PSL 2024: ಒಂದೇ ಓವರ್​ನಲ್ಲಿ 27 ರನ್ ಚಚ್ಚಿದ ಪೊಲಾರ್ಡ್​; ಬಾಬರ್ ತಂಡಕ್ಕೆ ಹೀನಾಯ ಸೋಲು

PSL 2024: ಕರಾಚಿ ಕಿಂಗ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಪೇಶಾವರ 19.5 ಓವರ್​ಗಳಲ್ಲಿ 154 ರನ್ ಕಲೆಹಾಕಿತು. 155 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಕರಾಚಿ ತಂಡ ಸುಲಭವಾಗಿ ಗೆಲುವು ಸಾಧಿಸಿತು. ಕರಾಚಿ 16.5 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು.

PSL 2024: ಒಂದೇ ಓವರ್​ನಲ್ಲಿ 27 ರನ್ ಚಚ್ಚಿದ ಪೊಲಾರ್ಡ್​; ಬಾಬರ್ ತಂಡಕ್ಕೆ ಹೀನಾಯ ಸೋಲು
ಪಾಕಿಸ್ತಾನ್ ಸೂಪರ್ ಲೀಗ್‌

Updated on: Feb 21, 2024 | 10:50 PM

ಪ್ರಸ್ತುತ ಪಾಕಿಸ್ತಾನದಲ್ಲಿ 9ನೇ ಆವೃತ್ತಿಯ ಪಾಕಿಸ್ತಾನ್ ಸೂಪರ್ ಲೀಗ್‌ (Pakistan Super League) ನಡೆಯುತ್ತಿದೆ. ಇಂದು ನಡೆದ ಲೀಗ್​ನ ಆರನೇ ಪಂದ್ಯದಲ್ಲಿ ಕರಾಚಿ ಕಿಂಗ್ಸ್ ಮತ್ತು ಪೇಶಾವರ್ ಝಲ್ಮಿ ತಂಡಗಳು (Karachi Kings vs Peshawar Zalmi) ಲಾಹೋರ್‌ನ ಗಡಾಫಿ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪೇಶಾವರ ತಂಡ 154 ರನ್ ಕಲೆಹಾಕಿದರೆ, ಗುರಿ ಬೆನ್ನಟ್ಟಿದ ಕರಾಚಿ ಕಿಂಗ್ಸ್ ತಂಡ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ತಂಡದ ಪರ ವೆಸ್ಟ್ ಇಂಡೀಸ್ ದೈತ್ಯ ಕೀರನ್ ಪೊಲಾರ್ಡ್ (Kieron Pollard) ಒಂದೇ ಓವರ್​ನಲ್ಲಿ ಬರೋಬ್ಬರಿ 27 ರನ್ ಕಲೆಹಾಕಿ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು.

15 ನೇ ಓವರ್​ನಲ್ಲಿ ರನ್​ಗಳ ಮಳೆ

ವಾಸ್ತವವಾಗಿ, ಪೇಶಾವರ್ ಝಲ್ಮಿ ತಂಡದ ವಕಾರ್ ಸಲಾಮ್‌ಖೈಲ್ 15 ನೇ ಓವರ್ ಬೌಲ್ ಮಾಡುವ ಜವಬ್ದಾರಿ ತೆಗೆದುಕೊಂಡರು. ಈ ವೇಳೆ ಸ್ಟ್ರೈಕ್​ನಲ್ಲಿದ್ದ ಕೀರಾನ್ ಪೊಲಾರ್ಡ್, ಓವರ್‌ನ ಮೊದಲ ಎಸೆತದಿಂದಲೇ ದಾಳಿ ನಡೆಸಿದರು. ಪೊಲಾರ್ಡ್ ಓವರ್‌ನ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದರೆ, ಎರಡನೇ ಎಸೆತದಲ್ಲಿ ಸಿಕ್ಸರ್, ಮೂರನೇ ಎಸೆತದಲ್ಲಿ ಬೌಂಡರಿ ಮುಂದಿನ ಎರಡು ಎಸೆತಗಳಲ್ಲಿ ಎರಡು ಸಿಕ್ಸರ್ ಬಾರಿಸಿದರು. ನಂತರ ಕೊನೆಯ ಎಸೆತದಲ್ಲಿ ಪೊಲಾರ್ಡ್ ಸಿಂಗಲ್ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದರು.

ಒಂದು ಓವರ್‌ನಲ್ಲಿ ಬರೋಬ್ಬರಿ 27 ರನ್

ಈ ಮೂಲಕ ಪೊಲಾರ್ಡ್ ಒಂದು ಓವರ್‌ನಲ್ಲಿ ಬರೋಬ್ಬರಿ 27 ರನ್ ಕಲೆಹಾಕಿದರು. ಅಂತಿಮವಾಗಿ ಪೊಲಾರ್ಡ್ 21 ಎಸೆತಗಳಲ್ಲಿ 4 ಬೌಂಡರಿ ಮತ್ತು ಸಿಕ್ಸರ್‌ಗಳ ಸಹಾಯದಿಂದ ಅಜೇಯ 49 ರನ್ ಕಲೆಹಾಕಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಪ್ರಸ್ತುತ ವಿವಿದ ದೇಶಗಳಲ್ಲಿ ಟಿ20 ಲೀಗ್​ನಲ್ಲಿ ಬಾಗವಹಿಸುತ್ತಿರುವ ಕೀರಾನ್ ಪೊಲಾರ್ಡ್ ಐಪಿಎಲ್‌ಗೆ ಮಾತ್ರ ವಿದಾಯ ಹೇಳಿದ್ದಾರೆ. ಹೀಗಾಗಿ ಪೊಲಾರ್ಡ್​ ಮುಂಬೈ ಇಂಡಿಯನ್ಸ್‌ನ ಕೋಚಿಂಗ್ ಸ್ಟಾಫ್‌ನ ಭಾಗವಾಗಿದ್ದು ತಂಡದ ಬ್ಯಾಟಿಂಗ್ ಕೋಚ್ ಆಗಿದ್ದಾರೆ.

ಒಂದೇ ಓವರ್​ನಲ್ಲಿ 100 ಮೀಟರ್​ಗೂ ಅಧಿಕ ಉದ್ದದ 4 ಸಿಕ್ಸರ್ ಸಿಡಿಸಿದ ಪೊಲಾರ್ಡ್​! ವಿಡಿಯೋ ನೋಡಿ

ಪಂದ್ಯ ಹೀಗಿತ್ತು

ಕರಾಚಿ ಕಿಂಗ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಪೇಶಾವರ 19.5 ಓವರ್​ಗಳಲ್ಲಿ 154 ರನ್ ಕಲೆಹಾಕಿತು. ತಂಡದ ಪರ ನಾಯಕ ಬಾಬರ್ ಆಝಂ 72 ರನ್​ಗಳ ಸ್ಫೋಟಕ ಇನಿಂಗ್ಸ್ ಆಡಿದರೆ, ಮತ್ತೊಬ್ಬ ವಿಂಡೀಸ್ ಆಟಗಾರ ರೋವ್ಮನ್ ಪೊವೆಲ್ ಕೂಡ 39 ರನ್​ಗಳ ಕೊಡುಗೆ ನಿಡಿದರು. ಆದರೆ 155 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಕರಾಚಿ ತಂಡ ಸುಲಭವಾಗಿ ಗೆಲುವು ಸಾಧಿಸಿತು. ಕರಾಚಿ 16.5 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು. ಪೊಲಾರ್ಡ್ ಹೊರತಾಗಿ, ಜೇಮ್ಸ್ ವಿನ್ಸ್ ಕೂಡ ಕರಾಚಿ ಪರ 38 ರನ್​ಗಳ ಉತ್ತಮ ಇನ್ನಿಂಗ್ಸ್ ಆಡಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ