ಮತ್ತೊಮ್ಮೆ ಮಹೇಂದ್ರ ಸಿಂಗ್ ಧೋನಿ (Mahendra Singh Dhoni)ಯ ವರ್ಚಸ್ಸಿನ ಮೇಲೆ ಭರವಸೆಯನ್ನು ಇಟ್ಟುಕೊಂಡು, ಏಪ್ರಿಲ್ 25 ರಂದು ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (Punjab Kings) ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಮೈದಾನಕ್ಕಿಳಿಯಲಿದೆ. ಅಲ್ಲದೆ ಉಭಯ ತಂಡಗಳೂ ಸಹ ಅನೇಕ ವಿಭಾಗಗಳಲ್ಲಿ ತನ್ನ ಪ್ರದರ್ಶನವನ್ನು ಸುಧಾರಿಸಬೇಕಾಗುತ್ತದೆ. ಚೆನ್ನೈ ಇಲ್ಲಿಯವರೆಗೆ ಏಳು ಪಂದ್ಯಗಳಲ್ಲಿ ಎರಡನ್ನು ಮಾತ್ರ ಗೆದ್ದಿದ್ದು, ಪಂಜಾಬ್ ಕಿಂಗ್ಸ್ ಏಳು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದಿದೆ. ಐಪಿಎಲ್ ಪಾಯಿಂಟ್ಸ್ ಪಟ್ಟಿಯಲ್ಲಿ ಪಂಜಾಬ್ ಎಂಟನೇ ಸ್ಥಾನದಲ್ಲಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಒಂಬತ್ತನೇ ಸ್ಥಾನದಲ್ಲಿದೆ. ಕಳೆದ ಬಾರಿ ಉಭಯ ತಂಡಗಳು ಮುಖಾಮುಖಿಯಾದಾಗ ಪಂಜಾಬ್ ಪಂದ್ಯ ಗೆದ್ದಿತ್ತು. ಆ ಪಂದ್ಯದಲ್ಲಿ ಲಿಯಾಮ್ ಲಿವಿಂಗ್‌ಸ್ಟನ್ ಅಮೋಘ ಆಟ ತೋರಿದರು. ಇಂತಹ ಪರಿಸ್ಥಿತಿಯಲ್ಲಿ ಚೆನ್ನೈ ಸೋಲಿಗೆ ಸೇಡು ತೀರಿಸಿಕೊಳ್ಳುವ ಅವಕಾಶವೂ ಇದೆ.
ಹಾಲಿ ಚಾಂಪಿಯನ್ ಚೆನ್ನೈ ಈ ಋತುವಿನಲ್ಲಿ ಯಾವುದೇ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ನಾಯಕ ರವೀಂದ್ರ ಜಡೇಜಾ ನಾಯಕನಾಗಿ ತಂಡ ಮುನ್ನಡೆಸಲು ವಿಫಲರಾಗಿದ್ದಾರೆ. ಹಿಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಮೂರು ವಿಕೆಟ್‌ಗಳ ಭರ್ಜರಿ ಗೆಲುವು ಮತ್ತು ಅದರಲ್ಲಿ ಧೋನಿ ಅವರ ಪ್ರದರ್ಶನ ಚೆನ್ನೈಗೆ ಟಾನಿಕ್ ಆಗಿತ್ತು. ಧೋನಿಯನ್ನು ವಿಶ್ವದ ಅತ್ಯುತ್ತಮ ಫಿನಿಶರ್ ಎಂದು ಏಕೆ ಕರೆಯುತ್ತಾರೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ಕೊನೆಯ ಓವರ್ನಲ್ಲಿ ಒಂದು ಸಿಕ್ಸರ್ ಹಾಗೂ ಎರಡು ಬೌಂಡರಿ ಬಾರಿಸುವ ಮೂಲಕ ತಂಡಕ್ಕೆ ಅದ್ಭುತ ಜಯ ತಂದುಕೊಟ್ಟರು.
ಚೆನ್ನೈ ಬೌಲಿಂಗ್ ವಿಭಾಗ ಸುದಾರಿಸಬೇಕಿದೆ
ಚೆನ್ನೈನ ದುರ್ಬಲ ಲಿಂಕ್ ಅವರ ಬೌಲಿಂಗ್ ಆಗಿದೆ ಆದರೆ ಮುಂಬೈ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಬೌಲರ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸಿದರು. ವೇಗಿ ಮುಖೇಶ್ ಚೌಧರಿ ಮೂರು ವಿಕೆಟ್ ಪಡೆದರು. ಅದೇ ಸಮಯದಲ್ಲಿ, ಹಳೆಯ ಸೈನಿಕ ಡ್ವೇನ್ ಬ್ರಾವೋ ಕೂಡ ತನ್ನ ಉಪಯುಕ್ತತೆಯನ್ನು ಸಾಬೀತುಪಡಿಸಿದರು. ನಾಯಕ ಜಡೇಜಾ ಬ್ಯಾಟ್ ಅಥವಾ ಚೆಂಡಿನಲ್ಲೂ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಶ್ರೀಲಂಕಾದ ಸ್ಪಿನ್ನರ್ ಮಹಿಶ್ ಟೀಕ್ಷಣಾ ಉತ್ತಮ ಬೌಲಿಂಗ್ ಮಾಡಿದರೂ ತಂಡವು ದೀಪಕ್ ಚಹಾರ್ ಮತ್ತು ಆಡಮ್ ಮಿಲ್ನೆ ಅವರನ್ನು ಮಿಸ್ ಮಾಡಿಕೊಳ್ಳುತ್ತಿರುವುದು ಎದ್ದು ಕಾಣಿಸುತ್ತಿದೆ.
ಯುವ ಬ್ಯಾಟ್ಸ್‌ಮನ್ ರಿತುರಾಜ್ ಗಾಯಕ್ವಾಡ್ ಗುಜರಾತ್ ಟೈಟಾನ್ಸ್ ವಿರುದ್ಧ 73 ರನ್ ಗಳಿಸಿದ್ದು ಬಿಟ್ಟರೆ ಇಲ್ಲಿಯವರೆಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಆಲ್‌ರೌಂಡರ್‌ಗಳಾದ ಮೊಯಿನ್ ಅಲಿ ಮತ್ತು ಶಿವಂ ದುಬೆ ಕೂಡ ಹೆಚ್ಚು ಜವಾಬ್ದಾರಿಯುತವಾಗಿ ಆಡಬೇಕಾಗಿದೆ. ಏಕೆಂದರೆ ಮತ್ತೊಂದು ಸೋಲು ಅವರನ್ನು ಮುಂದೆ ರೇಸ್‌ನಿಂದ ಹೊರಹಾಕಬಹುದು.
ಪಂಜಾಬ್‌ನ ಸ್ಥಿತಿ ಹದಗೆಟ್ಟಿದೆ
ಮತ್ತೊಂದೆಡೆ, ಡೆಲ್ಲಿ ಕ್ಯಾಪಿಟಲ್ಸ್ ಒಂಬತ್ತು ವಿಕೆಟ್‌ಗಳಿಂದ ಪಂಜಾಬ್ ಅನ್ನು ಸೋಲಿಸಿತು. ಪಂಜಾಬ್ ಬ್ಯಾಟ್ಸ್‌ಮನ್‌ಗಳು ಸ್ಥಿರ ಪ್ರದರ್ಶನ ನೀಡುತ್ತಿಲ್ಲ. ಶಿಖರ್ ಧವನ್, ಲಿಯಾಮ್ ಲಿವಿಂಗ್‌ಸ್ಟನ್ ಮತ್ತು ಶಾರುಖ್ ಖಾನ್ ಸ್ಥಿರವಾಗಿ ಉತ್ತಮವಾಗಿ ಆಡುತ್ತಿಲ್ಲ. ಜೊತೆಗೆ ಜಾನಿ ಬೈರ್‌ಸ್ಟೋವ್ ನಾಲ್ಕು ಅವಕಾಶಗಳನ್ನು ಪಡೆದರಾದರೂ ನಾಲ್ಕರಲ್ಲೂ ವಿಫಲರಾಗಿದ್ದಾರೆ. ಬೌಲಿಂಗ್‌ನಲ್ಲಿ ಪಂಜಾಬ್‌ಗೆ ಕಗಿಸೊ ರಬಾಡ ಇದ್ದರೆ, ಅರ್ಷದೀಪ್ ಸಿಂಗ್ ಕೂಡ ಫಾರ್ಮ್‌ನಲ್ಲಿದ್ದಾರೆ. ವೈಭವ್ ಅರೋರಾ ಉತ್ತಮ ಪ್ರದರ್ಶನ ನೀಡಬೇಕಿದೆ. ವೇಗದ ಬೌಲರ್ ಆಲ್ ರೌಂಡರ್ ಓಡಿಯನ್ ಸ್ಮಿತ್ ಪಾತ್ರ ಪ್ರಮುಖವಾಗಿದ್ದರೂ ಅವರಿಂದ ಉತ್ತಮ ಪ್ರದರ್ಶನ ಬಂದಿಲ್ಲ.
ಚೆನ್ನೈ-ಪಂಜಾಬ್ ತಂಡಗಳು
ಚೆನ್ನೈ ಸೂಪರ್ ಕಿಂಗ್ಸ್: ಮಹೇಂದ್ರ ಸಿಂಗ್ ಧೋನಿ, ರವೀಂದ್ರ ಜಡೇಜಾ (ನಾಯಕ), ಮೊಯಿನ್ ಅಲಿ, ರಿತುರಾಜ್ ಗಾಯಕ್ವಾಡ್, ಡ್ವೇನ್ ಬ್ರಾವೋ, ಅಂಬಟಿ ರಾಯುಡು, ರಾಬಿನ್ ಉತ್ತಪ್ಪ, ಮಿಚೆಲ್ ಸ್ಯಾಂಟ್ನರ್, ಕ್ರಿಸ್ ಜೋರ್ಡಾನ್, ಡೆವೊನ್ ಕಾನ್ವೇ, ಶಿವಂ ದುಬೆ, ಡ್ವೇನ್ ಪ್ರಿಟೋರಿಯಸ್, ಮಹೇಶ್ ತೀಕ್ಷಣ, ರಾಜವರ್ಧನ್ ಹಂಗರ್ಗೇಕರ್, ತುಷಾರ್ ದೇಶಪಾಂಡೆ, ಕೆಎಂ ಆಸಿಫ್, ಸಿ ಹರಿ ನಿಶಾಂತ್, ಎನ್ ಜಗದೀಸನ್, ಸುಭ್ರಾಂಶು ಸೇನಾಪತಿ, ಕೆ ಭಗತ್ ವರ್ಮಾ, ಪ್ರಶಾಂತ್ ಸೋಲಂಕಿ, ಸಿಮರ್ಜಿತ್ ಸಿಂಗ್, ಮುಖೇಶ್ ಚೌಧರಿ.
ಪಂಜಾಬ್ ಕಿಂಗ್ಸ್: ಶಿಖರ್ ಧವನ್, ಮಯಾಂಕ್ ಅಗರ್ವಾಲ್ (ನಾಯಕ), ಅರ್ಶ್ದೀಪ್ ಸಿಂಗ್, ಕಗಿಸೊ ರಬಾಡ, ಜಾನಿ ಬೈರ್‌ಸ್ಟೋವ್, ರಾಹುಲ್ ಚಾಹರ್, ಹರ್‌ಪ್ರೀತ್ ಬ್ರಾರ್, ಎಂ ಶಾರುಖ್ ಖಾನ್, ಪ್ರಭ್‌ಸಿಮ್ರಾನ್ ಸಿಂಗ್, ಜಿತೇಶ್ ಶರ್ಮಾ, ಇಶಾನ್ ಪೊರೆಲ್, ಲಿಯಾಮ್ ಲಿವಿಂಗ್‌ಸ್ಟನ್, ಓಡಿಯನ್ ಸ್ಮಿತ್, ಸಂದೀಪ್ ಶರ್ಮಾ, ರಾಜ್ ಅಂಗದ್ ಬಾವಾ, ರಿಷಿ ಧವನ್, ಪ್ರೇರಕ್ ಮಂಕಡ್, ವೈಭವ್ ಅರೋರಾ, ಹೃತಿಕ್ ಚಟರ್ಜಿ, ಅಂಶ್ ಪಟೇಲ್, ನಾಥನ್ ಎಲ್ಲಿಸ್, ಅಥರ್ವ ಟೈಡೆ, ಭಾನುಕಾ ರಾಜಪಕ್ಸೆ ಮತ್ತು ಬೆನ್ನಿ ಹೋವೆಲ್.
ಇದನ್ನೂ ಓದಿ:IPL 2022: ಮೇ 29 ರಂದು ಅಹಮದಾಬಾದ್ನಲ್ಲಿ ಫೈನಲ್! ಐಪಿಎಲ್ ಪ್ಲೇ ಆಫ್ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ