
T20 World Cup 2025: ಟಿ20 ವಿಶ್ವಕಪ್ನ ಸೂಪರ್-8 ಸುತ್ತಿನ ಗ್ರೂಪ್-2 ರಿಂದ ಇಂಗ್ಲೆಂಡ್ ತಂಡವು ಸೆಮಿಫೈನಲ್ಗೆ ಪ್ರವೇಶಿಸಿದರೆ, ಶ್ರೀಲಂಕಾ ತಂಡವು ಎಲಿಮಿನೇಟ್ ಆಗಿದೆ. ಇದೀಗ ದ್ವಿತೀಯ ತಂಡವಾಗಿ ಸೆಮಿಫೈನಲ್ಗೇರಲು ಪಾಕಿಸ್ತಾನ್ ಮತ್ತು ನ್ಯೂಝಿಲೆಂಡ್ ನಡುವೆ ಪೈಪೋಟಿ ಏರ್ಪಟ್ಟಿದೆ. ಈ ಪೈಪೋಟಿಯಲ್ಲಿ ನಿರ್ಣಾಯಕ ಪಾತ್ರವಹಿಸುವುದು ಇಂಗ್ಲೆಂಡ್ ಎಂಬುದು ವಿಶೇಷ.
ಅಂದರೆ ಇಂಗ್ಲೆಂಡ್ ತಂಡವು ನ್ಯೂಝಿಲೆಂಡ್ ಅನ್ನು ಮಣಿಸಿದರೆ ಮಾತ್ರ ಪಾಕಿಸ್ತಾನ್ ತಂಡಕ್ಕೆ ಸೆಮಿಫೈನಲ್ಗೇರಲು ಅವಕಾಶ ದೊರೆಯಲಿದೆ. ಹೀಗಾಗಿ ಪಾಕ್ ತಂಡವು ಇಂಗ್ಲೆಂಡ್ ತಂಡದ ಗೆಲುವನ್ನು ಎದುರು ನೋಡಲಿದೆ.
ಒಂದು ವೇಳೆ ಇಂಗ್ಲೆಂಡ್ ತಂಡ ಗೆದ್ದರೂ ಪಾಕಿಸ್ತಾನ್ ತಂಡಕ್ಕೆ ನೇರವಾಗಿ ಸೆಮಿಫೈನಲ್ಗೇರಲು ಅವಕಾಶ ದೊರೆಯುವುದಿಲ್ಲ. ಬದಲಾಗಿ ಶ್ರೀಲಂಕಾ ವಿರುದ್ಧ ಅಮೋಘ ಜಯ ಸಾಧಿಸಿ ನೆಟ್ ರನ್ ರೇಟ್ ಅನ್ನು ಹೆಚ್ಚಿಸಿಕೊಳ್ಳಲೇಬೇಕು. ಹಾಗಿದ್ರೆ ಪಾಕ್ ತಂಡದ ಸೆಮಿಫೈನಲ್ ಹಾದಿಯ ಲೆಕ್ಕಾಚಾರ ಹೇಗಿದೆ ಎಂದು ನೋಡುವುದಾದರೆ…
ಒಂದು ವೇಳೆ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡಿ ನ್ಯೂಝಿಲೆಂಡ್ ತಂಡವನ್ನು ಸುಮಾರು 40 ರನ್‌ಗಳಿಂದ ಸೋಲಿಸಿದೆ ಎಂದು ಭಾವಿಸೋಣ. ಆಗ ಪಾಕಿಸ್ತಾನಕ್ಕೆ ಶ್ರೀಲಂಕಾ ವಿರುದ್ಧ ಈ ಕೆಳಗಿನ ಚೇಸಿಂಗ್ ಟಾರ್ಗೆಟ್ ಇರಲಿದೆ.
ಅಂದರೆ ರನ್‌ಗಳ ಅಂತರದ ಗೆಲುವಿನ ಲೆಕ್ಕಾಚಾರ ನೋಡುವುದಾದರೆ ನ್ಯೂಝಿಲೆಂಡ್ ತಂಡವನ್ನು ನೆಟ್ ರನ್ ರೇಟ್ನಲ್ಲಿ ಹಿಂದಿಕ್ಕಲು ಪಾಕಿಸ್ತಾನ್ ಕನಿಷ್ಠ 70 ರನ್‌ಗಳ ಅಂತರದಿಂದ ಗೆಲ್ಲಬೇಕು. ಇನ್ನು ಓವರ್‌ಗಳ ಲೆಕ್ಕಾಚಾರದಲ್ಲಿ ನೋಡುವುದಾದರೆ 12 ರಿಂದ 13 ಓವರ್ಗಳಲ್ಲಿ 160 ರನ್‌ಗಳ ಗುರಿ ಬೆನ್ನತ್ತಬೇಕು. ಅಂದರೆ ಶ್ರೀಲಂಕಾ ವಿರುದ್ಧ ಕನಿಷ್ಠ 40 ರಿಂದ 45 ಎಸೆತಗಳು ಬಾಕಿ ಇರುವಂತೆ ಪಾಕಿಸ್ತಾನ್ ತಂಡ ಗೆದ್ದರೆ ಮಾತ್ರ ನೆಟ್ ರನ್ ರೇಟ್ನಲ್ಲಿ ನ್ಯೂಝಿಲೆಂಡ್ ತಂಡವನ್ನು ಹಿಂದಿಕ್ಕಬಹುದು.
ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಇಂಗ್ಲೆಂಡ್ ತಂಡವು ನ್ಯೂಝಿಲೆಂಡ್ ಅನ್ನು ಎಷ್ಟು ದೊಡ್ಡ ಅಂತರದಿಂದ ಸೋಲಿಸುತ್ತದೆಯೋ, ಪಾಕಿಸ್ತಾನ ತಂಡಕ್ಕೆ ಚೇಸಿಂಗ್ ಮಾಡುವುದು ಅಷ್ಟು ಸುಲಭವಾಗುತ್ತದೆ. ಅಂದರೆ ನ್ಯೂಝಿಲೆಂಡ್ ತಂಡವು ಇಂಗ್ಲೆಂಡ್ ವಿರುದ್ಧ ಹೀನಾಯವಾಗಿ ಸೋತರೆ ನೆಟ್ ರನ್ ರೇಟ್ ಕುಸಿತವಾಗಲಿದೆ. ಇದರಿಂದ ಪಾಕ್ ತಂಡದ ಟಾರ್ಗೆಟ್ ಕೂಡ ಬದಲಾಗಲಿದೆ.
ಇದನ್ನೂ ಓದಿ: ಹೀಗಾದ್ರೆ ಸೌತ್ ಆಫ್ರಿಕಾ ಕೂಡ ವಿಶ್ವಕಪ್‌ನಿಂದ ಹೊರ ಬೀಳಬಹುದು!
Published On - 8:10 am, Thu, 26 February 26