ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಅದರಲ್ಲೂ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದಲ್ಲೂ ಸಾಕಷ್ಟು ಅಭಿಮಾನಿಗಳಿರುವುದು ವಿಶೇಷ. ಹೌದು, ಏಷ್ಯಾಕಪ್ನ ಸೂಪರ್-4 ಹಂತದ ಮೊದಲ ಪಂದ್ಯದ ವೇಳೆ ಪಾಕಿಸ್ತಾನ್ ಅಭಿಮಾನಿಯೊಬ್ಬರು ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದರು.
ಪಾಕಿಸ್ತಾನ್ ಹಾಗೂ ಬಾಂಗ್ಲಾದೇಶ್ ನಡುವಣ ಈ ಪಂದ್ಯದ ವೇಳೆ ಪಾಕ್ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದ ಕಿಂಗ್ ಕೊಹ್ಲಿಯ ಅಭಿಮಾನಿ ಎಲ್ಲರ ಗಮನ ಸೆಳೆದಿದ್ದರು. ಇದಕ್ಕೆ ಮುಖ್ಯ ಕಾರಣ ಜೆರ್ಸಿ ಮೇಲೆ ವಿರಾಟ್ ಕೊಹ್ಲಿಯ ಹೆಸರು ಹಾಗೂ ನಂಬರ್ ಬರೆದುಕೊಂಡಿದ್ದು.
ಅಂದರೆ ಲಾಹೋರ್ನಲ್ಲಿ ನಡೆದ ಈ ಪಂದ್ಯದ ವೇಳೆ ಪಾಕ್ ಜೆರ್ಸಿಯಲ್ಲ್ಲಿ ತನ್ನ ನೆಚ್ಚಿನ ಆಟಗಾರ ವಿರಾಟ್ ಕೊಹ್ಲಿಯ ಹೆಸರು ಬರೆಸಿಕೊಂಡು ಆತ ಪಾಕಿಸ್ತಾನ್ ತಂಡವನ್ನು ಬೆಂಬಲಿಸುತ್ತಿರುವುದು ಕಂಡು ಬಂತು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಕಿಂಗ್ ಕೊಹ್ಲಿ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಈ ಹಿಂದೆ ಪಾಕಿಸ್ತಾನ್ ಸೂಪರ್ ಲೀಗ್ನಲ್ಲೂ ವಿರಾಟ್ ಕೊಹ್ಲಿ ಅಭಿಮಾನಿಗಳು ಕಾಣಿಸಿಕೊಂಡಿದ್ದರು. 2022ರ ಪಿಎಸ್ಎಲ್ ಟೂರ್ನಿಯಲ್ಲಿನ ಮುಲ್ತಾನ್ ಸುಲ್ತಾನ್ಸ್ ಮತ್ತು ಕ್ವೆಟ್ಟಾ ಗ್ಲಾಡಿಯೇಟರ್ಸ್ ನಡುವಿನ ಪಂದ್ಯದ ವೇಳೆ ಕೊಹ್ಲಿಯ ಪೋಸ್ಟರ್ಗಳು ರಾರಾಜಿಸಿದ್ದವು. ಮುಲ್ತಾನ್‌ನ ಬ್ಯಾಟ್ಸ್‌ಮನ್‌ಗಳಾದ ಶಾನ್ ಮಸೂದ್ ಮತ್ತು ಮೊಹಮ್ಮದ್ ರಿಜ್ವಾನ್ ಅರ್ಧಶತಕಗಳೊಂದಿಗೆ ಕ್ರೀಸ್‌ನಲ್ಲಿ ಬೌಂಡರಿ ಮತ್ತು ಸಿಕ್ಸರ್‌ಗಳ ಮಳೆಗರೆಯುತ್ತಿದ್ದರು.
ಈ ನಡುವೆ ಕ್ರೀಡಾಂಗಣದಲ್ಲಿ ಪಾಕ್ ಕ್ರಿಕೆಟ್ ಅಭಿಮಾನಿಗಳು ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಪೋಸ್ಟರ್ ಗಳನ್ನೂ ತೋರಿಸಿ ಸಂಭ್ರಮಿಸುತ್ತಿದ್ದರು. ಅಷ್ಟೇ ಅಲ್ಲದೆ ಈ ಪೋಸ್ಟರ್‌ನಲ್ಲಿ ಅಭಿಮಾನಿಯೊಬ್ಬ ಪಾಕಿಸ್ತಾನದಲ್ಲಿ ನಿಮ್ಮ ಶತಕವನ್ನು ನೋಡಬೇಕೆಂದು ಎಂದು ಬರೆಕೊಂಡಿದ್ದರು. ಇದೀಗ ಲಾಹೋರ್ನ ಗಡ್ಡಾಫಿ ಸ್ಟೇಡಿಯಂನಲ್ಲಿ ವಿರಾಟ್ ಕೊಹ್ಲಿಯ ಅಪ್ಪಟ ಅಭಿಮಾನಿಯೊಬ್ಬರು ಕಾಣಿಸಿಕೊಂಡಿರುವುದು ವಿಶೇಷ.
Craze beyond boundaries for King Kohli . Virat Kohli Fan found with a banner in #PSL ! GOAT for the Reason 👑🔥 #KingKohli @imVkohli pic.twitter.com/wxliRCwyEd
— Virat-Vijay Fanatic ❁ (@ViratvijayFan) February 18, 2022
ಸೆಪ್ಟೆಂಬರ್ 10 ರಂದು ನಡೆಯಲಿರುವ ಸೂಪರ್-4 ಹಂತದ ತನ್ನ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನವನ್ನು ಎದುರಿಸಲಿದೆ. ಕೊಲಂಬೊದಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ಶುಭಾರಂಭ ಮಾಡುವ ಇರಾದೆಯಲ್ಲಿದೆ ಟೀಮ್ ಇಂಡಿಯಾ.
ಇದನ್ನೂ ಓದಿ: Virat Kohli: ಕ್ಯಾಚ್ ಹಿಡಿದು ಹಲವು ದಾಖಲೆ ಬರೆದ ವಿರಾಟ್ ಕೊಹ್ಲಿ
ಇದಕ್ಕೂ ಮುನ್ನ ನಡೆದ ಮೊದಲ ಮುಖಾಮುಖಿಯು ಮಳೆಗೆ ಅಹುತಿಯಾಗಿತ್ತು. ಇದೀಗ ಕೊಲಂಬೊ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಹೀಗಾಗಿ ಭಾರತ-ಪಾಕಿಸ್ತಾನ್ ನಡುವಣ ಈ ಪಂದ್ಯ ನಡೆಯಲಿದೆಯಾ ಎಂಬ ಪ್ರಶ್ನೆ ಕೂಡ ಹುಟ್ಟಿಕೊಂಡಿದೆ.
Published On - 8:12 pm, Thu, 7 September 23