ಬಹುನಿರೀಕ್ಷಿತ ಏಷ್ಯಾಕಪ್ ಟೂರ್ನಿಗೆ ಪೂರ್ವ ಸಿದ್ಧತೆಗಾಗಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಮಾಸ್ಟರ್ ಪ್ಲ್ಯಾನ್ ರೂಪಿಸಿದೆ. ಈ ಯೋಜನೆಯಂತೆ ಪಾಕಿಸ್ತಾನ್ ತಂಡವು ಏಷ್ಯಾಕಪ್ಗೂ ಮುನ್ನ ಯುಎಇ ಹಾಗೂ ಅಫ್ಘಾನಿಸ್ತಾನ್ ವಿರುದ್ಧ ಟಿ20 ಸರಣಿ ಆಡಲಿದೆ. ಅಂದರೆ ಮೂರು ತಂಡಗಳು ತ್ರಿಕೋನ ಸರಣಿಯಲ್ಲಿ ಮುಖಾಮುಖಿಯಾಗಲಿದೆ.
ಏಷ್ಯನ್ ರಾಷ್ಟ್ರಗಳ ಕ್ರಿಕೆಟ್ ಕದನ ಏಷ್ಯಾಕಪ್ ಸೆಪ್ಟೆಂಬರ್ 9 ರಿಂದ ಶುರುವಾಗಲಿದೆ. ಯುಎಇನಲ್ಲಿ ನಡೆಯಲಿರುವ ಈ ಏಷ್ಯಾಕಪ್ ಗೆಲ್ಲಲು ಪಾಕಿಸ್ತಾನ್ ತಂಡ ಭರ್ಜರಿ ಪ್ಲ್ಯಾನ್ ರೂಪಿಸಿದೆ. ಅದು ಸಹ ಏಷ್ಯಾಕಪ್ಗೂ ಮುನ್ನ ತ್ರಿಕೋನ ಸರಣಿ ಆಯೋಜಿಸುವ ಮೂಲಕ. ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಆಗಸ್ಟ್ 29 ರಿಂದ ಯುಎಇನಲ್ಲಿ ಮೂರು ತಂಡಗಳ ನಡುವಣ ತ್ರಿಕೋನ ಸರಣಿ ಆಯೋಜಿಸಲು ನಿರ್ಧರಿಸಿದೆ.
ಶಾರ್ಜಾದಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಪಾಕಿಸ್ತಾನ್ ವಿರುದ್ಧ ಅಫ್ಘಾನಿಸ್ತಾನ್ ಹಾಗೂ ಯುಎಇ ತಂಡಗಳು ಕಣಕ್ಕಿಳಿಯಲಿವೆ. ಫೈನಲ್ ಸೇರಿದಂತೆ ಒಟ್ಟು 7 ಪಂದ್ಯಗಳ ಸರಣಿಯ ಮೂಲಕ ಯುಎಇನಲ್ಲೇ ಏಷ್ಯಾಕಪ್ಗಾಗಿ ಸಿದ್ಧತೆ ನಡೆಸಲು ಪಾಕ್ ತಂಡ ಪ್ಲ್ಯಾನ್ ರೂಪಿಸಿದೆ. ಇದಕ್ಕಾಗಿ ಏಷ್ಯಾಕಪ್ಗೆ ಸರಿಹೊಂದುವಂತೆ ವೇಳಾಪಟ್ಟಿಯನ್ನು ಸಿದ್ಧಪಡಿಸಿದೆ.
ಅದರಂತೆ ಈ ಸರಣಿಯು ಆಗಸ್ಟ್ 29 ರಿಂದ ಶುರುವಾಗಲಿದ್ದು, ಫೈನಲ್ ಪಂದ್ಯವು ಸೆಪ್ಟೆಂಬರ್ 7 ರಂದು ನಡೆಯಲಿದೆ. ಅಂದರೆ ಏಷ್ಯಾಕಪ್ ಆರಂಭಕ್ಕೂ ಒಂದು ದಿನ ಮುಂಚಿತವಾಗಿ ತ್ರಿಕೋನ ಸರಣಿಯ ಅಂತಿಮ ಪಂದ್ಯ ನಡೆಯಲಿದೆ.
ಇದಾದ ಬಳಿಕ ಪಾಕಿಸ್ತಾನ್ ತಂಡವು ಏಷ್ಯಾಕಪ್ನಲ್ಲಿ ಕಣಕ್ಕಿಳಿಯಲಿದೆ. ಏಷ್ಯಾಕಪ್ನಲ್ಲಿ ಪಾಕ್ ಪಡೆಯ ಮೊದಲ ಎದುರಾಳಿ ಒಮಾನ್. ಸೆಪ್ಟೆಂಬರ್ 12 ರಂದು ಪಾಕಿಸ್ತಾನ್ ಹಾಗೂ ಒಮಾನ್ ಮುಖಾಮುಖಿಯಾಗಲಿದ್ದು.
ಇದಾದ ಬಳಿಕ ಭಾರತ ಮತ್ತು ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಈ ಪಂದ್ಯವು ಸೆಪ್ಟೆಂಬರ್ 14 ರಂದು ಜರುಗಲಿದ್ದು, ಅದಕ್ಕೂ ಮುನ್ನ ತ್ರಿಕೋನ ಸರಣಿಯ ಮೂಲಕ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ರೂಪಿಸಲು ಪಾಕಿಸ್ತಾನ್ ತಂಡ ಪ್ಲ್ಯಾನ್ ರೂಪಿಸಿದೆ.
ತ್ರಿಕೋನ ಸರಣಿ ವೇಳಾಪಟ್ಟಿ:
ಆಗಸ್ಟ್ 29 –ಅಫ್ಘಾನಿಸ್ತಾನ್v ಪಾಕಿಸ್ತಾನ –(ಶಾರ್ಜಾ ಸ್ಟೇಡಿಯಂ)
ಆಗಸ್ಟ್ 30 –ಯುಎಇv ಪಾಕಿಸ್ತಾನ್ –(ಶಾರ್ಜಾ ಸ್ಟೇಡಿಯಂ)
ಸೆಪ್ಟೆಂಬರ್ 1 –ಯುಎಇ vಅಫ್ಘಾನಿಸ್ತಾನ್–(ಶಾರ್ಜಾ ಸ್ಟೇಡಿಯಂ)
ಸೆಪ್ಟೆಂಬರ್ 2 –ಪಾಕಿಸ್ತಾನ್ v ಅಫ್ಘಾನಿಸ್ತಾನ್–(ಶಾರ್ಜಾ ಸ್ಟೇಡಿಯಂ)
ಸೆಪ್ಟೆಂಬರ್ 4 –ಪಾಕಿಸ್ತಾನ್ v ಯುಎಇ –(ಶಾರ್ಜಾ ಸ್ಟೇಡಿಯಂ)
ಸೆಪ್ಟೆಂಬರ್ 5 –ಅಫ್ಘಾನಿಸ್ತಾನ್v ಯುಎಇ –(ಶಾರ್ಜಾ ಸ್ಟೇಡಿಯಂ)