ಪಂದ್ಯ ನಡೆಯುತ್ತಿರುವಾಗಲೇ ಮೈದಾನದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ ಪಾಕಿಸ್ತಾನ ಕ್ರಿಕೆಟರ್

ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಅಲ್ಲಿನ ವೈದ್ಯರು ಆ ಆಟಗಾರನನ್ನು ಉಳಿಸಲು ಸಾಧ್ಯವಾಗಲಿಲ್ಲ. ವರದಿಯಲ್ಲಿ ಹೃದಯಾಘಾತದಿಂದ ಶಿನ್ವಾರಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಪಂದ್ಯ ನಡೆಯುತ್ತಿರುವಾಗಲೇ ಮೈದಾನದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ ಪಾಕಿಸ್ತಾನ ಕ್ರಿಕೆಟರ್
TV9kannada Web Team

| Edited By: pruthvi Shankar

Sep 25, 2022 | 6:47 PM

ಪಾಕಿಸ್ತಾನದಲ್ಲಿ ನಡೆದ ಕ್ರಿಕೆಟ್ ಪಂದ್ಯವೊಂದು ಇದ್ದಕ್ಕಿದ್ದಂತೆ ಎಲ್ಲಾ ಆಟಗಾರರಿಗೆ ದುಃಸ್ವಪ್ನವಾಗಿ ಮಾರ್ಪಟ್ಟಿದೆ. ಪಾಕಿಸ್ತಾನದ ಲಾಹೋರ್‌ನಲ್ಲಿ ನಡೆದ ಈ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ಆಟಗಾರನೊಬ್ಬ ಹಠಾತ್ತನೆ ಮೈದಾನದಲ್ಲಿ ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಪಾಕಿಸ್ತಾನಿ ಪತ್ರಕರ್ತರು ಉಲ್ಲೇಖಿಸಿದ ಮಾಹಿತಿಯ ಪ್ರಕಾರ, ಈ ಆಟಗಾರನಿಗೆ ಪಂದ್ಯ ನಡೆಯುತ್ತಿರುವಾಗಲೇ ಹೃದಯಾಘಾತ ಸಂಭವಿಸಿದ್ದು, ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಈ ಕ್ರಿಕೆಟಿಗನ ಸಾವು ಅಲ್ಲಿದ್ದ ಎಲ್ಲ ಆಟಗಾರರನ್ನು ತಲ್ಲಣಗೊಳಿಸಿದ್ದಲ್ಲದೆ ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಪಂದ್ಯ ನಡೆಯುತ್ತಿರುವಾಗಲೇ ಅಹಿತಕರ ಘಟನೆ

ಮಾಹಿತಿಯ ಪ್ರಕಾರ, ಈ ಪಂದ್ಯವು ಲಾಹೋರ್‌ನ ಪ್ರಸಿದ್ಧ ಜುಬಿಲಿ ಕ್ರಿಕೆಟ್ ಮೈದಾನದಲ್ಲಿ ಸೆಪ್ಟೆಂಬರ್ 25 ಭಾನುವಾರದಂದು ನಡೆಯುತ್ತಿತ್ತು. ಪಾಕಿಸ್ತಾನ ಕಾರ್ಪೊರೇಟ್ ಲೀಗ್ ಅಡಿಯಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಬರ್ಗರ್ ಪೇಂಟ್ಸ್ ಮತ್ತು ಫ್ರೈಸ್‌ಲ್ಯಾಂಡ್ ತಂಡಗಳು ಮುಖಾಮುಖಿಯಾಗಿದ್ದವು. ಈ ವೇಳೆ ಬರ್ಗರ್ ಪೇಂಟ್ಸ್ ತಂಡ ಬ್ಯಾಟಿಂಗ್ ನಡೆಯುತ್ತಿತ್ತು. ಆಗ ಏಕಾಏಕಿ ಮೈದಾನದಲ್ಲಿದ್ದ ಫ್ರೈಸ್ ಲ್ಯಾಂಡ್ ತಂಡದ ಫೀಲ್ಡರ್ ಉಸ್ಮಾನ್ ಶಿನ್ವಾರಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.

ಹೃದಯಾಘಾತದಿಂದ ಸಾವು

ಈ ದೃಶ್ಯವನ್ನು ನೋಡಿದ ಬ್ಯಾಟ್ಸ್‌ಮನ್‌ಗಳು, ಬೌಲರ್‌ಗಳು ಮತ್ತು ಇತರ ಫೀಲ್ಡರ್‌ಗಳು ಎಲ್ಲವನ್ನೂ ಬಿಟ್ಟು ಅವರತ್ತ ಓಡಿದ್ದಾರೆ. ಆದರೆ ಆಟಗಾರರು ಅವರ ಬಳಿಗೆ ಹೋಗುವಷ್ಟರಲ್ಲೇ ಉಸ್ಮಾನ್ ಶಿನ್ವಾರಿ ಪ್ರಜ್ಞಾಹೀನರಾಗಿರುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದಾಗಿದೆ. ಕೆಲವು ಆಟಗಾರರು ಅವರ ಎದೆಯ ಮೇಲೆ ಬಲವಾಗಿ ಒತ್ತುವುದರ ಮೂಲಕ ಅವರನ್ನು ಪ್ರಜ್ಞಾಸ್ಥಿತಿಗೆ ತರಲು ಪ್ರಯತ್ನಿಸಿದ್ದಾರೆ. ಆದರೆ ಇದರಿಂದ ಯಾವುದೇ ಪ್ರಯೋಜನವಾಗಲಿಲ್ಲ.

ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಅಲ್ಲಿನ ವೈದ್ಯರು ಆ ಆಟಗಾರನನ್ನು ಉಳಿಸಲು ಸಾಧ್ಯವಾಗಲಿಲ್ಲ. ವರದಿಯಲ್ಲಿ ಹೃದಯಾಘಾತದಿಂದ ಶಿನ್ವಾರಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಶಿನ್ವಾರಿ ಅವರು ಅನುಭವಿ ಕ್ಲಬ್ ಕ್ರಿಕೆಟಿಗರಾಗಿದ್ದು, ಫ್ರೈಸ್‌ಲ್ಯಾಂಡ್‌ನ ಮಾರಾಟ ವಿಭಾಗದ ಮುಖ್ಯಸ್ಥರಾಗಿದ್ದರು.

ಟ್ವಿಟರ್‌ನಲ್ಲಿ ವದಂತಿ

ಈ ಘಟನೆಯ ಸುದ್ದಿ ಮತ್ತು ವಿಡಿಯೋ ತಕ್ಷಣವೇ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗಿದ್ದು, ಇದರೊಂದಿಗೆ ವದಂತಿಯೊಂದು ಹರಿದಾಡಲು ಶುರುವಾಗಿದೆ. ವಾಸ್ತವವಾಗಿ ಈ ಘಟನೆಯಲ್ಲಿ ಸಾವನ್ನಪ್ಪಿದ್ದು ಟೆಸ್ಟ್, ODI ಮತ್ತು T20 ಪಂದ್ಯಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿರುವ ವೇಗದ ಬೌಲರ್ ಉಸ್ಮಾನ್ ಶಿನ್ವಾರಿಯೇ ಎಂದು ಆರಂಭದಲ್ಲಿ ಅನೇಕ ನೆಟ್ಟಿಗರು ಗೊಂದಲಕ್ಕೀಡಾಗಿದ್ದರು. ಆದಾಗ್ಯೂ, ಪಾಕಿಸ್ತಾನಿ ಪತ್ರಕರ್ತರು ಇಂತಹ ಎಲ್ಲಾ ಆತಂಕ ಮತ್ತು ವದಂತಿಗಳಿಗೆ ಅಂತ್ಯ ಹಾಡಿದ್ದು, ಮೃತಪಟ್ಟ ಕ್ರಿಕೆಟರ್​, ಪಾಕಿಸ್ತಾನ ರಾಷ್ಟ್ರೀಯ ತಂಡದ ಕ್ರಿಕೆಟಿಗನ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada