AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಮ್ ಇಂಡಿಯಾ ಕ್ರಿಕೆಟಿಗನ ಮೇಲೆ ಗಂಭೀರ ಆರೋಪ: ಗಲ್ಲಿಗೇರಿಸುತ್ತೇವೆ ಎಂದು ಬೆದರಿಕೆ..!

Team India: ನನ್ನ ಭವಿಷ್ಯದ ಬಗ್ಗೆ ಯೋಚಿಸುವಂತೆ ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ಬಿಸಿಸಿಐ ಮಧ್ಯಪ್ರವೇಶಿಸಬೇಕೆಂದು ಕೋರುತ್ತಿದ್ದೇನೆ ಎಂದು ರಸೂಲ್ ಮನವಿ ಮಾಡಿದ್ದಾರೆ.

ಟೀಮ್ ಇಂಡಿಯಾ ಕ್ರಿಕೆಟಿಗನ ಮೇಲೆ ಗಂಭೀರ ಆರೋಪ: ಗಲ್ಲಿಗೇರಿಸುತ್ತೇವೆ ಎಂದು ಬೆದರಿಕೆ..!
Parvez Rasool
TV9 Web
| Edited By: |

Updated on: Aug 22, 2021 | 5:10 PM

Share

ಭಾರತೀಯ ಕ್ರಿಕೆಟಿಗ ಪರ್ವೇಜ್ ರಸೂಲ್ (Parvez Rasool) ವಿರುದ್ದ ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್ (JKCA) ಪಿಚ್ ರೋಲರ್ ಕದ್ದಿರುವ ಗಂಭೀರ ಆರೋಪ ಹೊರಿಸಿದೆ. ಮೈದಾನದಲ್ಲಿನ ಪಿಚ್​ ರೋಲರ್​ಗಳನ್ನು ಪರ್ವೇಜ್ ಕದ್ದೊಯ್ದಿದ್ದಾರೆ. ಅದನ್ನು ಹಿಂತಿರುಗಿಸುಂತೆ ಈಗಾಗಲೇ ಕೇಳಲಾಗಿದ್ದು, ಇದಾಗ್ಯೂ ಆತ ಇನ್ನೂ ಹಿಂತಿರುಗಿಸಿಲ್ಲ. ಹೀಗಾಗಿ ಪೊಲೀಸರಿಗೆ ದೂರು ನೀಡುವುದಾಗಿ ಎಂದು ಜೆ-ಕೆ ಕ್ರಿಕೆಟ್ ಮಂಡಳಿ ತಿಳಿಸಿದೆ. ಇತ್ತ ನಾನು ಯಾವುದೇ ರೋಲರ್ ತೆಗೆದುಕೊಂಡಿಲ್ಲ ಎಂದಿರುವ ರಸೂಲ್, ವಿನಾಕಾರಣ ಪ್ರಕರಣ ಸೃಷ್ಟಿಸಿ ನನ್ನ ಕ್ರಿಕೆಟ್ ಕೆರಿಯರ್ ಮುಗಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೆ ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿ ಈ ವಿಷಯದಲ್ಲಿ ಬಿಸಿಸಿಐ (BCCI) ಮಧ್ಯಪ್ರವೇಶಿಸಬೇಕೆಂದು ಮನವಿ ಮಾಡಿದ್ದಾರೆ.

ಪರ್ವೇಶ್ ರಸೂಲ್ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ ಮೊದಲ ಜಮ್ಮು ಕಾಶ್ಮೀರ ಕ್ರಿಕೆಟಿಗ. ಭಾರತದ ಪರ 2014 ರಲ್ಲಿ ಒಂದು ಏಕದಿನ ಪಂದ್ಯ ಹಾಗೂ 2017ರಲ್ಲಿ ಏಕೈಕ ಟಿ20 ಪಂದ್ಯವನ್ನಾಡಿದ್ದರು. ಇದೀಗ ಜಮ್ಮು ಕಾಶ್ಮೀರ ಕ್ರಿಕೆಟ್ ಅಸೋಷಿಯೇಷನ್ 32 ವರ್ಷದ ರಸೂಲ್ ವಿರುದ್ದ ಪಿಚ್ ರೋಲರ್ ಕದ್ದಿರುವ ಆರೋಪ ಮಾಡಿದೆ. ಆದರೆ ಈ ಆರೋಪವನ್ನು ರಸೂಲ್ ಅಲ್ಲೆಗೆಳೆದಿದ್ದು, ನನ್ನನ್ನು ಅಧಿಕಾರಿಗಳು ಬಲಿಪಶು ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

“ರೋಲರ್ ನನ್ನ ಜೇಬಿನಲ್ಲಿ ಇಟ್ಟುಕೊಂಡು ಎಲ್ಲಿ ಬೇಕಾದರೂ ತಿರುಗಾಡಬಹುದಾದ ಟೆನಿಸ್ ಬಾಲ್‌ನಂತಲ್ಲ. ಇದು ನೆಲದ ಬಳಕೆಗಾಗಿ, ಇದು ಕ್ರಿಕೆಟ್ ಅಭಿವೃದ್ಧಿಗೆ ಇರುವುದು ಎಂಬುದು ನನಗೆ ಗೊತ್ತಿದೆ. ಇದಾಗ್ಯೂ ಈ ಪ್ರಕರಣದಲ್ಲಿ ನನಗೆ ಯಾಕೆ ನೋಟಿಸ್ ನೀಡಿದ್ದಾರೆ ಎಂಬುದು ಗೊತ್ತಿಲ್ಲ. ಅದು ಕೂಡ ಇದು ‘ಎರಡನೇ ನೋಟಿಸ್’. ಇದಕ್ಕೂ ಮುನ್ನ ನಿಮಗೆ ಜುಲೈ 5 ರಂದು ನೋಟಿಸ್ ಕಳುಹಿಸಿದ್ದೇವೆ ಎಂದು ಜಮ್ಮು-ಕಾಶ್ಮೀರ ಕ್ರಿಕೆಟ್ ಮಂಡಳಿ ತಿಳಿಸಿದೆ. ಆದರೆ ನನಗೆ ಯಾವುದೇ ನೋಟೀಸ್ ನೀಡಿರಲಿಲ್ಲ. ಇದೀಗ ಎರಡನೇ ನೋಟೀಸ್ ಎನ್ನುವ ಮೂಲಕ ನನ್ನ ಮೇಲೆ ಕ್ರಮ ಕೈಗೊಳ್ಳಲು ಮುಂದಾಗುತ್ತಿದ್ದಾರೆ. ಇದರರ್ಥ ನನ್ನ ಬಲಿಪಶು ಮಾಡಬೇಕೆಂಬುದು ಇವರು ಮೊದಲೇ ನಿರ್ಧರಿಸಿದ್ದಾರೆ ಎಂದು ರಸೂಲ್ ತಿಳಿಸಿದ್ದಾರೆ.

ಅಧಿಕಾರಿಯ ವಿವಾದಾತ್ಮಕ ಕಾಮೆಂಟ್! ಈ ಪ್ರಕರಣವು ಸೋಷಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆಗೆ ಕಾರಣವಾಗುತ್ತಿದ್ದಂತೆ ಜಮ್ಮು ಕಾಶ್ಮೀರದ ಕ್ರಿಕೆಟ್ ಮಂಡಳಿಯ ಅಧಿಕಾರಿಯೊಬ್ಬರು, ರಸೂಲ್ ಅವರನ್ನು ನೇಣಿಗೇರಿಸಲು ಹಗ್ಗ ನೀಡಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಆ ಬಳಿಕ ಅದನ್ನು ಅಳಿಸಿ ಹಾಕಿದ್ದಾರೆ. ಇದೀಗ ಆ ಕಾಮೆಂಟ್ ಸ್ಕ್ರೀನ್ ಶಾಟ್ ನನ್ನ ಬಳಿಯಿದ್ದು, ನನ್ನನ್ನು ಗಲ್ಲಿಗೇರಿಸಬೇಕೆಂದು ಹೇಳುವಂತಹ ತಪ್ಪನ್ನು ನಾನು ಏನು ಮಾಡಿದೆ ಎಂದು ಹೇಳಿ? ನಿಮಗೆ ಸಂದೇಹಗಳಿದ್ದರೆ ನನಗೆ ಕರೆ ಮಾಡಿ ವಿಚಾರಿಸಿ. ಅದು ಬಿಟ್ಟು ಜಮ್ಮು-ಕಾಶ್ಮೀರ ಕ್ರಿಕೆಟ್ ಮಂಡಳಿಯ ಅಧಿಕಾರಿಗಳು ವಿನಾಕಾರಣ ನನ್ನನ್ನು ಗುರಿಯಾಗಿಸುತ್ತಿದ್ದೀರಾ ಎಂದು ರಸೂಲ್ ನೋವು ತೋಡಿಕೊಂಡಿದ್ದಾರೆ.

ಈ ವಿಚಾರದಲ್ಲಿ ಭಾರತೀಯ ಮಂಡಳಿಯು ಮಧ್ಯಪ್ರವೇಶಿಸಬೇಕೆಂದು ಬಯಸುತ್ತೇನೆ. ದಯವಿಟ್ಟು ನನ್ನ ಕೆಲಸವನ್ನು ನೋಡಿ. ನಾನು ಉತ್ಸಾಹ ಮತ್ತು ಕಠಿಣ ಪರಿಶ್ರಮದಿಂದ ಕ್ರಿಕೆಟ್ ಆಡಿದ್ದೇನೆ. ಅವರು ಈಗ ನನ್ನ ಭವಿಷ್ಯದ ಬಗ್ಗೆ ಯೋಚಿಸುವಂತೆ ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಬಿಸಿಸಿಐ ಮಧ್ಯಪ್ರವೇಶಿಸಬೇಕೆಂದು ಕೋರುತ್ತಿದ್ದೇನೆ ಎಂದು ರಸೂಲ್ ಮನವಿ ಮಾಡಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ಕಡೆಯಿಂದ ಕಾಶ್ಮೀರದಲ್ಲಿ ಕ್ರಿಕೆಟ್ ಅನ್ನು ಉತ್ತೇಜಿಸಲು ಪ್ರಯತ್ನಿಸುತ್ತಿದ್ದೇನೆ. ಮೈದಾನವನ್ನು ನಿರ್ಮಿಸಲು ಮತ್ತು ದೈನಂದಿನ ಖರ್ಚುಗಳನ್ನು ಪೂರೈಸಲು ನಾನು ನನ್ನ ಜೇಬಿನಿಂದ ಖರ್ಚು ಮಾಡುತ್ತಿದ್ದೇನೆ. ನನ್ನ ದುಡಿಮೆಯಿಂದ ನಾನು ಆಟಗಾರರಿಗೆ ಸಹಾಯ ಮಾಡುತ್ತೇನೆ. ಇತರರು ಕೂಡ ಮುಂದೆ ಬರಬೇಕೆಂದು ಬಯಸುತ್ತೇನೆ. ಖ್ಯಾತಿ, ಹಣ ಮತ್ತು ಉನ್ನತ ಮಟ್ಟದ ಕ್ರಿಕೆಟ್ ಆಡುವುದು, ಈ ಪ್ರದೇಶದ ಈ ಭಾಗದಿಂದ ಎಲ್ಲರೂ ನೋಡಬೇಕೆಂದು ನಾನು ಬಯಸುತ್ತಿರುವುದಾಗಿ ರೂಸಲ್ ಹೇಳಿದರು.

ಏನಿದು ಪ್ರಕರಣ? ಜಮ್ಮು-ಕಾಶ್ಮೀರ ಕ್ರಿಕೆಟ್ ಸಂಸ್ಥೆಗೆ ಸೇರಿದ ಪಿಚ್​ ರೋಲರ್ ಸೇರಿದಂತೆ ಹಲವು ಯಂತ್ರೋಪಕರಣಗಳನ್ನ ಜಿಲ್ಲಾ ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗಿತ್ತು. ಈ ವೇಳೆ ಯಾರಿಗೆಲ್ಲಾ ಹಂಚಿಕೆ ಮಾಡಲಾಗಿದೆ ಎಂಬುದನ್ನು ನೊಂದಾಯಿಸಿಕೊಂಡಿರಲಿಲ್ಲ. ಇದೀಗ ಬಹುತೇಕ ಜಿಲ್ಲಾ ಕ್ರಿಕೆಟ್​ ಸಂಸ್ಥೆಗಳ ಮೇಲ್ ವಿಳಾಸವೇ ಇಲ್ಲ. ಹೀಗಾಗಿ, ಜಮ್ಮು-ಕಾಶ್ಮೀರ ಕ್ರಿಕೆಟ್​ ಮಂಡಳಿಯಲ್ಲಿ ನೊಂದಾಯಿಸಿದ ಜಿಲ್ಲಾ ಪ್ರತಿನಿಧಿಗಳ ಹೆಸರಿಗೆ ಮೇಲ್ ಕಳುಹಿಸಲಾಗಿದೆ. ಇದರಲ್ಲಿ ಪರ್ವೇಜ್ ರಸೂಲ್ ಅವರ ಹೆಸರೂ ಕೂಡ ಇದ್ದು, ಅದರಂತೆ ಅವರಿಗೂ ಇಮೇಲ್ ಕಳುಹಿಸಲಾಗಿದೆ. ಆ ಬಳಿಕ ಪರ್ವೇಶ್ ರಸೂಲ್ ಪಿಚ್ ರೋಲರ್ ಕದ್ದೊಯ್ದಿದ್ದಾರೆ ಎಂಬ ಜಮ್ಮು-ಕಾಶ್ಮೀರ ಕ್ರಿಕೆಟ್ ಮಂಡಳಿ ಗಂಭೀರ ಆರೋಪ ಮಾಡಿದೆ. ಆದರೆ ನಾನು ಕೇವಲ ಕ್ರಿಕೆಟಿಗ, ಯಾವುದೇ ಜಿಲ್ಲಾ ಸಂಸ್ಥೆಯ ಪ್ರತಿನಿಧಿಯಲ್ಲ. ಪಿಚ್ ರೋಲರ್ ಬಗ್ಗೆ ನಿಮಗೆ ಸರಿಯಾದ ಮಾಹಿತಿ ಇಲ್ಲದಿದ್ದರೆ ನನ್ನನೇಕೆ ಪ್ರಶ್ನಿಸುತ್ತಿದ್ದೀರಾ ಎಂಬುದು ರಸೂಲ್ ವಾದ. ಹೀಗಾಗಿ ಬಿಸಿಸಿಐ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಪರ್ವೇಶ್ ರಸೂಲ್ ಕೇಳಿಕೊಂಡಿದ್ದಾರೆ.

ಇದನ್ನೂ ಓದಿ:Afghanistan Crisis: ತಾಲಿಬಾನ್ ಗ್ಯಾಂಗ್​ ಜೊತೆ ಕಾಣಿಸಿಕೊಂಡ ಅಫ್ಘಾನಿಸ್ತಾನ್ ಕ್ರಿಕೆಟಿಗ 

ಇದನ್ನೂ ಓದಿ: 17 ವರ್ಷದ ಹುಡುಗಿಗೆ 35 ವರ್ಷದವನ ಜೊತೆ ಲವ್ವಿ-ಡವ್ವಿ: ಲಾಡ್ಜ್​ನಲ್ಲಿ ಇಬ್ಬರನ್ನು ನೋಡಿ ಬೆಚ್ಚಿಬಿದ್ದ ಸಿಬ್ಬಂದಿ

ಇದನ್ನೂ ಓದಿ: Tim David: Rcb ತಂಡ ಸಿಂಗಾಪೂರ್ ಕ್ರಿಕೆಟಿಗನನ್ನು ಆಯ್ಕೆ ಮಾಡಿದ್ದು ಯಾಕೆ? ಇಲ್ಲಿದೆ ಉತ್ತರ

(Parvez Rasool wants BCCI to step in pitch roller controversy)

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ