ಮುಲ್ತಾನ್ನಲ್ಲಿ ನಡೆದ ಏಷ್ಯಾಕಪ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 6 ವಿಕೆಟ್ ನಷ್ಟಕ್ಕೆ 342 ರನ್ ಕಲೆಹಾಕಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ನೇಪಾಳ ಬ್ಯಾಟರ್ಗಳು ಪಾಕ್ ತಂಡದ ಮಾರಕ ಬೌಲಿಂಗ್ ಮುಂದೆ ಕ್ರೀಸ್ ಕಚ್ಚಿ ನಿಲ್ಲಲು ಪರದಾಡಿದರು. ಅಲ್ಲದೆ 23.4 ಓವರ್ಗಳಲ್ಲಿ 104 ರನ್ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲನುಭವಿಸಿದೆ. ಇದರೊಂದಿಗೆ ಮೊದಲ ಪಂದ್ಯದಲ್ಲಿ ಬರೋಬ್ಬರಿ 238 ರನ್ಗಳ ಭರ್ಜರಿ ಜಯ ಸಾಧಿಸಿ ಪಾಕಿಸ್ತಾನ್ ಏಷ್ಯಾಕಪ್ ಅಭಿಯಾನ ಆರಂಭಿಸಿದೆ.
ಪಾಕಿಸ್ತಾನ್ ಪ್ಲೇಯಿಂಗ್ 11: ಫಖರ್ ಝಮಾನ್ , ಇಮಾಮ್-ಉಲ್-ಹಕ್ , ಬಾಬರ್ ಆಝಮ್ (ನಾಯಕ) , ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್) , ಅಘಾ ಸಲ್ಮಾನ್ , ಇಫ್ತಿಕರ್ ಅಹ್ಮದ್ , ಶಾದಾಬ್ ಖಾನ್ , ಮೊಹಮ್ಮದ್ ನವಾಜ್ , ಶಾಹೀನ್ ಅಫ್ರಿದಿ , ನಸೀಮ್ ಶಾ , ಹರಿಸ್ ರೌಫ್.
ನೇಪಾಳ ಪ್ಲೇಯಿಂಗ್ 11: ಕುಶಾಲ್ ಭುರ್ಟೆಲ್ , ಆಸಿಫ್ ಶೇಖ್ (ವಿಕೆಟ್ ಕೀಪರ್) , ರೋಹಿತ್ ಪೌಡೆಲ್ (ನಾಯಕ) , ಆರಿಫ್ ಶೇಖ್ , ಕುಶಾಲ್ ಮಲ್ಲಾ , ದೀಪೇಂದ್ರ ಸಿಂಗ್ ಐರಿ , ಗುಲ್ಸನ್ ಝಾ , ಸೋಂಪಾಲ್ ಕಾಮಿ , ಕರಣ್ ಕೆಸಿ , ಸಂದೀಪ್ ಲಮಿಚಾನೆ , ಲಲಿತ್ ರಾಜಬನ್ಶಿ.
ಪಾಕಿಸ್ತಾನ್ ನೀಡಿದ 343 ರನ್ಗಳ ಟಾರ್ಗೆಟ್ ಅನ್ನು ಬೆನ್ನತ್ತಿದ ನೇಪಾಳ ತಂಡವು ಕೇವಲ 104 ರನ್ಗಳಿಗೆ ಸರ್ವಪತನ ಕಂಡಿದೆ. ಇದರೊಂದಿಗೆ ಪಾಕಿಸ್ತಾನ್ ತಂಡವು 238 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಅಮೋಘ ಗೆಲುವಿನೊಂದಿಗೆ ಪಾಕಿಸ್ತಾನ್ ತಂಡವು ಏಷ್ಯಾಕಪ್ ಅಭಿಯಾನ ಆರಂಭಿಸಿರುವುದು ವಿಶೇಷ.
ನವಾಝ್ ಎಸೆತದಲ್ಲಿ ಸಿಕ್ಸ್ ಸಿಡಿಸಿದ ಕುಶಾಲ್ ಶಾದಾಬ್ ಎಸೆತದಲ್ಲಿ ಔಟ್. 24ನೇ ಓವರ್ನ 2ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಇಫ್ತಿಕರ್ ಅಹ್ಮದ್ಗೆ ಕ್ಯಾಚ್ ನೀಡಿದ ಕುಶಾಲ್. ಇದರೊಂದಿಗೆ ನೇಪಾಳ ತಂಡದ 9ನೇ ವಿಕೆಟ್ ಪತನ.
ಮೊಹಮ್ಮದ್ ನವಾಝ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಕುಶಾಲ್. 23ನೇ ಓವರ್ನ 5ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಸಿಕ್ಸ್ ಬಾರಿಸಿ ತಂಡದ ಮೊತ್ತವನ್ನು 100 ರ ಗಡಿದಾಟಿಸಿದರು. ಇನ್ನು 27 ಓವರ್ಗಳಲ್ಲಿ ನೇಪಾಳ ತಂಡಕ್ಕೆ 239 ರನ್ಗಳ ಅವಶ್ಯಕತೆಯಿದೆ. ಆದರೆ ಅತ್ತ ಪಾಕಿಸ್ತಾನ್ ತಂಡಕ್ಕೆ ಗೆಲ್ಲಲು ಕೇವಲ 2 ವಿಕೆಟ್ಗಳ ಅವಶ್ಯಕತೆ.
ಅತ್ಯದ್ಭುತ ಕ್ಯಾಚ್ ಹಿಡಿದ ಫಖರ್ ಝಮಾನ್. ಶಾದಾಬ್ ಖಾನ್ ಎಸೆತದಲ್ಲಿ ಲೆಗ್ ಸೈಡ್ನತ್ತ ಬಾರಿಸಿದ ಗುಲ್ಶಾನ್. ಬೌಂಡರಿ ಲೈನ್ನಿಂದ ಓಡಿ ಬಂದು ಫಾವರ್ಡ್ ಡೈವಿಂಗ್ ಕ್ಯಾಚ್ ಹಿಡಿದಿದ ಫಖರ್ ಝಮಾನ್. ನೇಪಾಳ ತಂಡದ 7ನೇ ವಿಕೆಟ್ ಪತನ. ಇದರ ಬೆನ್ನಲ್ಲೇ ಶಾದಾಬ್ ಎಸೆತದಲ್ಲಿ ಸಂದೀಪ್ ಲಾಮಿಚಾನೆ (0) ಕ್ಲೀನ್ ಬೌಲ್ಡ್. ನೇಪಾಳ ತಂಡದ 8 ವಿಕೆಟ್ ಪತನ.
ಮೊಹಮ್ಮದ್ ನವಾಝ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ದೀಪೇಂದ್ರ ಸಿಂಗ್. 21ನೇ ಓವರ್ನ 5ನೇ ಎಸೆತದಲ್ಲಿ ಪಾಕಿಸ್ತಾನ್ ತಂಡಕ್ಕೆ 6ನೇ ಯಶಸ್ಸು ತಂದುಕೊಟ್ಟ ನವಾಝ್. ಆರು ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿದ ನೇಪಾಳ ತಂಡ.
ನೇಪಾಳ ಇನಿಂಗ್ಸ್ನ 20 ಓವರ್ಗಳು ಮುಕ್ತಾಯಗೊಂಡಿವೆ. 120 ಎಸೆತಗಳಲ್ಲಿ ನೇಪಾಳ ತಂಡವು 88 ರನ್ ಕಲೆಹಾಕಿದೆ. ಇದೇ ವೇಳೆ 5 ವಿಕೆಟ್ ಕಳೆದುಕೊಂಡಿದೆ. ಇನ್ನು 30 ಓವರ್ಗಳಲ್ಲಿ ಗೆಲ್ಲಲು 255 ರನ್ ಕಲೆಹಾಕಬೇಕಿದೆ.
ನೇಪಾಳ ತಂಡದ 5ನೇ ವಿಕೆಟ್ ಪತನಗೊಂಡಿದೆ. ಪಾಕ್ ವೇಗಿ ಹ್ಯಾರಿಸ್ ರೌಫ್ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ಸೋಂಪಲ್ (28) ನಿರ್ಗಮಿಸಿದ್ದಾರೆ. ಇದು ಹ್ಯಾರಿಸ್ ರೌಫ್ಗೆ 2ನೇ ವಿಕೆಟ್. ಇದಕ್ಕೂ ಮುನ್ನ ಆರಿಫ್ ಶೇಖ್ ವಿಕೆಟ್ ಕಬಳಿಸಿದ್ದರು.
ಹ್ಯಾರಿಸ್ ರೌಫ್ ಬೆಂಕಿ ಬೌಲಿಂಗ್ಗೆ ಆರಿಫ್ ಶೇಖ್ ಕ್ಲೀನ್ ಬೌಲ್ಡ್. 15ನೇ ಓವರ್ನ 4 ಎಸೆತದಲ್ಲಿ ಮಿಡಲ್ ಸ್ಟಂಪ್ ಎಗರಿಸಿದ ರೌಫ್. 38 ಎಸೆತಗಳಲ್ಲಿ 24 ರನ್ಗಳಿಸಿ ನಿರ್ಗಮಿಸಿದ ಆರಿಫ್ ಶೇಖ್. 4 ವಿಕೆಟ್ ಕಳೆದುಕೊಂಡು 73 ರನ್ ಕಲೆಹಾಕಿರುವ ನೇಪಾಳ ತಂಡ.
ಸ್ಪಿನ್ನರ್ ಶಾದಾಬ್ ಖಾನ್ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಫೋರ್ ಬಾರಿಸಿದ ಸೋಂಪಲ್. ಈ ಫೋರ್ನೊಂದಿಗೆ ನೇಪಾಳ ತಂಡದ ಮೊತ್ತ 72 ಕ್ಕೇರಿದರು. ಸದ್ಯ ಕ್ರೀಸ್ನಲ್ಲಿ ಆರಿಫ್ ಶೇಖ್ ಹಾಗೂ ಸೋಂಪಲ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
ನೇಪಾಳ ಇನಿಂಗ್ಸ್ನ ಮೊದಲ 10 ಓವರ್ ಮುಕ್ತಾಯವಾಗಿದೆ. 60 ಎಸೆತಗಳಲ್ಲಿ 3 ವಿಕೆಟ್ ಕಳೆದುಕೊಂಡು 47 ರನ್ ಕಲೆಹಾಕಲಷ್ಟೇ ಶಕ್ತರಾಗಿದ್ದಾರೆ. ಅತ್ತ ಪಾಕಿಸ್ತಾನ್ ಪರ ಶಾಹೀನ್ ಅಫ್ರಿದಿ ಹಾಗೂ ನಸೀಮ್ ಶಾ ಕ್ರಮವಾಗಿ 2 ಹಾಗೂ 1 ವಿಕೆಟ್ ಕಬಳಿಸಿದ್ದಾರೆ. ಸದ್ಯ ಕ್ರೀಸ್ನಲ್ಲಿ ಆರಿಫ್ ಶೇಖ್ ಹಾಗೂ ಸೋಂಪಲ್ ಬ್ಯಾಟಿಂಗ್ ಮಾಡುತ್ತಿದ್ದು, ಗೆಲ್ಲಲು 40 ಓವರ್ಗಳಲ್ಲಿ 296 ರನ್ಗಳ ಅವಶ್ಯಕತೆಯಿದೆ.
8 ಓವರ್ ಮುಕ್ತಾಯದ ವೇಳೆಗೆ 42 ರನ್ ಕಲೆಹಾಕಿದ ನೇಪಾಳ ತಂಡ. ಶಾಹೀನ್ ಅಫ್ರಿದಿ ಹಾಗೂ ನಸೀಮ್ ಶಾ ರಿಂದ ತಲಾ 4 ಓವರ್ಗಳನ್ನು ಮಾಡಿಸಿದ ಬಾಬರ್ ಆಝಂ. 4 ಓವರ್ಗಳಲ್ಲಿ 2 ವಿಕೆಟ್ ಕಬಳಿಸಿದ ಎಡಗೈ ವೇಗಿ ಶಾಹೀನ್ ಅಫ್ರಿದಿ. 1 ವಿಕೆಟ್ ಪಡೆದಿರು ನಸೀಮ್ ಶಾ. ಕ್ರೀಸ್ನಲ್ಲಿ ಆರಿಫ್ ಶೇಖ್ (10) ಹಾಗೂ ಸೋಂಪಲ್ (14) ಬ್ಯಾಟಿಂಗ್.
ಮೊದಲ ಐದು ಓವರ್ಗಳಲ್ಲೇ ಅಗ್ರ ಕ್ರಮಾಂಕದ ಮೂರು ವಿಕೆಟ್ಗಳನ್ನು ಕಳೆದುಕೊಂಡ ನೇಪಾಳ ತಂಡ. ಶಾಹೀನ್ ಅಫ್ರಿದಿ 2 ವಿಕೆಟ್ ಪಡೆದರೆ, ನಸೀನ್ ಶಾ 1 ವಿಕೆಟ್ ಕಬಳಿಸಿದ್ದಾರೆ. ಇದೀಗ ಕ್ರೀಸ್ನಲ್ಲಿ ಆರಿಫ್ ಶೇಖ್ ಹಾಗೂ ಸೋಂಪಲ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
ನಸೀಮ್ ಶಾ ಎಸೆದ 2ನೇ ಓವರ್ನಲ್ಲಿ ಸ್ಲಿಪ್ನಲ್ಲಿ ಕ್ಯಾಚ್ ನೀಡಿ ಹೊರನಡೆದ ಆಸಿಫ್ ಶೇಖ್. ಕೇವಲ 4 ರನ್ ನೀಡಿ ಪಾಕಿಸ್ತಾನ್ ತಂಡಕ್ಕೆ ಮೂರನೇ ಯಶಸ್ಸು ತಂದುಕೊಟ್ಟ ಯುವ ವೇಗಿ ನಸೀಮ್ ಶಾ. ಮೊದಲ 2 ಓವರ್ಗಳಲ್ಲೇ 3 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಗಿರುವ ನೇಪಾಳ ತಂಡ.
ಮೊದಲ ಓವರ್ನಲ್ಲೇ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಕುಶಾಲ್. ಶಾಹೀನ್ ಅಫ್ರಿದಿ ಎಸೆದ ಮೊದಲ ಓವರ್ನ ಎಸೆತದಲ್ಲೇ ಫೋರ್ ಬಾರಿಸಿ ತಂಡದ ಖಾತೆ ತೆರೆದರು. ಇದರ ಬೆನ್ನಲ್ಲೇ ಮತ್ತೊಂದು ಬೌಂಡರಿ ಸಿಡಿಸಿದರು. ಆದರೆ ಕುಶಾಲ್ (8) ವಿಕೆಟ್ ಪಡೆಯುವಲ್ಲಿ ಅಫ್ರಿದಿ ಯಶಸ್ವಿಯಾದರು. ಇನ್ನು ಕೊನೆಯ ಎಸೆತದಲ್ಲಿ ರೋಹಿತ್ ಪೌಡೆಲ್ (0) ರನ್ನು ಎಲ್ಬಿ ಬಲೆಗೆ ಕೆಡವಿದ ಶಾಹೀನ್ ಪಾಕ್ ತಂಡಕ್ಕೆ 2ನೇ ಯಶಸ್ಸು ತಂದುಕೊಟ್ಟರು.
Thrilling 1st Innings: Pakistan 342/6 (50 overs) 🔥
Nepal’s turn to chase history against a strong Pakistani bowling line-up! Can they do the unthinkable? We are in for a cracker! #AsiaCup2023 #PAKvNEP pic.twitter.com/eV1lyCItdX
— AsianCricketCouncil (@ACCMedia1) August 30, 2023
ಏಷ್ಯಾಕಪ್ನಲ್ಲಿನ ತನ್ನ ಚೊಚ್ಚಲ ಪಂದ್ಯದಲ್ಲೇ 343 ರನ್ಗಳ ಕಠಿಣ ಗುರಿ ಪಡೆದ ನೇಪಾಳ ತಂಡ. ಈ ಗುರಿ ಬೆನ್ನತ್ತಿದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಆದರೆ ಅನಾನುಭವಿ ಆಟಗಾರರನ್ನು ಒಳಗೊಂಡಿರುವ ನೇಪಾಳ ತಂಡವು ಪಾಕ್ ಬೌಲರ್ಗಳ ಮುಂದೆ ಕ್ರೀಸ್ ಕಚ್ಚಿ ನಿಲ್ಲುವುದೇ ದೊಡ್ಡ ಸವಾಲಾಗಿ ಪರಿಣಮಿಸಲಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡದ ಪರ ನಾಯಕ ಬಾಬರ್ ಆಝಂ 131 ಎಸೆತಗಳಲ್ಲಿ 151 ರನ್ ಬಾರಿಸಿದರು. ಇನ್ನು ಮಧ್ಯಮ ಕ್ರಮಾಂಕದ ಬ್ಯಾಟರ್ ಇಫ್ತಿಕರ್ ಅಹ್ಮದ್ ಕೇವಲ 71 ಎಸೆತಗಳಲ್ಲಿ ಅಜೇಯ 109 ರನ್ ಸಿಡಿಸಿದರು. ಈ ಎರಡು ಭರ್ಜರಿ ಶತಕಗಳ ನೆರವಿನಿಂದ ಪಾಕಿಸ್ತಾನ್ ತಂಡವು ನಿಗದಿತ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 342 ರನ್ ಪೇರಿಸಿದೆ.
ರಾಜಬನ್ಶಿ ಎಸೆತದಲ್ಲಿ ಡೀಪ್ ಎಕ್ಸ್ಟ್ರಾ ಕವರ್ನತ್ತ ಫೋರ್ ಬಾರಿಸಿದ ಇಫ್ತಿಕರ್
98 ಎಸೆತಗಳಲ್ಲಿ 93 ರನ್ಗಳಿಸಿ ಕ್ರೀಸ್ನಲ್ಲಿರುವ ಬಾಬರ್ ಆಝಂ
ಕ್ರೀಸ್ನಲ್ಲಿ ಬಾಬರ್ ಆಝಂ (81) ಹಾಗೂ ಇಫ್ತಿಕರ್ ಅಹ್ಮದ್ (24) ಬ್ಯಾಟಿಂಗ್
ಸೊಂಪಲ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಇಫ್ತಿಕರ್
ಕುಶಾಲ್ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಫೋರ್ ಬಾರಿಸಿದ ಇಫ್ತಿಕರ್ ಅಹ್ಮದ್
33 ಓವರ್ಗಳ ಮುಕ್ತಾಯದ ವೇಳೆ 157 ರನ್ ಕಲೆಹಾಕಿದ ಪಾಕಿಸ್ತಾನ್
ಅರ್ಧಶತಕ ಪೂರೈಸಿ ಬ್ಯಾಟಿಂಗ್ ಮುಂದುವರೆಸಿರುವ ಬಾಬರ್ ಆಝಂ ಕ್ರೀಸ್ನಲ್ಲಿದ್ದಾರೆ.
ನಾಯಕನಿಗೆ ಉತ್ತಮ ಸಾಥ್ ನೀಡುತ್ತಾ ಇಫ್ತಿಕರ್ ಅಹ್ಮದ್ ಬ್ಯಾಟಿಂಗ್ ಮುಂದುವರೆಸಿದ್ದಾರೆ.
ಕ್ರೀಸ್ನಲ್ಲಿ ಬಾಬರ್ ಆಝಂ (61) ಹಾಗೂ ಇಫ್ತಿಕರ್ (3) ಬ್ಯಾಟಿಂಗ್
ರಾಜ್ಬನ್ಶಿ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಬಾಬರ್ ಆಝಂ
73 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಬಾಬರ್ ಆಝಂ
ತಮ್ಮ ಇನಿಂಗ್ಸ್ನಲ್ಲಿ ಕೇವಲ 4 ಫೋರ್ಗಳನ್ನು ಬಾರಿಸಿರುವ ಬಾಬರ್
ಸಂದೀಪ್ ಲಾಮಿಚಾನೆ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದ ಸಲ್ಮಾನ್ ಆಘಾ (5)
ದೀಪೇಂದ್ರ ಸಿಂಗ್ ಉತ್ತಮ ಫೀಲ್ಡಿಂಗ್…ವಿಕೆಟ್ಗೆ ಡೈರೆಕ್ಟ್ ಹಿಟ್….ಮೊಹಮ್ಮದ್ ರಿಝ್ವಾನ್ ಔಟ್
50 ಎಸೆತಗಳಲ್ಲಿ 44 ರನ್ ಬಾರಿಸಿ ನಿರ್ಗಮಿಸಿದ ರಿಝ್ವಾನ್
ಲಾಮಿಚಾನೆ ಎಸೆದ ಫುಲ್ ಟಾಸ್ ಎಸೆತವನ್ನು ಮಿಡ್ ಆನ್ನತ್ತ ಬೌಂಡರಿಗೆ ತಲುಪಿಸಿದ ರಿಝ್ವಾನ್
ದೀಪೇಂದ್ರ ಎಸೆತದಲ್ಲಿ ಆಕರ್ಷಕ ಫೋರ್ ಬಾರಿಸಿದ ತಂಡದ ಮೊತ್ತವನ್ನು 100 ಕ್ಕೇರಿಸಿದ ಬಾಬರ್ ಆಝಂ
ದೀಪೇಂದ್ರ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿ 20ನೇ ಓವರ್ ಕೊನೆಗೊಳಿಸಿದ ರಿಝ್ವಾನ್
20 ಓವರ್ಗಳಲ್ಲಿ 4.55 ರ ಸರಾಸರಿಯಲ್ಲಿ ರನ್ ಕಲೆಹಾಕಿದ ಪಾಕಿಸ್ತಾನ್
ಕ್ರೀಸ್ನಲ್ಲಿ ಬಾಬರ್-ರಿಝ್ವಾನ್ ಬ್ಯಾಟಿಂಗ್
15 ಓವರ್ಗಳಲ್ಲಿ 72 ರನ್ ಕಲೆಹಾಕಿದ ಪಾಕಿಸ್ತಾನ್
ಕ್ರೀಸ್ನಲ್ಲಿ ಬಾಬರ್ ಆಝಂ ಹಾಗೂ ರಿಝ್ವಾನ್ ಬ್ಯಾಟಿಂಗ್
ಫಖರ್ ಝಮಾನ್ (14) ಹಾಗೂ ಇಮಾಮ್ ಉಲ್ ಜಕ್ (5) ಔಟ್
ಲಲಿತ್ ಎಸೆತದಲ್ಲಿ ಫೈನ್ ಲೆಗ್ನತ್ತ ಬೌಂಡರಿ ಬಾರಿಸಿದ ರಿಝ್ವಾನ್
ಮೊದಲ 10 ಓವರ್ಗಳಲ್ಲಿ ಕೇವಲ 44 ರನ್ ನೀಡಿದ ನೇಪಾಳ
ಕ್ರೀಸ್ನಲ್ಲಿ ಬಾಬರ್ 12 ಹಾಗೂ ರಿಝ್ವಾನ್ 7 ಬ್ಯಾಟಿಂಗ್
ಇಮಾಮ್ ಉಲ್ ಹಕ್ ಹಾಗೂ ಫಖರ್ ಝಮಾನ್ ಔಟ್
ಮೊದಲ 8 ಓವರ್ಗಳಲ್ಲಿ ಕೇವಲ 36 ರನ್ ನೀಡಿದ ನೇಪಾಳ ಬೌಲರ್ಗಳು
ಕ್ರೀಸ್ನಲ್ಲಿ ಬಾಬರ್ ಹಾಗೂ ರಿಝ್ವಾನ್ ಬ್ಯಾಟಿಂಗ್
ತವರು ಪಿಚ್ನಲ್ಲಿ ರನ್ಗಳಿಸಲು ಪರದಾಡುತ್ತಿರುವ ಪಾಕಿಸ್ತಾನ್ ಬ್ಯಾಟರ್ಗಳು
ಕ್ರೀಸ್ನಲ್ಲಿ ಬಾಬರ್ ಆಝಂ ಹಾಗೂ ರಿಝ್ವಾನ್ ಬ್ಯಾಟಿಂಗ್
ನೇಪಾಳ ತಂಡದ ಉತ್ತಮ ಬೌಲಿಂಗ್ ಪ್ರದರ್ಶನ
ನಾಯಕ ರೋಹಿತ್ ಪೌಡೆಲ್ ಅದ್ಭುತ ಫೀಲ್ಡಿಂಗ್…ವಿಕೆಟ್ಗೆ ನೇರ ಎಸೆತ….ಇಮಾಮ್ ಉಲ್ ಹಕ್ (5) ರನೌಟ್
ಕರಣ್ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ನಿರ್ಗಮಿಸಿದ ಫಖರ್ ಝಮಾನ್ (14)
ನೇಪಾಳ ಪರ ಏಷ್ಯಾಕಪ್ನಲ್ಲಿ ಮೊದಲ ವಿಕೆಟ್ ಪಡೆದ ದಾಖಲೆ ಕರಣ್ ಕೆಸಿ ಹೆಸರಿಗೆ ಸೇರ್ಪಡೆ
ನೇಪಾಳ ಪರ ಏಷ್ಯಾಕಪ್ನಲ್ಲಿ ಮೊದಲ ಕ್ಯಾಚ್ ಹಿಡಿದ ದಾಖಲೆ ವಿಕೆಟ್ ಕೀಪರ್ ಆಸಿಫ್ ಶೇಖ್ ಪಾಲು
ಸೊಂಪಲ್ ಎಸೆತದಲ್ಲಿ ಮಿಡ್ ಆನ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಇಮಾಮ್ ಉಲ್ ಹಕ್
ಮೊದಲ 4 ಓವರ್ಗಳಲ್ಲಿ ಕೇವಲ 16 ರನ್ ನೀಡಿದ ನೇಪಾಳ ಬೌಲರ್ಗಳು
ಫಖರ್ ಝಮಾನ್ ಒಟ್ಟು 3 ಫೋರ್ಗಳನ್ನು ಬಾರಿಸಿದ್ದಾರೆ.
ಕ್ರೀಸ್ನಲ್ಲಿ ಫಖರ್ – ಇಮಾಮ್ ಬ್ಯಾಟಿಂಗ್
ಕ್ರೀಸ್ನಲ್ಲಿ ಫಖರ್ ಝಮಾನ್ ಹಾಗೂ ಇಮಾಮ್ ಉಲ್ ಹಕ್ ಬ್ಯಾಟಿಂಗ್
ಸೊಂಪಲ್ ಕಮಿ ಎಸೆದ ಮೊದಲ ಓವರ್ನಲ್ಲೇ ಎರಡು ಫೋರ್ ಬಾರಿಸಿ ಶುಭಾರಂಭ ಮಾಡಿದ ಫಖರ್ ಝಮಾನ್
ಮೊದಲ ಓವರ್ನಲ್ಲಿ 9 ರನ್ ಕಲೆಹಾಕಿದ ಪಾಕಿಸ್ತಾನ್
ಕ್ರೀಸ್ನಲ್ಲಿ ಫಖರ್ ಝಮಾನ್ ಹಾಗೂ ಇಮಾಮ್ ಉಲ್ ಹಕ್ ಬ್ಯಾಟಿಂಗ್
ಪಾಕಿಸ್ತಾನ್ ಪ್ಲೇಯಿಂಗ್ 11: ಫಖರ್ ಝಮಾನ್ , ಇಮಾಮ್-ಉಲ್-ಹಕ್ , ಬಾಬರ್ ಆಝಮ್ (ನಾಯಕ) , ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್) , ಅಘಾ ಸಲ್ಮಾನ್ , ಇಫ್ತಿಕರ್ ಅಹ್ಮದ್ , ಶಾದಾಬ್ ಖಾನ್ , ಮೊಹಮ್ಮದ್ ನವಾಜ್ , ಶಾಹೀನ್ ಅಫ್ರಿದಿ , ನಸೀಮ್ ಶಾ , ಹರಿಸ್ ರೌಫ್.
ನೇಪಾಳ ಪ್ಲೇಯಿಂಗ್ 11: ಕುಶಾಲ್ ಭುರ್ಟೆಲ್ , ಆಸಿಫ್ ಶೇಖ್ (ವಿಕೆಟ್ ಕೀಪರ್) , ರೋಹಿತ್ ಪೌಡೆಲ್ (ನಾಯಕ) , ಆರಿಫ್ ಶೇಖ್ , ಕುಶಾಲ್ ಮಲ್ಲಾ , ದೀಪೇಂದ್ರ ಸಿಂಗ್ ಐರಿ , ಗುಲ್ಸನ್ ಝಾ , ಸೋಂಪಾಲ್ ಕಾಮಿ , ಕರಣ್ ಕೆಸಿ , ಸಂದೀಪ್ ಲಮಿಚಾನೆ , ಲಲಿತ್ ರಾಜಬನ್ಶಿ.
ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಝಂ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
Published On - 3:12 pm, Wed, 30 August 23