PBKS vs CSK Highlights, IPL 2024: ಚೆನ್ನೈ ವಿರುದ್ಧ ಪಂಜಾಬ್​ಗೆ 28 ರನ್ ಸೋಲು

Punjab Kings vs Chennai Super Kings Highlights in Kannada: ಐಪಿಎಲ್ 53ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್, ಸತತ ಎರಡನೇ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 28 ರನ್​ಗಳಿಂದ ಮಣಿಸುವ ಮೂಲಕ ಈ ಮೊದಲ ಸೋಲಿಗೆ ಸೇಡು ತೀರಿಸಿಕೊಂಡಿದೆ.

PBKS vs CSK Highlights, IPL 2024: ಚೆನ್ನೈ ವಿರುದ್ಧ ಪಂಜಾಬ್​ಗೆ 28 ರನ್ ಸೋಲು

Updated on: May 05, 2024 | 7:25 PM

ಐಪಿಎಲ್ 53ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್, ಸತತ ಎರಡನೇ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 28 ರನ್​ಗಳಿಂದ ಮಣಿಸುವ ಮೂಲಕ ಈ ಮೊದಲ ಸೋಲಿಗೆ ಸೇಡು ತೀರಿಸಿಕೊಂಡಿದೆ. ಧರ್ಮಶಾಲಾದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ 167 ರನ್ ಗಳಿಸಿತ್ತು. ತಂಡದ ಪರ ರವೀಂದ್ರ ಜಡೇಜಾ ಗರಿಷ್ಠ 43 ರನ್ ಗಳಿಸಿದರು. ಇದಕ್ಕೆ ಉತ್ತರವಾಗಿ ಇಡೀ ಪಂಜಾಬ್ ತಂಡ ತುಷಾರ್ ದೇಶಪಾಂಡೆ (2/35) ಮತ್ತು ರವೀಂದ್ರ ಜಡೇಜಾ (3/20) ಅವರ ಮಾರಕ ಬೌಲಿಂಗ್ ಮುಂದೆ ಕೇವಲ 139 ರನ್ ಗಳಿಸಲಷ್ಟೇ ಶಕ್ತವಾಯಿತು.

LIVE NEWS & UPDATES

The liveblog has ended.
  • 05 May 2024 07:12 PM (IST)

    28 ರನ್‌ ಜಯ

    ಚೆನ್ನೈ ನೀಡಿದ 168 ರನ್​ಗಳ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಪಂದ್ಯವನ್ನು ಚೆನ್ನೈ ತಂಡ 28 ರನ್‌ಗಳಿಂದ ಗೆದ್ದುಕೊಂಡಿತು. ಸಿಎಸ್​ಕೆ ಪರ ಜಡೇಜಾ 3 ವಿಕೆಟ್ ಪಡೆದರೆ, ಸಿಮರ್ಜೀತ್ ಸಿಂಗ್ ಮತ್ತು ದೇಶಪಾಂಡೆ ತಲಾ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

  • 05 May 2024 07:05 PM (IST)

    9ನೇ ವಿಕೆಟ್

    10 ಎಸೆತಗಳಲ್ಲಿ 16 ರನ್ ಬಾರಿಸಿದ ರಾಹುಲ್ ಚಹಾರ್ ಶಾರ್ದೂಲ್ ಠಾಕೂರ್‌ಗೆ ಬಲಿಯಾಗಿದ್ದಾರೆ. ಪಂಜಾಬ್ ಕಿಂಗ್ಸ್ ತಂಡ 117 ರನ್ ಗಳಿಸುವಷ್ಟರಲ್ಲಿ 9ನೇ ವಿಕೆಟ್ ಕಳೆದುಕೊಂಡಿದೆ.


  • 05 May 2024 06:46 PM (IST)

    16 ಓವರ್‌ ಪೂರ್ಣ

    ಪಂಜಾಬ್ ಕಿಂಗ್ಸ್ ತಂಡ 16 ಓವರ್‌ಗಳ ಅಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 105 ರನ್ ಗಳಿಸಿದ್ದು, ಈಗ ಗೆಲ್ಲಲು ಕೊನೆಯ 4 ಓವರ್‌ಗಳಲ್ಲಿ 63 ರನ್ ಗಳಿಸಬೇಕಾಗಿದೆ.

  • 05 May 2024 06:20 PM (IST)

    ಜಿತೇಶ್ ಔಟ್

    ಪಂಜಾಬ್ ಕಿಂಗ್ಸ್ 5ನೇ ವಿಕೆಟ್ ಕಳೆದುಕೊಂಡಿದೆ ಜಿತೇಶ್ ಶರ್ಮಾ ಯಾವುದೇ ರನ್ ಗಳಿಸದೆ ಪೆವಿಲಿಯನ್ ಸೇರಿಕೊಂಡಿದ್ದಾರೆ.

  • 05 May 2024 06:08 PM (IST)

    ಶಶಾಂಕ್ ಸಿಂಗ್ ಔಟ್

    ಪಂಜಾಬ್ ಕಿಂಗ್ಸ್ ತಂಡ 8ನೇ ಓವರ್‌ನ ಕೊನೆಯ ಎಸೆತದಲ್ಲಿ ಮೂರನೇ ವಿಕೆಟ್ ಕಳೆದುಕೊಂಡಿದೆ. ಶಶಾಂಕ್​ 27 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು. ಪಂಜಾಬ್ 8 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 62 ರನ್ ಗಳಿಸಿದೆ.

  • 05 May 2024 05:58 PM (IST)

    ಪವರ್ ಪ್ಲೇ ಅಂತ್ಯ

    ಪಂಜಾಬ್ ಇನ್ನಿಂಗ್ಸ್​ನ 6 ಓವರ್​ಗಳು ಮುಗಿದಿವೆ. ಈ 6 ಓವರ್​ಗಳಲ್ಲಿ ಪಂಜಾಬ್ ತಂಡ 2 ವಿಕೆಟ್ ಕಳೆದುಕೊಂಡು 47 ರನ್ ಕಲೆಹಾಕಿದೆ.

  • 05 May 2024 05:58 PM (IST)

    2ನೇ ವಿಕೆಟ್

    ತುಷಾರ್ ದೇಶಪಾಂಡೆ ತಮ್ಮ ಮೊದಲ ಓವರ್‌ನಲ್ಲಿ ಬೈರ್‌ಸ್ಟೋವ್ ಅವರ ವಿಕೆಟ್ ಪಡೆದ ನಂತರ, ಇದೀಗ ರಿಲೆ ರೊಸೊವ್ ಅವರನ್ನು ಕೂಡ ಬೌಲ್ಡ್ ಮಾಡಿ ಪೆವಿಲಿಯನ್‌ಗೆ ಕಳುಹಿಸಿದ್ದಾರೆ. ಪಂಜಾಬ್ 2 ಓವರ್‌ಗಳ ಅಂತ್ಯಕ್ಕೆ 9 ಸ್ಕೋರ್‌ಗೆ 2ನೇ ವಿಕೆಟ್ ಕಳೆದುಕೊಂಡಿತು.

  • 05 May 2024 05:44 PM (IST)

    ಬೈರ್‌ಸ್ಟೋವ್ ಔಟ್

    ಪಂಜಾಬ್ ಕಿಂಗ್ಸ್ ಎರಡನೇ ಓವರ್‌ನ ಮೂರನೇ ಎಸೆತದಲ್ಲಿ ಆರಂಭಿಕ ಜಾನಿ ಬೈರ್‌ಸ್ಟೋವ್ ಅವರ ವಿಕೆಟ್ ಕಳೆದುಕೊಂಡಿದೆ.

  • 05 May 2024 05:37 PM (IST)

    168 ರನ್ ಟಾರ್ಗೆಟ್

    ಪಂಜಾಬ್ ಕಿಂಗ್ಸ್ ವಿರುದ್ಧ ಧರ್ಮಶಾಲಾ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿದೆ. ತಂಡದ ಪರ ರವೀಂದ್ರ ಜಡೇಜಾ 43 ರನ್ ಮತ್ತು ರುತುರಾಜ್ ಗಾಯಕ್ವಾಡ್ 32 ರನ್​ಗಳ ಇನ್ನಿಂಗ್ಸ್ ಆಡಿದರು.

  • 05 May 2024 05:08 PM (IST)

    18 ಓವರ್‌ ಮುಕ್ತಾಯ

    18 ಓವರ್​ಗಳ ಅಂತ್ಯಕ್ಕೆ ಚೆನ್ನೈ 6 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿದೆ. ಜಡೇಜಾ 30 ರನ್ ಹಾಗೂ ಶಾರ್ದೂಲ್ ಠಾಕೂರ್ 17 ರನ್ ಗಳಿಸಿ ಆಡುತ್ತಿದ್ದಾರೆ.

  • 05 May 2024 04:49 PM (IST)

    ಶತಕ ಪೂರ್ಣ

    ಸಿಎಸ್​ಕೆ 13ನೇ ಓವರ್‌ನಲ್ಲಿ ಶತಕದ ಗಡಿ ದಾಟಿದ್ದು, ಐದನೇ ವಿಕೆಟ್ ಕಳೆದುಕೊಂಡಿದೆ. ಮೊಯಿನ್ ಅಲಿ 20 ಎಸೆತಗಳಲ್ಲಿ 17 ರನ್ ಗಳಿಸಿ ಔಟಾದರು. ಸದ್ಯ ರವೀಂದ್ರ ಜಡೇಜಾ ಮತ್ತು ಮಿಚೆಲ್ ಸ್ಯಾಂಟ್ನರ್ ಕ್ರೀಸ್‌ನಲ್ಲಿದ್ದಾರೆ.

  • 05 May 2024 04:35 PM (IST)

    ಮಿಚೆಲ್ ಕೂಡ ಔಟ್

    ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಡೆರಿಲ್ ಮಿಚೆಲ್ ಅವರ ಇನ್ನಿಂಗ್ಸ್ 30 ರನ್​ಗಳಿಗೆ ಅಂತ್ಯಗೊಂಡಿದೆ.

  • 05 May 2024 04:13 PM (IST)

    ದುಬೆ ಶೂನ್ಯಕ್ಕೆ ಔಟ್

    ರುತುರಾಜ್ ವಿಕೆಟ್ ಬಳಿಕ ಬಂದಿದ್ದ ಶಿವಂ ದುಬೆ ಮೊದಲ ಎಸೆತದಲ್ಲೇ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ.

  • 05 May 2024 04:12 PM (IST)

    ರುತುರಾಜ್ ಔಟ್

    ನಾಯಕ ರುತುರಾಜ್ ಇನ್ನಿಂಗ್ಸ್ 32 ರನ್​ಗಳಿಗೆ ಅಂತ್ಯಗೊಂಡಿದೆ. ಇದರೊಂದಿಗೆ ಚೆನ್ನೈನ 2ನೇ ವಿಕೆಟ್ ಪತನಗೊಂಡಿದೆ.

  • 05 May 2024 04:05 PM (IST)

    ಪವರ್ ಪ್ಲೇ ಅಂತ್ಯ

    ಮೊದಲ 6 ಓವರ್‌ಗಳ ಅಂತ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ 1 ವಿಕೆಟ್ ನಷ್ಟಕ್ಕೆ 60 ರನ್ ಗಳಿಸಿದೆ. ಗಾಯಕ್ವಾಡ್ 25 ರನ್ ಹಾಗೂ ಮಿಚೆಲ್ 25 ರನ್ ಗಳಿಸಿ ಆಡುತ್ತಿದ್ದಾರೆ. ಪವರ್‌ಪ್ಲೇಯಲ್ಲಿ ಅಜಿಂಕ್ಯ ರಹಾನೆ ರೂಪದಲ್ಲಿ ಚೆನ್ನೈ ಒಂದು ವಿಕೆಟ್ ಕಳೆದುಕೊಂಡಿತು.

  • 05 May 2024 04:00 PM (IST)

    4 ಓವರ್‌ ಮುಕ್ತಾಯ

    ಚೆನ್ನೈ ಸೂಪರ್ ಕಿಂಗ್ಸ್ 4 ಓವರ್​ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 34 ರನ್ ಗಳಿಸಿದೆ. ರುತುರಾಜ್ ಗಾಯಕ್ವಾಡ್ 8 ರನ್ ಗಳಿಸಿ ಆಡುತ್ತಿದ್ದರೆ, ಡೆರಿಲ್ ಮಿಚೆಲ್ 16 ರನ್ ಗಳಿಸಿ ಆಡುತ್ತಿದ್ದಾರೆ.

  • 05 May 2024 03:47 PM (IST)

    ರಹಾನೆ ಔಟ್

    ಚೆನ್ನೈ ಸೂಪರ್ ಕಿಂಗ್ಸ್ ಮೊದಲ ವಿಕೆಟ್ ಕಳೆದುಕೊಂಡಿದೆ. ರಹಾನೆ 9 ರನ್ ಬಾರಿಸಿ ಕ್ಯಾಚಿತ್ತು ವಿಕೆಟ್ ಒಪ್ಪಿಸಿದರು. ಇದೀಗ ಡೆರಿಲ್ ಮಿಚೆಲ್ ಬ್ಯಾಟಿಂಗ್‌ಗೆ ಬಂದಿದ್ದಾರೆ.

  • 05 May 2024 03:09 PM (IST)

    ಪಂಜಾಬ್ ಕಿಂಗ್ಸ್

    ಜಾನಿ ಬೈರ್‌ಸ್ಟೋವ್, ರಿಲೆ ರೂಸೋ, ಶಶಾಂಕ್ ಸಿಂಗ್, ಸ್ಯಾಮ್ ಕರನ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಅಶುತೋಷ್ ಶರ್ಮಾ, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ರಾಹುಲ್ ಚಹಾರ್, ಕಗಿಸೊ ರಬಾಡ, ಅರ್ಷ್‌ದೀಪ್ ಸಿಂಗ್.

  • 05 May 2024 03:09 PM (IST)

    ಚೆನ್ನೈ ಸೂಪರ್ ಕಿಂಗ್ಸ್

    ಅಜಿಂಕ್ಯ ರಹಾನೆ, ರುತುರಾಜ್ ಗಾಯಕ್ವಾಡ್ (ನಾಯಕ), ಡೇರಿಲ್ ಮಿಚೆಲ್, ಶಿವಂ ದುಬೆ, ಮೊಯಿನ್ ಅಲಿ, ರವೀಂದ್ರ ಜಡೇಜಾ, ಎಂಎಸ್ ಧೋನಿ (ವಿಕೆಟ್ ಕೀಪರ್), ಮಿಚೆಲ್ ಸ್ಯಾಂಟ್ನರ್, ಶಾರ್ದೂಲ್ ಠಾಕೂರ್, ರಿಚರ್ಡ್ ಗ್ಲೀಸನ್, ತುಷಾರ್ ದೇಶಪಾಂಡೆ.

  • 05 May 2024 03:02 PM (IST)

    ಪಂಜಾಬ್ ಬೌಲಿಂಗ್

    ಟಾಸ್ ಗೆದ್ದ ಪಂಜಾಬ್ ನಾಯಕ ಸ್ಯಾಮ್ ಕರನ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.

  • Published On - 3:01 pm, Sun, 5 May 24