PBKS vs LSG Prediction Playing XI IPL 2022: ರಾಹುಲ್- ಮಯಾಂಕ್ ಮುಖಾಮುಖಿ; ಸಂಭಾವ್ಯ XI ಹೀಗಿದೆ

PBKS vs LSG Prediction Playing XI IPL 2022: ರಾಹುಲ್- ಮಯಾಂಕ್ ಮುಖಾಮುಖಿ; ಸಂಭಾವ್ಯ XI ಹೀಗಿದೆ
PBKS vs LSG

PBKS vs LSG Prediction Playing XI IPL 2022: ಏಪ್ರಿಲ್ 29 ರಂದು, ಋತುವಿನ 42 ನೇ ಪಂದ್ಯದಲ್ಲಿ, ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ಪೈಪೋಟಿ ನಡೆಯಲಿದೆ. ಎರಡೂ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗಲಿವೆ.

TV9kannada Web Team

| Edited By: pruthvi Shankar

Apr 28, 2022 | 6:43 PM

ಐಪಿಎಲ್ 2022 (IPL 2022) ಆರಂಭವಾಗಿ ಒಂದು ತಿಂಗಳು ಕಳೆದಿದೆ. ಇದುವರೆಗೆ ಲೀಗ್‌ನಲ್ಲಿ 40 ಪಂದ್ಯಗಳನ್ನು ಆಡಲಾಗಿದೆ. ಎಲ್ಲಾ ತಂಡಗಳು ತಮ್ಮ 14 ಪಂದ್ಯಗಳಲ್ಲಿ ಕನಿಷ್ಠ 8 ಪಂದ್ಯಗಳನ್ನು ಆಡಿದ್ದು ನಿಧಾನವಾಗಿ ಪಂದ್ಯಾವಳಿಯು ಲೀಗ್ ಹಂತದ ಅಂತಿಮ ಹಂತದತ್ತ ಸಾಗುತ್ತಿದೆ. ಶುಕ್ರವಾರ, ಏಪ್ರಿಲ್ 29 ರಂದು, ಋತುವಿನ 42 ನೇ ಪಂದ್ಯದಲ್ಲಿ, ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ (PBKS vs LSG) ನಡುವೆ ಪೈಪೋಟಿ ನಡೆಯಲಿದೆ. ಎರಡೂ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗಲಿವೆ. ಈ ಎರಡು ತಂಡಗಳು ಸಾಕಷ್ಟು ಸಾಮರ್ಥ್ಯವನ್ನು ಹೊಂದಿವೆ, ಆದರೆ ಪ್ರದರ್ಶನದಲ್ಲಿ ಯಾವುದೇ ಸ್ಥಿರತೆ ಇಲ್ಲ. ವಿಶೇಷವಾಗಿ ಪಂಜಾಬ್. ಇಂತಹ ಪರಿಸ್ಥಿತಿಯಲ್ಲಿ, ಉತ್ತಮ ಮತ್ತು ಆಲ್ ರೌಂಡ್ ಪ್ಯಾಕೇಜ್ ತಂಡ ಲಕ್ನೋವನ್ನು ಹೇಗೆ ಎದುರಿಸಲಿದೆ ಹಾಗೂ ಎರಡೂ ತಂಡಗಳು (PBKS vs LSG Predicted Playing XI) ಯಾವ ಆಟಗಾರರನ್ನುಆಡುವ ಇಲೆವೆನ್​ನಲ್ಲಿ ಸೇರಿಸಿಕೊಳ್ಳಲಿವೆ ಎಂಬುದು ಕುತೂಹಲದ ವಿಷಯವಾಗಿದೆ.

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಪಂಜಾಬ್ ಕಿಂಗ್ಸ್ ಬಹುಶಃ ಹಿಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಸೋಲಿಸಿದ ಅದೇ ಆಟಗಾರರನ್ನು ಕಣಕ್ಕಿಳಿಸುತ್ತದೆ. ಭಾನುಕಾ ರಾಜಪಕ್ಸೆ ಆಗಮನದಿಂದ ತಂಡದ ಬ್ಯಾಟಿಂಗ್‌ಗೆ ಹೆಚ್ಚಿನ ಶಕ್ತಿ, ಡೆಪ್ತ್ ಮತ್ತು ಅನುಭವ ದೊರೆತಿದೆ. ಅಲ್ಲದೆ, ಕಳೆದ ಪಂದ್ಯದಲ್ಲಿ ಸೇರ್ಪಡೆಗೊಂಡಿದ್ದ ಆಲ್ ರೌಂಡರ್ ರಿಷಿ ಧವನ್ ಕೂಡ ತಂಡಕ್ಕೆ ಉತ್ತಮ ಪುನರಾಗಮನ ಮಾಡಿದರು. ಅವರಿಗೆ ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಅವಕಾಶ ಸಿಗಲಿಲ್ಲ, ಆದರೆ ಬೌಲಿಂಗ್‌ನಲ್ಲಿ ಅವರು ತಂಡದ ಗೆಲುವಿಗೆ ಗಣನೀಯ ಕೊಡುಗೆ ನೀಡಿದರು.

ಮನೀಶ್, ಅವೇಶ್‌ ಖಾನ್​ಗೆ ಮತ್ತೊಂದು ಅವಕಾಶ ಇನ್ನು ಲಕ್ನೋ ಸೂಪರ್ ಜೈಂಟ್ಸ್ ಬಗ್ಗೆ ಮಾತನಾಡುವುದಾದರೆ ಕೆಎಲ್ ರಾಹುಲ್ ನೇತೃತ್ವದ ಈ ತಂಡ ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಅತ್ಯಂತ ಸುಲಭವಾಗಿ ಸೋಲಿಸಿತ್ತು. ಆದರೆ, ನಾಯಕ ರಾಹುಲ್ ಅವರ ಶತಕ ಬಿಟ್ಟರೆ ಬೇರಾವ ಬ್ಯಾಟ್ಸ್‌ಮನ್‌ಗೂ ಹೆಚ್ಚಿನ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ. ಮನೀಷ್ ಪಾಂಡೆ ಇದರಲ್ಲಿ ಪ್ರಮುಖ ಉದಾಹರಣೆಯಾಗಿದ್ದಾರೆ. ಆದರೆ, ಮನಿಷ್​ಗೆ ಮತ್ತೊಂದು ಅವಕಾಶ ನೀಡಲಾಗುವುದು.

ಲಕ್ನೋ ತಂಡದಲ್ಲಿ ಒಂದೇ ಒಂದು ಬದಲಾವಣೆಯನ್ನು ನಿರೀಕ್ಷಿಸಲಾಗಿದ್ದು, ಅದು ಖಚಿತವಾಗಿದೆ. ವೇಗದ ಬೌಲರ್ ಅವೇಶ್ ಖಾನ್ ಫಿಟ್ ಆಗಿದ್ದರೆ ಮೊಹ್ಸಿನ್ ಖಾನ್ ಬದಲಿಗೆ ಅವರನ್ನು ಮತ್ತೊಮ್ಮೆ ಸೇರಿಸಿಕೊಳ್ಳಲಾಗುವುದು. ಮೊಹ್ಸಿನ್ ಮುಂಬೈ ವಿರುದ್ಧ ಉತ್ತಮವಾಗಿ ಬೌಲಿಂಗ್ ಮಾಡಿದರು, ಆದರೆ ಅವೇಶ್ ಖಾನ್​ಗಾಗಿ ಅವರು ಸ್ಥಾನವನ್ನು ತ್ಯಾಗ ಮಾಡಬೇಕಾಗಿದೆ.

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ XI ಪಂಜಾಬ್ ಕಿಂಗ್ಸ್: ಮಯಾಂಕ್ ಅಗರ್ವಾಲ್ (ನಾಯಕ), ಶಿಖರ್ ಧವನ್, ಭಾನುಕಾ ರಾಜಪಕ್ಸೆ, ಲಿಯಾಮ್ ಲಿವಿಂಗ್ಸ್ಟನ್, ಜಾನಿ ಬೈರ್‌ಸ್ಟೋ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರಿಷಿ ಧವನ್, ಕಗಿಸೊ ರಬಾಡ, ರಾಹುಲ್ ಚಹಾರ್, ಅರ್ಶ್‌ದೀಪ್ ಸಿಂಗ್ ಮತ್ತು ಸಂದೀಪ್ ಶರ್ಮಾ.

ಲಕ್ನೋ ಸೂಪರ್ ಜೈಂಟ್ಸ್: ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಮನೀಶ್ ಪಾಂಡೆ, ಮಾರ್ಕಸ್ ಸ್ಟೋನಿಸ್, ದೀಪಕ್ ಹೂಡಾ, ಆಯುಷ್ ಬಡೋನಿ, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ರವಿ ಬಿಷ್ಣೋಯ್, ದುಷ್ಮಂತ ಚಮೀರಾ ಮತ್ತು ಅವೇಶ್ ಖಾನ್.

ಇದನ್ನೂ ಓದಿ:Ranji Trophy Knockouts Schedule: ರಣಜಿ ಟ್ರೋಫಿ ನಾಕ್‌ಔಟ್ ಪಂದ್ಯಗಳ ವೇಳಾಪಟ್ಟಿ ಪ್ರಕಟ

Follow us on

Related Stories

Most Read Stories

Click on your DTH Provider to Add TV9 Kannada