Virat Kohli: ವಿರಾಟ್ ಕೊಹ್ಲಿಯ ಫಾರ್ಮ್​ಗಾಗಿ ಪ್ರಾರ್ಥಿಸುತ್ತೇನೆ ಎಂದ ಪಾಕ್ ಕ್ರಿಕೆಟಿಗ

IPL 2022: ಐಪಿಎಲ್ ಸೀಸನ್​ನ 12 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಇದುವರೆಗೆ ಕೇವಲ ಒಂದು ಅರ್ಧಶತಕವನ್ನು ಗಳಿಸಿದ್ದಾರೆ. ಅಲ್ಲದೆ 20ರ ಸರಾಸರಿಯಲ್ಲಿ ಒಟ್ಟು 216 ರನ್ ಗಳಿಸಿದ್ದಾರೆ.

Virat Kohli: ವಿರಾಟ್ ಕೊಹ್ಲಿಯ ಫಾರ್ಮ್​ಗಾಗಿ ಪ್ರಾರ್ಥಿಸುತ್ತೇನೆ ಎಂದ ಪಾಕ್ ಕ್ರಿಕೆಟಿಗ
virat kohli
Updated By: ಝಾಹಿರ್ ಯೂಸುಫ್

Updated on: May 12, 2022 | 7:10 PM

ವಿರಾಟ್ ಕೊಹ್ಲಿ (Virat Kohli) ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಆದರೆ ಐಪಿಎಲ್ 2022 ರಲ್ಲಿ ಕೊಹ್ಲಿ ಕಡೆಯಿಂದ ಉತ್ತಮ ಪ್ರದರ್ಶನ ಮೂಡಿ ಬರುತ್ತಿಲ್ಲ. ಅಂತರಾಷ್ಟ್ರೀಯ ಕ್ರಿಕೆಟ್ ಬಗ್ಗೆ ಮಾತನಾಡುವುದಾದರೆ, ಕಳೆದ 3 ವರ್ಷಗಳಿಂದ ಕೊಹ್ಲಿ ಬ್ಯಾಟ್​ನಿಂದ ಒಂದೇ ಒಂದು ಶತಕ ಮೂಡಿಬಂದಿಲ್ಲ. ಹೀಗಾಗಿಯೇ ಕೊಹ್ಲಿಯ ಫಾರ್ಮ್​ ಬಗ್ಗೆ ಚರ್ಚೆಗಳು ಶುರುವಾಗಿದೆ. ಇತ್ತ ಟೀಕೆ ಟಿಪ್ಪಣಿಗಳ ನಡುವೆ ವಿರಾಟ್ ಕೊಹ್ಲಿಯ ಫಾರ್ಮ್​ಗಾಗಿ ನಾನು ಸಹ ಪ್ರಾರ್ಥಿಸುತ್ತೇನೆ ಎಂದು ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್ ಹೇಳಿದ್ದಾರೆ. ರಿಜ್ವಾನ್ ಕಳೆದ ವರ್ಷ ಟಿ20 ಕ್ರಿಕೆಟ್‌ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದರು. ಒಂದು ವರ್ಷದಲ್ಲಿ 2 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಆಟಗಾರ ಎನಿಸಿಕೊಂಡಿದ್ದರು.

ಈ ಬಗ್ಗೆ ಮಾತನಾಡಿದ ಮೊಹಮ್ಮದ್ ರಿಜ್ವಾನ್, ವಿರಾಟ್ ಕೊಹ್ಲಿ ಒಬ್ಬ ಚಾಂಪಿಯನ್ ಆಟಗಾರ. ಆದರೆ ಪ್ರಸ್ತುತ ಅವರು ಎದುರಿಸುತ್ತಿರುವ ಪರಿಸ್ಥಿತಿ ಬಗ್ಗೆ ಏನೂ ಹೇಳುವಂತಿಲ್ಲ. ಇದಾಗ್ಯೂ ನಾವು ಅವರ ಫಾರ್ಮ್​ಗಾಗಿ ಪ್ರಾರ್ಥಿಸಬಹುದು. ಏಕೆಂದರೆ ಅವರು ಕಠಿಣ ಪರಿಶ್ರಮಿ ಆಟಗಾರ. ಪ್ರತಿಯೊಬ್ಬ ಆಟಗಾರನೂ ಈ ಹಂತದ ಮೂಲಕ ಹಾದು ಹೋಗುತ್ತಾರೆ. ಒಳ್ಳೆಯ ಕಾಲದ ನಂತರ ಕೆಟ್ಟ ಕಾಲವೂ ಬರುತ್ತದೆ, ಇದೇ ಜೀವನ ಎಂದರು.

ವಿರಾಟ್ ಕೊಹ್ಲಿ ಅತ್ಯಂತ ಕಠಿಣ ಪ್ರರಿಶ್ರಮದ ಆಟಗಾರನಾಗಿರುವ ಕಾರಣ, ಅವರು ಮತ್ತೆ ಕಂಬ್ಯಾಕ್ ಮಾಡುತ್ತಾರೆ ಎಂಬ ವಿಶ್ವಾಸವಿದೆ. ಇದೆಲ್ಲವೂ ಕ್ರಿಕೆಟ್​ನ ಭಾಗ. ಹೀಗಾಗಿ ಅವರು ಮತ್ತೆ ಫಾರ್ಮ್​ಗೆ ಮರಳಲು ನಾನು ಸಹ ಪ್ರಾರ್ಥಿಸುವೆ ಎಂದು ಮೊಹಮ್ಮದ್ ರಿಜ್ವಾನ್ ಹೇಳಿದರು.

ಇದನ್ನೂ ಓದಿ
MS Dhoni: ಸೂಪರ್ ಬೆಡಗಿ ಜೊತೆ ಸಿನಿಮಾ ನಿರ್ಮಿಸಲು ಮುಂದಾದ ಧೋನಿ..!
IPL 2022: ಸೋಲುತ್ತೆ ನಿಜ, ಆದರೆ ಇದು?, LSG ಆಟಗಾರರ ವಿರುದ್ದ ಗಂಭೀರ್ ಗರಂ
IPL 2022: ಅಂದು ಲಯನ್ಸ್, ಇಂದು ಟೈಟನ್ಸ್: ಗುಜರಾತ್ ತಂಡದ ಫ್ಯಾನ್ಸ್​ಗೆ ಹೊಸ ಚಿಂತೆ ಶುರು..!
AB De Villiers: RCB ಅಭಿಮಾನಿಗಳಿಗೆ ಗುಡ್​ ನ್ಯೂಸ್: ಮತ್ತೆ ಬರ್ತಾರಂತೆ ABD

ಪ್ರಸಕ್ತ ಐಪಿಎಲ್ ಸೀಸನ್​ನ 12 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಇದುವರೆಗೆ ಕೇವಲ ಒಂದು ಅರ್ಧಶತಕವನ್ನು ಗಳಿಸಿದ್ದಾರೆ. ಅಲ್ಲದೆ 20ರ ಸರಾಸರಿಯಲ್ಲಿ ಒಟ್ಟು 216 ರನ್ ಗಳಿಸಿದ್ದಾರೆ. ಇದು ಐಪಿಎಲ್ ಇತಿಹಾಸದಲ್ಲಿ ಕೊಹ್ಲಿ ಅತ್ಯಂತ ಕಳಪೆ ಪ್ರದರ್ಶನ ಎಂದು ವಿಶ್ಲೇಷಿಸಲಾಗುತ್ತಿದೆ. ಅಲ್ಲದೆ ಕೆಟ್ಟ ಫಾರ್ಮ್​ನಲ್ಲಿರುವ ಕೊಹ್ಲಿಗೆ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯ ವೇಳೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.