಯ್ಕೆಗೆ ಪರಿಗಣಿಸಲಾಗಿಲ್ಲ.
- ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಸಾಜಿದ್ ಖಾನ್ ಅವರನ್ನು ತಂಡದಿಂದ ಕೈ ಬಿಡಲಾಗಿದೆ.
- ಯುವ ದಾಂಡಿಗ ಸೈಮ್ ಅಯ್ಯೂಬ್ ಮೂರು ತಂಡಗಳಲ್ಲೂ ಸ್ಥಾನ ನೀಡಲಾಗಿದೆ.
- ಫಖರ್ ಜಮಾನ್ ಮತ್ತು ಇಮಾಮ್ ಉಲ್ ಹಕ್ ಅವರನ್ನು ಸೌತ್ ಆಫ್ರಿಕಾ ಸರಣಿಯಿಂದ ಕೈ ಬಿಟ್ಟಿದ್ದಾರೆ.
- ಮೊಹಮ್ಮದ್ ಅಬ್ಬಾಸ್ ಅವರನ್ನು 3 ವರ್ಷಗಳ ಬಳಿಕ ಟೆಸ್ಟ್ ತಂಡಕ್ಕೆ ವಾಪಸ್ ಕರೆಸಿಕೊಳ್ಳಲಾಗಿದೆ.
ಸೌತ್ ಆಫ್ರಿಕಾ ಸರಣಿಗೆ ಪಾಕಿಸ್ತಾನ್ ತಂಡಗಳು:
ಪಾಕಿಸ್ತಾನ್ ಟೆಸ್ಟ್ ತಂಡ: ಶಾನ್ ಮಸೂದ್ (ನಾಯಕ), ಸೌದ್ ಶಕೀಲ್ (ಉಪನಾಯಕ), ಅಮೀರ್ ಜಮಾಲ್, ಅಬ್ದುಲ್ಲಾ ಶಫೀಕ್, ಬಾಬರ್ ಆಝಂ, ಹಸೀಬುಲ್ಲಾ (ವಿಕೆಟ್ ಕೀಪರ್), ಕಮ್ರಾನ್ ಗುಲಾಮ್, ಖುರ್ರಂ ಶಹಝಾದ್, ಮೀರ್ ಹಮ್ಝಾ, ಮೊಹಮ್ಮದ್ ಅಬ್ಬಾಸ್, ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ನಸೀಮ್ ಶಾ , ನೊಮಾನ್ ಅಲಿ, ಸೈಮ್ ಅಯೂಬ್, ಸಲ್ಮಾನ್ ಅಲಿ ಅಘಾ.
ಪಾಕಿಸ್ತಾನ್ ಏಕದಿನ ತಂಡ: ಮೊಹಮ್ಮದ್ ರಿಝ್ವಾನ್ (ನಾಯಕ), ಅಬ್ದುಲ್ಲಾ ಶಫೀಕ್, ಅಬ್ರಾರ್ ಅಹ್ಮದ್, ಬಾಬರ್ ಆಝಂ, ಹ್ಯಾರಿಸ್ ರೌಫ್, ಕಮ್ರಾನ್ ಗುಲಾಮ್, ಮೊಹಮ್ಮದ್ ಹಸ್ನೇನ್, ಮುಹಮ್ಮದ್ ಇರ್ಫಾನ್ ಖಾನ್, ನಸೀಮ್ ಶಾ, ಸೈಮ್ ಅಯೂಬ್, ಸಲ್ಮಾನ್ ಅಲಿ ಅಘಾ, ಶಾಹೀನ್ ಅಫ್ರಿದಿ, ಸುಫಿಯಾನ್ ಮುಖೀಮ್, ತಯ್ಯಬ್ ತಾಹಿರ್, ಉಸ್ಮಾನ್ ಖಾನ್ (ವಿಕೆಟ್ ಕೀಪರ್).
ಇದನ್ನೂ ಓದಿ: ಕೇವಲ 3 ರನ್ಗೆ 5 ವಿಕೆಟ್: ಟಿ20 ಕ್ರಿಕೆಟ್ನಲ್ಲಿ ಸೂಫಿಯಾನ್ ವಿಶ್ವ ದಾಖಲೆ
ಪಾಕಿಸ್ತಾನ್ ಟಿ20 ತಂಡ: ಮೊಹಮ್ಮದ್ ರಿಝ್ವಾನ್ (ನಾಯಕ), ಅಬ್ರಾರ್ ಅಹ್ಮದ್, ಬಾಬರ್ ಆಝಂ, ಹ್ಯಾರಿಸ್ ರೌಫ್, ಜಹಂದಾದ್ ಖಾನ್, ಮೊಹಮ್ಮದ್ ಅಬ್ಬಾಸ್ ಅಫ್ರಿದಿ, ಮೊಹಮ್ಮದ್ ಹಸ್ನೇನ್, ಮುಹಮ್ಮದ್ ಇರ್ಫಾನ್ ಖಾನ್, ಒಮೈರ್ ಬಿನ್ ಯೂಸುಫ್, ಸೈಮ್ ಅಯ್ಯೂಬ್, ಸಲ್ಮಾನ್ ಅಲಿ ಅಘಾ, ಸೂಫಿಯಾನ್ ಮುಖೀಮ್, ಶಾಹೀನ್ ಅಫ್ರಿದಿ, ತಯ್ಯಬ್ ತಾಹಿರ್ ಮತ್ತು ಉಸ್ಮಾನ್ ಖಾನ್ (ವಿಕೆಟ್ ಕೀಪರ್)